Shree Jagadguru Shivananda Brahanmatha

Shree Jagadguru Shivananda Brahanmatha Claimed

ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠ

Average Reviews

Description

ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠ

ಕರ್ತೃ – ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳು

ಗದಗ ನಗರದ ಮದ್ಯಭಾಗದಲ್ಲಿ ಸುಮಾರು 80 ವರ್ಷಗಳ ಹಿಂದೆಸ್ಥಾಪಿತಗೊಂಡಿರುವ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠವು ಇಂದು ತನ್ನ ಜ್ಯಾತಾತೀತಭಾವನೆಯಿಂದ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತಿರುವ ಮಹಾಕೇಂದ್ರವಾಗಿದೆ. ಜಗದ್ಗುರುಶ್ರೀ ಶಿವಾನಂದ ಮಹಾಸ್ವಾಮಿಗಳೆಂಬ ಮಹಾ ಆಧ್ಯಾತ ್ಮಯೋಗಿಯಿಂದಪ್ರಾರಂಭವಾಗಿದ್ದರಿಂದಾಗಿ ಶ್ರೀಮಠಕ್ಕೆ ಶ್ರೀ ಜಗದ್ಗುರು ಶಿವಾನಂದ ಬೃಹನ್ಮಠವೆಂಬ ಹೆಸರುಬಂದಿದೆ.ಕರ್ತೃಗುರುಗಳು ಗದಗ ಜಿಲ್ಲೆಯ ವನಿಹಾಳದಲ್ಲಿ ಜನ್ಮತಾಳಿದವರಾಗಿದ್ದು ತಮ್ಮಕುಟುಂಬಕೆ ್ಕ ಪರಂಪರಾಗತವಾಗಿ ಬಂದಿದ್ದ ಗೌಡಿಕೆಯನ್ನು ಸಮರ್ಥವಾಗಿನಿಭಾಯಿಸಿಕೊಂಡು ಎಲ್ಲರಂತೆಯೇ ಸಂಸಾರ ಬಂದನದಲ್ಲಿದ್ದವರು. ಹೀಗೆ ಸಂಸಾರಬಂದನದಲ್ಲಿದ್ದಾಗಲೇ ಆಧ್ಯಾತ್ಮಿಕತೆಯ ಕಡೆಗೆ ಒಲವು ಹೊಂದಿ ಆಧ್ಯಾತ್ಮವನ್ನುಮೈಗೂಡಿಸಿಕೊಂಡು ಸಂಸಾರವನ್ನು ತ್ಯಜಿಸಿ ಹೊರಬಂದ ಶ್ರೀಗಳು, ಮುಂದೆ ಬನಹಟ್ಟಿಯಶ್ರೀ ರುದ್ರದೇವ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸೇವೆ ಸಲ್ಲಿಸಿ ಆಧ್ಯಾತ್ಮ ಸಾಧನೆಮಾಡಿದರು.ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳಿಗೆ ಜೀವನದ ತಿರುವು ಸಿಕ್ಕಿದ್ದುಬನಹಟ್ಟಿಯಲ್ಲಿ. ಶ್ರೀಗಳು ಬನಹಟ್ಟಿಯಲ್ಲಿ ಆಧ್ಯಾತ್ಮ ಸಾಧನೆ ಮಾಡಿಕೊಂಡು ಲೌಕಿಕದಿಂದಪಾರಮಾರ್ಥದ ಅರ್ಥವನ್ನು ಕಲಿತು ಗುರುಕಾರುಣ್ಯಕ್ಕೆ ಪಾತ್ರರಾದರು. ಅಲ್ಲಿಂದಲೋಕಸಂಚಾರಕ್ಕೆ ಹೊರಟ ಶ್ರೀ ಶಿವಾನಂದ ಮಹಾಸ್ವಾಮಿಗಳು ತಮ್ಮದೇ ಆದ ಶಿವಾನಂದಪರಂಪರೆಯನ್ನು ಹುಟ್ಟುಹಾಕಿ ನಾಡಿನಗಲಕ್ಕೆ ಪಸರಿಸಿ ಶಿವಾನಂದ ಮಠಗಳ ಸ್ಥಾಪನೆಗೆಕಾರಣರಾದರು.