Shree Kottureshwara Kalmatha, Gangavati

Shree Kottureshwara Kalmatha, Gangavati Claimed

ಶ್ರೀ ಕೊಟ್ಟೂರೇಶ್ವರ ಕಲ್ಮಠ, ಗಂಗಾವತಿ

Average Reviews

Description

ಶ್ರೀ ಕೊಟ್ಟೂರೇಶ್ವರ ಕಲ್ಮಠ, ಗಂಗಾವತಿ

ಕರ್ತೃ – ಶ್ರೀ ಮ.ನಿ.ಪ್ರ. ಕೊಟ್ಟೂರು ಸ್ವಾಮಿಗಳು

ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀಕೊಟ್ಟೂರೇಶ್ವರ ಕಲ್ಮಠವು ಈ ಭಾಗದಲ್ಲಿ ತನ್ನ ಪರಂಪರೆಯ ಭವ್ಯತೆಯಿಂದ ಪ್ರಮುಖಧಾರ್ಮಿಕ ಕೇಂದ್ರವಾಗಿ ಬೆಳೆದು ಬಂದಿದೆ. ಶ್ರೀ ಕೊಟ್ಟೂರೇಶ್ವರರಿಂದ ಸ್ಥಾಪಿಸಲ್ಪಟ್ಟಿದ್ದರಿಂದಶ್ರೀಮಠಕ್ಕೆ ಶ್ರೀ ಕೊಟ್ಟೂರೇಶ್ವರ ಕಲ್ಮಠವೆಂದು ಹೆಸರು ಬಂದಿದೆ.ಸುಮಾರು 500 ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಚಿತ್ತರಗಿ(ಇಲಕಲ್ಲು)ಯ ಪೀಠವು ಮೂರುಜನ ಮಹಾಸ್ವಾಮಿಗಳನ್ನು ಹೊಂದಿದ್ದು ಈ ಮೂವರಲ್ಲಿಶ್ರೀ ಮಹಾಂತ ಸ್ವಾಮಿಗಳು ಚಿತ್ತರಗಿಯಲ್ಲಿ ಸ್ಥಿರವಾಗಿ ಉಳಿದರು. ಶ್ರೀ ಅನ್ನದಾನ ಸ್ವಾಮಿಗಳುಹಾಗೂ ಶ್ರೀ ಕೊಟ್ಟೂರು ಸ್ವಾಮಿಗಳು ಚರಮೂರ್ತಿಗಳಾಗಿ, ಧರ್ಮಪ್ರಚಾರಾರ್ಥವಾಗಿಸಂಚರಿಸುತ್ತಾ ಮುಂದುವರೆದರು. ಅದರಲ್ಲಿ ಶ್ರೀ ಅನ್ನದಾನೀಶ್ವರರು ಹಾಲಕೆರೆಯಲ್ಲಿನೆಲೆನಿಂತರೆ, ಶ್ರೀ ಕೊಟ್ಟೂರು ಸ್ವಾಮಿಗಳು ಗಂಗಾವತಿಗೆ ಬಂದು ನೆಲೆನಿಂತರು. ಇಂದು ಈಮೂರೂ ಕ್ಷೇತ್ರಗಳು ವೀರಶೈವ ಧರ್ಮದ ಪ್ರತಿಷ್ಠಿತ ಧರ್ಮ ಕೇಂದ್ರಗಳಾಗಿರುವುದುಹೆಮ್ಮೆಯ ಸಂಗತಿ.ಶ್ರೀ ಕೊಟ್ಟೂರು ಸ್ವಾಮಿಗಳು ಗಂಗಾವತಿಗೆ ಆಗಮಿಸಿದಾಗ ಅಲ್ಲಿನ ಗುಡ್ಡದಗುಹೆಯೊಂದರಲ್ಲಿ ಶ್ರೀ ದಿಗಂಬರ ಸ್ವಾಮಿಗಳೆಂಬ ಶಿವಾನುಭವಿಗಳು ಭಕ್ತರಿಗೆ ಮಾರ್ಗದರ್ಶನ ಮಾಡುತ್ತಾ ನೆಲೆನಿಂತಿದ್ದರು. ಶ್ರೀ ದಿಗಂಬರ ಸ್ವಾಮಿಗಳು ಶ್ರೀ ಕೊಟ್ಟೂರುಸ್ವಾಮಿಗಳಿಗೆ ಆಶೀರ್ವಾದ ಮಾಡಿ ನೀವು ಇಲ್ಲೇ ನೆಲೆನಿಂತು ಭಕ್ತರಿಗೆ ಸೂಕ್ತ ಮಾರ್ಗದರ್ಶನತೋರಿರೆಂದು ನುಡಿದು ಲಿಂಗೈಕ್ಯರಾದರು.ಹೀಗೆ ಗಂಗಾವತಿಯಲ್ಲಿ ನೆಲೆನಿಂತ ಶ್ರೀ ಕೊಟ್ಟೂರು ಸ್ವಾಮಿಗಳು ಭಕ್ತರಿಗೆ ಸೂಕ್ತಮಾರ್ಗದರ್ಶನ ಮಾಡುತ್ತಾ ಧಾರ್ಮಿಕ ಆಚರಣೆಗಳಲ್ಲಿ ನಿರತರಾದರು. ಗಂಗಾವತಿಯಸಮಸ್ತ ಸದ್ಭಕ್ತರು ಈ ಶಿವಯೋಗಿಗೆ ಭವ್ಯವಾದ “ಕಲ್ಲುಮಠ”ವನ್ನು ಉಸುಕಿನ ಹಳ್ಳದದಂಡೆಯ ಮೇಲೆ ನಿರ್ಮಿಸಿದರು. ಅಂದಿನ ಆ ಕಲ್ಲುಮಠವೇ ಇಂದು ಹೊಸರೂಪ ತಳೆದುಜೀರ್ಣೋದ್ಧಾರವಾಗುವುದರ ಮೂಲಕ ತನ್ನ ಕಲ್ಮಠ ಎಂಬ ಹೆಸರಿನ ಸಾರ್ಥಕ್ಯ ಹೊಂದಿದೆ.