Shree Shivapooje Matha

Shree Shivapooje Matha Claimed

ಶ್ರೀ ಶಿವಪೂಜೆ ಮಠ

Average Reviews

Description

ಶ್ರೀ ಶಿವಪೂಜೆ ಮಠ

ಕರ್ತೃ – ಶ್ರೀ ಶಿವಪೂಜೆ ಚನ್ನವೀರ ಮಹಾಸ್ವಾಮಿಗಳು

ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಿಂದ ಕೇವಲ ಮೂರು ಕಿ.ಮೀ.ದೂರದಲ್ಲಿರುವ ಚಿಕ್ಕತುಪ್ಪೂರು ಗ್ರಾಮದಲ್ಲಿ ಸುತ್ತೂರು ಶ್ರೀ ಶಿವರಾತ್ರೀಶ್ವರ ಮಠದ ಶಾಖಾಮಠವಾದ ಶ್ರೀ ಶಿವಪೂಜೆ ಮಠವು ಅಸ್ತಿತ್ತ್ವದಲ್ಲಿದ್ದು ಈ ಭಾಗದ ಪ್ರಮುಖ ಮಠವಾಗಿಗುರುತಿಸಿಕೊಂಡಿದೆ. ಶ್ರೀ ಶಿವಪೂಜೆ ಚನ್ನವೀರ ಮಹಾಸ್ವಾಮಿಗಳು ಅನುಷ್ಠಾನಗೊಂಡಜಾಗೃತ ಸ್ಥಳದಲ್ಲಿ 1926ರಲ್ಲಿ ಶ್ರೀಮಠವು ಸ್ಥಾಪಿತಗೊಂಡಿದ್ದರಿಂದ ಶ್ರೀಮಠಕ್ಕೆ ಶ್ರೀ ಶಿವಪೂಜೆಮಠವೆಂಬ ಹೆಸರು ಬಂದಿದೆ.ಕರ್ತೃಗಳಾದ ಶಿವಪೂಜೆ ಶ್ರೀ ಚನ್ನವೀರ ಮಹಾಸ್ವಾಮಿಗಳು ಇಲ್ಲಿ ಶಿವಪೂಜೆಕಾಯಕದಲ್ಲಿದ್ದಾಗ ಇವರ ಬಗ್ಗೆ ಕೇಳಿ ತಿಳಿದಿದ್ದ ಬೆಟ್ಟದಪುರದ ಶ್ರೀ ಚಿಕ್ಕವೀರ ದೇಶೀಕೇಂದ್ರಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿ ಗುರುಗಳ ಶಿವಪೂಜೆಗೆ ಮನಸೋತು ಕೆಲವು ದಿನತಾವೂ ಗುರುಗಳ ಶಿವಪೂಜೆಯಲ್ಲಿ ಭಾಗವಹಿಸಿ ಈ ಪವಿತ್ರ ಜಾಗದಲ್ಲಿ ಮಠ ಸ್ಥಾಪನೆಮಾಡಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿದರು. ಬೆಟ್ಟದಪುರದ ಗುರುಗಳು ಬಂದು ಹೋದಅನೇಕ ವರ್ಷಗಳ ತರುವಾಯ ಸುತ್ತೂರು ಶ್ರೀ ಶಿವರಾತ್ರೀಶ್ವರ ಮಠದ ಜಗದ್ಗುರು ಶ್ರೀ ಮಂತ್ರಮಹರ್ಷಿಗಳು 1926ರಲ್ಲಿ ಮಠ ಸ್ಥಾಪಿಸಿದರೆಂದು ತಿಳಿದು ಬರುತ್ತದೆ.ಈ ರೀತಿಯಾಗಿ ಮೂವರು ಮಹಾಗುರುಗಳ ಅನುಷ್ಠಾನ, ಶಿವಪೂಜೆ,ಆಶೀರ್ವಾದಗಳಿಂದ ಜಾಗೃತಗೊಂಡು ಸ್ಥಾಪಿಸಲ್ಪಟ್ಟ ಶ್ರೀಮಠದ ಪ್ರಥಮ ಗುರುಗಳಾದವರುಶ್ರೀ ಷ.ಬ್ರ. ಶಿವಲಿಂಗ ಮಹಾಸ್ವಾಮಿಗಳು. ಕೆಲ ಕಾಲದ ನಂತರ ಪ್ರಥಮ ಗುರುಗಳುಕುರುಬರಹುಂಡಿ ಮಠಕ್ಕೆ ತೆರಳಲಾಗಿ ಅವರ ಜಾಗಕ್ಕೆ ಬಂದವರು ಹಿಂದಿನ ಶ್ರೀಗಳಾದ ಶ್ರೀಷ.ಬ್ರ. ದಯಾನಂದ ಮಹಾಸ್ವಾಮಿಗಳು. ಸುದೀರ್ಘ ಆರು ದಶಕಗಳ ಕಾಲ ಅಧಿಕಾರನಡೆಸಿದ ಶ್ರೀಗಳ ಧಾರ್ಮಿಕ ಆಚರಣೆಗಳಿಂದ ಗ್ರಾಮ ಸಂಸ್ಕಾರ ಪಡೆಯಿತು. ತಮ್ಮ ಕಾಯಕನಿಷ್ಠೆಯಿಂದ ಮಠವನ್ನು ಅಭಿವೃದ್ದಿಗೊಳಿಸಿದ ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀಷ.ಬ್ರ. ಚನ್ನವೀರ ಸ್ವಾಮಿಗಳನ್ನು 1990ರ ಮಾರ್ಚ್ 29ರಂದು ಅಧಿಕಾರಕ್ಕೆ ತಂದು2004ರಲ್ಲಿ ಲಿಂಗೈಕ್ಯರಾದರು. ಈಗಿನ ಶ್ರೀಗಳಾದ ಶ್ರೀ ಚನ್ನವೀರ ಸ್ವಾಮಿಗಳು ಶ್ರೀಮಠವನ್ನುತಮ್ಮ ಆಚರಣೆಗಳು ಹಾಗೂ ಸುತ್ತೂರು ಮಠದ ಶ್ರೀಗಳ ಆಶೀರ್ವಾದದೊಂದಿಗೆಪ್ರಗತಿಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚನ್ನವೀರ ಸ್ವಾಮಿಗಳು
Date of Birth :
01-06-1958
Place :
ಬೆಟ್ಟದ ಮಾದಳ್ಳಿ, ಗುಂಡ್ಲುಪೇಟೆ ತಾ||
Pattadikara :
29-03-1990
Photo :

Programs

ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಬಸವ ಜಯಂತಿ ಮತ್ತು ಧನುರ್ಮಾಸಕ್ಕೆ ವಿಶೇಷ ಪೂಜೆ ಕಾರ್ಯಕ್ರಮಗಳು
ಮಹಾಶಿವರಾತ್ರಿ, ಯುಗಾದಿ, ಗೌರಿಗಣೇಶ ಹಬ್ಬಗಳ ಆಚರಣೆ
ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಪೂಜೆ
ಶ್ರಾವಣ ನಿತ್ಯ ಅಭಿಷೇಕ

Photos

Full Address Kannada

ಶ್ರೀ ಶಿವಪೂಜೆ ಮಠ
ಚಿಕ್ಕತುಪ್ಪೂರು - 571 111
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ

Map

Near by Places

ಚಿಕ್ಕತುಪ್ಪೂರು ಗೇಟ್ - 500 ಮೀಟರ್
ಗುಂಡ್ಲುಪೇಟೆ - 3 ಕಿ.ಮೀ.
ಚಾಮರಾಜನಗರ - 35 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!