ಗದಗ ಜಿಲ್ಲಾ ಕೇಂದ್ರದಿಂದ 60 ಕಿ.ಮೀ. ದೂರದಲ್ಲಿರುವ ನರಗುಂದ ಪಟ್ಟಣದಸಿದ್ದನಭಾವಿ ಓಣಿಯಲ್ಲಿ ಸುಮಾರು 17 ವರ್ಷಗಳ ಹಿಂದೆ ಶ್ರೀ ಚನ್ನಬಸವಶಿವಯೋಗಿಗಳಿಂದ ಹೆಚ್ಚು ಪ್ರಚಲಿತಕ್ಕೆ ಬಂದಿರುವ ಶ್ರೀ ವಿರಕ್ತಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.ಶ್ರೀಮಠದ ಸ್ಥಾಪಕ ಗುರುಗಳು ಶ್ರೀ ಗುರು ನಿರಂಜನ ಮಹಾಸ್ವಾಮಿಗಳೆಂದುತಿಳಿದುಬಂದಿದ್ದು ಸುಮಾರು 200 ವರ್ಷಗಳ ಹಿಂದೆ ಬದುಕಿದ್ದ ಮಹಾನ್ ಚೇತನರು.ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿ ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಚಟುವಟಿಕೆಗಳ ಮೂಲಕ ಶ್ರೀಮಠವನ್ನು ಮುಂದುವರೆಸುತ್ತಿದ್ದಾಗಲೇ ಶ್ರೀ ನಿರಂಜನಸ್ವಾಮಿಗಳ ಸಂಪರ್ಕಕ್ಕೆ ಬಂದವರು ಶ್ರೀ ಚನ್ನಬಸವ ಶಿವಯೋಗಿಗಳು. ಮೈಸೂರುಕಡೆಯಿಂದ ಲೋಕಸಂಚಾರ ಬಂದರೆಂದು ಹೇಳಲಾದ ಶ್ರೀ ಚನ್ನಬಸವ ಶಿವಯೋಗಿಗಳುಹುಬ್ಬಳ್ಳಿ ಮಾರ್ಗವಾಗಿ ನರಗುಂದಕ್ಕೆ ಬಂದು ನೆಲೆಗೊಂಡರು. ಶ್ರೀ ನಿರಂಜನಮಹಾಸ್ವಾಮಿಗಳ ದರ್ಶನ ಪಡೆದ ಶ್ರೀ ಚನ್ನಬಸವ ಶಿವಯೋಗಿಗಳು ಅವರ ನಂತರ ಶ್ರೀವಿರಕ್ತಮಠದ ಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿದ್ದಾರೆ.ಶ್ರೀ ಚನ್ನಬಸವ ಶಿವಯೋಗಿಗಳು ಶರಣ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಸರಳರೀತಿಯಲ್ಲಿ ಭಕ್ತರಿಗೆ ಮನನ ಮಾಡಿಸುತ್ತಿದ್ದರು. ಶಿವಾನುಭವ ತತ್ವವನ್ನು ತಮ್ಮಲ್ಲಿಸಾಕಾರಗೊಳಿಸಿಕೊಂಡಿದ್ದ ಗುರುಗಳು 145ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ. ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು 2006ರ ಫೆಬ್ರವರಿ 08ರಂದುಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಅಭಿವೃದ್ದಿಗೊಳಿಸುತ್ತಿದ್ದಾರೆ. ಧೀರ್ಘಕಾಲ ಖಾಲಿ ಉಳಿದಿದ್ದ ಶ್ರೀಮಠದ ಆಡಳಿತವನ್ನು 2006ರವರೆಗೆ ಶ್ರೀ ಚನ್ನಬಸವೇಶ್ವರ ವಿರಕ್ತಮಠ ಟ್ರಸ್ಟ್ ನೋಡಿಕೊಂಡು ಬಂದಿದ್ದು ಇದೀಗ ಶ್ರೀಗಳ ಮುಂದಾಳತ್ವದಲ್ಲಿ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುವತ್ತ ಚಿತ್ತಹರಿಸಿದೆ. ಶ್ರೀಮಠದಲ್ಲಿ ಬಸವಜಯಂತಿಗೆಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ “ಅರಿವು – ಆಚಾರ” ಪ್ರವಚನ ಕಾರ್ಯಕ್ರಮಗಳುಆಯೋಜನೆಗೊಳ್ಳುತ್ತವೆ.
Swamiji
Swamiji Name :
ಶ್ರೀ. ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು
Date of Birth :
05-02-1981
Place :
ನಾವದಗಿ, ಬಾಲ್ಕಿ ತಾ.
Pattadikara :
08-02-2006
Photo :
Programs
ಪ್ರ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪುರಾಣ ಪ್ರವಚನ
ದಸರಾದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ
ಬಸವಜಯಂತಿಗೆ ಶ್ರೀ ಹಿರಿಯ ಗುರುಗಳ ಸ್ಮರಣೋತ್ಸವ ಮತ್ತು
“ಅರಿವು-ಆಚಾರ” ಪ್ರವಚನ
Photos
Full Address Kannada
ಶ್ರೀ ವಿರಕ್ತ ಮಠ ಸಿದ್ದನಬಾವಿ ಓಣಿ,
ನರಗುಂದ - 571 610
ನರಗುಂದ ತಾ||, ಗದಗ ಜಿಲ್ಲೆ