Shree Hirematha

Shree Hirematha Claimed

ಶ್ರೀ ಹಿರೇಮಠ

Average Reviews

Description

ಶ್ರೀ ಹಿರೇಮಠ

ಕರ್ತ – ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು

ಯಲಬುರ್ಗಾ ತಾಲ್ಲೂಕಿನ ಬೆದವಟಿ ಗ್ರಾಮದಲ್ಲಿ ಪುರಾತನ ಕಾಲದಲ್ಲಿ ಪೂಜ್ಯಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವುಅಸ್ತಿತ್ವದಲ್ಲಿದ್ದು ತನ್ನ ಪರಂಪರೆಯ ಶ್ರೀಮಂತಿಕೆಯಿಂದ ಹಾಗೂ ತನ್ನ ದಾರ್ಮಿಕಆಚರಣೆಗಳಿಂದಾಗಿ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಕರ್ತೃಗುರುಗಳಾದ ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಧರ್ಮ ಜಾಗೃತಿಗಾಗಿ ಶ್ರೀಮಠವನ್ನು ಸ್ಥಾಪಿಸಿ, ವೀರಶೈವ ಧರ್ಮವನ್ನು ಹಾಗೂ ಧರ್ಮದ ಆಚರಣೆಗಳನ್ನುಪ್ರಚುರಗೊಳಿಸಿದರು. ಶ್ರೀಗಳು ಲಿಂಗಪೂಜಾನಿಷ್ಠರಾಗಿ ಲಿಂಗಾನಂದದ ಮಹದಾನಂದವನ್ನುತಾವೂ ಅನುಭವಿಸಿ ಇತರರಿಗೂ ತಿಳಿಯಪಡಿಸಿ ಶಿವಾನುಭವಗೋಷ್ಠಿಗಳನ್ನೇರ್ಪಡಿಸಿ,ಧರ್ಮಪ್ರಚಾರ ಮಾಡುತ್ತಾ ಸಂಚಾರ ಮೂರ್ತಿಗಳಾಗಿ ಸೊನ್ನಲಾಪುರದಿಂದ ಯಲಬುರ್ಗಕ್ಕೆಬಂದು ಅಲ್ಲಿಂದ ಮುಂದೆ ಬೆದವಟಿಗೆ ಬಂದು ಅನುಷ್ಠಾನಗೊಂಡರು.ಶ್ರೀ ಸಿದ್ದರಾಮ ಶಿವಾಚಾರ್ಯರು ಮಹಾ ಮೇಧಾವಿಗಳಾಗಿದ್ದು, ಪಂಚಪೀಠದಜಗದ್ಗುರುಗಳ ನಿಕಟ ಸಂಪರ್ಕವನ್ನು ಹೊಂದಿದ್ದವರು. ಇವರನ್ನು ವಾದದಲ್ಲಿ ಗೆಲ್ಲುವವರೇಇರಲಿಲ್ಲವೆಂದು ಹೇಳಲಾಗಿದೆ. ಶ್ರೀಗಳ ವಿದ್ವತ್ತಿಗೆ ಹಾಗೂ ಪ್ರಭಾವಕ್ಕೆ ಮಣಿದಿದ್ದ ಅನೇಕಪಾಳೇಗಾರರು ಸಂಗನಾಳು, ಬೆದವಟಿ, ಶಿರೂರ, ಮುದ್ಲಾಪುರ, ಅರಕೇರಿ, ಮಲಕಸಮುದ್ರಗಳಲ್ಲಿ ಜಮೀನನ್ನು ಇನಾಂ ನೀಡಿ ಮಠವು ಹೆಚ್ಚು ಅಭಿವೃದ್ಧಿಗೊಳ್ಳಲು ಕಾರಣರಾಗಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ 9 ಜನ ಶ್ರೀಗಳು ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಮೊದಲ 5 ಜನ ಸ್ವಾಮಿಗಳು ಸಂಗನಹಾಳು ಮಠದಲ್ಲಿಯೇ ನೆಲೆಸಿದ್ದು ನಂತರ 6ನೇಶ್ರೀಗಳಾದ ಮೂರನೇ ಶ್ರೀ ಸಿದ್ದರಾಮ ಸ್ವಾಮಿಗಳಿಂದ ನಂತರದ ಪರಂಪರೆಯ ಗುರುಗಳುಬೆದವಟಿಯನ್ನೇ ತಮ್ಮ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಅಧಿಕಾರ ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯಸ್ವಾಮಿಗಳು ಶ್ರೀಮಠದ10ನೇ ಪೀಠಾಧಿಪತಿಗಳಾಗಿ 1970ರ ಎಪ್ರಿಲ್ 8 ರಂದು ಪಟ್ಟಕ್ಕೆ ಬಂದಿದ್ದು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಶ್ರೀಗಳು ಲಿಂಗಪೂಜಾನಿಷ್ಠರಾಗಿತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಶ್ರೀಮಠವನ್ನು ಹೆಚ್ಚುಪ್ರಚುರಪಡಿಸುತ್ತಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಭಕ್ತರ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಾ,ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
4-7-1945
Place :
ಮುದ್ದಾಪುರ, ಕೊಪ್ಪಳ ತಾ||
Pattadikara :
8-4-1970
Photo :

Programs

ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
ಶ್ರಾವಣ ಬಹುಳ ದಶಮಿಯಂದು ಲಿಂ|| ಶ್ರೀ ಷ.ಬ್ರ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ಹಿರೇಮಠ ಬೆದವಟಿ,
ಯಡೆಯಾಪುರ ಪೋಸ್ಟ್ - 583 232
ಯಲಬುರ್ಗಾ ತಾ||, ಕೊಪ್ಪಳ ಜಿ||

Map

Near by Places

ಬಾನಾಪುರ - 26 ಕಿ.ಮೀ.
ಕೊಪ್ಪಳ - 35 ಕಿ.ಮೀ.
ಯಲಬುರ್ಗಾ - 26 ಕಿ.ಮೀ.

Statistic

86 Views
0 Rating
0 Favorite
0 Share
error: Content is protected !!