ಕರ್ತೃ – ಪೂಜ್ಯ ಶ್ರೀ ಜಗದ್ಗುರು ಸಿದ್ದೇಶ್ವರ ಮಹಾಸ್ವಾಮಿಗಳು
ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಧ್ಯಭಾಗದಲ್ಲಿ ಪುರಾತನ ಕಾಲದಲ್ಲಿ ಶ್ರೀಜಗದ್ಗುರು ಸಿದ್ದೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪಂಚಗ್ರಹ ಗುಡ್ಡದಹಿರೇಮಠವು ಉಜ್ಜಯಿನಿ ಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಕರ್ತೃಗುರುಗಳಾದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳುಸಿಗುವುದಿಲ್ಲ. ಆದರೆ ನಂತರ ಬಂದ ಶ್ರೀ ಮ.ಘ.ಚ. ಚನ್ನವೀರ ಶಿವಾಚಾರ್ಯಮಹಾಸ್ವಾಮಿಗಳಿಂದಾಗಿ ಶ್ರೀಮಠವು ಪ್ರಚಲಿತಕ್ಕೆ ಬಂದಿದ್ದು ಇವರ ಬಗ್ಗೆ ಮಾಹಿತಿಗಳುಲಭ್ಯವಿವೆ. ಶ್ರೀಗಳು ವಾಕ್ಸಿದ್ದಿ ಪುರುಷರಾಗಿ ಹೆಸರು ಮಾಡಿದ್ದು ಇವರ ಕಾಲದಲ್ಲಿಶ್ರೀಮಠವು ಸುಸಜ್ಜಿತವಾಗಿ ಬೆಳೆದು ಈ ಪ್ರಾಂತ್ಯದ ಪ್ರಭಾವಿ ಮಠವಾಗಿ ಬೆಳೆಯಿತು.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀಗಳೆಲ್ಲರೂ ಹೆಚ್ಚಿನದಾಗಿ ಶ್ರೀಚನ್ನವೀರ ಶಿವಾಚಾರ್ಯ ಸ್ವಾಮಿಗಳ ಹೆಸರನ್ನೇ ಅಭಿದಾನ ಪಡೆದು ಬಂದಿರುವುದರಿಂದಶ್ರೀಮಠದ ಪರಂಪರೆಯ ಬಗ್ಗೆ ನಿಖರವಾಗಿ ತಿಳಿದುಬರುವುದಿಲ್ಲ. ಆದರೆ ಕೆಲವು ಮಾಹಿತಿಗಳಆಧಾರದ ಮೇಲೆ ಈಗಿನ ಶ್ರೀಗಳನ್ನು 23ನೇ ಶ್ರೀಗಳೆಂದು ಹೇಳಲಾಗುತ್ತದೆ. ಪರಂಪರೆಯಎಲ್ಲಾ ಗುರುಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದಾರೆ.ಹಿಂದಿನ ಶ್ರೀಗಳಾದ ಶ್ರೀ. ಮ.ಘ. ಚ. ಚನ್ನವೀರ ಶಿವಾಚಾರ್ಯಮಹಾಸ್ವಾಮಿಗಳು 1980ರಲ್ಲಿ ಶ್ರೀಮಠದ ಅಧಿಕಾರಕ್ಕೆ ಬಂದಿದ್ದು ಶ್ರೀ ಮಠದ ಸರ್ವಾಂಗೀಣಅಭಿವೃದ್ದಿಗೆ ನೀಲಿನಕ್ಷೆಯನ್ನು ತಯಾರಿಸಿಕೊಂಡು ಮಠವನ್ನು ಹಂತಹಂತವಾಗಿಅಭಿವೃದ್ದಿಗೊಳಿಸಿದ್ದಾರೆ. ಶ್ರೀಗಳು ಉಜ್ಜಯಿನಿ ಪೀಠದ ಹಿಂದಿನ ಜಗದ್ಗುರು ಶ್ರೀ ಸಿದ್ದೇಶ್ವರಶಿವಾಚಾರ್ಯ ಭಗವತ್ಪಾದರು ದೀರ್ಫ ಅನುಷ್ಠಾನಗೊಂಡಿದ್ದ ನರಗುಂದದ ಗುಡ್ಡವನ್ನುಅಭಿವೃದ್ದಿಗೊಳಿಸಿ ಸಿದ್ದೇಶ್ವರ ಬೆಟ್ಟವನ್ನು ಒಂದು ಯಾತ್ರಾ ಸ್ಥಳವನ್ನಾಗಿ ರೂಪಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ. ಮ.ಘ.ಚ. ಅಭಿನವ ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳು 2007ರ ಫೆಬ್ರವರಿ 26 ರಂದು ಶ್ರೀ ಮಠಕ್ಕೆ ಪಟ್ಟಾದಿಕಾರಗೊಂಡಿದ್ದುಶ್ರೀಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಪ್ರತಿ ತಿಂಗಳುಶಿವಾನುಭವಗೋಷ್ಠಿ ನಡೆಯುತ್ತಿದ್ದು ಭಕ್ತರಲ್ಲಿ ಧರ್ಮದ ಹಾಗೂ ಧಾರ್ಮಿಕ ಆಚರಣೆಗಳಅರಿವನ್ನು ಮೂಡಿಸುತ್ತಿದೆ. ಶ್ರೀಮಠದ ಜಾತ್ರೆಯು ಯುಗಾದಿಯಲ್ಲಿ 3 ದಿನಗಳ ಕಾಲನಡೆಯುತ್ತದೆ. ಆ ಸಮಯದಲ್ಲಿ ಸಾಮೂಹಿಕ ವಿವಾಹಗಳು ಸೇರಿದಂತೆ ವಿವಿಧ ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಶ್ರೀ ಮ.ಘ.ಚ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
15-06-1985
Place :
ತಡಹಾಳ, ನವಲಗುಂದ ತಾ||
Pattadikara :
26-02-2007
Photo :
Programs
ಪ್ರತಿ ತಿಂಗಳು “ಶಿವಾನುಭವ ಗೋಷ್ಠಿ”
ಶಿವರಾತ್ರಿಯಂದು ವಿಶೇಷ ಪೂಜೆ
ಯುಗಾದಿಗೆ ಶ್ರೀ ಮಠದ ಜಾತ್ರೆ - ಸಾಮೂಹಿಕ ವಿವಾಹಗಳು 3 ದಿನಗಳ ಕಾಲ ಜಾತ್ರೆ
Institutions
ಸಂಸ್ಕøತ ವೇದ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಗೋ ಶಾಲೆ
Photos
Full Address Kannada
ಶ್ರೀ ಪಂಚಗ್ರಹ ಗುಡ್ಡದ ಹಿರೇಮಠ
ನರಗುಂದ - 582 207
ನರಗುಂದ ತಾ||, ಗದಗ ಜಿಲ್ಲೆ