Shree Murugha Rajendra Swami Maha Samsthana Matha

Shree Murugha Rajendra Swami Maha Samsthana Matha Claimed

ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ

Average Reviews

Description

ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ – ಮರಿಯಾಲ

ಕರ್ತೃ – ಶ್ರೀ ಮ.ನಿ.ಪ್ರ.ಸ್ವ. ಮುರುಘರಾಜೇಂದ್ರ ಮಹಾಸ್ವಾಮಿಗಳು

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವ ಮರಿಯಾಲಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠವುತನ್ನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಮುಖೇನ ಈ ಭಾಗದಪ್ರಮುಖ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ಸುಮಾರು 150 ವರ್ಷಗಳಿಗೂ ಅಧಿಕಇತಿಹಾಸ ಹೊಂದಿರುವ ಶ್ರೀಮಠವು ಕರ್ತೃ ಗುರುಗಳು ಶ್ರೀ ನಿ.ಪ್ರ.ಸ್ವ. ಮುರುಘರಾಜೇಂದ್ರಮಹಾಸ್ವಾಮಿಗಳು.ಉತ್ತರ ಕರ್ನಾಟಕದ ಕಲಬುರಗಿಕಡೆಯಿಂದ ಸಂಚಾರ ಬಂದಂತಹಮಹಾತ್ಮರೂ. ತಪಸ್ವಿಗಳೂ ಆದ ಸದ್ಗುರುಶ್ರೀ ನಿ.ಪ್ರ.ಸ ್ವ. ಮುರುಘರಾಜೇಂದ್ರಮಹಾಸ್ವಾಮಿಗಳವರು ಮರಿಯಾಲದಲ್ಲಿನೆಲೆಸಿ ಅದನ್ನು ತಮ್ಮ ತಪೋ-ಭೂಮಿಯನ್ನಾಗಿ ಮಾಡಿಕೊಂಡು ಗುರು-ಲಿಂಗ ಜಂಗಮ & ಕಾಯಕದಲ್ಲಿ ಮಗ್ನರಾಗಿ ದಾಸೋಹಂ ಭಾವದಿಂದ ಹಲವುಗ್ರಾಮಗಳಲ್ಲಿ ಸಂಚರಿಸಿ ಬಸವಾದಿ ಶರಣರ ತತ್ತ್ವಗಳನ್ನು ಆಚರಿಸಿ ಶ್ರೀಮಠವನ್ನು ಭಕ್ತಿಯಕೇಂದ್ರವನ್ನಾಗಿ ಮಾಡಿ ಲಿಂಗೈಕ್ಯರಾದರು. ಅಂದಿನಿಂದ ಇಂದಿನವರೆಗೂ ಐದು ಜನಜಂಗಮಪುಂಗವರಿಂದ ಈ ಪೀಠ ಅಲಂಕೃತವಾಗಿದೆ. ಇಂದಿಗೂ ಶ್ರೀಮಠವನ್ನು ಕರ್ತೃಗುರುಗಳ ಹೆಸರಿನಿಂದಲೇ ಗುರುತಿಸಲಾಗುತ್ತಿದೆ.ಕರ್ತೃಗುರುಗಳ ಐಕ್ಯಾ ನಂತರ ಶ್ರೀಮಠವು ಕೆಲ ಕಾಲ ಖಾಲಿ ಉಳಿದಿದ್ದು ನಂತರಶ್ರೀ ಪಟ್ಟದ ಮಹಾಂತ ಮಹಾಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ಮಠವನ್ನುಮುನ್ನಡೆಸಿದ್ದಾರೆ. ಇವರ ನಂತರ ಬಂದ ಶ್ರೀ ಪಟ್ಟದ ಸದಾಶಿವ ಮಹಾಸ್ವಾಮಿಗಳ ಕಾಲದಲ್ಲಿಶ್ರೀಮಠದ ವ್ಯಾಪ್ತಿ ವಿಸ್ತರಿಸಿದೆ. ಶ್ರೀಗಳು ಶ್ರೀಮಠದ ಆಚರಣೆಗಳನ್ನು ಚುರುಕುಗೊಳಿಸಿ ಮಠದಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದು ಅಪಾರ ಭಕ್ತಬಳಗವನ್ನು ಹೊಂದಿದ್ದರು. ಇವರ ನಂತರಬಂದವರೇ ಈಗಿನ ಹಿರಿಯ ಶ್ರೀಗಳಾದ ವಿದ್ವಾನ್ ಶ್ರೀ ಇಮ್ಮಡಿ ಮಹಾಂತಮಹಾಸ್ವಾಮಿಗಳು.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀಪಟ್ಟದ ಸದಾಶಿವ ಮಹಾಸ್ವಾಮಿಗಳು1970ರಲ್ಲಿ ಲಿಂಗೈಕ್ಯರಾದ ನಂತರ 1979ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ ವಿದ್ವಾನ್ಶ್ರೀ ಇಮ್ಮಡಿ ಮಹಾಂತ ಮಹಾಸ್ವಾಮಿಗಳು ಕಳೆದ 4 ದಶಕಗಳಲ್ಲಿ ಶ್ರೀಮಠದ ಚಿತ್ರಣವನ್ನುಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸಂಸ್ಕøತ, ವೇದಾಂತ, ಉಪನಿಷತ್ತುಗಳ ಬಗ್ಗೆ ಆಳವಾದ ಅರಿವನ್ನು ಹೊಂದಿರುವ ಶ್ರೀಗಳು ತಮ್ಮ ಜ್ಞಾನದಿಂದ, ಆಚರಣೆಗಳ ಮುಖೇನಭಕ್ತರ ಹಾಗೂ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಗುರುಗಳ ಕರ್ತೃತ್ವ ಶಕ್ತಿಹಾಗೂ ಹಿರಿಯರ ಮಾರ್ಗದರ್ಶನದ ಹಾಗೂ ತಮ್ಮ ಇಚ್ಛಾಶಕ್ತಿಯ ಫಲವಾಗಿ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಹತ್ತು ಹಲವು ಯೋಜನಗೆಳು ರೂಪುಗೊಂಡು ಮಠವುನವೀಕರಣಗೊಂಡಿತು.ವಿದ್ವಾನ್ ಶ್ರೀ ಇಮ್ಮಡಿ ಮಹಾಂತ ಮಹಾಂತ ಮಹಾಸ್ವಾಮಿಗಳುಕಾಯಕಯೋಗಿಗಳಾಗಿ, ನೇಗಿಲು ಹಿಡಿದು ಶ್ರಮಿಸಿದ್ದರ ಫಲ ಇಂದು ಮಠಕ್ಕೆ ಸುಮಾರುಜಮೀನನ್ನು ಸಂಪಾದಿಸಲು ಸಾಧ್ಯವಾಗಿದ್ದು, ಇಂದು ಈ ಜಮೀನನ್ನು ಫಲವತ್ತತೆಗೊಳಿಸಿಆರ್ಥಿಕ ಬೆಳೆಯನ್ನು ಬೆಳೆದು ಮಠಕ್ಕೆ ಆದಾಯದ ಮೂಲ ಮಾಡಿಕೊಂಡಿದ್ದಾರೆ.ಸಮಾಜದಲ್ಲಿ ನೈತಿಕತೆ ಬೆಳೆಸಲು ಧರ್ಮ ಒಂದೇ ಸಾಧನವಲ್ಲ. ಧರ್ಮದ ಸಾರವನ್ನುಸರಿಯಾಗಿ ಅರ್ಥೈಸಿಕೊಳ್ಳಲು ಅಕ್ಷರಜ್ಞಾನ ಅವಶ್ಯಕ ಎಂದು ಅರಿತ ಸ್ವಾಮಿಗಳು “ಶ್ರೀಮುರುಘರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆ”ಯನ್ನು 1993ರಲ್ಲಿ ಹುಟ್ಟು ಹಾಕಿದರು.ವಿದ್ಯಾಸಂಸ್ಥೆಯನ್ನು ಇದೇ ಕ್ಷೇತ್ರದವರಾದ ಮಾಜಿ ಸಚಿವರಾಗಿದ್ದ ಶ್ರೀ ಎಂ. ರಾಜಶೇಖರಮೂರ್ತಿಗಳ ಸಹಕಾರ ಹಾಗೂ ಮುಖಂಡತ್ವದಲ್ಲಿ ಸ್ಥಾಪಿಸಿದರು. ಈ ಶಿಕ್ಷಣ ಸಂಸ್ಥೆಯಮುಖೇನ ಇಂದು ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವದವರೆಗಿನ ಶಿಕ್ಷಣನೀಡಲಾಗುತ್ತಿದೆ. ಕಲಿಯುವ ಬಡಮಕ್ಕಳ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯವನ್ನುಪ್ರಾರಂಭಿಸಿ ಉಚಿತ ಊಟ, ವಸತಿಯನ್ನು ಕಲ್ಪಿಸಲಾಗಿದೆ.ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾಗಿರುವ ಹಿರಿಯಶ್ರೀಗಳು 2001ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಈಗಿನ ಕಿರಿಯ ಶ್ರೀಗಳಾದ ಶ್ರೀ ಇಮ್ಮಡಿಮುರುಘರಾಜೇಂದ್ರ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದು ಕಿರಿಯ ಶ್ರೀಗಳು ಹಿರಿಯಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಚೈತ್ರಮಾಸದಲ್ಲಿ ಕರ್ತೃ ಗುರುಗಳ ಆರಾಧನಾಮಹೋತ್ಸವ ಆಯೋಜಿಸಲ್ಪಡುತ್ತದೆ. ಬಸವ ಧರ್ಮದ, ತತ್ತ್ವಗಳ ಪ್ರಚಾರಕ್ಕಾಗಿಶ್ರಮಿಸುತ್ತಿರುವ ಶ್ರೀಗಳು ಪ್ರತಿವರ್ಷ ಜೂನ್ ಹಾಗೂ ಡಿಸಂಬರ್‍ಗಳಲ್ಲಿ ಸಾಮೂಹಿಕಲಿಂಗದೀಕ್ಷಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅಪಾರ ಭಕ್ತ ಬಳಗ ಪಾಲ್ಗೊಂಡು ಗುರುಗಳಕೃಪೆಗೆ ಪಾತ್ರರಾಗುತ್ತಾರೆ.

