ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು
ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಶ್ರೀಮುಕ್ತಿ ಮಂದಿರ ಧರ್ಮ ಕ್ಷೇತ್ರವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದ ಹೆಸರುಪಡೆದಿದೆ. 1932ರಲ್ಲಿ ಶ್ರೀಮಠದ ಸ್ಥಾಪನೆಯಾಗಿದ್ದು ಶ್ರೀಮಠದ ಸ್ಥಾಪಕರುಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಪ್ರಸನ್ನ ರೇಣುಕವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು. ಹುಬ್ಬಳ್ಳಿ ತಾಲ್ಲೂಕಿನಪಾಲಿಕೊಪ್ಪದ ಹಿರೇಮಠದ ಮಠಾದೀಶರಾಗಿದ್ದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು1932ರಿಂದ 1947ರ ತನಕ ತಾವು ಸ್ಥಾಪಿಸಿದ ಮುಕ್ತಿಮಂದಿರದಲ್ಲಿ ನೆಲೆಸಿದ್ದರು. ಇದಾದನಂತರ ರಂಭಾಪುರಿ ಪೀಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಶ್ರೀ ಪ್ರಸನ್ನ ರೇಣುಕಾವೀರಗಂಗಾಧರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಎಂಬ ಅಭಿದಾನಪಡೆದರು. 1947ರಲ್ಲಿ ಬಾಳೆಹೊನ್ನೂರಿನಲ್ಲಿ ಜಗದ್ಗುರುಗಳಾಗಿ ಅಧಿಕಾರ ವಹಿಸಿಕೊಂಡುಜೊತೆಯಲ್ಲಿ ಶ್ರೀ ಮುಕ್ತಿಮಂದಿರದ ಜವಬ್ದಾರಿಯನ್ನು ವಹಿಸಿಕೊಂಡು ಎರಡೂ ಕಡೆಯಆಡಳಿತವನ್ನು ನೋಡಿಕೊಂಡು ಬರುತ್ತಿದ್ದ ಶ್ರೀಗಳು ಜಗದ್ಗುರುಗಳಾದರೂ ಶ್ರೀಮುಕ್ತಿಮಂದಿರಧರ್ಮ ಕ್ಷೇತ್ರದ ಸಂಪರ್ಕವನ್ನು ಕಳೆದುಕೊಳ್ಳದೇ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದಾರೆ.ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯ ಭಗವತ್ಪಾದರುರಂಭಾಪುರಿ ಪೀಠದ ಜಗದ್ಗುರುಗಳಾಗಿ ಸಮರ್ಥ ಆಡಳಿತವನ್ನು ನಡೆಸಿ ತಮ್ಮ ವಿಶ್ರಾಂತಜೀವನವನ್ನು ನಡೆಸಲು ಪುನಃ ಮುಕ್ತಿ ಮಂದಿರಕ್ಕೆ ಬಂದು ನೆಲೆಸುತ್ತಾರೆ. ಶ್ರೀಗಳು 1972ರಮೇ 15ರಲ್ಲಿ ಗಂಭಾಪುರಿ ಪೀಠಕ್ಕೆ ನೂತನ ಜಗದ್ಗುರುಗಳಾಗಿ ಶ್ರೀ ಪ್ರಸನ್ನ ರೇಣುಕವೀರರುದ್ರಮುನಿ ದೇವರಾಜ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು ಪೀಠದಸಂಪೂರ್ಣ ಜವಾಬ್ದಾರಿಯನ್ನು ನೂತನ ಜಗದ್ಗುರುಗಳಿಗೆ ಒಪ್ಪಿಸಿ ತಾವು ಶ್ರೀ ಮುಕ್ತಿಮಂದಿರದಲ್ಲಿ ಇರತೊಡಗಿದು.