ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಗ್ರಾಮವು ಕೊಪ್ಪಳ ನಗರದಿಂದ ಕೇವಲ 8ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ 18ನೇ ಶತಮಾನದಲ್ಲಿ ಶ್ರೀ ಮ.ನಿ.ಪ್ರ.ಚನ್ನಬಸವ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಚನ್ನಬಸವೇಶ್ವರ ಕಪ್ಪತ್ ಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕವಾತಾವರಣವನ್ನು ಸೃಷ್ಠಿಸುವ ಕೆಲಸ ಮಾಡುತ್ತಿದೆ.ಕರ್ತೃಗುರುಗಳಾದ ಶ್ರೀ ಚನ್ನಬಸವ ಸ್ವಾಮಿಗಳು ಬಾಲ್ಯದಲ್ಲೇ ಆಧ್ಯಾತ್ಮ ಸಂಸ್ಕಾರವನ್ನು ಪಡೆದು ಲೋಕಕಲ್ಯಾಣಾರ್ಥ ಶಿವಯೋಗ ಸಿದ್ಧಿಗಾಗಿ ಅನುಷ್ಠಾನಗೊಂಡಿದ್ದವರು.ಪ್ರೌಢಾವಸ್ಥೆಗೆ ತಲುಪಿದ ಶ್ರೀಗಳು ಕಪ್ಪತ್ಗುಡ್ಡದಲ್ಲಿ ದೀರ್ಘಾನುಷ್ಠಾನಕ್ಕೆ ಕುಳಿತು ಶಿವಯೋಗಸಿದ್ಧಿಯನ್ನು ಸಂಪೂರ್ಣವಾಗಿ ಪಡೆದು ಹಿರೇಸಿಂದೋಗಿಗೆ ಬಂದು ನೆಲೆ ನಿಂತರು.ಶ್ರೀ ಚನ್ನಬಸವ ಸ್ವಾಮಿಗಳು ಹಿರೇಸಿಂದೋಗಿಯಲ್ಲಿ ನೆಲೆನಿಂತು ವೀರಶೈವಧರ್ಮಾಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಭಕ್ತರ ಸಹಕಾರದೊಂದಿಗೆಗ್ರಾಮದಲ್ಲಿ ನಿತ್ಯ ಶಿವಾನುಭವಗೋಷ್ಠಿ, ದಾಸೋಹ ವ್ಯವಸ್ಥೆಯನ್ನು ಪ್ರಾರಂಭ ಮಾಡಿದರು.ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿನ ಮೌಢ್ಯವನ್ನು ತೊಡೆದುಹಾಕುವಕಾರ್ಯ ಮಾಡಿದರು. ಶ್ರೀಗಳ ಮಾರ್ಗದರ್ಶನದಿಂದ ಜನರು ಸನ್ಮಾರ್ಗದ ಹಾದಿ ಹಿಡಿದರು.ಕರ್ತೃಗುರುಗಳ ನಂತರ ಶ್ರೀ ಮಲ್ಲಣ್ಣಾರ್ಯ ಸ್ವಾಮಿಗಳು ತದನಂತರ ಶ್ರೀತೋಟಪ್ಪ ಸ್ವಾಮಿಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಶ್ರಮಿಸಿದ್ದಾರೆ. ಶ್ರೀಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಶ್ರೀಮಠವನ್ನುಅಭಿವೃದ್ಧಿಪಡಿಸಿದರು. ಶ್ರೀ ತೋಟಪ್ಪ ಸ್ವಾಮಿಗಳು ಶ್ರೀಮಠವನ್ನು ನೂತನ ವಾಗಿ ನಿರ್ಮಿಸಿ,ಶ್ರೀಮಠಕ್ಕೆ ಜಮೀನನ್ನು ಸಂಪಾದಿಸಿ ಆರ್ಥಿಕವಾಗಿ ಸ್ವಾವಲಂಬನೆಯಾಗಲು ಕಾರಣರಾದರು.ಈಗಿನ ಶ್ರೀಗಳಾದ ಶ್ರೀ ಚಿದಾನಂದ ಸ್ವಾಮಿಗಳು 1983ರ ಮಾರ್ಚ್ 25ರಂದುಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳು ವ್ಯವಸ್ಥಿತವಾಗಿನಡೆಯುವಂತೆ ನೋಡಿಕೊಂಡಿದ್ದಾರೆ. ಜೊತೆಗೆ ಹಿಂದಿನ ಶ್ರೀಗಳು ಕೈಗೊಂಡಿದ್ದ ಶ್ರೀಮಠದನವೀಕರಣ ಕಾರ್ಯವನ್ನು ಪೂರ್ಣಗೊಳಿಸಿದರು. ಶ್ರೀಗಳು ಧಾರ್ಮಿಕ, ಸಾಮಾಜಿಕ,ಸಾಹಿತ್ಯಿಕವಾಗಿಯೂ ಕಾರ್ಯ ನಿರ್ವಹಿಸುತ್ತಾ ಭಜನಾವಳಿ ಮತ್ತು ನಾಮಾವಳಿಪುಸ್ತಕಗಳನ್ನು ಪ್ರಕಟಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಚಿದಾನಂದ ಮಹಾಸ್ವಾಮಿಗಳು
Date of Birth :
10-9-1951
Place :
ಬೆಳದಡಿ, ಗದಗ ತಾ||
Pattadikara :
25-3-1983
Photo :
Programs
ಫಾಲ್ಗುಣ ಮಾಸದಲ್ಲಿ ರಥೋತ್ಸವ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀ ಚನ್ನಬಸವೇಶ್ವರ ಕಪ್ಪತ್ ಮಠ
ಹಿರೇಸಿಂದೋಗಿ - 583238
ಕೊಪ್ಪಳ ತಾ||, ಜಿ||