ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸುಳೇಕಲ್ಲು ಗ್ರಾಮವು ತಾಲ್ಲೂಕುಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ದೊಡ್ಡ ವಿರೂಪಾಕ್ಷಯ್ಯನವರಿಂದ ಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದು ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ.ಈ ಮಠದ ಮೂಲಮಠ ಕೆಂಬಾವಿ ಹಿರೇಮಠ ಎಂದು ಹೇಳಲಾಗುತ್ತಿದ್ದು ಶ್ರೀವಿರೂಪಾಕ್ಷ ಸ್ವಾಮಿಗಳೆಂಬುವರು ಕೆಂಬಾವಿಯಿಂದ ಹೊರಟು ಅರಳಹಳ್ಳಿಗೆ ಬಂದು ನೆಲೆಸಿಮಠ ಸ್ಥಾಪನೆ ಮಾಡಿದ್ದಾರೆ. ಸಂಸಾರಿಗಳಾಗಿದ್ದ ಇವರಿಗೆ ಇಬ್ಬರು ಪುತ್ರರಿದ್ದು ಅದರಲ್ಲಿ ಶ್ರೀದೊಡ್ಡ ವಿರೂಪಾಕ್ಷಯ್ಯನವರು ಸುಳೇಕಲ್ಲಿಗೆ ಆಗಮಿಸಿ ಶ್ರೀಮಠವನ್ನು ಸ್ಥಾಪನೆ ಮಾಡಿದ್ದಾರೆಎಂದು ತಿಳಿದುಬರುತ್ತದೆ.ಶ್ರೀ ದೊಡ್ಡವಿರೂಪಾಕ್ಷಯ್ಯನವರ ಕುಟುಂಬವು ದೇವೀ ಆರಾಧಕರಾಗಿದ್ದು ಆಕಾರಣದಿಂದಾಗಿ ಶ್ರೀಮಠದಲ್ಲಿ ದೇವಿ ಆರಾಧನೆ ಕಾರ್ಯ ಪ್ರಾರಂಭವಾಗಿದೆ. ಶ್ರೀಗಳುದಿನನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಬಂದ ಭಕ್ತರ ಸಮಸ್ಯೆಗಳಿಗೆ ಪರಿಹಾರಸೂಚಿಸುವ ಕಾರ್ಯದಿಂದಾಗಿ ಬಹುಬೇಗನೇ ಪ್ರಚಲಿತಕ್ಕೆ ಬಂದಿದೆ. ಕರ್ತೃಗುರುಗಳನಂತರ ಬಂದ ಗುರುಗಳು ಶ್ರೀಮಠದ ಪದ್ಧತಿಯನ್ನು ಪಾಲಿಸಿಕೊಂಡು, ಧಾರ್ಮಿಕಆಚರಣೆಗಳೊಂದಿಗೆ ಶ್ರೀಮಠವನ್ನು ಮುನ್ನಡೆಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಭುವನೇಶ್ವರಯ್ಯ ತಾತನವರು ಚಿಕ್ಕವಯಸ್ಸಿನಲ್ಲಿಯೇತಂದೆಯನ್ನು ಕಳೆದುಕೊಂಡಿದ್ದರಿಂದ ಶಿಕ್ಷಕರಾಗಿದ್ದ ಸೋದರಮಾವನ ಆರೈಕೆಯಲ್ಲಿಬೆಳೆದವರು. ಸೋದರಮಾವನವರು ಮಹಾನ್ ಸಾಧಕರಾಗಿದ್ದು ಅವರ ಪ್ರಭಾವವುಬಾಲಕನಾಗಿದ್ದ ಭುವನೇಶ್ವರಯ್ಯನವರ ಮೇಲಾಯಿತು. ಇಂತಹ ಹಿನ್ನೆಲೆಯುಳ್ಳ ಶ್ರೀಗಳುವೇದಮೂರ್ತಿಗಳಾಗಿ ವಾಕ್ಸಿದ್ಧಿ ಪುರುಷರಾಗಿದ್ದು ಅಧಿಕಾರ ವಹಿಸಿಕೊಂಡ ದಿನದಿಂದಶ್ರೀಮಠವನ್ನು ಹೆಚ್ಚಿನ ಅಭಿವೃದ್ಧಿಯೆಡೆಗೆ ತಂದಿದ್ದಾರೆ.ಶ್ರೀ ಭುವನೇಶ್ವರಯ್ಯನವರು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆಶ್ರೀಮಠಕ್ಕೆ ಬರುವ ಭಕ್ತರಿಗೆ ನಿತ್ಯದಾಸೋಹದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಈಗಿರುವಮಠದ ಕಟ್ಟಡವು ಚಿಕ್ಕದಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಸ್ಥಳದ ಅಭಾವಕಂಡುಬಂದಿದ್ದರಿಂದ ಗ್ರಾಮದ ಹೊರಭಾಗದಲ್ಲಿ ಭವ್ಯವಾದ ಕಟ್ಟಡ ನಿರ್ಮಿಸಿದ್ದು ಅಲ್ಲಿಆದಿಶಕ್ತಿ ಜಗನ್ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಭುವನೇಶ್ವರಯ್ಯ ತಾತನವರು
Date of Birth :
22-1-1958
Place :
ಸುಳೇಕಲ್ಲು, ಗಂಗಾವತಿ ತಾ||
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ ಹಾಗೂ ಶ್ರೀಗಳ ದರ್ಶನ.
ದೀಪಾವಳಿ ಪಾಡ್ಯ ದಿನ ಅಖಂಡ ಶ್ರೀದೇವಿ ಪುರಾಣ ಮತ್ತು
ಸಾಮೂಹಿಕ ವಿವಾಹಗಳು.
ಫಾಲ್ಗುಣ ಮಾಸದಿಂದ ಚೈತ್ರ ಶುದ್ಧ ಪಂಚಮಿಯವರೆಗೆ ನಿತ್ಯ ಕಲ್ಬುರ್ಗಿ
ಶ್ರೀ ಶರಣ ಬಸವೇಶ್ವರರ ಪುರಾಣ ಹಾಗೂ ಜಾತ್ರಾ ಮಹೋತ್ಸವ.
ಕಾರ್ತೀಕ ಶುದ್ಧ ಪೌರ್ಣಮಿ (ಗೌರಿ ಹುಣ್ಣಿಮೆಯಂದು) ಶ್ರೀ ಹಿರಿಯ
ಗುರುಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು.
Photos
Full Address Kannada
ಶ್ರೀ ಬೃಹನ್ಮಠ ಸುಳೇಕಲ್ಲು - 584119
ಗಂಗಾವತಿ ತಾ||, ಕೊಪ್ಪಳ ಜಿ||