Sukshetra Shree Veereshwara Punyashrama – Gadag

Sukshetra Shree Veereshwara Punyashrama – Gadag Claimed

ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ - ಗದಗ

Average Reviews

Description

ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ – ಗದಗ

ಕರ್ತೃ – ಶ್ರೀ ಮ.ನಿ.ಪ್ರ. ಹಾನಗಲ್ಲು ಕುಮಾರ ಮಹಾಸ್ವಾಮಿಗಳು

ಗದಗ ನಗರದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀ ವೀರೇಶ್ವರಪುಣ್ಯಾಶ್ರಮವು ನಾಡಿನ ಹಾಗೂ ನಾಡಿನಾಚೆಗೂ ತನ್ನ ಸಂಗೀತ, ಸಾಹಿತ್ಯ, ಧಾರ್ಮಿಕಮಹತ್ವದಿಂದ ಪ್ರಭಾವವನ್ನು ಬೀರಿ, ಕರ್ನಾಟಕದ ಸಾಂಸ್ಕøತಿಕ ಪರಂಪರೆಗೆ ತನ್ನದೇ ಆದಕೊಡುಗೆಯನ್ನು ನೀಡಿದೆ. ಶ್ರೀ ವೀರೇಶ್ವೇರ ಪುಣ್ಯಾಶ್ರಮವು 1942ರಲ್ಲಿ ಲಿಂ|| ಪಂಡಿತ ಶ್ರೀಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಸ್ಥಾಪಿತಗೊಂಡು ಇಡೀ ದೇಶಕ್ಕೆ ಸಂಗೀತಸುದೆಯನ್ನು ಹರಿಸುತ್ತಿರುವುದು ನಾಡಿಗೆ ಹೆಮ್ಮೆಯ ಸಂಗತಿ.ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮವು ಗುರುಕುಲ ಪದ್ಧತಿಯಲ್ಲಿ ಮಾನವನಸರ್ವಾಂಗೀಣ ಅಭಿವೃದ್ದಿಯ ಜೊತೆ ಭಾರತೀಯ ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡುಬಂದಿದೆ. ಸಂಗೀತ, ಸಾಹಿತ್ಯ, ಕೀರ್ತನ, ಪುರಾಣ ಪ್ರವಚನ, ಕನ್ನಡ, ಹಿಂದಿ, ಸಂಸ್ಕøತತರ್ಕಶಾಸ್ತ್ರಗಳ ಶಿಕ್ಷಣವನ್ನು ಉಚಿತವಾಗಿ ಅಂಧ – ಅನಾಥ, ವಿಕಲಾಂಗ ಮತ್ತು ಬಡಮಕ್ಕಳಿಗೆ ನೀಡುತ್ತಾ ಬಂದಿದೆ. ಆ ಮಕ್ಕಳಿಗೆ ಊಟ, ಬಟ್ಟೆ, ವಸತಿಯನ್ನು ಕಲ್ಪಿಸಿ ವಿದ್ಯಾಧಾನಮಾಡಿ ಸಮಾಜದಲ್ಲಿ ಉತ್ತಮ ನಾಗರೀಕರನ್ನಾಗಿ ಬೆಳೆಸಿ, ವಿದ್ಯಾವಂತರನ್ನಾಗಿ ಮಾಡಿಅಸಂಖ್ಯಾತ ಸಂಗೀತ ಕಲಾವಿದರನ್ನು ಕೀರ್ತನೆಕಾರರನ್ನು, ಪುರಾಣಿಕರನ್ನು ಕವಿಗಳನ್ನುರಂಗಭೂಮಿ ಕಲಾವಿದರನ್ನು ರಾಷ್ಟ್ರಕ್ಕೆ ನೀಡಿದ ಭಾರತದ ಏಕೈಕ ಆಶ್ರಮವಾಗಿದೆ.