Shree Gavisiddeshwara Samsthana Shree Gavi Matha

Shree Gavisiddeshwara Samsthana Shree Gavi Matha Claimed

ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠ

Average Reviews

Description

ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠ

ಕರ್ತೃ – ಪೂಜ್ಯ ಶ್ರೀ ರುದ್ರಮುನಿ ಮಹಾ ಶಿವಯೋಗಿಗಳು

ಕೊಪ್ಪಳ ನಗರವು ಬಹು ಹಿಂದಿನಿಂದಲೂ ವೀರಶೈವ ಧರ್ಮಾಚರಣೆಗಳಕೇಂದ್ರವಾಗಿದ್ದು ಇಂತಹ ಧರ್ಮಭೂಮಿಯಲ್ಲಿ ಸುಮಾರು 11ನೆ ಶತಮಾನದಲ್ಲಿ ಪೂಜ್ಯ ಶ್ರೀರುದ್ರಮುನಿ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಸಂಸ್ಥಾನ ಗವಿಮಠವು ನಾಡಿನಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆದಿದೆ. ಶ್ರೀ ಸಂಸ್ಥಾನ ಗವಿ ಮಠದಕಾರಣದಿಂದಾಗಿ ಕೊಪ್ಪಳವು ಹೆಚ್ಚು ಪ್ರಸಿದ್ಧಿಗೆ ಬಂದಿದೆ.ಕರ್ತೃಗುರುಗಳಾದ ಶ್ರೀ ಜ. ರುದ್ರಮುನಿ ಮಹಾಸ್ವಾಮಿಗಳು ಕಾಶಿಯ ವಿಶ್ವನಾಥನದರ್ಶನ ಪಡೆದು ಕೊಪ್ಪಳಕ್ಕೆ ಬಂದವರಾಗಿದ್ದು ಕೊಪ್ಪಳದ ಹೊರಭಾಗದ ಕಲ್ಲುಬೆಟ್ಟದ ಮೆಲೆಸೃಷ್ಠಿಯಾಗಿದ್ದ ಗವಿಯಲ್ಲಿ ಅನುಷ್ಠಾನಗೊಂಡರು. ಶ್ರೀಗಳು ಇಲ್ಲಿ ನೆಲೆಗೊಂಡ ನಂತರಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿತು. ಶ್ರೀಗಳುಭಕ್ತರನ್ನು ಸನ್ಮಾರ್ಗಕ್ಕೆ ತರಲು ನಿತ್ಯ ಶಿವಾನುಭವಗೋಷ್ಠಿ ನಡೆಸಿ, ಧರ್ಮೋಪದೇಶವನ್ನುನೀಡಿ, ಅವರ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿ ಮಹಾಮಹಿಮರೆನಿಸಿದರು.ಕರ್ತೃಗುರುಗಳು ಕೊಪ್ಪಳ ಸಮೀಪದ ಮಂಗಳಾಪುರದ ಬೃಹನ್ಮಠದ ಗುರುಗಳಆಹ್ವಾನದ ಮೇರೆಗೆ ಮಂಗಳಾಪುರಕ್ಕೆ ಹೋಗಿ ಅಲ್ಲಿನ ಬೆಟ್ಟದ ಮಳಲ ಮಲ್ಲೇಶ್ವರನಸನ್ನಿಧಿಯಲ್ಲಿ ಕೆಲವು ದಿನ ಪೂಜಾನುಷ್ಠಾನ ಕೈಗೊಂಡು ಕೊಪ್ಪಳದ ಗವಿಮಠಕ್ಕೆ ಹಿಂದಿರುಗುತ್ತಾರೆ. ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರೀಗಳ ಪ್ರಭಾವ ಹೆಚ್ಚಾಗಿದ್ದುದುಕಂಡುಬರುತ್ತದೆ. ಭಕ್ತರು ಸುತ್ತಮುತ್ತಲಿನ ಪ್ರದೇಶಗಳಿಂದ ಶ್ರೀಗಳ ದರ್ಶನಕ್ಕೆ ಬಂದುದರ್ಶನ ಪಡೆದು ಪುನೀತರಾಗುತ್ತಿದ್ದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ 17ಜನ ಶ್ರೀಗಳು ಅಧಿಕಾರ ನಡೆಸಿದ್ದುಈಗಿನ ಶ್ರೀಗಳು 