Shree Pattada Matha

Shree Pattada Matha Claimed

ಶ್ರೀ ಪಟ್ಟದ ಮಠ

Average Reviews

Description

ಶ್ರೀ ಪಟ್ಟದ ಮಠ – ಹುರಳಿನಂಜನಪುರ

ಶ್ರೀ ಷ.ಬ್ರ. ಸದಾನಂದ ಸ್ವಾಮಿಗಳು

ಚಾಮರಾಜನಗರ ಜಿಲ್ಲಾ ಕೇಂದ್ರದಿಂದ 10 ಕಿ.ಮೀ. ದೂರದಲ್ಲಿರುವಹುರಳಿನಂಜನಪುರ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಪಟ್ಟದ ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಸುಮಾರು 150ವರ್ಷಗಳ ಹಿಂದೆ ಉತ್ತರದ ಕಡೆಯಿಂದ ಬಂದ ಶರಣರೊಬ್ಬರು ಹುರಳಿನಂಜನಪುರಗ್ರಾಮದಲ್ಲಿ ಅನುಷ್ಠಾನಗೊಂಡು, ಅನೇಕ ಪವಾಡಗಳನ್ನು ಮಾಡಿ ಜನರ ಮನಗೆದ್ದು ಇಲ್ಲಿಮಠವನ್ನು ಸ್ಥಾಪಿಸಿದರೆಂದು ಹೇಳಲಾಗುತ್ತದೆ. ಆದರೆ ಕರ್ತೃ ಗುರುಗಳ ಹೆಸರು ಅವರಕುರಿತಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲ.ಈ ಭಾಗದ ಜನಪದದ ಕಥೆಯ ಹಿನ್ನಲೆಯಲ್ಲಿ ಕರ್ತೃಗುರುಗಳು ತಮ್ಮಆಚರಣೆಗಳ ಮೂಲಕ ಅಧರ್ಮ, ಅನೀತಿಗಳನ್ನು ದೂರ ಮಾಡಿ ಧರ್ಮಸಾಕಾರಗೊಳ್ಳುವಂತೆ ಮಾಡಿದ್ದರು. ಇವರ ಶರಣ ಲೀಲೆಗಳನ್ನು ಕೇಳಿ ತಿಳಿದು ಮಠಕ್ಕೆಸಹಸ್ರಾರು ಭಕ್ತರು ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದು ಮಠದ ಅಭಿವೃದ್ಧಿಗೆಅನೇಕ ರೀತಿಯಲ್ಲಿ ಸಹಾಯಕರಾಗಿದ್ದರು. ಮಠದ ಆವರಣದಲ್ಲಿ ಅನೇಕ ಗದ್ದುಗೆಗಳನ್ನುಕಾಣಬಹುದಾಗಿದ್ದು ಸ್ಪಷ್ಟತೆಯಿಲ್ಲ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಸದಾನಂದ ಸ್ವಾಮಿಗಳು ಶ್ರೀಮಠದ ಆಡಳಿತವನ್ನುವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ನಿತ್ಯ ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೀಗಳು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಗಳು ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದು ಶಿವರಾತ್ರಿಯಲ್ಲಿ ಜಾಗರಣೆ ಹಾಗೂವಿಶೇಷ ಪೂಜೆ ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಸದಾನಂದ ಸ್ವಾಮಿಗಳು
Photo :

Programs

ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶಿವರಾತ್ರಿಗೆ ವಿಶೇಷ ಪೂಜೆ

Photos

Full Address Kannada

ಶ್ರೀ ಪಟ್ಟದ ಮಠ
ಹುರಳಿನಂಜನಪುರ,
ಸರಗೂರು ಪೋ. - 571117
ಚಾಮರಾಜನಗರ ತಾ|| ಮತ್ತು ಜಿಲ್ಲೆ

Map

Near by Places

ಕಾಗಲವಾಡಿ - 1 ಕಿ.ಮೀ.
ಚಾಮರಾಜನಗರ - 10 ಕಿ.ಮೀ.
ಯಳಂದೂರು - 15 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!