ಹಾನಗಲ್ಲು ಶ್ರೀ ಕುಮಾರ ಮಹಾಸ್ವಾಮಿಗಳ ಕೃಪಾಕಟಾಕ್ಷದಿಂದ ಅವರಮಾರ್ಗದರ್ಶನದಲ್ಲಿ ನುರಿತ ಸಂಗೀತಕಾರರಿಂದ ಸಂಗೀತವನ್ನು ಕಲಿತು ಮಹಾನ್ಸಂಗೀತಗಾರರಾಗಿ ರೂಪುಗೊಂಡವರು ಶ್ರೀ ಪಂಚಾಕ್ಷರಿ ಕವಿ ಗವಾಯಿಗಳವರು. ಇವರಪೂರ್ವ ನಾಮದೇಯ ಗದ್ದಿಗಯ್ಯ ಎಂಬುದಾಗಿದ್ದು ಶ್ರೀ ಪಂಚಾಕ್ಷರಿ ಗವಾಯಿಗಳೆಂದು ಶ್ರೀಹಾನಗಲ್ಲು ಕುಮಾರಸ್ವಾಮಿಗಳೇ ನಾಮಕರಣ ಮಾಡಿ ಸಂಗೀತಲೋಕಕ್ಕೆ ಒಪ್ಪಿಸಿದ ನಂತರಕಂಚಗಲ್ಲು – ಬಿದರೆಯ ಶ್ರೀ ಪ್ರಭುಕುಮಾರ ಸ್ವಾಮಿಗಳಿಂದ ಶಿವದೀಕ್ಷೆ ಪಡೆದುಲೋಕಸಂಚಾರ ಕೈಗೊಂಡು ಸಂಗೀತಸುಧೆಯನ್ನು ಹರಿಸುತ್ತಾ ಅಂದ ಮಕ್ಕಳ ಪಾಲಿನಆಶಾಕಿರಣರಾದರುಲಿಂ.ಪಂ. ಪಂಚಾಕ್ಷರ ಗವಾಯಿಗಳವರಿಂದ 1942ರಲ್ಲಿ ಸ್ಥಾಪನೆಯಾದ ಶ್ರೀವೀರೇಶ್ವರ ಪುಣ್ಯಾಶ್ರಮವು ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ದೂರದೃಷ್ಟಿಯಂತೆಸರ್ವಜಾತಿಯ ಅಂಧ – ಅನಾಥ ವಿಕಲಾಂಗ ಮತ್ತು ಬಡವರ ಬದುಕಿನದಾರಿದೀಪವಾಯಿತು. ಇದಕ್ಕಿಂತ ಪೂರ್ವದಲ್ಲಿ ಧಾರವಾಡ ಜಿಲ್ಲೆ ರೋಣ ತಾಲ್ಲೂಕುನಿಡಗುಂದಿ ಕೊಪ್ಪದಲ್ಲಿ ಕ್ರಿ.ಶ್ರ. 1914ರ ವೈಶಾಖ ಶುದ್ದ ಅಕ್ಷಯತದಗಿ ಬಸವ ಜಯಂತಿಯಶುಭ ಮುಹೂರ್ತದಲ್ಲಿ ಶ್ರೀ ಕುಮಾರ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ “ಶ್ರೀಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ಸಂಗೀತ ಸಾಹಿತ್ಯ 15ಮಹಾವಿದ್ಯಾಲಯವು” ಸ್ಥಾಪನೆಗೊಂಡು ನಾಡಿನ ಮೂಲೆ ಮೂಲೆಗಳಿಗೆ 25 ವರ್ಷಗಳಕಾಲ ಸಂಚರಿಸಿ ಸಂಗೀತ ಸಾಹಿತ್ಯ ಕಲೆಯ ಅನಾವರಣ ಪಡಿಸುತ್ತಾ 1942ರಲ್ಲಿ ಗದಗಿನಲ್ಲಿಸಮಸ್ತ ಸದ್ಬಕ್ತರ ಸಹಾಯ ಸಹಕಾರ ದಿಂದ ಶ್ರೀ ಪಂಚಾಕ್ಷರಿ ಗವಾಯಿಗಳವರ ನೇತೃತ್ವದಲ್ಲಿಸ್ಥಿರಗೊಂಡು ಅಂಧ – ಅಸಹಾಯಕ ಮಕ್ಕಳ ಜ್ಞಾನದೀವಿಗೆಯಾಗಿ ಪ್ರಜ್ವಲಿಸುತ್ತಾಮುಂದುವರೆದಿದೆ. ಹೀಗೆ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳೆಸಿದ ಶ್ರೀ ಪಂಚಾಕ್ಷರಿಗವಾಯಿಗಳವರು ಜೂನ್ 11, 1944ರಲ್ಲಿ ಪುಟ್ಟರಾಜ ಗವಾಯಿಗಳವರ ಹೆಸರಿಗೆಪುಣ್ಯಾಶ್ರಮವನ್ನು ವರ್ಗಾಯಿಸಿ “ನಮ್ಮಿಂದ ನಡೆದು ಬಂದ ವಿದ್ಯಾಧಾನ ರೂಪವಾದ ಈಸಮಾಜ ಸೇವೆಯನ್ನು ನಿಷ್ಠೆಯಿಂದ ಮುಂದುವರೆಸಬೇಕೆಂದು” ಅಪ್ಪಣೆ ನೀಡಿಲಿಂಗೈಕ್ಯರಾದರು.1944ರಲ್ಲಿ ಪುಣ್ಯಾಶ್ರಮದ ಅಧಿಕಾರವನ್ನು ಪಡೆದ ಶ್ರೀ ಪುಟ್ಟರಾಜ ಕವಿಗವಾಯಿಗಳವರು ತಮ್ಮ ಗುರುಗಳ ಅಪ್ಪಣೆಯಂತೆ, ಅವರ ಆಶಯದಂತೆ ಶ್ರೀ ಹಾನಗಲ್ಲುಕುಮಾರ ಶಿವಯೋಗಿಗಳ ಆಶೀರ್ವಾದಬಲದಿಂದ ಪುಣ್ಯಾಶ್ರಮವು ನಾಡಿನಾಚೆಗೂರಾಷ್ಟ್ರವ್ಯಾಪಿ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಗಳು 1914ರಮಾರ್ಚ್ 3 ರಲ್ಲಿ ಜನಿಸಿದವರಾಗಿದ್ದು ತಮ್ಮ ಗುರುಗಳಂತೆಯೇ ಹುಟ್ಟು ಅಂದತ್ವರಾಗಿದ್ದರೂತಮ್ಮ ಸಂಕಲ್ಪಬಲದಿಂದ, ಪಾಂಡಿತ್ಯದಿಂದ ಇಡೀ ಸಮಾಜದ ದೀವಿಗೆಯಾಗಿ ಬೆಳಗಿದವರು.ಪಂಡಿತ ಶ್ರೀ ಪುಟ್ಟರಾಜ ಗವಾಯಿಗಳವರು ಉಭಯ ಗಾನಾಚಾರ್ಯರೆಂದು ಹೆಸರುಪಡೆದವರಾಗಿದ್ದು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಪ್ರಕಾರಗಳಲ್ಲಿಯೂ ಪರಿಣಿತಿಪಡೆದು, ತಮ್ಮ ಗಾಯನದಿಂದ ಇಡೀ ರಾಷ್ಟ್ರದ ಶ್ರೋತೃಗಳ ಮನಗೆದ್ದವರು. ಹಾಗೆಯೇಅಖಿಲ ವಾದ್ಯಗಳನ್ನು ನುಡಿಸುವ ಚತುರತೆ, ಕನ್ನಡ, ಹಿಂದಿ, ಸಂಸ್ಕøತ ತ್ರಿಭಾಷೆಗಳಲ್ಲಿನೂರಾರು ಕೃತಿ ರಚನೆ ಕಥಾ ಕೀರ್ತನ, ಪುರಾಣ ಪ್ರವಚನ, ತರ್ಕಶಾಸ್ತ್ರ, ನ್ಯಾಯ ನಿಜಗುಣಶಾಸ್ತ್ರಗಳಲ್ಲಿಯೂ ಸಾಧನೆ ಮಾಡಿದವರು.ಇಂತಹ ಪಂಡಿತ ಶ್ರೀ ಪುಟರಾಜ ಗವಾಯಿಗಳವರು ತಮ್ಮ 97ನೇ ವಯಸ್ಸಿನಲ್ಲಿಲಿಂಗೈಕ್ಯರಾಗುವವರೆಗೂ ತಮ್ಮ ಕ್ರಿಯಾಶೀಲತೆಯಿಂದ 6 ದಶಕಗಳಿಗೂ ಹೆಚ್ಚು ಕಾಲ ಶ್ರೀವೀರೇಶ್ವರ ಪುಣ್ಯಾಶ್ರಮವನ್ನು ಅಭಿವೃದ್ದಿಗೊಳಿಸುತ್ತಾ, ಸಾವಿರಾರು ವಿದ್ಯಾರ್ಥಿಗಳವಿಧ್ಯಾರ್ಜನೆಗೆ ಸಹಕಾರ ನೀಡುತ್ತಾ ಮುಂದುವರೆದಿದ್ದು ಪ್ರಾತಃ ಸ್ಮರಣೀಯ. ಹಾಗೆಯೇ2000ಕ್ಕೂ ಹೆಚ್ಚು ತುಲಾಭಾರಗಳನ್ನು ಭಕ್ತರಿಂದ ಸ್ವೀಕರಿಸಿ ತುಲಾಭಾರ ಚಕ್ರವರ್ತಿಗಳಾಗಿಮೆರೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಗೂ ಪುಣ್ಯಾಶ್ರಮದಲ್ಲಿ “ಪಂಚಾಕ್ಷರಮುದ್ರಣಾಲಯ” ಸ್ಥಾಪಿಸಿ “ಪಂಚಾಕ್ಷರ ವಾಣಿ” ಎಂಬ ಕನ್ನಡ ಮಾಸ ಪತ್ರಿಕೆಯನ್ನು ಪ್ರಕಟಿಸಿನಾಡಿಗೆ ಕೊಡುಗೆ ನೀಡುವುದರೊಂದಿಗೆ ಭಾರತದಲ್ಲಿಯೇ ಅಂzs Àರೊಬ್ಬರುಪತ್ರಿಕೋಧ್ಯಮದಲ್ಲಿ ಸೇವೆಸಲ್ಲಿಸಿದ ದಾಖಲಾತ್ಮಕ ಚರಿತ್ರೆ ನಿರ್ಮಿಸಿದ್ದಾರೆ.16ಶ್ರೀ ಗವಾಯಿಗಳವರು ಗದಗಿನಲ್ಲಿ ಡಾ|| ಪುಟ್ಟರಾಜ ಗವಾಯಿಗಳವರ ಅಂಧರಶಿಕ್ಷಣ ಸಮಿತಿ ಸ್ಥಾಪಿಸಿ ಅದರ ಮೂಲಕ 14 ಶಾಲಾ ಕಾಲೇಜು, ವಸತಿ ನಿಲಯಗಳನ್ನುಸ್ಥಾಪಿಸಿ ಸಮರ್ಥವಾಗಿ ಮುನ್ನಡೆಸಿದ್ದಾರೆ. ಹಾಗೆಯೇ ದಾವಣಗೆರೆಯ ಸಮಸ್ತ ಸದ್ಬಕ್ತರಅಪೇಕ್ಷೆಯಂತೆ ದಾವಣಗೆರೆಯಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶಾಖೆಯನ್ನು ಸ್ಥಾಪಿಸಿಅಲ್ಲಿಯೂ ಅಂದ, ಅನಾಥ, ವಿಕಲಾಂಗ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ತ್ರಿವಿಧದಾಸೋಹ ಕಾರ್ಯ ಪ್ರಾರಂಬಿಸಿದರು.