ಕರ್ತೃ – ಶ್ರೀ ಷ.ಬ್ರ. ಪಟ್ಟದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಕೇಂದ್ರದಿಂದ 28 ಕಿ.ಮೀ.ದೂರದಲ್ಲಿರುವ ಬೊಮ್ಮನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಪಟ್ಟದಮಠವು ತನ್ನ ಧಾರ್ಮಿಕ ಆಚರಣೆಗಳ ಮುಖೇನ ಪ್ರಚಲಿತದಲ್ಲಿದೆ. ಶ್ರೀಶೈಲ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಪಟ್ಟದ ಮಠದಕರ್ತೃಗುರುಗಳೆಂದು ಶ್ರೀ ಷ.ಬ್ರ. ಪಟ್ಟದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳನ್ನುಹೆಸರಿಸಲಾಗಿದೆ.ಇದೇ ಬೊಮ್ಮನಹಳ್ಳಿ ಗ್ರಾಮದವರಾದ ಕರ್ತೃ ಗುರುಗಳು ಬಾಲ್ಯದಿಂದಲೂತಂದೆಯವರ ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿ ಹೊಂದಿ ಅವುಗಳಿಗೆ ಸಹಕಾರನೀಡುತ್ತಿದ್ದರು. ಮುಂದೆ 1952ರಲ್ಲಿ ಶ್ರೀ ಪಟ್ಟದ ಮಠವನ್ನು ಸ್ಥಾಪಿಸಿದ ಶ್ರೀಗಳು 1970ರ ತನಕಶ್ರೀಮಠ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದರು. ತಮ್ಮ ಆಚರಣೆಗಳು ಹಾಗೂಆದರ್ಶಗಳ ಮೂಲಕ ಸಮಾಜದ ಸಂಘಟನೆಗೆ ಶ್ರಮಿಸಿದ ಶ್ರೀಗಳು ತಮ್ಮ ಕಾಲದಲ್ಲಿಯೇಶ್ರೀಮಠಕ್ಕೆ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದರು. ಶ್ರೀಮಠವನ್ನು ಆರ್ಥಿಕವಾಗಿಸ್ವಾವಲಂಬಿಯಾಗುವಂತೆ ರೂಪಿಸಿದ ಶ್ರೀಗಳು 1970ರಲ್ಲಿ ಲಿಂಗೈಕ್ಯರಾದರು.ಕರ್ತೃ ಗುರುಗಳ ಐಕ್ಯಾ ನಂತರ 1971ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದ ಶ್ರೀ ಷ.ಬ್ರ.ಕರಿವೃಷಭರಾಜೇಂದ್ರ ಮಹಾಸ್ವಾಮಿಗಳು ಗುರುಗಳ ಹಾದಿಯಲ್ಲಿಯೇ ಶ್ರೀಮಠವನ್ನುಅಭಿವೃದ್ದಿಪಥದತ್ತ ಕೊಂಡೊಯ್ದರು. ಶ್ರೀಮಠದ ಧಾರ್ಮಿಕ ಆಚರಣೆಗಳ ಜೊತೆಗೆ ಗ್ರಾಮದಎಲ್ಲಾ ಧಾರ್ಮಿಕ ಆಚರಣೆಗಳಿಗೆ ಸ್ಪಂದಿಸುತ್ತಾ ಮಠವನ್ನು ಬೆಳೆಸಿದ ಶ್ರೀಗಳು 2003ರನವೆಂಬರ್ 27ರಂದು ಲಿಂಗೈಕ್ಯರಾದರು. ಮಠದ ಸಂಪ್ರದಾಯದಂತೆ ಗುರುಗಳುಲಿಂಗೈಕ್ಯರಾದ ಮರುದಿನವೇ ಈಗಿನ ಶ್ರೀಗಳನ್ನು ಪಟ್ಟಕ್ಕೆ ತರಲಾಗಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಇಮ್ಮಡಿ ಶಾಂತಮಲ್ಲ ಸ್ವಾಮಿಗಳು ಕೇವಲ ತಮ್ಮಆರನೇ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಕ್ಕೆ ಬಂದಿದ್ದು ನಂತರದಲ್ಲಿ ತಮ್ಮ ವಿದ್ಯಾಭ್ಯಾಸವನ್ನುಮುಂದುವರೆಸಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಫಿಲಾಸಫಿಅಭ್ಯಸಿಸುತ್ತಿರುವ ಶ್ರೀಗಳು ವಾರದಲ್ಲಿ ಎರಡು ಬಾರಿ ಮಠಕ್ಕೆ ತೆರಳಿ ಶ್ರೀಮಠದ ಆಡಳಿತವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಇಮ್ಮಡಿ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು
Date of Birth :
04-01-1997
Place :
ಬೊಮ್ಮನಹಳ್ಳಿ, ಗುಂಡ್ಲುಪೇಟೆ ತಾ||
Pattadikara :
28-11-2003
Photo :
Programs
ಬಸವ ಜಯಂತಿ, ಯುಗಾದಿ ಹಾಗೂ
ಶಿವರಾತ್ರಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು
ವಿಜಯದಶಮಿಯಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
ಕಾರ್ತೀಕ ಮಾಸದಲ್ಲಿ ಶ್ರೀ ಷ.ಬ್ರ. ಕರಿವೃಷಭ ರಾಜೇಂದ್ರ
ಮಹಾಸ್ವಾಮಿಗಳ ಪುಣ್ಯಾರಾಧನೆ ಮಹೋತ್ಸವ
Photos
Full Address Kannada
ಶ್ರೀ ಪಟ್ಟದ ಮಠ
ಬೊಮ್ಮನಹಳ್ಳಿ - 571 111
ಗುಂಡ್ಲುಪೇಟೆ ತಾ||, ಚಾಮರಾಜನಗರ ಜಿಲ್ಲೆ