ಹೀಗೆ ಲೋಕ ಸಂಚಾರ ಮಾಡುತ್ತಾ ಹೋದ ಕಡೆಗೆಲ್ಲಾ ಶಿವಾನಂದ ಮಠಗಳಸ್ಥಾಪನೆಗೆ ಕಾರಣವಾಗಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಾ ಗದಗ ನಗರಕ್ಕೆಬಂದರು. ಗದಗ ನಗರದ ಹೊರವಲಯದ ಪ್ರಶಾಂತ ಪರಿಸರದಲ್ಲಿ ನೆಲೆನಿಂತ ಗುರುಗಳುಭಕ್ತರಿಗೆ ಆಧ್ಯಾತ್ಮ ಭೋದಿಸಿ ಸಂಸ್ಕಾರ ನೀಡಿದರು. ಅಂದು ಗದಗದ ಹೊರಬಾಗದಲ್ಲಿಸ್ಥಾಪನೆಯಾಗಿದ್ದ ಈ ಮಠ ಇಂದು ನಗರ ಬೆಳೆದಂತೆ ಮಧ್ಯಭಾಗಕ್ಕೆ ಸೇರಿದೆ.ಶ್ರೀಗಳು ತಮ್ಮದೇ ಆದ ಆಧ್ಯಾತ್ಮಿಕತೆಯ ಪ್ರಭಾವಳಿಯಿಂದಾಗಿ ಸಕಲರನ್ನೂಜ್ಯಾತ್ಯಾತೀತವಾಗಿ ಉದ್ದರಿಸಿದರು, ದಿನದಿನಕ್ಕೆ ಶ್ರೀಗಳ ಪ್ರಸಿದ್ದಿಯಿಂದಾಗಿ ಮಠಕ್ಕೆ ಭಕ್ತರಹರಿಯುವಿಕೆ ಹೆಚ್ಚ ತೊಡಗಿ ಶ್ರೀಮಠವು ಅಭಿವೃದ್ಧಿಯ ಪಥದಡೆಗೆ ಮುನ್ನಡೆಯಿತು.ಶ್ರೀಗಳು ತಮ್ಮ ಕರಕಮಲಸಂಜಾತರಾದ ಶ್ರೀ ಸದಾಶಿವಾನಂದ ಮಹಾಸ್ವಾಮಿಗಳನ್ನುಅಧಿಕಾರಕ್ಕೆ ತಂದು ಮಾರ್ಗದರ್ಶನ ನೀಡಿ 1938ರಲ್ಲಿ ಲಿಂಗೈಕ್ಯರಾದರು.ಎರಡನೇ ಶ್ರೀಗಳಾದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳುಕಾಶಿಯಲ್ಲಿ ವಿದ್ಯಾಬ್ಯಾಸ ಮಾಡಿ ವಿದ್ವತ್ ಪದವಿಯನ್ನು ಗಳಿಸಿಕೊಂಡು ಬಂದವರಾಗಿದ್ದು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಧರ್ಮಭೋದನಾ ಸಾಮಥ್ರ್ಯವನ್ನು ಪಡೆದವರು.ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡು ತಮ್ಮ ಜ್ಯಾತಾತೀತ ನಿಲುವಿನಿಂದ, ಆದ್ಯಾತ್ಮದಪ್ರವಚನಗಳಿಂದ ಶ್ರೀ ಮಠವನ್ನು ಮುನ್ನಡೆಸಿದ್ದು ಸ್ವತಃ ಕಾಯಕಯೋಗಿಗಳಾಗಿ ಶ್ರೀ ಮಠದಜಮೀನನ್ನು ಅಭಿವೃದ್ದಿ ಪಡೆಸಿದರು. ಶ್ರೀಗಳು ವೇದಾಂತ ಕೇಸರಿಗಳೆಂದು ಹೆಸರುಪಡೆದವರಾಗಿದ್ದು ಮಠವನ್ನು ಬೆಳೆಸಿ 1970ರಲ್ಲಿ ಲಿಂಗೈಕ್ಯರಾಗಿದ್ದಾರೆ.