ಎಡೆಯೂರು ಶ್ರೀ ತೋಂಟದ ಸಿದ್ದಲಿಂಗೇಶ್ವರರ ಸಮಕಾಲೀನರಾದ ಪೂಜ್ಯ ಶ್ರೀಮದ್ದಾನೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಅಡವಿ ಮಠವು ಪಡಗೂರುಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿದೆ. ವೀರಶೈವ ಧರ್ಮದ ಉದ್ದಾರಕ್ಕಾಗಿ ಹೊರಟಶ್ರೀ ತೋಂಟದ ಸಿದ್ದಲಿಂಗೇಶ್ವರರ ಏಳುನೂರಾ ಒಂದು ವಿರಕ್ತರ ಸಮೂಹದಲ್ಲಿಪ್ರಮುಖರಾದ ಶ್ರೀ ಮದ್ದಾನೇಶ್ವರ ಶಿವಯೋಗಿಗಳಿಗೆ ಈ ಹೆಸರು ಬರಲು ಕಾರಣವಾದಒಂದು ಜನಪದ ಕತೆಯಿದೆ.ಶ್ರೀ ಮದ್ದಾನೇಶ್ವರರ ಮೂಲನಾಮ ಶ್ರೀ ಶಾಂತೇಶ್ವರರೆಂಬುದು. ಇವರುಧರ್ಮಪ್ರಚಾರ ಕಾರ್ಯದಲ್ಲಿ ನಿರತರಾಗಿ ಗುಂಡ್ಲುಪೇಟೆ ತಾಲ್ಲೂಕಿನ ಕೌಂಡಿನ್ಯ ನದಿ ತೀರದತೆರಕಣಾಂಬಿಯನ್ನು ಪ್ರವೇಶಿಸಿ ಇಲ್ಲಿಯೇ ನೆಲೆನಿಂತು ಧರ್ಮ ಪ್ರಚಾರ ಕೈಗೊಂಡರು.ಇದನ್ನು ಕಂಡ ಅನ್ಯಕೋಮಿನ ಜನರು ಇಲ್ಲಿಯ ದೊರೆ ಜಗಪತಿಗೆ ದೂರು ನೀಡಲಾಗಿ,ದೊರೆಯು ಶ್ರೀ ಶಾಂತೇಶ್ವರರಿಗೆ ಕಠಿಣ ಶಿಕ್ಷೆ ಕೊಡುವಂತೆ ಆದೇಶಿಸಿದನು. ಆದರೆ ಗುರುಗಳಪವಾಡಗಳಿಂದ ಗುರುಗಳು ಎಲ್ಲದರಲ್ಲಿಯೂ ಸುರಕ್ಷಿತರಾಗಿದ್ದರು. ಆಗ ದೊರೆಯುಕೋಪಗೊಂಡು ಶಿವಯೋಗಿಯ ಸೊಕ್ಕನ್ನು ಮುರಿಯಲು ಮದ್ದಾನೆಯನ್ನು ಮೈದಾನಕ್ಕೆಬಿಡಿಸಿದ. ಮದ್ದಾನೆಯು ಘೂಳಿಡುತ್ತಾ ಸಿಕ್ಕಸಿಕ್ಕದ್ದನ್ನು ಪುಡಿಪುಡಿ ಮಾಡುತ್ತಾ ಗುರುಗಳಸಮೀಪಕ್ಕೆ ಮುನ್ನುಗ್ಗಿತು. ಆದರೆ ಶಿವಯೋಗಿಗಳ ಸಮೀಪಕ್ಕೆ ಬರುತ್ತಲೇ ಗುರುಗಳ ಎದುರುಮಂಡಿಯೂರಿ ನಮಸ್ಕರಿಸಿತು. ಇದನ್ನು ಕಂಡ ದೊರೆ ಜಗಪತಿಗೆ ತನ್ನ ತಪ್ಪಿನ ಅರಿವಾಗಿಶ್ರೀಗುರು ಶಾಂತೇಶ್ವರರಿಗೆ ಶರಣಾಗಿ ಗುರುಗಳಿಗೆ “ಮದ್ದಾನೆ ಮಣಿಸಿದ ಶ್ರೀಮದ್ದಾನೇಶ್ವರರು” ಎಂಬ ಬಿರುದು ನೀಡಿದನೆಂಬ ಜನಪದ ಕಥೆ ಪ್ರಚಲಿತದಲ್ಲಿದೆ.