ಕರ್ತೃ – ಲಿಂ. ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು
ರಾಯಚೂರು ಜಿˉÉ್ಲ ಸಿಂಧನೂರು ಪಟ್ಟಣದಲ್ಲಿ ಮಹಾ ತಪೋನಿಧಿಗಳಾದ ಶ್ರೀಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಕಲ್ಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿ ಧಾರ್ಮಿಕಪ್ರಜ್ಞೆಯನ್ನು ಮೂಡಿಸುತ್ತಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.ಸುಮಾರು 200 ವರ್ಷಗಳ ಹಿಂದೆ ಶ್ರೀ ಸಿದ್ಧಲಿಂಗ ಶಿವಾಚಾರ್ಯರು ˉÉೂೀಕಕˉÁ್ಯಣಾರ್ಥ ಸಂಚಾರಕ್ಕೆ ಹೊರಟು ನಾಡಿನಾದ್ಯಂತ ಸಂಚರಿಸಿ ಅಲ್ಲಲ್ಲಿ ಅನುಷ್ಠಾನಗೊಂಡುಆ ಸ್ಥಳಗಳನ್ನೆˉÁ್ಲ ಜಾಗೃತ ಸ್ಥಳಗಳನ್ನಾಗಿ ಮಾಡಿ ಸಿದ್ಧಿಯನ್ನು ಪಡೆದು ಸಿಂಧನೂರುಪಟ್ಟಣಕ್ಕೆ ಬಂದು ನೆˉÉನಿಲ್ಲುತ್ತಾರೆ. ಶ್ರೀಗಳು ಮಹಾತಪೋನಿಧಿಗಳಾಗಿದ್ದು ತಮ್ಮ ಅನುಷ್ಠಾನಬಲದಿಂದ, ಧಾರ್ಮಿಕ ಆಚರಣೆಗಳಿಂದ ಭಕ್ತರನ್ನು ಉದ್ಧರಿಸಿದ್ದರು. ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠಕ್ಕೆ ಕಲ್ಲಿನ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿದ್ದರಿಂದಾಗಿ ಶ್ರೀಮಠವನ್ನುಕಲ್ಮಠ ಎಂದು ಕರೆಯˉÁಗುತ್ತಿದೆ.ಶ್ರೀ ಸಿದ್ದಲಿಂಗ ಶಿವಾಚಾರ್ಯರು ಶ್ರೀಮಠವನ್ನು ಅಭಿವೃದ್ಧಿಪಡಿಸಿ ಮತ್ತೆ ˉÉೂೀಕಸಂಚಾರಕ್ಕೆ ಹೊರಟು ತಮ್ಮ ಮೂಲ ಮಠವಾದ ಪಗಡದಿನ್ನಿ ಮಠದಲ್ಲಿ ಲಿಂಗೈಕ್ಯರಾಗುತ್ತಾರೆ.ಇವರ ನಂತರ ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡ ಶ್ರೀ ಬಸವಲಿಂಗ ಶಿವಾಚಾರ್ಯಸ್ವಾಮಿಗಳು ಶ್ರೀಮಠದ ಪರಂಪರೆಯನ್ನು ಶ್ರೀಮಂತಗೊಳಿಸಿದ್ದು ವೀರಶೈವ ಧರ್ಮದಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಾ ಧಾರ್ಮಿಕ ಸಂಸ್ಕಾರ ನೀಡಿದ್ದಾರೆ. ಶ್ರೀಗಳುಅಷ್ಟಾವರಣ, ಪಂಚಾಚಾರ, ಸದಾಚಾರಗಳನ್ನು ತಮ್ಮ ಬದುಕಿನ ಒಂದು ಅಂಗವಾಗಿ ಮಾಡಿಕೊಂಡು ಭಕ್ತರ ಅಭಿˉÁಷೆಗಳನ್ನು ಈಡೇರಿಸುವ ಗುರುಗಳಾಗಿ 1920ರಲ್ಲಿ ಲಿಂಗೈಕ್ಯರಾದರು.ಶ್ರೀ ಬಸವಲಿಂಗ ಸ್ವಾಮಿಗಳ ನಂತರ ಸುಮಾರು 7 ದಶಕಗಳ ಕಾಲ ಖಾಲಿ ಉಳಿದಶ್ರೀಮಠಕ್ಕೆ 1988ರ ಮಾರ್ಚ್ 26ರಲ್ಲಿ ಪಟ್ಟಕ್ಕೆ ಬಂದವರು ಶ್ರೀ ಸಿದ್ದಲಿಂಗ ಶಿವಾಚಾರ್ಯಸ್ವಾಮಿಗಳು. ಶ್ರೀಗಳು ಅಧಿಕಾರಕ್ಕೆ ಬಂದ ಮೇˉÉ ಜೀರ್ಣಗೊಂಡಿದ್ದ ಮಠದ ಕಟ್ಟಡವನ್ನುಜೀರ್ಣಾಭಿವೃದ್ಧಿಗೊಳಿಸಿದರು. ಹಂತಹಂತವಾಗಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿ ಭಕ್ತರನ್ನು ಶ್ರೀಮಠಕ್ಕೆ ಸೆಳೆದರು. ಶ್ರೀಮಠದ ಆಸ್ತಿಯನ್ನು ಶಿಸ್ತುಬದ್ಧಗೊಳಿಸಿ ತನ್ಮೂಲಕಶ್ರೀಮಠವು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಪರಿವರ್ತಿಸಿ ಅಭಿವೃದ್ಧಿಗೊಳಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
1963
Place :
ಸಿಂಧನೂರು, ಸಿಂಧನೂರು ತಾ||
Pattadikara :
26-3-1998
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ. ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ನಿತ್ಯ ಪುರಾಣ ಪ್ರವಚನ. ಶಾª್ರÀಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.
Photos
Full Address Kannada
ಶ್ರೀ ಕಲ್ಮಠ ಸಿಂಧನೂರು - 584 128 ಸಿಂಧನೂರು ತಾ||, ರಾಯಚೂರು ಜಿ||