Shree Brahanmatha (Kalmatha)

Shree Brahanmatha (Kalmatha) Claimed

ಶ್ರೀ ಬೃಹನ್ಮಠ (ಕಲ್ಮಠ)

Average Reviews

Description

ಶ್ರೀ ಬೃಹನ್ಮಠ (ಕಲ್ಮಠ)

ಷ. ಬ್ರ. ಶ್ರೀ. ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು

ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮವು ತಾಲ್ಲೂಕು ಕೇಂದ್ರದಿಂದ19 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಇತ್ತೀಚೆಗಷ್ಟೇ ಸ್ಥಾಪಿತಗೊಂಡಿರುವಶ್ರೀ ಬೃಹನ್ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಭಕ್ತರಿಗೆ ಧಾರ್ಮಿಕಸಂಸ್ಕಾರ ನೀಡಿ ಮುಂದುವರೆದುಕೊಂಡು ಬಂದಿದೆ.ಬನ್ನಿಕೊಪ್ಪದ ಮಧ್ಯಭಾಗದಲ್ಲಿ ಸ್ಥಾಪನೆಗೊಂಡಿರುವ ಶ್ರೀಮಠವು ಉಜ್ಜಯಿನಿಪೀಠದ ಶಾಖಾ ಮಠವಾಗಿ ರೂಪುಗೊಂಡಿದ್ದು ಜಗದ್ಗುರುಗಳ ಮಾರ್ಗದರ್ಶನ ಪಡೆದುಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಶ್ರೀಮಠವು ಸುಮಾರು 30 ವರ್ಷಗಳ ಹಿಂದೆಸ್ಥಾಪಿತಗೊಂಡಿದ್ದು ಡಾ. ಎಸ್.ಎಂ. ಹಿರೇಮಠ ಎಂಬ ವೃದ್ದರು ತಮಗೆ ಮಕ್ಕಳಿಲ್ಲದಕಾರಣಕ್ಕೆ ತಮ್ಮ ಅಪಾರ ಆಸ್ತಿಯು ಸಮಾಜಕ್ಕೆ ಸದ್ವಿನಿಯೋಗವಾಗಲೆಂದು ಮಠ ಸ್ಥಾಪಿಸಿಧಾರ್ಮಿಕ ಕಾರ್ಯಗಳನ್ನು ನಡೆಸಲು ಅನುವು ಮಾಡಿಕೊಟ್ಟರು.ಶ್ರೀಮಠವನ್ನು ಸ್ಥಾಪಿಸಿದ ಡಾ. ಎಸ್.ಎಂ. ಹಿರೇಮಠದವರು ಇದೇ ಗ್ರಾಮದ ಶ್ರೀಸುಜ್ಞಾನ ದೇವರನ್ನು ಹತ್ತು ವರ್ಷದ ಬಾಲಕರಾಗಿರುವಾಗಲೇ ನೂತನ ಮಠಕ್ಕೆಮಠಾದೀಶ್ವರರನ್ನಾಗಿ ನೇಮಕ ಮಾಡಿದ್ದಾರೆ. ಶ್ರೀಮಠದ ಅಧಿಕಾರ ಪಡೆದ ಶ್ರೀ ಷ.ಬ್ರ. ಡಾ.ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾಲೇಜು ಶಿಕ್ಷಣ ಮುಗಿಸಿ, ಕಾಶಿಯಲ್ಲಿಸಂಸ್ಕøತ ಎಂ.ಎ. ಮುಗಿಸಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.ಶ್ರೀಗಳು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡಂದಿನಿಂದಲೂ ಮಠದ ಹೊರಗಿದ್ದುವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ತಿಂಗಳಿಗೊಮ್ಮೆ ಮಠಕ್ಕೆ ಬಂದು ಮಠದ ಧಾರ್ಮಿಕಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಪ್ರಸ್ತುತ ಶ್ರೀಮಠದ ಜವಾಬ್ದಾರಿಯಜೊತೆಗೆ ಮೈಸೂರಿನ ಶ್ರೀ ಅರಮನೆ ಜಪದಕಟ್ಟೆ ಮಠದ ಅಧಿಕಾರವನ್ನೂ ವಹಿಸಿಕೊಂಡುಎರಡೂ ಮಠಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ದಾರುಕಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದುನಿತ್ಯ ಪೂಜೆಗೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆ, ಕಾರ್ತೀಕಮಾಸದಲ್ಲಿ ಕಾರ್ತಿಕೋತ್ಸವ ಹಾಗೂ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಶ್ರೀಹಿರಿಯ ಗುರುಗಳ ಪುಣ್ಯಾರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಷ. ಬ್ರ. ಶ್ರೀ. ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು
Place :
ಶ್ರೀ ಬೃಹನ್ಮಠ (ಕಲ್ಮಠ)
Photo :

Programs

ಪ್ರತಿ ಅಮಾವಾಸೆಯಂದು ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಕಾರ್ತಿಕ ಮಾಸದಲ್ಲಿ ದೀಪೋತ್ಸವ

Photos

Full Address Kannada

ಶ್ರೀ ಬೃಹನ್ಮಠ (ಕಲ್ಮಠ)
ಬನ್ನಿಕೊಪ್ಪ - 582 112
ಶಿರಹಟ್ಟಿ ತಾ||, ಗದಗ ಜಿಲ್ಲೆ

Map

Near by Places

ಶಿರಹಟ್ಟಿ - 19 ಕಿ.ಮೀ.
ಗದಗ - 35 ಕಿ.ಮೀ.
ಗುತ್ತಲ - 40 ಕಿ.ಮೀ.
ಮುಂಡರಗಿ - 22 ಕಿ.ಮೀ.

Statistic

44 Views
0 Rating
0 Favorite
0 Share
error: Content is protected !!