ಇವರ ನಂತರ 1982ರ ಫೆಬ್ರವರಿ 8ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡಪೂಜ್ಯ ಶ್ರೀ ನಂದೀಶ್ವರ ಮಹಾಸ್ವಾಮಿಗಳು ತಮ್ಮ ವಿದ್ವತ್ ಪೂರ್ಣ ಉಪದೇಶಗಳಿಂದಹೆಸರಾದವರು. ಶ್ರೀಗಳು ಪುರಾಣ ಪ್ರವಚನಗಳನ್ನು ಸಮರ್ಥವಾಗಿ ನೀಡಬಲ್ಲವರಾಗಿದ್ದುನಾಡಿನ ಎಲ್ಲೆಡೆ ಅಪಾರ ಭಕ್ತ ಬಳಗವನ್ನು ಹೊಂದಿದ್ದರು. ಶ್ರೀಗಳ ಕಾಲದಲ್ಲಿ ಶ್ರೀಮಠವುಸರ್ವಾಂಗೀಣವಾಗಿ ಅಭಿವೃದ್ದಿಕೊಂಡು ಶ್ರೀಮಂತಗೊಂಡಿದೆ. ಶ್ರೀಗಳು ತಮ್ಮ ಧಾರ್ಮಿಕ,ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ದಿಯಿಂದಾಗಿ ಶ್ರೀಮಠದ ಕಾರ್ಯವ್ಯಾಪ್ತಿಯನ್ನುವಿಸ್ತರಿಸಿದರು.ಈಗಿನ ಶ್ರೀಗಳಾದ ಜಗದ್ಗುರು ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳುರಾಣೆಬೆನ್ನೂರಿನಲ್ಲಿ ಜನಿಸಿದವರಾಗಿದ್ದು ಗದಗ ನಗರದಲ್ಲಿ ಪದವಿ ಶಿಕ್ಷಣ ಪಡೆದು ನಂತರಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಮತ್ತು ಸಂಸ್ಕøತ ವಿಷಯಗಳಲ್ಲಿಸ್ನಾತಕೋತ್ತರ ಪದವಿ ಪಡೆದರು. 2000ದ ಮಾರ್ಚ್ 19ರಲ್ಲಿ ಶ್ರೀಮಠದ ಅಧಿಕಾರವಹಿಸಿಕೊಂಡ ಶ್ರೀಗಳು ತಮ್ಮ ಪ್ರಗತಿಪರ ವೈಚಾರಿಕ ಚಿಂತನೆಗಳ ಬಲದಿಂದ ಶ್ರೀಮಠವನ್ನುಸಾಮಾಜಿಕವಾಗಿ ಉನ್ನತೀಕರಿಸಿದ್ದಾರೆ. ಹಿಂದಿನ ಗುರುಗಳಂತೆಯೇ ಶ್ರೀಮಠದ ಧಾರ್ಮಿಕಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿರುವ ಶ್ರೀಗಳು ಶೈಕ್ಷಣಿಕವಾಗಿ ಶಾಲಾಕಾಲೇಜುಗಳ ಸ್ಥಾಪನೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಆ ಮುಖೇನ ಈ ಭಾಗದಬಡವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಕಾಶ ಕಲ್ಪಿಸುತ್ತಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳ ಜೊತೆಯಲ್ಲಿ ಶ್ರಾವಣ ಮಾಸ ಹಾಗೂವಿಶೇಷ ಸಂದರ್ಭಗಳಲ್ಲಿ ಪುರಾಣ ಪ್ರವಚನಗಳನ್ನು ಹೇಳಿಸಲಾಗುತ್ತದೆ. ಹಾಗೂ ಶ್ರಾವಣಮಾಸದಲ್ಲಿ ಕರ್ತೃಗುರುಗಳ ಪುಣ್ಯಾರಾಧನೆ, ಮಾಘ ಮಾಸದಲ್ಲಿ ಶ್ರೀ ದ್ವಿತೀಯಜಗದ್ಗುರುಗಳ ಪುಣ್ಯಾರಾಧನೆ, ಫಾಲ್ಗುಣ ಮಾಸದಲ್ಲಿ ಶ್ರೀ ತೃತೀಯ ಜಗದ್ಗುರುಗಳಪುಣ್ಯಾರಾಧನೆ ಮಹೋತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶಿವರಾತ್ರಿಯಲ್ಲಿಶ್ರೀಮಠದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗುತ್ತಿದ್ದು ಅಪಾರ ಸಂಖ್ಯೆಯಜನಸ್ತೋಮ ಸಾಕ್ಷಿಯಾಗುತ್ತದೆ.