18ನೆಯವರಾಗಿದ್ದಾರೆ. ಶ್ರೀಮಠದ ಪರಂಪರೆಯ ಎಲ್ಲಾ ಗುರುಗಳು ತಮ್ಮಕಾಲಮಾನಗಳಲ್ಲಿ ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಭಕ್ತರಿಗೆಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಹಾಗೆಯೇ ಭಕ್ತರ ಸಹಕಾರ ಪಡೆದು ಶ್ರೀಮಠವನ್ನುಅಭಿವೃದ್ಧಿಗೊಳಿಸಿದ್ದಾರೆ. ಪರಂಪರೆಯ 17 ಗುರುಗಳ ಪೈಕಿ 8 ಜನ ಗುರುಗಳ ಗದ್ದುಗೆಗಳುಗವಿಮಠದಲ್ಲಿ ಕಾಣಸಿಗುತ್ತಿದ್ದು ಉಳಿದ 9 ಗುರುಗಳ ಗದ್ದುಗೆಗಳು ನಾಡಿನ ನಾನಾಭಾಗಗಳಲ್ಲಿಕಾಣಸಿಗುತ್ತಿವೆ.ಪರಂಪರೆಯಲ್ಲಿ ಬರುವ 11ನೇ ಶ್ರೀಗಳಾದ ಶ್ರೀ ಜ. ಗವಿಸಿದ್ದೇಶ್ವರ ಸ್ವಾಮಿಗಳಿಂದಶ್ರೀಮಠವು ಹೆಚ್ಚಿನ ಪ್ರಚಾರ ಪಡೆದು ಪ್ರಸಿದ್ಧಿ ಹೊಂದಿದೆ. ಈ ಕಾರಣದಿಂದಾಗಿ ಶ್ರೀಮಠಕ್ಕೆಶ್ರೀ ಜ. ಗವಿಸಿದ್ದೇಶ್ವರ ಮಠವೆಂದೂ ಕೂಡ ಕರೆಯುತ್ತಾರೆ. ಶ್ರೀಗಳು ಪವಾಡಪುರುಷರಾಗಿದ್ದುಭಕ್ತರ ಭವರೋಗಗಳನ್ನು ನೀಗಿಸುವ ವೈದ್ಯರಾಗಿದ್ದರು. ಶ್ರೀಗಳು ಶ್ರೀಮಠವನ್ನುನಾಡಿನುದ್ದಗಲಕ್ಕೂ ಪ್ರಚುರ ಪಡಿಸಿ ಆರ್ಥಿಕವಾಗಿ ಶ್ರೀಮಂತವಾಗಲು ಕಾರಣರಾದರು.ಇಂತಹ ಮಹಾಮಹಿಮ ಪುರುಷರು ಜೀವಂತ ಸಮಾಧಿ ಹೋದರೆಂದು ಹೇಳಲಾಗುತ್ತದೆ.ಶ್ರೀ ಜ. ಗವಿಸಿದ್ದೇಶ್ವರ ಸ್ವಾಮಿಗಳು ಜೀವಂತ ಸಮಾಧಿ ಹೋಗುವ ಮುನ್ನ ತಮ್ಮಶಿಷ್ಯರಾದ ಶ್ರೀ ಜ. ಹಿರಿಶಾಂತವೀರ ಸ್ವಾಮಿಗಳಿಗೆ ಪಟ್ಟಾಧಿಕಾರದ ಅನುಗ್ರಹ ನೀಡಿಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವಂತೆ ಆಶೀರ್ವದಿಸಿದರು. ಶ್ರೀಜ. ಹಿರಿಶಾಂತವೀರ ಸ್ವಾಮಿಗಳೂ ಕೂಡ ಗುರುಗಳಂತೆ ಮಹಾಮಹಿಮರಾಗಿದ್ದುಸಮಾಜವನ್ನು ಧಾರ್ಮಿಕ ತಳಹದಿಯ ಮೇಲೆ ಬೆಳೆಯುವಂತೆ ಮಾಡಿದರು.ಶ್ರೀಮಠದ ಪರಂಪರೆಯ 15ನೇ ಶ್ರೀಗಳಾದ ಶ್ರೀ ಜ. ಶಿವಶಾಂತವೀರಮಹಾಸ್ವಾಮಿಗಳು (ಗಡ್ಡದಜ್ಜನವರು) ಉಗ್ರ ತಪಸ್ವಿಗಳು. ಶ್ರೀಗಳು ಕೃಷಿಕಾಯಕ ಪ್ರೇಮಿಗಳಾಗಿದ್ದು ಶ್ರೀ ಗವಿಮಠದ ಎಲ್ಲಾ ಶಾಖಾಮಠಗಳಲ್ಲಿ ಒಕ್ಕಲುತನವನ್ನಿಟ್ಟಿದ್ದರು. ಕೃಷಿಕಾಯಕಕ್ಕೆ ಬಹಳಷ್ಟು ಪ್ರಾಧಾನ್ಯತೆಯನ್ನು ನೀಡುವ ಮೂಲಕ ಶಾಖಾಮಠಗಳಿಗೆ ಭೇಟಿ ನೀಡಿಅಲ್ಲಿನ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳನ್ನು ಗಮನಿಸುತ್ತಿದ್ದರು. ಶ್ರೀಗಳು ಶಿಕ್ಷಣಪ್ರೇಮಿಗಳೂ ಆಗಿದ್ದು, ಗವಿಮಠದಲ್ಲಿ ಸಂಸ್ಕøತ ಪಾಠಶಾಲೆಯನ್ನು ಪ್ರಾರಂಭಿಸಿದ್ದರು. ಶ್ರೀಗಳು 1909ರಲ್ಲಿ ಬಳ್ಳಾರಿಯಲ್ಲಿ ಜರುಗಿದ 5ನೇ ಅಖಿಲ ಭಾರತ ವೀರಶೈವಮಹಾಸ¨s Éಯಲ್ಲಿ ಪಾಲ್ಗೊಂಡಿದ್ದಾಗ ¨s Éೀಟಿ ಮಾಡಿದ್ದ ತರುಣ ಸನ್ಯಾಸಿಗುರುನಂಜಯ್ಯನವರನ್ನೇ ಶ್ರೀಮಠಕ್ಕೆ ಪಟ್ಟಾಧಿಕಾರ ಮಾಡಬೇಕೆಂದು ಮೃತ್ಯುಪತ್ರ ಬರೆಸಿಲಿಂಗೈಕ್ಯರಾದರು.