Shree Gulaganji Matha

Shree Gulaganji Matha Claimed

ಶ್ರೀ ಗುಲಗಂಜಿ ಮಠ

Average Reviews

Description

ಶ್ರೀ ಗುಲಗಂಜಿ ಮಠ

ಕರ್ತೃ – ಶ್ರೀ. ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು

ಗದಗ ಜಿಲ್ಲೆಯ ರೋಣ ಪಟ್ಟಣವು ಜಿಲ್ಲಾ ಕೇಂದ್ರದಿಂದ 40 ಕಿ.ಮೀ.ದೂರದಲ್ಲಿದ್ದು ಈ ಪಟ್ಟಣದ ಮಧ್ಯಭಾಗದಲ್ಲಿ ಶ್ರೀ ಮ.ನಿ.ಪ್ರ. ಸಿದ್ದಲಿಂಗಮಹಾಸ್ವಾಮಿಗಳಿಂದ ಸುಮಾರು 550 ವರ್ಷಗಳ ಹಿಂದೆ ಸ್ಥಾಪಿತಗೊಂಡಿದೆಯೆಂದುಹೇಳಲಾದ ಶ್ರೀ ಗುಲಗಂಜಿ ಮಠವು ರೋಣ ಪಟ್ಟಣದ ಪ್ರಮುಖ ಧಾರ್ಮಿಕ ಕೇಂದ್ರವಾಗಿಬೆಳೆದು ಬಂದಿದೆ. ಪುರಾತನವಾದ ರೋಣ ಪಟ್ಟಣದಲ್ಲಿರುವ ಶ್ರೀ ಗುಲಗಂಜಿ ಮಠವು ಅತಿಪ್ರಾಚೀನ ಪರಂಪರೆಯನ್ನು ಹೊಂದಿದ್ದರೂ ಸೂಕ್ತ ದಾಖಲೆಗಳ ಕೊರತೆಯಿಂದಾಗಿಸ್ಪಷ್ಟವಾಗಿ ನಮೂದಿಸಲು ಸಾದ್ಯವಾಗುವುದಿಲ್ಲಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಮಹಾಸ್ವಾಮಿಗಳು ಸುಮಾರು 550ವರ್ಷಗಳ ಹಿಂದೆ ಜೀವಿಸಿದ್ದ ತಪಸ್ವಿಗಳು. ಸಮಕಾಲೀನ ಶ್ರೀಗಳ ಜೊತೆ ಉತ್ತಮವಾದಸಂಬಂಧವನ್ನು ಹೊಂದಿದ್ದ ಶ್ರೀಗಳು ರೋಣ ಪಟ್ಟಣದ ಮಠದ ಕಾರ್ಯಕ್ರಮಗಳಿಗೆಅವರನ್ನು ಆಹ್ವಾನಿಸುತ್ತಿದ್ದರು ಎಂದು ತಿಳಿದು ಬರುತ್ತದೆ. ಶ್ರೀಗಳು ಅನುಷ್ಟಾನ ಪ್ರಿಯರಾಗಿದ್ದುತನ್ಮೂಲಕ ಶ್ರೀಮಠದ ಭಕ್ತರಿಗೆ ಹಾಗೂ ಗ್ರಾಮದ ಜನರಿಗೆ ಸೂಕ್ತ ಮಾರ್ಗದರ್ಶನನೀಡಿದ್ದಾರೆ ಎಂದು ತಿಳಿದು ಬರುತ್ತದೆ.ಕರ್ತೃಗುರುಗಳ ನಂತರ ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು, ಶ್ರೀ ಮ.ನಿ.ಪ್ರ.ಗುರುಪಾದ ಸ್ವಾಮಿಗಳ ಬಗ್ಗೆ ಮಾತ್ರ ಅಲ್ಪ ಮಾಹಿತಿ ದೊರಕುತ್ತದೆ. ಹಿಂದಿನ ಶ್ರೀಗಳಾದ ಶ್ರೀಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು ತಮ್ಮ ಕಾರ್ಯಚಟುವಟಿಕೆಗಳ ಮೂಲಕಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಶ್ರೀಗಳು ರೋಣ ಪಟ್ಟಣದಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಸೂಕ್ತ ಮಾರ್ಗದರ್ಶನಮಾಡಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಪಾದ ಸ್ವಾಮಿಗಳು1981ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠದ ಅಧಿಕಾರವನ್ನುನಡೆಸುತ್ತಾ ಕೆಲ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ. ಶ್ರೀಗಳು ಕೆಲಕಾಲ ಶಿವಯೋಗಮಂದಿರದಲ್ಲಿದ್ದು ಎರಡೂ ಕಡೆ ಕಾರ್ಯನಿರ್ವಹಿಸುತ್ತ ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳು ನಿರಂತರವಾಗಿ ನಡೆಯುವ ವ್ಯವಸ್ಥೆ ಮಾಡಿದ್ದಾರೆ.

Swamiji

Swamiji Name :
ಶ್ರೀ. ಮ.ನಿ.ಪ್ರ. ಗುರುಪಾದ ಸ್ವಾಮಿಗಳು
Date of Birth :
7-11-1953
Place :
ಸೌಡಿ, ರೊಣ ತಾ||
Pattadikara :
1981
Photo :

Programs

ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಆಷಾಡ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಪ್ರವಚನ ಶ್ರೀ ಮಠದಲ್ಲಿ 12ನೇ ಶತಮಾನದ ಶರಣರ ಜಯಂತಿಗಳ ಆಚರಣೆ

Photos

Full Address Kannada

ಶ್ರೀ ಗುಲಗಂಜಿ ಮಠ
ರೋಣ - 582 209
ರೋಣ ತಾ||, ಗದಗ ಜಿಲ್ಲೆ

Map

Near by Places

ಗದಗ - 40 ಕಿ.ಮೀ.
ಯಲಬುರ್ಗಾ - 40 ಕಿ.ಮೀ.
ನವಲಗುಂದ - 45 ಕಿ.ಮೀ.

Statistic

103 Views
0 Rating
0 Favorite
0 Share
error: Content is protected !!