ಗದಗ ಜಿಲ್ಲೆ ರೋಣ ತಾಲ್ಲೂಕಿನ ಹಾಲಕೆರೆ ಗ್ರಮವು ತಾಲ್ಲೂಕು ಕೇಂದ್ರದಿಂದ22ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 500 ವರ್ಷದ ಹಿಂದೆ ಶ್ರೀ ಮ.ನಿ.ಪ್ರ.ಅನ್ನದಾನೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿಗೊಂಡಿರುವ ಶ್ರೀ ಅನ್ನದಾನೇಶ್ವರ ಮಠವು ತನ್ನಧಾರ್ಮಿಕ ಸಾಮಾಜಿಕ ಚಟುವಟಿಕೆಗಳ ಮೂಲಕ ನಾಡಿನ ಪ್ರಮುಖ ಮಠಗಳಲ್ಲಿಒಂದಾಗಿದೆ. ಸುಮಾರು 500 ವರ್ಷಗಳ ಹಿಂದೆ ಶ್ರೀ ಮಹಾಂತ ಮಹಾಸ್ವಾಮಿಗಳು ಶ್ರೀಅನ್ನದಾನೇಶ್ವರರ ಮಹಾಸ್ವಾಮಿಗಳು ಹಾಗೂ ಶ್ರೀ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಒಟ್ಟಿಗೆಲೋಕಸಂಚಾರ ಕೈಗೊಂಡು ಧರ್ಮಪ್ರಸಾರವನ್ನು ಮಾಡಿಕೊಂಡು ಬರುತ್ತಿದ್ದರು.ಬಾಗಲಕೋಟೆ ಜಿಲ್ಲೆಯ ಚಿತ್ತರಗಿ ಮಠದಲ್ಲಿ ಈ ಮೂರು ಜನ ಗುರುಗಳುಅನುಷ್ಟಾನಗೊಂಡರು. ನಂತರ ಶ್ರೀ ಗುರು ಮಹಾಂತರು ಚಿತ್ತರಗಿಯಲ್ಲೇ ನೆಲೆನಿಂತರು. ಶ್ರೀಅನ್ನದಾನೇಶ್ವರರು ಹಾಗೂ ಶ್ರೀ ಕೊಟ್ಟೂರು ಸ್ವಾಮಿಗಳು ಸಂಚಾರ ಹೊರಟು ಹಾಲಕೆರೆಗೆಬಂದಾಗ ಶ್ರೀ ಅನ್ನದಾನೇಶ್ವರರು ಇಲ್ಲೇ ನೆಲೆಸಿ ಮಠವನ್ನು ಸ್ಥಾಪಿಸಿದರು ನಂತರ ಕೊಟ್ಟೂರುಸ್ವಾಮಿಗಳು ಗಂಗಾವತಿಗೆ ಹೋಗಿ ನೆಲೆನಿಂತರುಶ್ರೀ ಮ.ನಿ.ಪ್ರ. ಅನ್ನದಾನೇಶ್ವರ ಮಹಾಸ್ವಾಮಿಗಳು ಹಾಲಕೆರೆಗೆ ಬರುವ ಮುಂಚೆಗಂಜಿಹಾಳು ನರೇಗಲ್ಲು ಗ್ರಾಮಗಳಲ್ಲಿ ಮಠವನ್ನು ಸ್ಥಾಪನೆ ಮಾಡಿದ್ದರೆಂದು ತಿಳಿದುಬರುತ್ತದೆ.ಶ್ರೀ ಅನ್ನದಾನೇಶ್ವರರು ತಮ್ಮ ಅನುಷ್ಟಾನ ಬಲದಿಂದ ದಾಸೋಹ ಕ್ರಮಗಳಿಂದಾಗಿಹಾಲಕೆರೆಯ ಮಠವನ್ನು ಅಭಿವೃದ್ದಿಪಡಿಸಿದರು. ಹಾಗೆಯೇ ಶ್ರೀಗಳ ಧಾರ್ಮಿಕ ಪ್ರಭೆಗೆಮನಸೋತ ಭಕ್ತರು ಶ್ರೀಮಠದ ಅಭಿವೃದ್ದಿಯಲ್ಲಿ ಪಾಲ್ಗೊಂಡು ಶ್ರೀಗಳ ಕೃಪೆಗೆ ಪಾತ್ರರಾದರು.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಇಲ್ಲಿಯವರೆಗೂ 11ಜನ ಶ್ರೀಗಳುಶ್ರೀಮಠದಲ್ಲಿ ಅಧಿಕಾರ ನಡೆಸಿದ್ದು ಈಗಿನ ಶ್ರೀಗಳು 12ನೇಯವರೆಂದು ಹೇಳಲಾಗುತ್ತಿದೆ.ಕತೃಗುರುಗಳ ನಂತರದ ಪರಂಪರೆಯಲ್ಲಿ ಶ್ರೀ ಮ.ನಿ.