Swamiji

Swamiji Name :
ಶ್ರೀಮದ್ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು
Date of Birth :
10-02-1947
Place :
ರಾಣೆಬೆನ್ನೂರು, ಹಾವೇರಿ ತಾ||
Pattadikara :
19-03-2000
Photo :

Programs

ಪ್ರತಿದಿನ ರುದ್ರಾಭಿಷೇಕ /
ಶಿವರಾತ್ರಿಗೆ ಶ್ರೀಮಠದ ಜಾತ್ರಾ ಮಹೋತ್ಸವ
ಮಾಘ ಮಾಸದಲ್ಲಿ ಶ್ರೀ ದ್ವಿತೀಯ ಜಗದ್ಗುರುಗಳ ಪುಣ್ಯಾರಾಧನೆ
ಪಾಲ್ಗುಣ ಮಾಸದಲ್ಲಿ ಶ್ರೀ ತೃತೀಯ ಜಗದ್ಗುರುಗಳ
ಪುಣ್ಯಾರಾಧನೆ ಮತ್ತು ಪ್ರಸ್ತುತ ಜಗದ್ಗುರುಗಳ ವಾರ್ಷಿಕೋತ್ಸವ
ಶ್ರಾವಣ ಮಾಸದಲ್ಲಿ ಕರ್ತೃ ಶ್ರೀ ಜಗದ್ಗುರು ಶಿವಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ
ಪ್ರಸ್ತುತ ಶ್ರೀಗಳು ನಂದೀಶ್ವರ ಮಠದಲ್ಲಿ ನವರಾತ್ರಿಗೆ ಪ್ರವಚನ ಮಾಡುತ್ತಾರೆ.

Institutions

ಸಂಸ್ಕøತ ವೇದ ಪಾಠಶಾಲೆ ಕಿರಿಯ ಪ್ರಾಥಮಿಕ / ಪ್ರೌಢಶಾಲೆ
ವಿದ್ಯಾರ್ಥಿನಿಯರ ವಸತಿ ನಿಲಯ
ಪದವಿಪೂರ್ವ ಕಾಲೇಜ್ ಆಯುರ್ವೇದ ಪದವಿ / ಸ್ನಾತಕೋತ್ತರ ಕಾಲೇಜ್

Photos

Full Address Kannada

ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠ
ಗದಗ - 582 102

Map

Near by Places

ಹುಬ್ಬಳ್ಳಿ - 50 ಕಿ.ಮೀ.
ಹಾವೇರಿ - 75 ಕಿ.ಮೀ.
ರೋಣ - 55 ಕಿ.ಮೀ.
ಶಿರಹಟ್ಟಿ - 35 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!