ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಪೇಠಾ – ಆಲೂರು ಗ್ರಾಮವು ತಾಲ್ಲೂಕುಕೇಂದ್ರದಿಂದ 18 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರ ಭಾಗದಲ್ಲಿ ಸುಮಾರು ಒಂದುಕಿ.ಮೀ. ಅಂತರದಲ್ಲಿ 1979ರಲ್ಲಿ ಸ್ಥಾಪಿತಗೊಂಡಿರುವ ಶ್ರೀ ಹಾಲೇಶ್ವರ ಕೃಪಾ ಪೋಷಿತಶಿವಯೋಗಾಶ್ರಮವು ತನ್ನ ವಿಶಿಷ್ಟ ಧಾರ್ಮಿಕ ಆಚರಣೆಗಳ ಮೂಲಕ ಬಹುಬೇಗನೇಪ್ರಚಲಿತಕ್ಕೆ ಬಂದು ಈ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಮಾಡಿದೆ.ಶ್ರೀ ಹಾಲೇಶ್ವರ ಶರಣರು ಶ್ರೀ ಮಠದ ಸ್ಥಾಪಕರಾಗಿದ್ದು ಶ್ರೀ ಮಠವನ್ನುಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು 1944ರ ಏಪ್ರಿಲ್ 30 ರಂದು ಇದೇ ಪೇಠಾಆಲೂರಿನಲ್ಲಿ ಜನಿಸಿದವರಾಗಿದ್ದು ಭಾಲ್ಯದಿಂದಲೇ ಆಧ್ಯಾತ್ಮಿಕತೆಯನ್ನು ಮೈ ಗೂಡಿಸಿಕೊಂಡುಆಧ್ಯಾತ್ಮ ಚಿಂತಕರಾಗಿ ಹೆಸರು ಮಾಡಿದವರು. ಶ್ರೀಗಳು 1979ರ ಮೇ 09ರಂದು ಶ್ರೀಮಠದಅಧಿಕಾರಕ್ಕೆ ಬಂದು ಶ್ರೀಮಠದ ಅಭಿವೃದ್ದಿಗೆ ಕಾರಣರಾಗಿದ್ದಾರೆ.ಶ್ರೀಮಠವು ಹಾಲಸ್ವಾಮಿ ಪರಂಪರೆಗೆ ಸೇರಿದ ಮಠವಾಗಿದ್ದು ತನ್ನ ವಿಶಿಷ್ಟಧಾರ್ಮಿಕ ಆಚರಣೆಗಳಿಂದಾಗಿ ಗಮನ ಸೆಳೆದಿದೆ. ಶ್ರೀಗಳು ಶ್ರೀಮಠದಲ್ಲಿ ಪ್ರತಿ ತಿಂಗಳಿಗೊಮ್ಮೆಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಭಕ್ತರಲ್ಲಿ ಧಾರ್ಮಿಕಪ್ರಜ್ಞೆಯನ್ನು ಮೂಡಿಸುತ್ತ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಪ್ರಚುರಪಡಿಸುತ್ತಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿಯಲ್ಲಿವಿಶೇಷ ಪೂಜೆ ಜಾಗರಣೆ ಹಾಗೂ ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವಗಳನ್ನು ನಡೆಸುತ್ತಾಬಂದಿದ್ದಾರೆ. ಹಾಗೆಯೇ ದವನದ ಹುಣ್ಣಿಮೆಯಲ್ಲಿ 3 ದಿನಗಳ ಕಾಲ ಶ್ರೀ ಮಠದಜಾತ್ರೆಯನ್ನು ನಡೆಸುತ್ತಿದ್ದು ಅದರಲ್ಲಿ ಮುಳ್ಳು ಗದ್ದುಗೆ ಉತ್ಸವ, ಸಾಮೂಹಿಕ ವಿವಾಹಗಳಜೊತೆಯಲ್ಲಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಶ್ರೀಗಳು ಶಿಕ್ಷಣ ಪ್ರೇಮಿಗಳಾಗಿದ್ದು 1979ರಲ್ಲೇ ಶ್ರೀ ಹಾಲೇಶ್ವರ ವಿದ್ಯಾಪೀಠವನ್ನುಶ್ರೀ ಮಠದ ವತಿಯಿಂದ ಸ್ಥಾಪಿಸಿ ಅದರ ಮೂಲಕ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವಕಾಲೇಜು ಹಾಗೂ ಡಿ.ಎಡ್. ಕಾಲೇಜುಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಹಾಗೆಯೇಬಡ ಮಕ್ಕಳಿಗೆ ಶ್ರೀಮಠದಲ್ಲಿ ಆಶ್ರಯ ಕಲ್ಪಿಸಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ಹಾಲೇಶ್ವರ ಶರಣರು
Date of Birth :
30-04-1944
Place :
ಪೇಠಾ-ಆಲೂರು, ಮುಂಡರಗಿ ತಾ||
Pattadikara :
09-05-1979
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಿಗೆ ವಿಶೇಷ ಪೂಜೆ
ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ಜಾಗರಣೆ
ದವನದ ಹುಣ್ಣಿಮೆಗೆ ಶ್ರೀ ಮಠದ ಜಾತ್ರೆ (ಮೂರು ದಿನ) ಮುಳ್ಳು ಗದ್ದುಗೆ ರಥೋತ್ಸವ
ಮತ್ತು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು
ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ
Institutions
ಪೂರ್ವ / ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ
ಪದವಿ ಪೂರ್ವ / ಡಿ.ಎಡ್. ಕಾಲೇಜು
Photos
Full Address Kannada
ಶ್ರೀ ಹಾಲೇಶ್ವರ ಕೃಪಾ ಪೋಷಿತ ಶಿವಯೋಗಾಶ್ರಮ ಪೇಠಾ
ಆಲೂರು - 582 113
ಮುಂಡರಗಿ ತಾ||, ಗದಗ ಜಿಲ್ಲೆ