ಶ್ರೀಗಳು ಇಲ್ಲಿ ನೆಲೆಗೊಂಡ ಸಂದರ್ಭದಲ್ಲಿ ವಿಶ್ವವೀರಶೈವ ಗುರುವರ್ಗದ ಬೃಹತ್ಸಮಾವೇಶವನ್ನು ನಡೆಸಿದರು. ಗುರುವರ್ಗದ ಜಾಗೃತಿ ಮಾಡಬೇಕೆಂದು ಶ್ರೀ ಮುಕ್ತಿಮಂದಿರಜಾತ್ರೆಯಲ್ಲಿ ಅನೇಕ ಸಭೆ – ಸಮ್ಮೇಳನಗಳನ್ನು ನಡೆಸುತ್ತಿದ್ದರು. ಜಗದ್ಗುರುಗಳುಇಲ್ಲಿಯೇ ಶ್ರಾವಣಮಾಸದಶಿವಪೂಜಾನುಷ್ಠಾನವನ್ನು ವೈಭವದಿಂದ ಮಾಡುತ್ತಿದ್ದರು.ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಯಾವಕಾರ್ಯ ಕೈಗೊಂಡರೂ ಪೂರ್ಣಗೊಳಿಸದೇ ಬಿಡುತ್ತಿರಲಿಲ್ಲ. ಹಾಗೆಯೇ ಶ್ರೀಗಳಿಂದಹೊರಹೊಮ್ಮಿ ಬಂದ ಸಂಕಲ್ಪವೆಂದರೆ “ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆ”. ಈ ಬಗ್ಗೆಪ್ರತಿಅಮವಾಸ್ಯೆಗೆ ಮಹಾಶಿವಪೂಜೆಯನ್ನು ಮಾಡಿ ಸಾಯಂಕಾಲದಲ್ಲಿ ಪ್ರತಿ ತಿಂಗಳಧರ್ಮರಥೋತ್ಸವವನ್ನು ಜರುಗುಸುತ್ತಿದ್ದರು ಹಾಗೂ 88ದೇಶಾದ್ಯಂತ ಸಂಚರಿಸಿ ಪ್ರಚಾರ ಮಾಡಿದಲ್ಲದೇ ಏನೇ ಅಡೆತಡೆಗಳು ಬಂದರೂ ಜಗ್ಗಲಿಲ್ಲ.ಇದಕ್ಕಾಗಿ “ತ್ರಿಕೋಟಿ ಶಿವಲಿಂಗ ಧರ್ಮ ಸಂಸ್ಥೆ ಟ್ರಸ್ಟ್ನ್ನು” ಸ್ಥಾಪಿಸಿ ಕಾರ್ಯದಹೊಣೆಗಾರಿಕೆಯನ್ನು ಅವರಿಗೆ ಒಪ್ಪಿಸಿದರು.ತದನಂತರ ಜಗದ್ಗುರುಗಳು 1982ರ ಫೆಬ್ರವರಿ 26ರಲ್ಲಿ ಶ್ರೀ ಮುಕ್ತಿಮಂದಿರದಪಟ್ಟಾಧಿಕಾರಿಗಳಾಗಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಿಮಲ ರೇಣುಕ ವೀರ ಮುಕ್ತಿಮುನಿಶಿವಾಚಾರ್ಯ ಮಹಾಸ್ವಾಮಿಗಳನ್ನು ಅಧಿಕಾರಕ್ಕೆ ತಂದರು. ಶ್ರೀ ಷ.ಬ್ರ. ವಿಮಲ ರೇಣಕಶಿವಾಚಾರ್ಯರು ಗುರುಗಳ ಕೃಪಾಶಿರ್ವಾದದಿಂದ, ಶ್ರೀ ಸನ್ನಿಧಿಯವರ ಜೊತೆಯಲ್ಲಿನಒಡನಾಟ, ಸಂಪರ್ಕ, ಸಂಚಾರ, ಉಪದೇಶದಿಂದ ಪರಿಪಕ್ವಗೊಂಡರು. ಹೀಗಿರುವಾಗಲೇಶ್ರೀ ಸನ್ನಿದಿಗಳಾದ ಜಗದ್ಗುರು ಶ್ರೀ ಪ್ರಸನ್ನರೇಣುಕ ವೀರಗಂಗಾಧರ ಶಿವಾಚಾರ್ಯಮಹಾಸ್ವಾಮಿಗಳು 1982ರ ಅಕ್ಟೋಬರ್ 05ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವಿಮಲ ರೇಣುಕ ಶಿವಾಚಾರ್ಯರು ಹಿರಿಯಗುರುಗಳ ಆಶೀರ್ವಾದ ಬಲದಿಂದ ಶ್ರೀಮಠವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.