ಗದಗ ಜಿಲ್ಲೆಯ ನೀಲಗುಂದ ಗ್ರಾಮವು ಜಿಲ್ಲಾ ಕೇಂದ್ರದಿಂದ 25 ಕಿ.ಮೀ.ದೂರದಲ್ಲಿದ್ದು ಈ ಗ್ರಾಮದಲ್ಲಿ ಸುಮಾರು 80 ವರ್ಷಗಳ ಹಿಂದೆ ಪೂಜ್ಯ ಶ್ರೀ ಗುದ್ನೇಶ್ವರಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಗುದ್ನೇಶ್ವರ ಮಠವು ಅಸ್ತಿತ್ವದಲ್ಲಿದೆ.ಕರ್ತೃಗುರುಗಳಾದ ಶ್ರೀ ಗುದ್ನೇಶ್ವರ ಮಹಾಸ್ವಾಮಿಗಳು ಮಹಾಮಹಿಮರಾಗಿದ್ದು ಕೊಪ್ಪಳಜಿಲ್ಲೆಯ ಯಲಬುರ್ಗಾ ತಾಲ್ಲೂಕಿನಿಂದ ಸಂಚಾರ ಕೈಗೊಂಡು ಅಲ್ಲಲ್ಲಿ ಅನುಷ್ಠಾನಗೊಂಡುಕೊನೆಯಲ್ಲಿ ನೀಲಗುಂದ ಗ್ರಾಮಕ್ಕೆ ಬಂದು ನೆಲೆಸಿದರು. ಶ್ರೀಗಳು ಇಲ್ಲಿ ನೆಲೆನಿಂತ ಮೇಲೆಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಭಕ್ತರಿಗೆ ವೀರಶೈವ ಧರ್ಮದಆಚರಣೆಗಳ ಬಗ್ಗೆ ಪ್ರಚುರಗೊಳಿಸಿ ಶ್ರೀಮಠವನ್ನು ಮುನ್ನಡೆಸಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಯಲ್ಲಿಸಾಮಾಜಿಕವಾಗಿಯೂ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದಾರೆ. ಶರಣ ಸ್ಥಲದ ಶ್ರೀಮಠವುಧಾರ್ಮಿಕ ಆಚರಣೆಗಳಿಂದ ಹೆಚ್ಚು ಪ್ರಸಿದ್ದಿ ಪಡೆದು ಅಪಾರ ಭಕ್ತ ಸಂಪತ್ತನ್ನುಸಂಪಾದಿಸಿಕೊಂಡಿದ್ದು ಮಠದಲ್ಲಿ ಧಾರ್ಮಿಕ ಆಚರಣೆಗಳಿಗೆ ವ್ಯವಸ್ಥಿತವಾದ ಕಟ್ಟಡವನ್ನುನಿರ್ಮಿಸಿಕೊಂಡ ಶ್ರೀಗಳು ನಿತ್ಯ ದಾಸೋಹ ಕಾರ್ಯವನ್ನು ಕೈಗೊಂಡರು.ಈಗಿನ ಶ್ರೀಗಳಾದ ಪೂಜ್ಯ ಶ್ರೀ ಪ್ರಭು ಸ್ವಾಮಿಗಳು ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ನವಲಗುಂದ ತಾಲ್ಲೂಕಿನ ಅಣ್ಣಿಗೇರಿಗ್ರಾಮದವರಾಗಿದ್ದು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿ ಪಡಿಸುವತ್ತ ಗಮನಹರಿಸಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತಾ ಮುಂದುವರೆದಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗಳಲ್ಲಿವಿಶೇಷ ಪೂಜಾ ಕಾರ್ಯಕ್ರಮಗಳು ಜರುಗುತ್ತವೆ ಹಾಗೂ ಶಿವರಾತ್ರಿಯಂದು ವಿಶೇಷಧಾರ್ಮಿಕ ಆಚರಣೆಗಳು ನಡೆಯುತ್ತಿದ್ದು ಮೂರುದಿನಗಳ ಕಾಲ ಜಾಗರಣೆಕಾರ್ಯಕ್ರಮಗಳು ನಡೆಯುತ್ತಿವೆ. ಹಾಗೆಯೇ ಮಹಾನವಮಿಯಲ್ಲಿ ಒಂಬತ್ತು ದಿನಗಳ ಕಾಲವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೊಂಡಿರುತ್ತದೆ.
Swamiji
Swamiji Name :
ಪೂಜ್ಯ ಶ್ರೀ ಪ್ರಭು ಸ್ವಾಮಿಗಳು
Date of Birth :
02-01-1971
Place :
ಅಣ್ಣಿಗೇರಿ, ನವಲಗುಂದ ತಾ||
Photo :
Programs
ಕಿರಿಯ ಪ್ರಾಥಮಿಕ ಶಾಲೆ ಗೋಶಾಲೆ
Institutions
ಶಿವರಾತ್ರಿಯಂದು ವಿಶೇಷ ಪೂಜೆ ಮತ್ತು ಜಾಗರಣೆ (3 ದಿನ) ಮಹಾನವಮಿಯಲ್ಲಿ ಒಂಭತ್ತು ದಿನಗಳ ವಿಶೇಷ ಪೂಜೆ
Photos
Full Address Kannada
ಶ್ರೀ ಗುದ್ನೇಶ್ವರ ಮಠ
ನೀಲಗುಂದ - 582 117
ಗದಗ ತಾ||, ಜಿಲ್ಲೆ