Shree Mallikarjuna Matha

Shree Mallikarjuna Matha Claimed

ಶ್ರೀ ಮಲ್ಲಿಕಾರ್ಜುನ ಮಠ

Average Reviews

Description

ಶ್ರೀ ಮಲ್ಲಿಕಾರ್ಜುನ ಮಠ

ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು

ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಶ್ರೀ ಚನ್ನಬಸವ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಮಲ್ಲಿಕಾರ್ಜುನ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಹಾಗೂಶ್ರೀ ಚನ್ನಬಸವ ಸ್ವಾಮಿಗಳ ಕರ್ತೃತ್ವ ಶಕ್ತಿಯಿಂದಾಗಿ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಬೆಳೆದು ಬಂದಿದ್ದು ಪ್ರಸ್ತುತ ಶ್ರೀ ಮಲ್ಲಿಕಾರ್ಜುನ ಮಠದ ವಿಶ್ವಸ್ತ ಸಮಿತಿಯಆಡಳಿತದಲ್ಲಿ ಮುಂದುವರೆದಿದೆ.ಶ್ರೀ ಚನ್ನಬಸವ ಸ್ವಾಮಿಗಳು ಮೊದಲು ಗಂಗಾವತಿ ಕಲ್ಮಠದ ಪೀಠಾಧಿಪತಿಗಳಾಗಿತದನಂತರ ಕಲ್ಮಠಕ್ಕೆ ಶ್ರೀ ಮರಿಚನ್ನಬಸವ ಸ್ವಾಮಿಗಳನ್ನು ಅಧಿಕಾರಕ್ಕೆ ತಂದು ಲೋಕಸಂಚಾರಹೊರಟು ಕೊನೆಯಲ್ಲಿ ಗಂಗಾವತಿಯ ಹೊರಗಿನ ಗುಡಿಯಲ್ಲಿ ನೆಲೆನಿಂತರು. ಹೀಗೆನೆಲೆನಿಂತ ಶ್ರೀಗಳಿಗೆ ಸದ್ಭಕ್ತರು ಮಠವನ್ನು ನಿರ್ಮಿಸಿದರು. ಹಾಗೆಯೇ ಶ್ರೀಗಳ ಇಚ್ಛೆಯಂತೆಇಲ್ಲಿಯೇ ಶ್ರೀ ಮಲ್ಲಿಕಾರ್ಜುನ ಲಿಂಗದ ಪ್ರತಿಷ್ಠಾಪನೆಯಾಗಿ ಶ್ರೀ ಮಲ್ಲಿಕಾರ್ಜುನ ಮಠಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಶ್ರೀ ಚನ್ನಬಸವ ಸ್ವಾಮಿಗಳು ಸದಾಸಂಚಾರಿಗಳಾಗಿದ್ದುಹೋದಕಡೆಗೆಲ್ಲಾ ವೀರಶೈವ ಧರ್ಮಾಚರಣೆಗಳ ಬಗ್ಗೆ ಉಪದೇಶ ಮಾಡುತ್ತಾ ಭಕ್ತರಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಅಪಾರ ಕೀರ್ತಿಯನ್ನು ಗಳಿಸಿದರು.ಶ್ರೀಗಳು ಭಕ್ತರ ದೃಷ್ಠಿಯಲ್ಲಿ ಪವಾಡಪುರುಷರೆಂದು ಇಂದಿಗೂ ಖ್ಯಾತಿಯಾಗಿರಬಹುದು ಆದರೆ ಮೂಲತಃ ಶ್ರೀಗಳು ಮನುಕುಲಪ್ರೇಮಿ. ಸಮಸ್ತರ ಉದ್ಧಾರಕ್ಕಾಗಿಅಹಿರ್ನಿಶಿ ಶ್ರಮಿಸಿದರು. ಮೂಢನಂಬಿಕೆಗಳ ಕಟ್ಟಾ ವಿರೋಧಿಗಳಾಗಿದ್ದ ಅವರು ಅವುಅಜ್ಞಾನದ ಬೀಜಗಳೆನ್ನುತ್ತಿದ್ದರು. ಜನರು ತಮ್ಮ ಬಗ್ಗೆ ಪವಾಡಪುರುಷರೆಂದು ತಿಳಿದಿದ್ದಕ್ಕಾಗಿಬಹು ನೊಂದಿದ್ದರು. ಸರ್ವಧರ್ಮ ಸಮನ್ವಯ ಅವರ ಮೆಚ್ಚಿನ ವಿಷಯವಾಗಿತ್ತು. ಮುಸ್ಲಿಂಧರ್ಮದ ಅನೇಕರು ಅವರ ಶಿಷ್ಯರಾಗಿದ್ದರು.ಎಲ್ಲ ಜನರ ಹಿತಕ್ಕಾಗಿ ನಿರ್ಮಾಣವಾದ ಶ್ರೀ ಮಲ್ಲಿಕಾರ್ಜುನ ಮಠಕ್ಕಾಗಿ ಶ್ರೀತಾತನವರು ತಮ್ಮ ತರುವಾಯ ತಮ್ಮ ಕುಲ ಸಂಬಂಧಿಗಳು ಪೀಠಾಧಿಪತಿಗಳಾಗಲೆಂದುಇಚ್ಛಿಸಲಿಲ್ಲ. ಸಕಲರಿಗೂ ಲೇಸು ಬಯಸಿದ ಶ್ರೀಗಳು ಮಠವನ್ನು ವಿಶ್ವಸ್ತ ಸಮಿತಿ(ಪಂಚಕಮಿಟಿ)ಗೊಪ್ಪಿಸಿ ಅದರ ಮೂಲಕವೇ ಶ್ರೀಮಠದ ಕಾರ್ಯಕ ್ರಮಗಳುಜರುಗಬೇಕೆಂದು ವಿಲ್ ಬರೆಸಿ 1945ರ ಜನವರಿಯಲ್ಲಿ ಲಿಂಗೈಕ್ಯರಾದರು. ಅವರತರುವಾಯ ಕಮಿಟಿಯು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ಸ್ವಾಮಿಗಳು
Photo :

Programs

ಪುಷ್ಯ ಮಾಸದಲ್ಲಿ ತಾತನವರ ಪುಣ್ಯಾರಾದನೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ.
ಕಾರ್ತೀಕ ಮಾಸದಲ್ಲಿ ನಿತ್ಯ ದೀಪೋತ್ಸವ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು.

Photos

Full Address Kannada

ಶ್ರೀ ಮಲ್ಲಿಕಾರ್ಜುನ ಮಠ
ಗಂಗಾವತಿ - 583 227 ಕೊಪ್ಪಳ ಜಿ||

Map

Near by Places

ಕೊಪ್ಪಳ - 35 ಕಿ.ಮೀ.
ಹೊಸಪೇಟೆ - 40 ಕಿ.ಮೀ.
ಕುಷ್ಟಗಿ - 55 ಕಿ.ಮೀ.

Statistic

9 Views
0 Rating
0 Favorite
0 Share
error: Content is protected !!