ಪ್ರ. ಕರಿಸಿದ್ದ ಮಹಾಸ್ವಾಮಿಗಳು ನಂತರಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಪಟ್ಟಕ್ಕೆ ಬಂದಿದ್ದು ಹಾಲಕೆರೆ ಭಕ್ತರಪ್ರೀತಿಗೆ ಮಣಿದು ಹಾಲಕೆರೆಯಲ್ಲಿ ನೆಲೆಗೊಂಡಿದ್ದರು ಎಂದು ತಿಳಿದುಬರುತ್ತದೆ. ಶ್ರೀಗಳುತಮ್ಮ ಉಪದೇಶ ಹಾಗೂ ಪ್ರವಚನಗಳಿಂದ ಜನರಲ್ಲಿನ ಮೌಡ್ಯವನ್ನುತೆಗೆದುಹಾಕುವ ಕೆಲಸ ಮಾಡಿದ್ದಾರೆ.ಶ್ರೀಗಳ ನಂತರದ ಪರಂಪರೆಯಲ್ಲಿ ಬಂದಿರುವ ಗುರುಗಳೆಲ್ಲರೂ ಶ್ರೀಮಠವನ್ನುಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ದಿ ಪಡಿಸಿದ್ದು ಶ್ರೀಮಠದ ಭಕ್ತರಿಗೆ ಸೂಕ್ತಮಾರ್ಗದರ್ಶನ ಮಾಡಿದ್ದಾರೆ. ಪರಂಪರೆಯ 10ನೇ ಗುರುಗಳಾದ ಶ್ರೀ ಮ.ನಿ.ಪ್ರ. ಗುರುಅನ್ನದಾನ ಮಹಾಸ್ವಾಮಿಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದು ಶಾಖಾಮಠಗಳನ್ನು ಗುರುತಿಸಿ ಅವುಗಳ ಅಭಿವೃದ್ದಿಯಲ್ಲೂ ಕಾರ್ಯನಿರ್ವಹಿಸಿದ್ದರು ಎಂದುತಿಳಿದುಬರುತ್ತದೆ.ಮಹತಪಸ್ವಿಗಳಾಗಿದ್ದುಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭುರಾಜೇಂದ್ರ ಮಹಾಸ್ವಾಮಿಗಳುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಹಿಂದಿನ ಶ್ರೀಗಳ ಹಾದಿಯಲ್ಲಿಯೇ ಮುನ್ನಡೆದ ಶ್ರೀ ಮ.ನಿ.ಪ್ರ. ಪ್ರಭುರಾಜೇಂದ್ರಮಹಾಸ್ವಾಮಿಗಳು ಸಾಮಾಜಿಕವಾಗಿಯೂ ಶ್ರೀಮಠವನ್ನು ಗುರ್ತಿಸುವಂತೆ ಮಾಡುವಲ್ಲಿಶ್ರಮಿಸಿದ್ದಾರೆ. ಶ್ರೀಗಳು ತಮ್ಮ ಕಾರ್ಯವೈಖರ್ಯ ಮೂಲಕ ಶ್ರೀಮಠದಲ್ಲಿ ಕಾರ್ಯಗಾರಗಳನ್ನುಏರ್ಪಡಿಸುತ್ತಾ ಭಕ್ತರಿಗೆ ಸನ್ಮಾರ್ಗ ತೋರಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು1987ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಪುರಾತನ ಪರಂಪರೆಯ ಮಠದ ಹಿರಿಮೆಗೆತಕ್ಕುದಾಗಿ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಹಾಲಕೆರೆಯಮಠವನ್ನಲ್ಲದೇ ಮಠದ ಇಪ್ಪತ್ತೆಂಟು ಶಾಖಾಮಠಗಳ ಜವಾಬ್ದಾರಿಯನ್ನು ಯಶಸ್ವಿಯಾಗಿವಹಿಸಿಕೊಂಡು ಸಮಸ್ತ ಮಠಗಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಹಾಗೆಯೇ ಆ ಮಠಗಳಲ್ಲಿನಿರಂತರವಾಗಿ ಧಾರ್ಮಿಕ ಆಚರಣೆಗಳು ಜರುಗುವ ವ್ಯವಸ್ಥೆ ಮಾಡಿದ್ದಾರೆ.