ಶ್ರೀಗಳಿಗೆ 2010ರಲ್ಲಿ ಭಾರತ ಘನ ಸರ್ಕಾರವು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿಗೌರವಿಸಿದೆ ಹಾಗೂ ಮದ್ಯಪ್ರದೇಶ ಸರ್ಕಾರದ ಅತ್ಯುನ್ನತ ಗೌರವ “ಕಾಳಿದಾಸ ಪ್ರಶಸ್ತಿ”,ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ “ಬಸವಶ್ರೀ ಪ್ರಶಸ್ತಿ”.ರಾಜ್ಯೋತ್ಸವ ಪ್ರಶಸ್ತಿ, ಟಿ. ಚೌಡಯ್ಯ ಪ್ರಶಸ್ತಿ ಮುಂತಾದ ನೂರಾರು ಗೌರವ ಸನ್ಮಾನಗಳುಶ್ರೀಗಳಿಗೆ ಹರಿದು ಬಂದಿವೆ. ಹಾಗೆಯೇ 1975ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ “ಗೌರವಡಾಕ್ಟರೇಟ್”, 1998ರಲ್ಲಿ ಹಂಪಿ ವಿಶ್ವವಿದ್ಯಾಲಯದ “ನಾಡೋಜ” ಪ್ರಶಸ್ತಿಗಳು ಸಂದಿರುವುದುಹೆಮ್ಮೆಯ ಸಂಗತಿ. ಶ್ರೀಗಳು ತಮ್ಮ 97 ವರ್ಷಗಳ ಕ್ರಿಯಾಶೀಲ ಜೀವನವನ್ನು 2010ರಲ್ಲಿಅಂತ್ಯಗೊಳಿಸಿ ಲಿಂಗೈಕ್ಯರಾದುದು ಭಕ್ತರಿಗೆ ಆಘಾತವನ್ನುಂಟು ಮಾಡಿತು. ನಂತರ ಪೂಜ್ಯಶ್ರೀ ಕಲ್ಲಯ್ಯ ಅಜ್ಜನವರು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ಸಮರ್ಥವಾಗಿಹಿಂದಿನ ಗುರುಗಳವರ ಆಶೀರ್ವಾದ ಬಲದಿಂದ ಸಮಸ್ತ ಸದ್ಬಕ್ತರ ಸಹಕಾರದೊಂದಿಗೆಮುನ್ನಡೆಸಿಕೊಂಡು ಬರುತ್ತಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸೆಗೆ ವಿಶೇಷಸಂಗೀತ ಕಾರ್ಯಕ್ರಮಗಳು ಹಾಗೂ ಪ್ರತಿ ವರ್ಷ ಮಾರ್ಚ್ 3ರಂದು ಲಿಂ. ಪಂಡಿತ ಶ್ರೀಗಾನಯೋಗಿ ಪುಟ್ಟರಾಜ ಗವಾಯಿಗಳವರ ಜಯಂತಿಯನ್ನು ಆಚರಿಸಿಕೊಂಡುಬರಲಾಗುತ್ತಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಲಿಂ. ಪಂಡಿತ ಶ್ರೀ ಪಂಚಾಕ್ಷರಿಗವಾಯಿಗಳವರ ಪುಣ್ಯಾರಾಧನೆ ಮಹೋತ್ಸವದ ಪ್ರಯುಕ್ತ ಅಹೋ ರಾತ್ರಿ 3 ದಿನಗಳ ಕಾಲಸಂಗೀತ ಜಾತ್ರೆಯೊಂದಿಗೆ ಒಟ್ಟು ಐದು ದಿನಗಳ ಕಾಲ ಜಾತ್ರಾ ಮಹೋತ್ಸವವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.

