Sree Sidda Malleshwara Virakta Matha

Sree Sidda Malleshwara Virakta Matha Claimed

ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ

Average Reviews

Description

ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು

ಜಿಲ್ಲಾ ಕೇಂದ್ರವಾದ ಚಾಮರಾಜನಗರ ನಗರದಲ್ಲಿ 1958ರಲ್ಲಿ ಸ್ಥಾಪಿತಗೊಂಡುಭಕ್ತರ ಅಭ್ಯುದಯಕ್ಕೆ ಶ್ರಮಿಸುತ್ತಿರುವ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠವು ಜಿಲ್ಲೆಯ ಧಾರ್ಮಿಕ,ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಪ್ರಗತಿಯ ಕೇಂದ್ರ ಬಿಂದುವಾಗಿ ಬೆಳೆದಿದೆ. ಶ್ರೀಮಠದಸ್ಥಾಪನೆಗೆ ಸೋಮಹಳ್ಳಿಯ ಶ್ರೀ ವೀರಸಿಂಹಾಸನಾ ಶಿಲಾ ಮಠಾಧ್ಯಕ್ಷರಾಗಿದ್ದ ಪಟ್ಟದ ಶ್ರೀ ಸಿದ್ದಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರಣೀಭೂತರಾಗಿದ್ದು ಶ್ರೀಮಠದ ಪ್ರಥಮ ಗುರುಗಳಾಗಿಶ್ರೀ ಮ.ನಿ.ಪ್ರ. ಬಸವರಾಜ ಮಹಾಸ್ವಾಮಿಗಳು ಅಪಾರವಾದುದನ್ನು ಸಾಧಿಸಿದರು.ಕರ್ತೃ ಗುರುಗಳಾದ ಶ್ರೀ ಬಸವರಾಜ ಮಹಾಸ್ವಾಮಿಗಳು ಅನುಷ್ಠಾನಮೂರ್ತಿಗಳಾಗಿ ತುಮಕೂರು ಜಿಲ್ಲೆ ಹುಳಿಯಾರು ಸಮೀಪ ದೀರ್ಘಾನುಷ್ಠಾನಗೊಂಡುತದನಂತರ ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ನೀಲಗಿರಿ, ಕೊಡಗು, ಸೇಲಂ, ತಿರುಚಿನಾಪಳ್ಳಿಹೀಗೆ ರಾಜ್ಯ – ಹೊರರಾಜ್ಯಗಳಾದ್ಯಂತ ಭಕ್ತರನ್ನು ಸಂಘಟಿಸಿ, ತಾಲ್ಲೂಕು ಮಟ್ಟದ ಬಸವಸಮಿತಿ ಹುಟ್ಟು ಹಾಕಿ ಪ್ರಚಾರ ಕಾರ್ಯ ಕೈಗೊಂಡರು. ಈ ಭಾಗದ ಬಡಮಕ್ಕಳವಿದ್ಯಾಭ್ಯಾಸದ ಅನುಕೂಲಕ್ಕೋಸ್ಕರ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿದ್ದಲ್ಲದೇ ಸಂಸ್ಕøತಪಾಠಶಾಲೆಯನ್ನು ಪ್ರಾರಂಭಿಸಿದರು. ಈ ರೀತಿಯಾಗಿ ಅಗಾದವಾದುದನ್ನು ಸಾದಿಸಿದಗುರುಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಎರಡನೇ ಶ್ರೀಗಳಾದ ಶ್ರೀ ಮ.ನಿ.ಪ್ರ.ಸಿದ್ದಬಸವರಾಜ ಮಹಾಸ್ವಾಮಿಗಳನ್ನು ನೇಮಿಸಿಕೊಂಡಿದ್ದು ಎರಡನೇ ಶ್ರೀಗಳು ಕರ್ತೃಗುರುಗಳ ಹಾದಿಯಲ್ಲಿಯೇ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದು ಈಗಿನಶ್ರೀಗಳನ್ನು ಪಟ್ಟಾಧಿಕಾರಗೊಳಿಸಿ 2011ರ ಅಕ್ಟೋಬರ್ 21ರಲ್ಲಿ ಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಚನ್ನಬಸವ ಸ್ವಾಮಿಗಳು 2011ರಅಕ್ಟೋಬರ್ 01ರಂದು ಶ್ರೀಮಠದ ಅಧಿಕಾರ ಸ್ವೀಕರಿಸಿ ಶ್ರೀಮಠದ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮವಾಸ್ಯೆಗೆ ಭಜನೆ, ಗೋಷ್ಠಿ ಹಾಗೂ ಕಾರ್ತೀಕದ ಮೊದಲನೇ ಸೋಮವಾರ ಹಿಂದಿನಶ್ರೀಗಳ ಸಂಸ್ಮರಣೋತ್ಸವ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಚನ್ನಬಸವ ಸ್ವಾಮಿಗಳು
Date of Birth :
15-08-1994
Place :
ಕುಮಚಹಳ್ಳಿ, ಚಾಮರಾಜನಗರ ತಾ||
Pattadikara :
01-10-2011
Photo :

Programs

ಪ್ರತಿ ಅಮವಾಸ್ಯೆಗೆ ಭಜನೆ, ಗೋಷ್ಠಿ
ಕಾರ್ತೀಕ ಮೊದಲನೇ ಸೋಮವಾರ 2ನೇ ಸ್ವಾಮಿಗಳ ಸ್ಮರಣೋತ್ಸವ
ಮೇ 21, 22 ಬಸವ ಜಯಂತಿ 2ನೇ ಸ್ವಾಮಿಗಳ ಸ್ಮರಣೋತ್ಸª

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಸಂಸ್ಕøತ ಪಾಠಶಾಲೆ
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠ
ಚಾಮರಾಜನಗರ - 571 313
ಚಾಮರಾಜನಗರ ತಾ|| ಮತ್ತು ಜಿಲ್ಲೆ

Map

Near by Places

ಕೊಳ್ಳೇಗಾಲ - 38 ಕಿ.ಮೀ.
ನಂಜನಗೂಡು - 40 ಕಿ.ಮೀ.
ಮೈಸೂರು - 60 ಕಿ.ಮೀ.

Statistic

15 Views
0 Rating
0 Favorite
0 Share
error: Content is protected !!