ಶ್ರೀಗಳ ಆಶೀರ್ವಾದದಿಂದ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರೀಗುರುನಂಜಯ್ಯನವರು ಶ್ರೀ. ಜ. ಮರಿಶಾಂತವೀರ ಸ್ವಾಮಿಗಳೆಂಬ ಅಭಿದಾನ ಪಡೆದುಶ್ರೀಮಠಕ್ಕೆ ಪಟ್ಟಾಧಿಕಾರಗೊಂಡರು. ಶ್ರೀಗಳು ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಶ್ರೀಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಹಾಗೂಶ್ರೀಗಳು ಸ್ವತಃ ಆಯುರ್ವೇದ ತಜ್ಞರು, ತರ್ಕ ತಜ್ಞರು, ಶಿಕ್ಷಣ ಪ್ರೇಮಿಗಳೂ ಆಗಿದ್ದರು.ಶ್ರೀಗಳು ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಸ್ಥಾಪಿಸಿ ಅದಕ್ಕೆ ಮಠದ ನಾಲ್ಕುನೂರು ಎಕರೆಭೂಮಿಯನ್ನು ದಾನ ನೀಡಿ ಶಿಕ್ಷಣ ದಾಸೋಹ ನಿತ್ಯ ನಿರಂತರಗೊಳ್ಳಲು ಅವಕಾಶ ಕಲ್ಪಿಸಿದರೀತಿ ಪ್ರಾತಃಸ್ಮರಣೀಯ.ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಸೂಡಿ ಜುಕ್ತಿ ಹಿರೇಮಠದ ಶ್ರೀಉಮಾಪತಿ ಶಿವಾಚಾರ್ಯರನ್ನು ಆಯ್ಕೆ ಮಾಡಿ 1966ರಲ್ಲಿ ಶ್ರೀ ಜ. ಶಿವಶಾಂತವೀರಸ್ವಾಮಿಗಳೆಂದು ಅಭಿದಾನ ನೀಡಿ ಅಧಿಕಾರಕ್ಕೆ ತಂದು 1967ರಲ್ಲಿ ಲಿಂಗೈಕ್ಯರಾದರು. ಶ್ರೀ ಜ.ಶಿವಶಾಂತವೀರ ಸ್ವಾಮಿಗಳು ಲಿಂಗಪೂಜಾನಿಷ್ಠರಾಗಿ, ವೈರಾಗ್ಯಮೂರ್ತಿಗಳಾಗಿ ಹಿರಿಯಶ್ರೀಗಳ ಹಾದಿಯಲ್ಲಿಯೇ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಜ. ಗವಿಸಿದ್ದೇಶ್ವರ ಮಹಾಸ್ವಾಮಿಗಳು 2002ರ ಡಿಸೆಂಬರ್13ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಂತ ಪರಂಪರೆಯ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸುತ್ತಾ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ.ಶ್ರೀಮಠದಲ್ಲಿ ಪುಷ್ಯಮಾಸದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ರಥೋತ್ಸವಜರುಗುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು
Date of Birth :
1-6-1977
Place :
ಹಗರಗುಂಡಿ, ಗುಲಬರ್ಗಾ ತಾ||
Pattadikara :
13-12-2002
Photo :