ವಿಶೇಷತೆ

ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರಿ

ಗವಾಯಿಗಳವರ ನಾಟ್ಯ ಸಂಘ

ಸಂಗೀತ, ಸಾಹಿತ್ಯ, ಕೀರ್ತನ, ರಂಗಭೂಮಿ ತರಬೇತಿ ಕೇಂದ್ರ

ಶ್ರೀ ಆಶ್ರಮದ ಪುಸ್ತಕ ಪ್ರಕಾಶನದಿಂದ “ಶ್ರೀ ಪಂಚಾಕ್ಷರವಾಣಿ”

ಮಾಸಿಕ ಪತ್ರಿಕೆಯ ಪ್ರಕಟಣೆ

Swamiji

Swamiji Name :
ಪಂ. ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿಗಳು
Date of Birth :
11-06-1944
Place :
ಕಾಡಶೆಟ್ಟಿಹಳ್ಳಿ, ಹಾನಗಲ್ ತಾ||
Photo :
Swamiji Name :
ಪಂ. ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿಗಳು
Date of Birth :
03-03-1944
Place :
ದೇವರಹೊಸಪೇಟೆ, ಹಾನಗಲ್ ತಾ||
Photo :
Swamiji Name :
ಪೂಜ್ಯ ಶ್ರೀ ಕಲ್ಲಯ್ಯ ಅಜ್ಜನವರು
Date of Birth :
01-06-1973
Place :
ಕಲ್ಲೂರು, ಯಲಬುರ್ಗಾ ತಾ||
Photo :

Programs

ಪ್ರತಿ ಅಮವಾಸೆಗೆ ವಿಶೇಷ ಸಂಗೀತ ಕಾರ್ಯಕ್ರಮಗಳು
ಮಾರ್ಚ್ ಮೂರರಂದು ಲಿಂ|| ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿಗಳ ಜಯಂತಿ
ಜೂನ್ ತಿಂಗಳಲ್ಲಿ ಲಿಂ|| ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯಾರಾಧನೆ
ಪ್ರಯುಕ್ತ ಆಹೋರಾತ್ರಿ 3 ದಿನಗಳ ಕಾಲ ಸಂಗೀತ ಜಾತ್ರೆ,
ಒಟ್ಟು ಐದು ದಿನ ಜಾತ್ರೆ ಜರಗುತ್ತದೆ.

Institutions

ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಮಹಾವಿದ್ಯಾಲಯ
ಕಲಾ ಮಹಾವಿದ್ಯಾಲಯ
ಸಂಗೀತ / ಸಂಸ್ಕøತ ಪಾಠಶಾಲೆ
ಡಿ.ಎಡ್., / ಶಿಕ್ಷಣ ಮಹಾವಿದ್ಯಾಲಯ
ಅಂದರ ವಸತಿಯುತ ವಿಶೇಷ ಸಂಗೀತಶಾಲೆ - ಗದಗ / ದಾವಣಗೆರೆ
ಮೆಟ್ರಿಕ್ ನಂತರದ / ಮೆಟ್ರಿಕೆ ಪೂರ್ವ ಅನುದಾನಿತ ವಸತಿ ನಿಲಯ

Photos

Full Address Kannada

ಸುಕ್ಷೇತ್ರ ಶ್ರೀ ವೀರೇಶ್ವರ ಪುಣ್ಯಾಶ್ರಮ
ಗದಗ - 582 102
ಗದಗ ತಾ||, ಗದಗ ಜಿಲ್ಲೆ

Map

Near by Places

ಹುಬ್ಬಳ್ಳಿ 50 ಕಿ.ಮೀ.
ಹಾವೇರಿ - 75 ಕಿ.ಮೀ.
ರೋಣ - 55 ಕಿ.ಮೀ.
ಶಿರಹಟ್ಟಿ - 35 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!