ಯಲಬುರ್ಗಾ ತಾಲ್ಲೂಕಿನ ಕುದುರೇಮೂತಿ ಗ್ರಾಮದ ಹೊರಭಾಗದಲ್ಲಿಪುರಾತನ ಕಾಲದಲ್ಲಿ ಶ್ರೀ ಜಗದ್ಗುರು ಮಹಾಂತ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದುಹೇಳಲಾಗುವ ಶ್ರೀ ಸಂಸ್ಥಾನ ಮೈಸೂರುಮಠವು ಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ತನ್ನಧಾರ್ಮಿಕ ಆಚರಣೆಗಳಿಂದಾಗಿ ಹೆಚ್ಚು ಪ್ರಸಿದ್ಧಿಗೊಂಡಿದೆ.ಕರ್ತೃಗುರುಗಳಾದ ಶ್ರೀ ಮಹಾಂತ ಮಹಾಸ್ವಾಮಿಗಳು ಮೈಸೂರು ಪ್ರಾಂತ್ಯದವರಾಗಿದ್ದು ಲೋಕಕಲ್ಯಾಣಾರ್ಥ ಲೋಕ ಸಂಚಾರ ಮಾಡುತ್ತಾ ಉತ್ತರದ ಕಡೆ ಹೊರಟರು.ಉತ್ತರಾಭಿಮುಖವಾಗಿ ಸಂಚಾರ ಕೈಗೊಂಡ ಗುರುಗಳು ಕುದುರೇಮೂತಿಗೆ ಆಗಮಿಸಿಅನುಷ್ಠಾನಗೊಂಡಿದ್ದಾಗ ಶ್ರೀಗಳ ತಪೋಶಕ್ತಿಗೆ ಬೆರಗಾದ ಭಕ್ತರು ಶ್ರೀಗಳನ್ನು ಇಲ್ಲಿಯೇನೆಲೆಸಬೇಕೆಂದು ಬಿನ್ನವಿಸಿ ಗುರುಗಳಿಗೆ ಶ್ರೀಮಠವನ್ನು ನಿರ್ಮಿಸಿಕೊಡುತ್ತಾರೆ. ಶ್ರೀಗಳುಮೈಸೂರು ಪ್ರಾಂತ್ಯದಿಂದ ಇಲ್ಲಿಗೆ ಬಂದು ಶ್ರೀಮಠವನ್ನು ಸ್ಥಾಪನೆ ಮಾಡಿದ್ದರಿಂದಾಗಿಶ್ರೀಮಠಕ್ಕೆ ಶ್ರೀಸಂಸ್ಥಾನ ಮೈಸೂರುಮಠ ಎಂದು ಹೆಸರು ಬಂದಿದೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳುಸಿಗುವುದಿಲ್ಲ. ಕಾರಣ ನಂತರದ ಶ್ರೀಗಳು ಮೊದಲಿನ ಶ್ರೀಗಳಲ್ಲೇ ಒಬ್ಬರ ಹೆಸರನ್ನು ಅಭಿದಾನಪಡೆದು ಅಧಿಕಾರಕ್ಕೆ ಬಂದಿರುವುದು. ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲದಿದ್ದರೂ ಈಗಿನಶ್ರೀಗಳನ್ನು 20ನೇ ಪೀಠಾಧಿಕಾರಿಗಳೆಂದು ಹೇಳಲಾಗುತ್ತಿದೆ.ಈಗಿನ ಶ್ರೀಗಳಾದ ಶ್ರೀ ವಿಜಯ ಮಹಾಂತ ಶಿವಯೋಗಿಗಳು 1968ರ ಮೇ10ರಲ್ಲಿ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡ ಕೆಲವೇ ವರ್ಷಗಳಲ್ಲಿ ಶ್ರೀಮಠದಲ್ಲಿಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಚುರುಕುಗೊಂಡವು. ಶ್ರೀಗಳುಶ್ರೀಮಠದ ಶಾಖಾಮಠಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿ ಕಡೆಗೂ ಗಮನಹರಿಸಿದ್ದು ಈಮೂಲಕ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ.ಶ್ರೀಮಠದಲ್ಲಿ ವಿಜೃಂಭಣೆಯ ಬಸವಜಯಂತಿ ಆಚರಣೆ ಜಾರಿಯಲ್ಲಿದ್ದುಶಿವರಾತ್ರಿಯಲ್ಲಿ ಶ್ರೀಮಠದ ಜಾತ್ರೆಯು ನಡೆಯುತ್ತದೆ. ಆ ಸಮಯದಲ್ಲಿ ಸಾಮೂಹಿಕವಿವಾಹಗಳು, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ವಿಜಯ ಮಹಾಂತ ಮಹಾಸ್ವಾಮಿಗಳು
Date of Birth :
1-2-1946
Place :
ಸೌಡಿ, ರೋಣ ತಾ||
Pattadikara :
10-5-1968
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ದೀಪೋತ್ಸವ.
ಶಿವರಾತ್ರಿಗೆ ಶ್ರೀಮಠದ ಜಾತ್ರಾ ಮಹೋತ್ಸವ. ಬಸವಜಯಂತಿ ಆಚರಣೆ.
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು
ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಸಂಸ್ಥಾನ ಮೈಸೂರು ಮಠ
ಕುದುರೇಮೂತಿ - 583 237
ಯಲಬುರ್ಗಾ ತಾ||, ಕೊಪ್ಪಳ ಜಿ||