ತದ ನಂತರ ಶ್ರೀ ಗುರು ಮದ್ದಾನೇಶ್ವರರು ಅಲ್ಲಿಂದ ಪಡಗೂರಿನ ಕೌಂಡಿನ್ಯ ನದಿತೀರದ ಅಡವಿಗೆ ಸಂಚಾರ ಬಂದರು. ದೊರೆ ಜಗಪತಿಯು ಗುರುಗಳು ಇಷ್ಟಪಟ್ಟ ಈಜಾಗದಲ್ಲಿ ಮಠ ಕಟ್ಟಿಸಿ ತಮ್ಮ ಕೊನೆಯ ಮಗ ಶಿವಲಿಂಗ ದೇವರನ್ನು ಗುರುಸೇವೆಗೆನೇಮಿಸಿದನು. ಗುರುಗಳು ಮುಂದೆ ತಮ್ಮ ಸೇವೆ ಮಾಡಿಕೊಂಡಿದ್ದ ದೊರೆ ಪುತ್ರ ಶ್ರೀಶಿವಲಿಂಗ ದೇವರಿಗೆ ನಿರಂಜನ ಪಟ್ಟಾಧಿಕಾರ ನೀಡಿ ನಿರ್ವಿಕಲ್ಪ ಸಮಾದಿ ಹೊಂದಿದರು.ಕರ್ತೃಗಳು ಹಾಗೂ ಶ್ರೀ ಶಿವಲಿಂಗ ಸ್ವಾಮಿಗಳ ನಂತರ ಪಟ್ಟಕ್ಕೆ ಬಂದ ಶ್ರೀ ಜಡೆಮಹಾಸ್ವಾಮಿಗಳು ಪವಾಡ ಪುರುಷರಾಗಿ ಹಠಯೋಗ, ಶಿವಯೋಗಗಳನ್ನು ಅಂತರ್ಗತಮಾಡಿಕೊಂಡ ಮಹಾಯೋಗಿಗಳಾಗಿದ್ದರು.ಶ್ರೀಮಠದ ಪರಂಪರೆಯಲ್ಲಿ ಕಂಡು ಬರುವ ಮತ್ತೊಬ್ಬ ಪ್ರಮುಖ ಶ್ರೀಗಳೆಂದರೆಶ್ರೀ ಮ.ನಿ.ಪ್ರ. ಮಹಾಂತ ದೇಶಿಕೇಂದ್ರ ಮಹಾಸ್ವಾಮಿಗಳು. ಶ್ರೀಗಳು ತಮ್ಮ ಬಾಲ್ಯಾವಸ್ತೆಯಿಂದಲೇ ಜಂಗಮ ತತ್ತ್ವವನ್ನು ಪರಿಪಾಲಿಸುತ್ತಾ ಸಂಚಾರ ಕೈಗೊಂಡಿದ್ದವರು.ಇಂತಹ ಗುರುಗಳ ಕಾಲದಲ್ಲಿ ಶ್ರೀಮಠವು ಉನ್ನತವಾದುದನ್ನು ಸಾಧಿಸಿತು. ದಾಸೋಹ ಕ್ರಿಯೆಹಾಗೂ ಧಾರ್ಮಿಕ ಆಚರಣೆಗಳು ವೈಭವಯುತವಾಗಿ ನಡೆಯತೊಡಗಿದ್ದಲ್ಲದೇ ಶ್ರೀಮಠವುಅಭಿವೃದ್ದಿ ಕಂಡಿತು. ಇವರ ನಂತರದ ಶ್ರೀಗಳೂ ಶ್ರೀಮಠವನ್ನು ಸಮಾಜ ಮುಖಿಯಾಗಿಬೆಳೆಸುವಲ್ಲಿ ಶ್ರಮಿಸಿದ್ದಾರೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು1923ರ ಫೆಬ್ರವರಿ ತಿಂಗಳಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು. ಆಗ ಇವರಿಗೆ ಕೇವಲ11 ವರ್ಷ. ನಂತರ ತಮ್ಮ ವಿದ್ಯಾಭ್ಯಾಸ ಮುಂದುವರೆಸಿ ಚಾಮರಾಜನಗರ, ಮೈಸೂರುಗಳಲ್ಲಿಅಭ್ಯಸಿಸಿದ ಶ್ರೀಗಳು ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಪ್ತರಲ್ಲಿಒಬ್ಬರಾಗಿ ಬೆಳೆದರು. ಶ್ರೀ ಶಿವಕುಮಾರ ಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರಶ್ರೀಮಠದ ಚಿತ್ರಣವನ್ನೇ ಬದಲಿಸಿದರು. ಶ್ರೀ ಮದ್ದಾನೇಶ್ವರರ ಯೋಗ ಮಂಟಪ,ಪರಂಪರೆಯ ಗುರುಗಳ ಗದ್ದುಗೆಗಳಿಗೆ ಗರ್ಭಾಂಕಣ ಹಾಗೂ ಪ್ರಾರ್ಥನ ಅಂಕಣನಿರ್ಮಿಸಿದರು. ಮಠದ ಕಟ್ಟಡವನ್ನು ವಿಸ್ತರಿಸಿ ಬೃಹದಾಕಾರದ ಪ್ರವೇಶ ದ್ವಾರವನ್ನುನಿರ್ಮಿಸಿದರು.