Shree Dasoha Matha

Shree Dasoha Matha Claimed

ಶ್ರೀ ದಾಸೋಹ ಮಠ

Average Reviews

Description

ಶ್ರೀ ದಾಸೋಹ ಮಠ

ಕರ್ತೃ – ಪೂಜ್ಯ ಶ್ರೀ ರುದ್ರಸ್ವಾಮಿಗಳು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಅರ್ಹಾಳು ಗ್ರಾಮವು ತಾಲ್ಲೂಕುಕೇಂದ್ರದಿಂದ 7 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 150 ವರ್ಷಗಳ ಹಿಂದೆಪೂಜ್ಯ ಶ್ರೀ ರುದ್ರಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ದಾಸೋಹ ಮಠವು ತನ್ನಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುಸೃಷ್ಟಿಮಾಡಿದೆ.ಶ್ರೀ ರುದ್ರಸ್ವಾಮಿಗಳು ಶ್ರೀ ಮಠವನ್ನು ಸ್ಥಾಪಿಸಿದ ನಿರ್ದಿಷ್ಟ ಕಾಲಮಾನದ ಬಗ್ಗೆಯಾವುದೇ ನಿಖರ ದಾಖಲೆಗಳಿಲ್ಲದಿದ್ದರೂ ಸುಮಾರು 150 ವರ್ಷಗಳ ಹಿಂದೆ ಸ್ಥಾಪಿತಗೊಂಡಿದೆಯೆಂದು ಹೇಳಲಾಗುತ್ತದೆ. ಶ್ರೀಗಳು ಶ್ರೀ ದಾಸೋಹ ಮಠವನ್ನು ಸ್ಥಾಪಿಸಿ ತಮ್ಮಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ಭಕ್ತರನ್ನು ಸೆಳೆದಿದ್ದಾರೆ. ಶ್ರೀಗಳುತನ್ನ ದಾಸೋಹ ಕ್ರಮದಿಂದಾಗಿ ಬಡ ಅಸಹಾಯಕ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನುಮಾಡುತ್ತಿದ್ದರೆಂದು ತಿಳಿದುಬರುತ್ತಿದ್ದು ಈ ಕಾರಣಗಳಿಂದಾಗಿ ಶ್ರೀಮಠಕ್ಕೆ ದಾಸೋಹಮಠವೆಂದು ಹೆಸರು ಬಂದಿದೆ.ಹೀಗೆ ಶ್ರೀಗಳು ತಮ್ಮ ಎಲ್ಲಾ ಕಾರ್ಯಕ್ರಮಗಳಿಂದಾಗಿ ಭಕ್ತರ ಪ್ರೀತ್ಯಾದರಗಳಿಗೆಪಾತ್ರರಾಗಿದ್ದು ಭಕ್ತರನ್ನು ಜಾಗೃತಗೊಳಿಸಿದ್ದಾರೆ. ಭಕ್ತರ ಮನೆಗಳಲ್ಲಿ ಹಾಗೂ ಗ್ರಾಮದಲ್ಲಿನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರನ್ನು ಆಶೀರ್ವದಿಸುತ್ತಿದ್ದರು.ಶ್ರೀಗಳು ಲಿಂಗೈಕ್ಯರಾದ ನಂತರ ಕೆಲಕಾಲ ಮಠವು ಖಾಲಿ ಉಳಿದಿದ್ದು ಶ್ರೀಮಠದ ವಂಶಸ್ಥರೇಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ.ಈಗಿನ ಶ್ರೀಗಳಾದ ಪೂಜ್ಯ ಶ್ರೀ ವೀರಯ್ಯ ಸ್ವಾಮಿಗಳು ಶ್ರೀಮಠದ ಅಧಿಕಾರವನ್ನುವಹಿಸಿಕೊಂಡ ನಂತರ ಶ್ರೀಮಠವು ಮತ್ತಷ್ಟು ಅಭಿವೃದ್ಧಿಗೊಂಡಿದ್ದು ಶ್ರೀಗಳು ಶ್ರೀಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ ಹಾಗೂ ಸಾಮಾಜಿಕವಾಗಿಯೂ ಹೆಚ್ಚಿನಕಾರ್ಯಕ್ರಮಗಳನ್ನು ಆಯೋಜಿಸಿ ಶ್ರೀಮಠವನ್ನು ಹೆಚ್ಚು ಪ್ರಚಲಿತಗೊಳಿಸುತ್ತಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫಾಲ್ಗುಣ ಮಾಸದಲ್ಲಿ ಶ್ರೀಹಿರಿಯ ಗುರುಗಳ ಪುಣ್ಯಾರಾದನೆ ಮತ್ತು ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವವನ್ನುಆಯೋಜಿಸಲಾಗುತ್ತದೆ. ಹಾಗೆಯೇ ಶ್ರೀಮಠದ ಜಾತ್ರೆಯು ಭರತ ಹುಣ್ಣಿಮೆಗೆನಡೆಯುತ್ತಿದ್ದು ಆ ಸಮಯದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತಿದೆ.

Swamiji

Swamiji Name :
ಪೂಜ್ಯ ಶ್ರೀ ವೀರಯ್ಯ ಸ್ವಾಮಿಗಳು
Date of Birth :
1951
Place :
ಆರ್ಹಾಳು, ಗಂಗಾವತಿ ತಾ||
Photo :

Programs

ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಭರತ ಹುಣ್ಣಿಮೆಗೆ ಶ್ರೀಮಠದ ಜಾತ್ರೆ ಹಾಗೂ ಸಾಮೂಹಿಕ ವಿವಾಹಗಳು.
ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.

Photos

Full Address Kannada

ಶ್ರೀ ದಾಸೋಹ ಮಠ
ಆರ್ಹಾಳು - 583 235
ಗಂಗಾವತಿ ತಾ||, ಕೊಪ್ಪಳ ಜಿ||

Map

Near by Places

ಗಂಗಾವತಿ - 7 ಕಿ.ಮೀ.
ಕೊಪ್ಪಳ - 41 ಕಿ.ಮೀ.
ವಡ್ಡರಹಟ್ಟಿ - 5 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!