Swamiji

Swamiji Name :
ವಿದ್ವಾನ್ ಶ್ರೀ ಇಮ್ಮಡಿ ಮಹಾಂತ ಮಹಾಸ್ವಾಮಿಗಳು
Date of Birth :
1937
Place :
ತೇರಂಬಳ್ಳಿ, ಕೊಳ್ಳೇಗಾಲ ತಾ||
Pattadikara :
1979
Photo :
Swamiji Name :
ಶ್ರೀ ಇಮ್ಮಡಿ ಮುರುಘರಾಜೇಂದ್ರ ಮಹಾಸ್ವಾಮಿಗಳು
Place :
ಕುದೇರು, ಚಾಮರಾಜನಗರ ತಾ||
Pattadikara :
2001
Photo :

Programs

ಪ್ರತಿ ಹುಣ್ಣಿಮೆಗೆ ಭಜನೆ, ವಿಶೇಷ ಕಾರ್ಯಕ್ರಮ
ಚೈತ್ರ ಮಾಸದಲ್ಲಿ ಶ್ರೀ ಮೂಲ ಗುರುಗಳ ಪುಣ್ಯಾರಾಧನೆ
ಶಾª್ರÀಣ ಮಾಸ ಮತ್ತು ಕಾರ್ತಿಕ ಮಾಸದಲ್ಲಿ ಧಾರ್ಮಿಕ ಕಾರ್ಯಕ್ರಮಗಳು
ಜೂನ್ & ಡಿಸಂಬರ್‍ನಲ್ಲಿ ಲಿಂಗದೀಕ್ಷಾ ಕಾರ್ಯಕ್ರಮ

Institutions

ಸಂಸ್ಕøತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಫ್ರೌಢಶಾಲೆ
ಪದವಿ ಪೂರ್ವ ಕಾಲೇಜ್
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠ
ಮರಿಯಾಲ - 571 313
ಚಾಮರಾಜನಗರ ತಾ|| ಮತ್ತು ಜಿಲ್ಲೆ

Map

Statistic

11 Views
0 Rating
0 Favorite
0 Share
error: Content is protected !!