Programs

ಪ್ರತಿ ಅಮವಾಸ್ಯೆಗೆ ಹರಕÉ ತೇರು ಮತ್ತು "ಬೆಳಕಿನೆಡೆಗೆ" ಕಾರ್ಯಕ್ರಮ.
ಪುಷ್ಯ ಮಾಸದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಮಹಾರಥೋತ್ಸವ.
ಫಾಲ್ಗುಣ ಬಹುಳ ನವಮಿಯಂದು ಲಿಂ|| ಶ್ರೀ ಮ.ನಿ.ಪ್ರ. ಜಗದ್ಗುರು
ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯಾರಾಧನೆ.
ಜೇಷ್ಠ ಬಹುಳ ದಶಮಿಗೆ ಲಿಂ|| ಶ್ರೀ ಮ.ನಿ.ಪ್ರ. ಜಗದ್ಗುರು ಮರಿಶಾಂತವೀರ
ಮಹಾಸ್ವಾಮಿಗಳ ಪುಣ್ಯಾರಾಧನೆ.
ಮೇ ಅಥವಾ ಜೂನ್ ತಿಂಗಳಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

Institutions

ಸಂಗೀತ ವಿದ್ಯಾಪೀಠ
ವೈದಿಕ ಮತ್ತು ಜ್ಯೋತಿಷ್ಯ ಪಾಠಶಾಲೆ
ಶಿಶು ವಿಹಾರ ಶಾಲೆಗಳು
ಪ್ರಾಥಮಿಕ ಶಾಲೆಗಳು.
ಕನ್ನಡ / ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಗಳು.
ಪದವಿಪೂರ್ವ ಕಾಲೇಜ್.
ಪದವಿ ಕಾಲೇಜುಗಳು (ವಿದ್ಯಾರ್ಥಿ/ವಿದ್ಯಾರ್ಥಿನಿಯರ).
ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ.
ಶಿಕ್ಷಣ ಮಹಾವಿದ್ಯಾಲಯ.
ಅಂಗನವಾಡಿ ಶಿಕ್ಷಕ-ಶಿಕ್ಷಕಿಯರ ತರಬೇತಿ ಕೇಂದ್ರ.
ಬಿ.ಬಿ.ಎಂ. ಮತ್ತು ಬಿ.ಬಿ.ಸಿ. ಕಾಲೇಜ್.
ಇನ್‍ಸ್ಟಿಟ್ಯೂಟ್ ಆಫ್ ವೊಕೇಷನಲ್ ಎಕ್ಷಲೆನ್ಸ್.
ಅಂಧ, ಮೂಕ ಮತ್ತು ಕಿವುಡ ಮಕ್ಕಳಿಗಾಗಿ
ವಸತಿ ಶಾಲೆ.
ಬುದ್ಧಿಮಾಂದ್ಯ ಮಕ್ಕಳಿಗಾಗಿ ಪುನಃಶ್ಚೇತನ ಸಂಸ್ಥೆ.
ವೃದ್ಧಾಶ್ರಮ ಹಾಗೂ ಅನಾಥಾಶ್ರಮ.
ಗ್ರಾಮೀಣಾಭಿವೃದ್ಧಿ ಸಂಸ್ಥೆ.
ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು.
ತಾಂತ್ರಿಕ ಮಹಾವಿದ್ಯಾಲಯಗಳು.
ಆಡಳಿತಾತ್ಮಕ ಸಂಸ್ಥೆ.
ವಿದ್ಯಾರ್ಥಿಗಳ; ಉಚಿತ ವಸತಿ ಮತ್ತು
ಪ್ರಸಾದ ನಿಲಯ.
ಗೋ ಸಂರಕ್ಷಣಾ ಘಟಕ.
ಭಸ್ಮ ಶುದ್ಧೀಕರಣ ಘಟಕ.

Photos

Full Address Kannada

ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠ
ಕೊಪ್ಪಳ - 583 231

Map

Near by Places

ಗಂಗಾವತಿ - 45 ಕಿ.ಮೀ.
ಹೊಸಪೇಟೆ - 32 ಕಿ.ಮೀ.
ಕುಷ್ಟಗಿ - 50 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!