ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಭೈರನಹಟ್ಟಿ ಗ್ರಾಮದ ಹೊರಭಾಗದಲ್ಲಿಪೂಜ್ಯ ಶ್ರೀ ದೊರೆ ಸ್ವಾಮಿಗಳಿಂದ ಸುಮಾರು 19ನೇ ಶತಮಾನದ ಪ್ರಾರಂಭದಲ್ಲಿ ಶ್ರೀದೊರೆಸ್ವಾಮಿ ವಿರಕ್ತಮಠವು ಆಂಧ್ರಪ್ರದೇಶದಿಂದ ಸಂಚಾರ ಹೊರಟರುಎನ್ನಲಾದ ಶ್ರೀ ದೊರೆಸ್ವಾಮಿಗಳು ಸಂಚಾರ ಮಾಡುತ್ತಾ ಈ ಗ್ರಾಮಕ್ಕೆ ಆಗಮಿಸಿ ಅನುಷ್ಟಾನಕೈಗೊಳ್ಳುತ್ತಾರೆ. ಶ್ರೀಗಳ ಧಾರ್ಮಿಕ ಪ್ರಭಾವಳಿಗೆ ಮನಸೋತ ಭಕ್ತರು, ಗುರುಗಳಿಗೋಸ್ಕರಶ್ರೀಮಠವನ್ನು ಸ್ಥಾಪಿಸಿಕೊಟ್ಟಿದ್ದಾರೆ ಎಂದು ತಿಳಿದುಬರುತ್ತದೆ.ಪೂಜ್ಯ ಶ್ರೀ ದೊರೆಸ್ವಾಮಿಗಳು ಶ್ರೀ ಮಠದಲ್ಲಿ ಪ್ರತಿನಿತ್ಯ ಸತ್ಸಂಗವನ್ನು ಏರ್ಪಡಿಸಿಶಿವಾನುಭವಗೋಷ್ಠಿ, ಕೀರ್ತನೆಗಳ ಮೂಲಕ ಧರ್ಮಪ್ರಚಾರವನ್ನು ಕೈಗೊಂಡಿದ್ದರು. ಶ್ರೀಗಳುಗ್ರಾಮದ ಜನರಲ್ಲಿ ಧರ್ಮ ಸಂಸ್ಕಾರ ನೀಡಿ ಲಿಂಗೈಕ್ಯರಾದಾಗ ಭಕ್ತರು ಗುರುಗಳ ಸಮಾದಿಗದ್ದುಗೆಯನ್ನು ನಿರ್ಮಿಸಿ ನಿತ್ಯಪೂಜೆ ಭಜನೆಗಳ ಮೂಲಕ ಗುರುಗಳ ಸ್ಮರಣೆಯನ್ನುಇಂದಿನವರೆಗೂ ಮುನ್ನಡೆಸಿಕೊಂಡು ಬಂದಿದ್ದಾರೆ.ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದರೂ ಮಠದಲ್ಲಿ ಗುರುಗಳುಯಾರು ಅಧಿಕಾರದಲ್ಲಿರಲಿಲ್ಲ, ಇದನ್ನು ಮನಗಂಡ ಭಕ್ತರು 1997ರಲ್ಲಿ ಶ್ರೀ ಮ.ನಿ.ಪ್ರ.ಶಿವಪುತ್ರಯ್ಯ ಸ್ವಾಮಿಗಳನ್ನು ಅಧಿಕಾರಕ್ಕೆ ತಂದರು. ಶ್ರೀಗಳು ಕರ್ತೃ ಗುರುಗಳು ನಡೆಸುತ್ತಿದ್ದಶಿವಾನುಭವಗೋಷ್ಠಿಗಳನ್ನು ಪುನಃ 1997ರ ಏಪ್ರಿಲ್ 06ರಲ್ಲಿ ಪ್ರಾರಂಭಿಸಿ ಅದರ ಮೂಲಕಭಕ್ತರಿಗೆ ಧರ್ಮದ ಹಾಗೂ ಸಮಾಜದ ನಿಜದ ಅರಿವನ್ನು ಮೂಡಿಸುತ್ತಿದ್ದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಸ್ವಾಮಿಗಳು 2011ರ ಮೇ 16ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡು ಹಿಂದಿನ ಶ್ರೀಗಳ ಹಾದಿಯಲ್ಲಿಯೇ ಶ್ರೀಮಠವನ್ನುಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶಿವಾನುಭವಗೋಷ್ಠಿಗಳನ್ನುಮುಂದುವರೆಸಿಕೊಂಡು ಬಂದಿದ್ದು ಜನರಲ್ಲಿನ ಅಂಧಕಾರವನ್ನು ಕಳೆಯುವ ಕೆಲಸಮಾಡುತ್ತಿದ್ದಾರೆ. ಶ್ರೀಮಠದಲ್ಲಿ ದಸರಾದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂಜಾತ್ರೆ ನಡೆಯುತ್ತಿದ್ದು ನವೆಂಬರ್ನಲ್ಲಿ “ಕನ್ನಡ ಜಾಗೃತಿ ಅಭಿಯಾನ” ನಡೆಯುತ್ತಿದೆ.ಸ್ಥಾಪಿತಗೊಂಡಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಾಂತಲಿಂಗ ಸ್ವಾಮಿಗಳು
Date of Birth :
05-02-1976
Place :
ಭೈರನಹಟ್ಟಿ, ನರಗುಂದ ತಾ||
Pattadikara :
16-05-2011
Photo :
Programs
ಪ್ರತಿ ಹುಣ್ಣಿಮೆಯ ಹಿಂದಿನ ದಿನ "ಶಿವಾನುಭವಗೋಷ್ಠಿ"
ವೈಶಾಖ ಮಾಸದಲ್ಲಿ ಪುರಾಣ ಪ್ರವಚನ ಹಾಗೂ
ಸಾಮೂಹಿಕ ವಿವಾಹಗಳು
ದಸರಾದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಜಾತ್ರೆ
ನವೆಂಬರ್ನಲ್ಲಿ "ಕನ್ನಡ ಜಾಗೃತಿ ಅಭಿಯಾನ"
Institutions
ಉಚಿತ ಪ್ರಸಾದ ನಿಲಯ ಗೋಶಾಲೆ
Photos
Full Address Kannada
ಶ್ರೀ ದೊರೆಸ್ವಾಮಿ ವಿರಕ್ತಮಠ
ಭೈರನಹಟ್ಟಿ - 582 207
ನರಗುಂದ ತಾ||, ಗದಗ ಜಿಲ್ಲೆ