ಚಾಮರಾಜನಗರ ಜಿಲೆ ್ಲಯ ಪ್ರಗತಿಪರ ಮಠಗಳಲ್ಲಿ ಒಂದಾಗಿಗುರುತಿಸಿಕೊಂಡಿರುವ ಶ್ರೀ ಉದ್ಧಾನೇಶ್ವರ ವಿರಕ್ತಮಠವು ಗುಂಡ್ಲುಪೇಟೆ ತಾಲ್ಲೂಕಿನಮೂಡುಗೂರು ಗ್ರಾಮದ ಹೊರಭಾಗದಲ್ಲಿ ಅಸ್ತಿತ್ತ್ವದಲ್ಲಿದೆ. ಸುಮಾರು 500 ವರ್ಷಗಳಷ್ಟುಪುರಾತನ ಮಠವಿದೆಂದು ಹೇಳಲಾಗುತ್ತದಾದರೂ ಸೂಕ್ತ ದಾಖಲೆಗಳ ಕೊರತೆಯಿಂದಸ್ಪಷ್ಟವಾಗಿ ಹೇಳಲು ಬರುವುದಿಲ್ಲ. ಶ್ರೀಮಠದ ಕರ್ತೃ ಗುರುಗಳೆಂದು ಶ್ರೀ ಮ.ನಿ.ಪ್ರ.ಉದ್ದಾನೇಶ್ವರ ಶಿವಯೋಗಿಗಳನ್ನು ಗುರುತಿಸಲಾಗಿದೆ.ಲೋಕಕಲ್ಯಾಣಾರ್ಥ ಸಂಚಾರದಲ್ಲಿದ್ದ ಕರ್ತೃ ಗುರುಗಳು ಮೂಡುಗೂರುಗ್ರಾಮದ ದಟ್ಟ ಅಡವಿಯ ಈ ಪ್ರಶಾಂತ ಸ್ಥಳದಲ್ಲಿ ಅನುಷ್ಠಾನಗೊಂಡು, ತಪೋಮಗ್ನರಾಗಿಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದರು. ಇವರ ಆಚರಣೆಗಳಿಗೆ, ಕತೃತ್ವ ಶಕ್ತಿಗೆ ಬೆರಗಾದಗ್ರಾಮಸ್ಥರು ಗುರುಗಳ ಆಚರಣೆಗಳಿಗೆ ನೆರವಾಗಿ ಭಕ್ತರಾದರು. ಮುಂದೆ ಭಕ್ತರೇ ಗುರುಗಳಆಚರಣೆಗಳಿಗೆ ಶ್ರೀಮಠವನ್ನು ಕಟ್ಟಿಸಿಕೊಟ್ಟರೆಂದು ತಿಳಿದು ಬರುತ್ತದೆ. ಕರ್ತೃ ಗುರುಗಳನಂತರದ ಪರಂಪರೆಯಲ್ಲಿ ಈವರೆಗೂ ಐದು ಜನ ಶ್ರೀಗಳ ಕುರಿತಾಗಿ ತಿಳಿದು ಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಮಹಾದೇವ ಮಹಾಸ್ವಾಮಿಗಳು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಾಧಿಕಾರಕ್ಕೆ ಬಂದಿದ್ದು ನಂತರ ವಿದ್ಯಾಭ್ಯಾಸಪೂರ್ಣಗೊಳಿಸಿದರು. ತರುವಾಯ ಶ್ರೀಮಠಕ್ಕೆ ಮರಳಿದ ಶ್ರೀಗಳು ಶಿಥಿಲಗೊಂಡಿದ್ದಶ್ರೀಮಠವನ್ನು ತಮ್ಮ ಕಾಯಕಯೋಗದಿಂದ ಜೀರ್ಣಾಭಿವೃದ್ದಿಗೊಳಿಸಿ ಬೃಹತ್ತಾದ ಮಠದಕಟ್ಟಡವನ್ನು ನಿರ್ಮಿಸಿದರು. ಇವರ ಕಾಲದಲ್ಲಿ ಶ್ರೀಮಠವು ಆರ್ಥಿಕ ಸ್ವಾವಲಂಬನೆ ಸಾದಿಸಿದ್ದು2012ರ ಜನವರಿಯಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಇಮ್ಮಡಿ ಉದ್ದಾನ ಸ್ವಾಮಿಗಳು ಹಿಂದಿನಗುರುಗಳಿರುವಂತೆಯೇ 2008ರ ಆಗಸ್ಟ್ 14ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹಪಡೆದಿದ್ದು ಹಿಂದಿನ ಗುರುಗಳ ಐಕ್ಯಾನಂತರ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಶ್ರೀಗಳು ಪ್ರಸ್ತುತ ಉನ್ನತ ವ್ಯಾಸಂಗ ಮಾಡುತ್ತಿದ್ದು ಆಗಾಗ್ಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದಕಾರ್ಯಕಲಾಪಗಳನ್ನು ನಿರ್ವಹಿಸುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಇಮ್ಮಡಿ ಉದ್ದಾನ ಸ್ವಾಮಿಗಳು
Date of Birth :
31-12-1996
Place :
ಮೈಸೂರು
Pattadikara :
14-08-2008
Photo :
Programs
ಪ್ರತಿ ತಿಂಗಳು ಅಮವಾಸೆಗೆ ವಿಶೇಷ ಪೂಜೆ, ಪ್ರವಚನ
ಧನುರ್ಮಾಸ ನವಮಿ ತಿಥಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶ್ರಾವಣ ಮಾಸದಲ್ಲಿ ಹಾಗೂ ಕಾರ್ತಿಕ ಮಾಸದಲ್ಲಿ
ವಿಶೇಷ ಪೂಜೆ ಕಾರ್ಯಕ್ರಮಗಳು
Photos
Full Address Kannada
ಶ್ರೀ ಉದ್ಧಾನೇಶ್ವರ ವಿರಕ್ತ ಮಠ
ಮೂಡುಗೂರು - 571 123
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