Shree Shridhara Murudi

Shree Shridhara Murudi Claimed

ಶ್ರೀ ಶ್ರೀಧರ ಮುರುಡಿ ಹಿರೇಮಠ

Average Reviews

Description

ಶ್ರೀ ಶ್ರೀಧರ ಮುರುಡಿ ಹಿರೇಮಠ

ಕರ್ತ – ಶ್ರೀ ಷ.ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಸುಮಾರು 250 ವರ್ಷಗಳಿಗಿಂತಲೂಹಿಂದಿನ ಇತಿಹಾಸವಿರುವ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀಧರ ಮುರಡಿ ಹಿರೇಮಠವು ಅಸ್ತಿತ್ವದಲ್ಲಿದ್ದು ಶ್ರೀಮಠವು ಉಜ್ಜಯಿನಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳುಸದಾ ಲೋಕಸಂಚಾರದಲ್ಲಿದ್ದು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಾ ಯಲಬುರ್ಗಾಕ್ಕೆ ಬಂದುನೆಲೆನಿಂತಿದ್ದಾರೆಂದು ಹೇಳಲಾಗುತ್ತದೆ. ಶ್ರೀಗಳು ಮಹಾತಪಸ್ವಿಗಳಾಗಿದ್ದು ತಮ್ಮ ತಪೋಶಕ್ತಿಯಿಂದಾಗಿ ಭಕ್ತರ ಸಮಸ್ಯೆಗಳಿಗೆ ಪರಿಹಾರವಾಗಿ ಅವರ ಸಹಕಾರದೊಂದಿಗೆ ಶ್ರೀಮಠವನ್ನುಸ್ಥಾಪಿಸಿ ಅಭಿವೃದ್ಧಿಗೊಳಿಸಿದ್ದಾರೆ. ಶ್ರೀ ಬಸವಲಿಂಗೇಶ್ವರರು ಲಿಂಗಪೂಜಾನಿಷ್ಠರಾಗಿಅನುಷ್ಠಾನಪ್ರಿಯರಾಗಿ ಜನಮನ ದಲ್ಲಿ ಅಚ್ಚಳಿಯದೆ ಮೂರ್ತಿಸ್ವರೂಪರಾಗಿದ್ದಾರೆ. ಶ್ರೀಗಳುಶಿಕ್ಷಣ ಪ್ರೇಮಿಗಳೂ ಆಗಿದ್ದರು ಎಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಇಲ್ಲಿಯವರೆಗೂ 8 ಜನ ಶ್ರೀಗಳುಪಟ್ಟಾಧಿಕಾರಗೊಂಡಿದ್ದು ಈಗಿನ ಶ್ರೀಗಳು 9ನೇ ಶ್ರೀಗಳೆಂದು ತಿಳಿದುಬರುತ್ತದೆ.ಕರ್ತೃಗುರುಗಳ ನಂತರ ಬಂದ ಶ್ರೀ ಗಡ್ಡದ ಸ್ವಾಮಿಗಳು ಶಿವಪೂಜಾನಿಷ್ಠರಾಗಿ, ಶ್ರೀಮಠವನ್ನುಮುನ್ನಡೆಸಿದ್ದು ರೋಣ ತಾಲ್ಲೂಕು ಗಜೇಂದ್ರಗಢದ ಶಾಖಾಮಠದಲ್ಲಿ ಲಿಂಗೈಕ್ಯರಾಗಿದ್ದು ಆಮಠವು ಗಡ್ಡದಜ್ಜ ಮಠವೆಂದೇ ಹೆಸರುವಾಸಿಯಾಗಿದೆ. ನಂತರ ಬಂದ ಎಲ್ಲಾ ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮಿಗಳು 1985ರಲ್ಲಿಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ತಿರುಪತಿಯಲ್ಲಿ ಸಂಸ್ಕøತ,ವೇದಾಧ್ಯಯನವನ್ನು ಮುಗಿಸಿ 2002ರ ಫೆಬ್ರವರಿ 24ರಂದು ಶ್ರೀಮಠದ ಪಟ್ಟಾಧಿಕಾರವನ್ನುಸ್ವೀಕರಿಸಿದ್ದು ಹಿಂದಿನ ಶ್ರೀಗಳ ಹಾದಿಯಲ್ಲಿಯೇ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಮಠದಲ್ಲಿ ವಿಜಯದಶಮಿಯಲ್ಲಿ ಶ್ರೀ ಹಿರಿಯ ಗುರುಗಳಪುಣ್ಯಾರಾಧನೆ ನಡೆಯುತ್ತಿದ್ದು, ಮಾಘ ಮಾಸದಲ್ಲಿ ಈಗಿನ ಶ್ರೀಗಳ ಪಟ್ಟಾಧಿಕಾರಮಹೋತ್ಸವ ಹಾಗೂ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
21-10-1972
Place :
ಸೊನ್ನ, ಹಗರಿಬೊಮ್ಮನಹಳ್ಳಿ ತಾ||
Pattadikara :
24-2-2002
Photo :

Programs

ಮಾಘ ಮಾಸದ ದಶಮಿ ತಿಥಿಗೆ ಶ್ರೀಗಳ ಪಟ್ಟಾಧಿಕಾರ
ಮಹೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣ ಮಾಸದಲ್ಲಿ ಕಲ್ಬುರ್ಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ.
ವಿಜಯ ದಶಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ.

Photos

Full Address Kannada

ಶ್ರೀ ಶ್ರೀಧರ ಮುರುಡಿ ಹಿರೇಮಠ
ಯಲಬುರ್ಗಾ - 583 236 ಕೊಪ್ಪಳ ಜಿ||

Map

Near by Places

ಕೊಪ್ಪಳ - 37 ಕಿ.ಮೀ.
ಗದಗ - 60 ಕಿ.ಮೀ.
ಕುಷ್ಟಗಿ - 30 ಕಿ.ಮೀ.

Statistic

168 Views
0 Rating
0 Favorite
1 Share
error: Content is protected !!