ಹಿರಿಯ ಜಗದ್ಗುರುಗಳು ಮಾಡುತ್ತಿದ್ದ ಅನೇಕ ಪ್ರಗತಿ ಕಾರ್ಯಗಳನ್ನು ಮುಂದುವರೆಸಿದ್ದಾರೆ.ಅಲ್ಲದೆ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯರ ಸಂಕಲ್ಪವಾದ”ತ್ರಿಕೋಟಿ ಲಿಂಗ ಸ್ಥಾಪನೆ” ಯೋಜನೆಯನ್ನು ನೆರವೇರಿಸಲು ಯೋಜನೆಯನ್ನುತಯಾರಿಸಿಕೊಂಡು ಕಾರ್ಯೋನ್ಮುಕರಾಗಿದ್ದಾರೆ.ಶ್ರೀಮಠದಲ್ಲಿ ಶ್ರೀ ಜಗದ್ಗುರು ಪ್ರಸನ್ನ ರೇಣುಕ ವೀರಗಂಗಾಧರ ರಾಜದೇಶಿಕೇಂದ್ರಶಿವಾಚಾರ್ಯ ಭಗವತ್ಪಾದರ ಗದ್ದುಗೆಯನ್ನು ಹದಿನಾರು ಲಕ್ಷರೂಗಳ ಯೋಜನೆಯಲ್ಲಿನಿರ್ಮಿಸಿ ಪ್ರಪಂಚದ ಎಲ್ಲಾ ಸಮಾಜ ಸುಧಾರಕರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.ಶ್ರೀಮಠದಲ್ಲಿ ಪ್ರತಿನಿತ್ಯ ಜಗದ್ಗುರುಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನಡೆಸಲಾಗುತ್ತಿದ್ದು,ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಹಾಗೂ ಮಹಾಶಿವರಾತ್ರಿಗೆ 5 ದಿನಗಳ ಜಾತ್ರೆಯನ್ನುನಡೆಸಿಕೊಂಡು ಬರಲಾಗುತ್ತಿದೆ.
Swamiji
Swamiji Name :
ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
25-01-1958
Place :
ಪಾಲಿಕೊಪ್ಪ, ಹುಬ್ಬಳ್ಳಿ ತಾ||
Pattadikara :
26-02-1982
Photo :
Programs
ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಹಾಗೂ ವಿಶೇಷ ಪೂಜೆ ಮಹಾಶಿವರಾತ್ರಿಗೆ 5 ದಿನಗಳ ಜಾತ್ರೆ (ಜಾಗರಣೆ, ರಥೋತ್ಸವ) ಶ್ರಾವಣ ಮಾಸದಲ್ಲಿ ನಿತ್ಯರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ದಸರಾದಲ್ಲಿ ಬನ್ನಿಮುಡಿಯುವ ಕಾರ್ಯಕ್ರಮ ಹಾಗೂ ಅಡ್ಡಪಲ್ಲಕ್ಕಿ ಉತ್ಸವ
Photos
Full Address Kannada
ಶ್ರೀ ಮುಕ್ತಿಮಂದಿರ ಧರ್ಮಕ್ಷೇತ್ರ
ಭಂಕಾಪುರ ಕ್ರಾಸ್
ಶಿರಹಟ್ಟಿ ತಾ||, ಗದಗ ಜಿಲ್ಲೆ