ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 03 ಕಿ.ಮೀ. ದೂರದಲ್ಲಿರುವಸೋಮುವಾರಪೇಟೆ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಸೇತುವೆ ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀ ಸೋಮಹಳ್ಳಿ ಪಟ್ಟದ ಮಠದಶಾಖೆಯಾಗಿರುವ ಶ್ರೀ ಸೇತುವೆ ಮಠವು ಶ್ರೀಮದ್ ರಂಭಾಪುರಿ ಪೀಠದ ಪರಂಪರೆಯನ್ನುಪಾಲಿಸಿಕೊಂಡು ಬೆಳೆದು ಬಂದಿದೆ.ಶ್ರೀ ಷ.ಬ್ರ. ಪಟ್ಟದ ರುದ್ರಮುನಿ ಮಹಾಸ್ವಾಮಿಗಳು 1972ರಲ್ಲಿ ಸಂಚಾರದಲ್ಲಿಸೋಮವಾರಪೇಟೆ ಪ್ರದೇಶಕ್ಕೆ ಬಂದಿದ್ದು ಇಲ್ಲಿ ನೆಲೆನಿಂತು ಸಣ್ಣ ಮಠ ಸ್ಥಾಪಿಸಿಕೊಂಡುಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಎರಡೂವರೆ ದಶಕಗಳಿಗೂ ಅಧಿಕ ಕಾಲಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬಂದ ಶ್ರೀಗಳು ತಮ್ಮಸಹೋದರ ಅಂದರೆ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಕಾಲಾಗ್ನಿ ರುದ್ರಮುನಿ ಸ್ವಾಮಿಗಳಜೊತೆಗೆ ನಿರ್ಧರಿಸಿ ಶ್ರೀಮಠವನ್ನು ಕಟ್ಟಿದರು.ಉಭಯ ಸಹೋದರರೂ ಜೊತೆ ಜೊತೆಯಲ್ಲಿಯೇ ಶ್ರೀಮಠದ ಆಚರಣೆಗಳನ್ನುನಡೆಸಿಕೊಂಡು ಬಂದಿದ್ದು ಕಿರಿಯ ಸಹೋದರರಾದ ಶ್ರೀ ಷ.ಬ್ರ. ಕಾಲಾಗ್ನಿ ರುದ್ರಮುನಿಸ್ವಾಮಿಗಳು 1997ರಲ್ಲಿ ತಮ್ಮ ಹಿರಿಯ ಸಹೋದರರಿರುವಾಗಲೇ ಶ್ರೀಮಠಕ್ಕೆ ಪಟ್ಟಾಧಿಕಾರದಅನುಗ್ರಹ ಪಡೆದರು. 1998ರ ಫೆಬ್ರವರಿ 26ರಲ್ಲಿ ಪ್ರಥಮ ಗುರುಗಳು ಲಿಂಗೈಕ್ಯರಾದ ನಂತರಶ್ರೀಮಠವನ್ನು ಏಕಾಂಗಿಯಾಗಿ ಭಕ್ತರ ಸಹಕಾರದೊಂದಿಗೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಆಷಾಢ ಮಾಸದಲ್ಲಿ ವಿಶೇಷ ಪೂಜೆಹಾಗೂ ಕರ್ತೃ ಗುರುಗಳ ಆರಾಧನೆ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ಕಾಲಾಗ್ನಿ ರುದ್ರಮುನಿ ಸ್ವಾಮಿಗಳು
Date of Birth :
01-01-1957
Place :
ಮಹಾರಾಜನಪುರ, ಸತ್ತಿ ತಾ||
Pattadikara :
1997
Photo :
Programs
ಕ್ರಾರ್ತಿಕ ಮಾಸದ 2ನೇ ಸೋಮವಾರ ದೀಪೋತ್ಸವ
ಆಷಾಡ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಕರ್ತೃ ಗುರುಗಳ ಆರಾಧನೆ
Photos
Full Address Kannada
ಶ್ರೀ ಸೇತುವೆ ಮಠ
ಸೋಮುವಾರಪೇಟೆ - 571 313
ಚಾಮರಾಜನಗರ ತಾ|| ಮತ್ತು ಜಿಲ್ಲೆ