ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಕಡಕೋಳ ಗ್ರಾಮದ ಹೊರವಲಯದಲ್ಲಿಅಸ್ತಿತ್ವದಲ್ಲಿರುವ ಶ್ರೀ ಮಡಿವಾಳೇಶ್ವರ ಮಹಾಮಠವು 17ನೇ ಶತಮಾನದ ಅಂತ್ಯಭಾಗದಲ್ಲಿಪೂಜ್ಯ ಶ್ರೀ ಕಡಕೋಳ ಮಡಿವಾಳ ಶಿವಯೋಗಿಗಳಿಂದ ಸ್ಥಾಪಿತಗೊಂಡಿದ್ದು ಧಾರ್ಮಿಕ,ಸಾಮಾಜಿಕ ಹಾಗೂ ಶೈಕ್ತಣಿಕ ಪ್ರಗತಿಯನ್ನು ಸಾಧಿಸಿದೆ. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿರುವ ಶ್ರೀ ಮಠವು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಅಫಜಲಪುರ ತಾಲ್ಲೂಕಿನ ಬಿದನೂರು ಗ್ರಾಮದಲ್ಲಿ ಜನಿಸಿದ ಶ್ರೀಮಡಿವಾಳಶಿವಯೋಗಿಗಳು ಮುಂದೆ ಶಹಾಪುರ ತಾಲ್ಲೂಕಿನ ಅರುಳು ಗುಂಡಿಗಿ ಗ್ರಾಮದಲ್ಲಿ ನೆಲೆಸಿ ಶ್ರೀಶರಣಬಸವೇಶ್ವರರ ಅನುಗ್ರಹದಿಂದ ಶಿವಯೋಗಿಸಿದ್ದಿಯನ್ನು ಪಡೆದರು. ನಂತರ ಕಡಕೋಳಸಮೀಪದ ನದಿತೀರದ ಪ್ರದೇಶಕ್ಕೆ ಸಂಚಾರ ಬಂದು ಅನುಷ್ಠಾನದಲ್ಲಿ ನಿರತರಾಗುವ ಶ್ರೀಗಳುಇಲ್ಲಿಯೇ ಶ್ರೀಮಠವನ್ನು ಸ್ಥಾಪಿಸಿ ಶಿವಾನುಭವ ಗೋಷ್ಠಿಗಳ ಮೂಲಕ ಬಂದ ಭಕ್ತರಿಗೆಅನ್ನದಾಸೋಹ ಕಾರ್ಯವನ್ನು ಪ್ರಾರಂಭಿಸಿದರು. ಶ್ರೀ ಕಡಕೋಳ ಮಡಿವಾಳಶಿವಯೋಗಿಗಳು ಕರ್ನಾಟಕದ ಪ್ರಥಮ ತತ್ತ್ವಪದಕಾರರಲ್ಲಿ ಒಬ್ಬರು.ಈ ರೀತಿಯಾಗಿ ಕರ್ತೃಗುರುಗಳಿಂದ ಸದೃಢವಾಗಿ ಬೆಳೆದ ಮಠದಪರಂಪರೆಯಲ್ಲಿ ಅನೇಕ ಶಿವಯೋಗಿಗಳು ಅಧಿಕಾರ ನಡೆಸಿದ್ದು ಮಠವನ್ನುಸಮೃದ್ದಗೊಳಿಸಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ.ವೀರೇಶ್ವರ ಶಿವಯೋಗಿಗಳುಶ್ರೀಮಠವನ್ನು ಅಭಿವೃದ್ಧಿಪಡಿಸಿ 1989ರಲ್ಲಿ ಲಿಂಗೈಕ್ಯರಾದರು. ಶ್ರೀ ವೀರೇಶ್ವರ ಶಿವಯೋಗಿಗಳಐಕ್ಯಾ ನಂತರ ಈಗಿನ ಶ್ರೀಗಳಾದ ಶ್ರೀ.ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳುನೇಮಕವಾಗಿದ್ದು 1997ರ ಜೂನ್ 04ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದರು.ಶ್ರೀ.ಷ.ಬ್ರ. ರುದ್ರಮುನಿ ಶಿವಾಚಾರ್ಯರು ಕಾಶಿಯಲ್ಲಿ ಸಂಸ್ಕøತ ವೇದಗಳಅಧ್ಯಯನ ನಡೆಸಿದ ಪಂಡಿತರು. ಶ್ರೀಗಳು ಶ್ರೀಮಠಕ್ಕೆ ಬಂದಂದಿನಿಂದ ಶ್ರೀಮಠದಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶ್ರೀಗಳು ತಮ್ಮ ಕ್ರಿಯಾಶೀಲ ವ್ಯಕ್ತಿತ್ತ್ವದೊಂದಿಗೆಮಠವನ್ನು ಸಮಾಜಮುಖಿಯನ್ನಾಗಿ ಮಾಡಿ, ಆಚಾರ್ಯರ ಹಾಗೂ ಶರಣರ ತತ್ತ್ವಗಳನ್ನುನಾಡಿಗೆ ಪ್ರಚುರಪಡಿಸುತ್ತಿದ್ದಾರೆ. ಶ್ರೀಮಠದ ಶ್ರೀ ವೀರೇಶ್ವರ ಪ್ರಕಾಶನದಿಂದ ಈವರೆಗೂ11ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದ್ದು ಸಾಹಿತ್ಯ ಸೇವೆಯಲ್ಲಿ ಶ್ರೀಗಳುತೊಡಗಿಕೊಂಡಿದ್ದಾರೆ.
Swamiji
Swamiji Name :
ಶ್ರೀ.ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
12-08-1969
Place :
ತೆಲಗಬಾಳ, ಜೇವರ್ಗಿ ತಾ||
Pattadikara :
04-06-1997
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭಗೋಷ್ಠಿ, ಭಜನೆ
ಮಾರ್ಗಶಿರ ಬಹುಳ ಅಷ್ಟಮಿಗೆ ಶ್ರೀಮಠದ ರಥೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಚಿಣಮಗೇರಿ
ಶ್ರೀ ಮಹಾಂತ ಮಠಕ್ಕೆ ಪಾದಯಾತ್ರೆ
ಶಿವರಾತ್ರಿಗೆ ಶಿವಯೋಗ ಕಾರ್ಯಕ್ರಮ
ಗಣೇಶ ಚೌತಿ ಆಚರಣೆ
ಆಷಾಢ ಬಹುಳ ಅಷ್ಟಮಿಗೆ ಶ್ರೀ ಹಿರಿಯ ಗುರುಗಳ
ಪುಣ್ಯಾರಾಧ£
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮಡಿವಾಳೇಶ್ವರ ಮಹಾಮಠ
ಕಡಕೋಳ - 585 325
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