ಶ್ರೀ ಕೊಟ್ಟೂರು ಸ್ವಾಮಿಗಳು ಕಲ್ಮಠದ ಸಂಸ್ಥಾಪಕರಾಗಿ, ವಿರಕ್ತ ಮಠಾಧೀಶರಾಗಿ, ಲಿಂಗಪೂಜಾನಿಷ್ಠರಾಗಿ, ಸಮಸ್ತ ಸದ್ಭಕ್ತರ ಮನೆಗಳ ಗುರುಮೂರ್ತಿಗಳಾಗಿ, ಸದಾ ಸಂಚಾರದಲ್ಲಿದ್ದು ಭಕ್ತರನ್ನು ಉದ್ಧರಿಸಿದರು.ಇಂತಹ ಮಹಾಮಹಿಮ ಶ್ರೀ ಕೊಟ್ಟೂರು ಸ್ವಾಮಿಗಳು ಶ್ರೀ ಚನ್ನಬಸವಸ್ವಾಮಿಗಳನ್ನು ಅಧಿಕಾರಕ್ಕೆ ತಂದು ತಾವು ಸಂಚಾರ ಹೊರಟು ಲಿಂಗಸೂಗೂರು ತಾಲ್ಲೂಕಿನ ಮೆದಕಿನ ಹಾಳದ ಕಲ್ಮಠದಲ್ಲಿ ಲಿಂಗೈಕ್ಯರಾರು.ಶ್ರೀ ಚನ್ನಬಸವ ಮಹಾಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡುಶ್ರೀಮಠದಲ್ಲಿ ನಿತ್ಯ ದಾಸೋಹ ನಡೆಸುತ್ತಾ ಲಿಂಗಪೂಜಾನಿಷ್ಠರಾಗಿ ಕಲ್ಮಠವನ್ನು ನಂಬಿದಸಮಸ್ತ ಸದ್ಭಕ್ತರನ್ನು ಪರಿಪಾಲಿಸುತ್ತಾ ಶ್ರೀಮಠವನ್ನು ಮುನ್ನಡೆಸಿದರು. ಶ್ರೀಗಳು ಚಿಕ್ಕವಯಸ್ಸಿನಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀ ಹಿರೇಕೊಟ್ಟೂರು ದೇವರನ್ನು ನಿಯುಕ್ತಿಗೊಳಿಸಿಲಿಂಗೈಕ್ಯರಾದರು. ಶ್ರೀಗಳ ಗದ್ದುಗೆಯು ಮಠದ ಆವರಣದಲ್ಲಿದ್ದು ಕರ್ತೃಗದ್ದುಗೆಯಾಗಿಪೂಜಿಸಲ್ಪಡುತ್ತಿದೆ.ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 8 ಜನ ಸ್ವಾಮಿಗಳು ಅಧಿಕಾರನಡೆಸಿದ್ದು ಈಗಿನವರು 9ನೇಯವರೆಂದು ಹೇಳಲಾಗುತ್ತದೆ. ಶ್ರೀ ಚನ್ನಬಸವ ಸ್ವಾಮಿಗಳನಂತರ ಬಂದ ಎಲ್ಲಾ ಶ್ರೀಗಳು ತಮ್ಮ ತಮ್ಮ ಕಾಲಮಾನದಲ್ಲಿ ಶ್ರೀಮಠದ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಶ್ರೀಮಠವನ್ನುಮುನ್ನಡೆಸುತ್ತಾ ಭಕ್ತರನ್ನು ಉದ್ಧರಿಸಿದ್ದಾರೆ.ಶ್ರೀಮಠದ 7ನೇ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮಿಗಳು ಇಡೀ ನಾಡಿಗೆಬೆಳಕಾದವರು. ಶ್ರೀಗಳನ್ನು ಈಗಲೂ ಗಂಗಾವತಿಯ ಮಹಾಚೇತನವೆಂದೇ ಭಕ್ತರುಪೂಜಿಸುತ್ತಾರೆ. ಶ್ರೀಗಳು ಸದಾ ಸಂಚಾರಿಗಳಾಗಿ ಸಂಚಾರದಲ್ಲಿರುತ್ತಿದ್ದರಿಂದ ಶ್ರೀಮಠದಧಾರ್ಮಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿದ್ದವು. ಅದನ್ನು ಮನಗಂಡ ಶ್ರೀಗಳುತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಪತ್ರೈಪ್ಪ ಸ್ವಾಮಿಗಳನ್ನು ಅಧಿಕಾರಕ್ಕೆ ತಂದು ಶ್ರೀಚನ್ನಬಸವ ಸ್ವಾಮಿಗಳೆಂಬ ಅಭಿದಾನ ನೀಡಿ ಸಂಚಾರ ಹೊರಟರು. ತದನಂತರ ಊರಹೊರಗಿನ ಗುಡಿಗೆ ಹೋಗಿ ನೆಲೆಸಿರಲು ಶ್ರೀಗಳ ಭಕ್ತರು ಮಠ ಕಟ್ಟಿಸಿ ಶ್ರೀಗಳ ಆಶಯದಂತೆಶ್ರೀ ಮಲ್ಲಿಕಾರ್ಜುನ ಲಿಂಗ ಪ್ರತಿಷ್ಠಾಪಿಸಿ ಶ್ರೀ ಮಲ್ಲಿಕಾರ್ಜುನ ಮಠ ಎಂದು ನಾಮಕರಣಮಾಡಿದರು.ಹಿಂದಿನ ಶ್ರೀಗಳಾದ ಶ್ರೀ ಮರಿ ಚನ್ನಬಸವ ಸ್ವಾಮಿಗಳು ಹಿರಿಯ ಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ಬಲದಿಂದ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಒಳ್ಳೆಯ ಪಂಡಿತರೂ, ಸಾಹಿತ್ಯಾಸಕ್ತರೂ ಆಗಿದ್ದ ಶ್ರೀಗಳು ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕಸಂಘವನ್ನು ಸ್ಥಾಪಿಸಿ ಹಿಂದುಳಿದ ಗಂಗಾವತಿ ಜನರ ಶಿಕ್ಷಣ ಮಟ್ಟವನ್ನು ಉನ್ನತೀಕರಿಸಲುಕಾರಣೀಭೂತರಾದರು. ಹಾಗೆಯೇ ತಮ್ಮ ಧಾರ್ಮಿಕ ಆಚರಣೆಗಳು ಮತ್ತು ದಾಸೋಹಕ್ರಮಗಳಿಂದಾಗಿ ಹೆಚ್ಚು ಪ್ರಸಿದ್ಧಿಗೊಂಡರು.ಈಗಿನ ಶ್ರೀಗಳಾದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು 1995ರ ಮೇ 12ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಸಂಸ್ಕøತದಲ್ಲಿ ಸ್ನಾತಕೋತ್ತರ ಪದವೀಧರರಾಗಿ ನಂತರ ಬನಾರಸ್ವಿ.ವಿಯಲ್ಲಿ “ಸಂಸ್ಕøತ ವೇದಾಂತ ಶಾಸ್ತ್ರಿ” ಪದವಿಯನ್ನು ಪಡೆದರು. ಹಾಗೆಯೇ ಸಂಸ್ಕøತವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವುದು ಶ್ರೀಗಳಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ.ಶ್ರೀ ಕೊಟ್ಟೂರು ಸ್ವಾಮಿಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರಶ್ರೀಮಠವು ಸರ್ವಾಂಗೀಣವಾಗಿ ಅಭಿವೃದ್ಧಿಗೊಂಡಿದೆ. ಶ್ರೀಗಳು ಶ್ರೀಮಠವನ್ನು ಧಾರ್ಮಿಕ,ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿಪಥದತ್ತ ಮುನ್ನಡೆಸಿದ್ದಾರೆ.ಶ್ರೀಮಠದ ವತಿಯಿಂದ ಶ್ರೀ ಕೊಟ್ಟೂರೇಶ್ವರ ಗ್ರಂಥ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿದ್ದುಇದುವರೆಗೂ 18 ಪುಸ್ತಕಗಳು ಪ್ರಕಟಗೊಂಡಿವೆ.