ಶ್ರೀಮಠವು ಸಾಮಾಜಿಕ ಕ್ಷೇತ್ರದಲ್ಲಿ ಅಗಾಧವಾದ ಸಾಧನೆಯನ್ನು ಮಾಡಿದ್ದುಕಿವುಡರ ಮತ್ತು ಮೂಗರ ವಸತಿಗೃಹಗಳ ನಿರ್ಮಾಣ, ನರೇಗಲ್ಲ ಕಿವುಡ ಮತ್ತು ಮೂಕರಪಾಠಶಾಲೆ ಹಾಗೂ ಅಂಗವಿಕಲ ಮಕ್ಕಳ ಶಾಲೆಯನ್ನು ಸ್ಥಾಪಿಸಿ ಅಸಹಾಯಕರಿಗೆನೆರವುನೀಡಿದೆ. ಹಾಗೆಯೇ ಅನಾಥ ಮತ್ತು ಬಡ ಮಕ್ಕಳಿಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿಸಹಾಯವನ್ನು ಮಾಡುವದರೊಂದಿಗೆ ನರೇಗಲ್ಲಿನಲ್ಲಿ ಶ್ರೀ ಅನ್ನದಾನೇಶ್ವರ ಆಸ್ಪತ್ರೆಯನ್ನುಪ್ರಾರಂಬಿಸಲಾಗಿದೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ತಿಂಗಳಿಗೊಮ್ಮೆ ಶಿವಾನುಭವಗೋಷ್ಠಿಗಳನ್ನು ನಡೆಸುತ್ತಾಭಕ್ತರಿಗೆ ಶಿವಾನುಭವ ತತ್ವಗಳ ಹಾಗೂ ವೀರಶೈವ ಧರ್ಮಾಚರಣೆಗಳ ಬಗ್ಗೆ ಅರಿವುಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಎಳ್ಳ ಅಮವಾಸ್ಯೆ ಆದ ಮೂರು ದಿನಕ್ಕೆ ಶ್ರೀಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಶ್ರಾವಣ ಮಾಸದ 2ನೇ ಸೋಮವಾರಶ್ರೀಮಠದ ಬೆಳ್ಳಿ ರಥೋತ್ಸವ ಕಾರ್ಯಕ್ರಮಗಳು ನಡೆಯುತ್ತಿದ್ದು ಅಪಾರ ಸಂಖ್ಯೆಯ ಭಕ್ತರುಪಾಲ್ಗೊಂಡು ಸ್ವಾಮಿಗಳ ಕೃಪೆಗೆ ಪಾತ್ರರಾಗುತ್ತಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಅನ್ನದಾನೇಶ್ವರ ಮಹಾಸ್ವಾಮಿಗಳು
Pattadikara :
1987
Photo :
Programs
ಶ್ರೀಮಠದ ಗದ್ದುಗೆಗಳಿಗೆ ನಿತ್ಯ ತ್ರಿಕಾಲ ಪೂಜೆ
ತಿಂಗಳಿಗೊಮ್ಮೆ ಶಿವಾನುಭವ ಗೋಷ್ಠಿ
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಎಳ್ಳು ಅಮವಾಸ್ಯೆ ಆದ 3 ದಿನಕ್ಕೆ ಶ್ರೀ ಹಿರಿಯ ಗುರುಗಳ
ಪುಣ್ಯಾರಾಧನೆ ಮತ್ತು ರಥೋತ್ಸವ
ಶ್ರಾವಣ ಶುದ್ಧ ಅಷ್ಠಮಿಯಂದು ಶ್ರೀ ಹಿರಿಯ ಗುರುಗಳ ಪುಣ್ಯರಾಧನೆ,
ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ 2 ದಿನಗಳ ಕಾಲ
ಸಾಂಸ್ಕøತಿಕ ಕಾರ್ಯಕ್ರಮಗಳು, ಉಪನ್ಯಾಸ, ಧರ್ಮೋಪದೇಶಗಳು
ಶ್ರಾವಣ ಮಾಸದ 2ನೇ ಸೋಮವಾರ ಶ್ರೀಮಠದ ಬೆಳ್ಳಿ ರಥೋತ್ಸವ
Institutions
ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು
ಫ್ರೌಢಶಾಲೆಗಳು
ಪದವಿ ಪೂರ್ವ ಕಾಲೇಜ್
ಪದವಿ ಕಾಲೇಜು
ಉಚಿತ ಪ್ರಸಾದ ನಿಲಯಗಳು
ವಿದ್ಯಾರ್ಥಿ ನಿಲಯ
ಅಂಗವಿಕಲ ಮಕ್ಕಳ ಶಾಲೆ
Photos
Full Address Kannada
ಶ್ರೀ ಅನ್ನದಾನೇಶ್ವರ ಮಠ
ಹಾಲಕೆರೆ - 582 119
ರೋಣ ತಾ||, ಗದಗ ಜಿಲ್ಲೆ