ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಬನಹಟ್ಟಿ ಗ್ರಾಮವು ಪುರಾತನಗ್ರಾಮವಾಗಿದ್ದು ಈ ತಾಣವು ಮೊದಲು ಕಾಡಿನಿಂದಾವೃತವಾಗಿದ್ದು ಇಲ್ಲಿನ ಹಸಿರಿನವನವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಇಂತಹ ವನ ಸೌಂದರ್ಯದ ಮಧ್ಯೆಸ್ಥಾಪನೆಯಾಗಿದ್ದರಿಂದಾಗಿ ಈ ಗ್ರಾಮಕ್ಕೆ “ವನಹಟ್ಟಿ” ಎಂದು ಹೆಸರು ಬಂದಿದ್ದು ಕಾಲಕ್ರಮೇಣ”ಬನಹಟ್ಟಿ” ಯಾಗಿ ಪರಿವರ್ತನೆಯಾಗಿದೆ.ಇಂತಹ ಪ್ರಕೃತಿ ಸೌಂದರ್ಯದ ಗ್ರಾಮದಲ್ಲಿ ಸುಮಾರು 19ನೇ ಶತಮಾನದಲ್ಲಿಶ್ರೀ ಜಗದ್ಗುರು ನಿರಂಜನ ರುದ್ರಮುನಿ ಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ ಶ್ರೀಮದ್ಜಗದ್ಗುರು ನಿರಂಜನ ರುದ್ರಮುನಿ ಶಿವಾಚಾರ್ಯ ಮಠವು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವು ನೆಲೆಗೊಳ್ಳುವಂತೆ ಮಾಡಿದ್ದು ಭಕ್ತರಿಗೆಸೂಕ್ತ ಮಾರ್ಗದರ್ಶನ ಮಾಡುತ್ತಾ ಮುಂದುವರೆದಿದೆ. ಕರ್ತೃಗುರುಗಳು ತಮ್ಮ ಧಾರ್ಮಿಕಆಚರಣೆಗಳಿಂದ ಶ್ರೀಮಠವನ್ನು ಸ್ಥಾಪಿಸಿ ಭಕ್ತರಿಗೆ ಸನ್ಮಾರ್ಗ ತೋರಿದ್ದು ಧರ್ಮವನ್ನುನೆಲೆಗೊಳಿಸುವುದಕ್ಕಾಗಿ ದೇಶಾದ್ಯಂತ ಸಂಚರಿಸಿ ಲೋಕಕ್ಕೆ ಜ್ಞಾನಾಮೃತವನ್ನು ಬೋದಿಸಿಭಕ್ತರನ್ನು ಉದ್ದರಿಸಿದ್ದಾರೆ.ಶ್ರೀಗಳಲ್ಲಿ ಆಧ್ಯಾತ್ಮದ ಸವಿವುಂಡವರು ಅನೇಕರು. ಅವರುಗಳು ಗುಳೇದಗುಡ್ಡದಶಿವಪ್ಪಜ್ಜನವರು, ಗುಡಿಸಾಗರ ಶ್ರೀ ಸಿದ್ದಸಾದು ಶಿವಯೋಗಿಗಳು, ಗದುಗಿನ ಜಗದ್ಗುರು ಶ್ರೀಶಿವಾನಂದ ಮಹಾಸ್ವಾಮಿಗಳು, ಮಾಡಲಗೇರಿಯ ಶ್ರೀ ರಾಮಪ್ಪಜ್ಜನವರು ಇನ್ನುಮುಂತಾದವರು. ಕರ್ತೃ ಗುರುಗಳು ಸಾಹಿತ್ಯಕವಾಗಿಯೂ ಸಾಧನೆ ಮಾಡಿದ್ದು “ರುದ್ರಗೀತಾ”,”ಚಿದ್ರಸಾಮೃತ”, “ಚಿದ್ಬೋದ”, “ಮುರುಘೇಂದ್ರ ವಿಜಯ” ಹಾಗೂ “ವಿದೇಹ ಕೈವಲ್ಯ”ಗಳೆಂಬಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿದು ಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಬಸವಯ್ಯ ಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿದ್ದು ಪ್ರಸ್ತುತ ಶ್ರೀ ವೇದಮೂರ್ತಿ ಸೋಲಬಯ್ಯ ಸ್ವಾಮಿಗಳು ಶ್ರೀಮಠದಲ್ಲಿಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಶ್ರೀ ಮಠದ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ದಿನನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದ ಬೆನಕನಅಮವಾಸ್ಯೆಗೆ ಕರ್ತೃ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆಯನ್ನು ನಡೆಸಿಕೊಂಡುಬರುತ್ತಿದ್ದಾರೆ.
Swamiji
Swamiji Name :
ಶ್ರೀ ವೇ.ಮೂ. ಸೋಲಬಯ್ಯ ಸ್ವಾಮಿಗಳು
Date of Birth :
22-02-1973
Place :
ಬನಹಟ್ಟಿ, ನರಗುಂದ ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಪ್ರತಿ ಸೋಮವಾರ ರುದ್ರಾಭಿಷೇಕ
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
ಶ್ರಾವಣ ಮಾಸದ ಬೆನಕನ ಅಮವಾಸೆಗೆ ಕರ್ತೃ
ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಜಾತ್ರೆ
ಪುಷ್ಯ ಮಾಸ ಕೃಷ್ಣಪಕ್ಷ ಏಕಾದಶಿಗೆ ಕರ್ತೃ ಶ್ರೀಗಳ ಪುಣ್ಯಾ