ಇಂತಹ ಮಹಾನ್ ಕಾಯಕಯೋಗಿ ಶ್ರೀ ಶಿವಕುಮಾರ ಮಹಾಸ್ವಾಮಿಗಳಉತ್ತಾರಾಧಿಕಾರಿಗಳಾಗಿ 1987ರ ಫೆಬ್ರವರಿ 11ರಂದು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡವರುಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗೇಂದ್ರ ಮಹಾಸ್ವಾಮಿಗಳು. ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡ ಈಗಿನ ಶ್ರೀಗಳು ಗುರುಗಳ ಹಾದಿಯಲ್ಲಿಯೇಕ್ರಿಯಾಶೀಲರಾಗಿ ಮಠದ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಕಾರ್ಯವ್ಯಾಪ್ತಿಯನ್ನು ವಿಸ ್ತರಿಸಿರುವ ಶ್ರೀಗಳು ಶ್ರೀಮಠವನ್ನು ಉತ್ತುಂಗಕೆ ್ಕಕೊಂಡೊಯ್ಯುತ್ತಿದ್ದಾರೆ. ಶ್ರೀಮಠದ ವತಿಯಿಂದ ಪಡುಗೂರಿನಲ್ಲಿ ಸಾರ್ವಜನಿಕರಉಪಯೋಗಕ್ಕಾಗಿ ಆಸ್ಪತ್ರೆಯನ್ನು ಕಟ್ಟಿಸಲಾಗಿದೆ. ಶ್ರೀಮಠಕ್ಕೆ ನೆರವನ್ನು ಬೇಡಿಕೊಂಡುಬರುವ ಬಡ ಜನರಿಗೆ ನೆರವಿನ ಹಸ್ತ ನೀಡುತ್ತಿರುವ ಶ್ರೀಗಳು ಭಕ್ತರನ್ನು ಸನ್ಮಾರ್ಗದಲ್ಲಿಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಲಿಂಗೇಂದ್ರ ಮಹಾಸ್ವಾಮಿಗಳು
Date of Birth :
23-04-1963
Place :
ಮೂಡುಗೂರು, ಗುಂಡ್ಲುಪೇಟೆ ತಾ||
Pattadikara :
11-02-1987
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಯುಗಾದಿ, ಮಹಾಶಿವರಾತ್ರಿ ಹಾಗೂ ಬಸವ ಜಯಂತಿ ವಿಶೇಷ ಕಾರ್ಯಕ್ರಮಗಳು
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ, ಪ್ರತಿ ಸೋಮವಾರ ದೀಪೋತ್ಸವ
Photos
Full Address Kannada
ಶ್ರೀ ಅಡವಿಮಠ
ಪಡಗೂರು - 571 123
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