ಶ್ರೀ ಕಲ್ಮಠದ ಶಾಖಾ ಮಠಗಳು:

  1. ವಿರೂಪಾಪುರ, ಗಂಗಾವತಿ ತಾ||
  2. ಮೆದಕಿನಹಾಳ, ಲಿಂಗಸೂಗೂರು ತಾ||
  3. ಚಿಕ್ಕಕೊಡಗಲಿ, ಹುನಗುಂದ ತಾ||
  4. ಜಾಲಿಹಾಳ, ಬಾದಾಮಿ ತಾ||
  5. ಮಸ್ಕಿ, ಲಿಂಗಸೂಗೂರು ತಾ||

ವಿಶೇಷತೆ:

ಶ್ರೀ ಕೊಟ್ಟೂರೇಶ್ವರ ಗ್ರಂಥ ಪ್ರಕಾಶನ, ಕಲ್ಮಠ, ಗಂಗಾವತಿ.
(ಇಲ್ಲಿಯವರೆಗೆ 18 ಪುಸ್ತಕಗಳ ಪ್ರಕಟಣೆ).

Swamiji

Swamiji Name :
ಶ್ರೀ ಮ.ನಿ.ಪ್ರ. ಡಾ. ಕೊಟ್ಟೂರು ಮಹಾಸ್ವಾಮಿಗಳು
Date of Birth :
1-6-1960
Place :
ಕುಟಕನಕೇರಿ, ಬಾದಾಮಿ ತಾ||
Pattadikara :
12-05-1995
Photo :

Programs

ಪ್ರತಿ ವರ್ಷ ಮೇ 5 ರಂದು ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳ
ಪಟ್ಟಾಧಿಕಾರ ವಾರ್ಷಿಕೋತ್ಸವ.
ಆಷಾಢ ಬಹುಳ ಅಷ್ಟಮಿಗೆ ಕರ್ತೃ ಶಿವಯೋಗಿಗಳ ಪುಣ್ಯಾರಾಧನೆ.
ಮಾರ್ಗಶಿರ ಮಾಸದಲ್ಲಿ ಕಲ್ಮಠದ ಲಿಂ|| ಶ್ರೀ ಚನ್ನಬಸವ ಸ್ವಾಮಿಗಳ ಪುಣ್ಯಾರಾಧನೆ.

Institutions

ಶಿಶು ವಿಹಾರ ಶಾಲೆಗಳು / ಪ್ರಾಥಮಿಕ ಶಾಲೆಗಳು.
ಕನ್ನಡ ಮಾಧ್ಯಮ ಪ್ರೌಢಶಾಲೆಗಳು / ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ.
ಪದವಿಪೂರ್ವ ಕಾಲೇಜ್‍ಗಳು.
ಪದವಿ ಕಾಲೇಜುಗಳು (ವಿದ್ಯಾರ್ಥಿ/ವಿದ್ಯಾರ್ಥಿನಿಯರ)
ಐ.ಟಿ.ಐ. ಕಾಲೇಜು, / ಡಿ.ಎಡ್. ಕಾಲೇಜ್.
ಸಂಗೀತ ಶಾಲೆ.
ಬಡ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ.

Photos

Full Address Kannada

ಶ್ರೀ ಕೊಟ್ಟೂರೇಶ್ವರ ಕಲ್ಮಠ
ಎಂ.ಜಿ. ರೋಡ್, ಗಂಗಾವತಿ - 583 235
ಗಂಗಾವತಿ ತಾ||, ಕೊಪ್ಪಳ ಜಿ||

Map

Near by Places

ಕೊಪ್ಪಳ - 35 ಕಿ.ಮೀ.
ಹೊಸಪೇಟ - 40 ಕಿ.ಮೀ.
ಕುಷ್ಟಗಿ - 55 ಕಿ.ಮೀ.

Statistic

4 Views
0 Rating
0 Favorite
0 Share
error: Content is protected !!