ಕರ್ತೃ – ಶ್ರೀ ಷ.ಬ್ರ. ಕಪಿಲ ಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು
ರಾಯಚೂರು ಜಿˉÉ್ಲ ಸಿಂಧನೂರು ತಾಲ್ಲೂಕಿನ ರೌಡಕುಂದಾ ಗ್ರಾಮವು ತಾಲ್ಲೂಕುಕೇಂದ್ರದಿಂದ 15ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಕರ್ತೃ ಶ್ರೀ ಷ.ಬ್ರ. ಕಪಿಲಸಿದ್ಧಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಮದ್ ಉಜ್ಜಯಿನಿ ಶಾಖಾಸ್ವತಂತ್ರ ಪುತ್ರವರ್ಗ ಸ್ಥಿರ-ಚರ ಪಟ್ಟಾಧಿಕಾರವುಳ್ಳ ಶ್ರೀ ಸಂಸ್ಥಾನ ಹಿರೇಮಠವು ತನ್ನಪುರಾತನ ಪರಂಪರೆಯಿಂದಾಗಿ ಹಾಗೂ ಧಾರ್ಮಿಕ ಆಚರಣೆಗಳಿಂದಾಗಿ ಈ ಭಾಗದಲ್ಲಿಪ್ರಚಲಿತಕ್ಕೆ ಬಂದಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.ಸುಮಾರು 650 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಸಂಸ್ಥಾನ ಹಿರೇಮಠವುಅಂದಿನಿಂದ ಇಂದಿನವರೆಗೂ ಈ ಭಾಗದ ಪ್ರಮುಖ ಮಠವಾಗಿ ಗುರುತಿಸಿಕೊಂಡಿದೆ.ಕರ್ತೃಗುರುಗಳಾದ ಶ್ರೀ ಕಪಿಲಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು ಪವಾಡ ಪುರುಷರಾಗಿದ್ದು ತಮ್ಮ ಆಧ್ಯಾತ್ಮ ಸಾಧನೆಯಿಂದ ಹಾಗೂ ಪವಾಡಗಳಿಂದಾಗಿ ಭಕ್ತರನ್ನುದ್ಧರಿಸಿದ್ದಾರೆ.ಶ್ರೀಗಳು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಮುನ್ನಡೆಸಿದ್ದು ಶ್ರೀಗಳ ಬಗೆಗೆಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಾಗಿವೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಇದುವರೆಗೂ 12 ಜನ ಶ್ರೀಗಳುಅಧಿಕಾರ ನಡೆಸಿರಬಹುದೆಂದು ಹೇಳˉÁಗಿದ್ದು ಅದಕ್ಕೆ ದಾಖˉÉಗಳ ಅಲಭ್ಯತೆ ಇದೆ.ಶ್ರೀಮಠದಲ್ಲಿರುವ ಗದ್ದುಗೆಗಳ ಆಧಾರದ ಮೇˉÉ ಆರು ಜನ ಶ್ರೀಗಳನ್ನು ಗುರುತಿಸˉÁಗಿದ್ದುಇನ್ನುಳಿದ ಶ್ರೀಗಳು ಬಹುಶಃ ಸಂಚಾರ ಹೋದಾಗ ಅಲ್ಲˉÉ್ಲೀ ಶಾಖಾ ಮಠಗಳಲ್ಲಿ ಲಿಂಗೈಕ್ಯರಾಗಿರಬಹುದೆಂದು ಹೇಳಬಹುದು. ಆದರೆ ಆ ಗದ್ದುಗೆಗಳು ಎಲ್ಲಿವೆ ಎಂಬುದರ ಬಗ್ಗೆಸಂಶೋಧನೆ ನಡೆಸಬೇಕಿದೆ.ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಹಿಂದಿನ ಶ್ರೀಗಳಾದ ಲಿಂ. ಶ್ರೀಗುರುಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳ ಪೂರ್ವದಲ್ಲಿ ಶ್ರೀಮಠವು ಸ್ಥಿರ ಮತ್ತುಚರ ಪಟ್ಟಾಧ್ಯಕ್ಷರು ಎಂಬ ಇಬ್ಬರು ಗುರುಗಳನ್ನು ಹೊಂದಿತ್ತು. ಅವರೇ ಸ್ಥಿರ ಪಟ್ಟಾಧ್ಯಕ್ಷರಾದಶ್ರೀ ಷ.ಬ್ರ. ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚರ ಪಟ್ಟಾಧ್ಯಕ್ಷರಾದ ಶ್ರೀಷ.ಬ್ರ. ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು.ಸ್ಥಿರಪಟ್ಟಾಧ್ಯಕ್ಷರಾದ ಶ್ರೀ ಸಿದ್ಧರಾಮ ಶಿವಾಚಾರ್ಯರು ಪ್ರಕಾಂಡ ಕಾಶಿಪಂಡಿತರು. ಶ್ರೀಗಳು ಆಗಿನ ಕಾಲದಲ್ಲಿಯೇ ತಮ್ಮ ಪ್ರಗತಿಪರ ಹಾಗೂ ವೈಚಾರಿಕಚಿಂತನಧಾರೆಯಿಂದ ಹೆಸರಾದವರು. ಶ್ರೀಗಳು ಸುಮಾರು 20 ವರ್ಷಗಳಿಗೂ ಅಧಿಕ ಕಾಲಕಾಶಿಯಲ್ಲಿ ಅಧ್ಯಯನ ಮಾಡಿ ನಾನಾ ವಿಷಯಗಳಲ್ಲಿ ಪಾಂಡಿತ್ಯ ಸಂಪಾದಿಸಿದವರು.ಶ್ರೀಗಳು ಕನ್ನಡ, ಸಂಸ್ಕøತ, ಹಿಂದಿ ಸೇರಿದಂತೆ ಐದು ಭಾಷೆಗಳನ್ನು ಬಲ್ಲವರಾಗಿದ್ದು ನಾಲ್ಕುಭಾಷೆಗಳಲ್ಲಿ 18 ಪುರಾಣಗಳನ್ನು ರಚಿಸಿದ ಕವಿಪುಂಗವರು. ಇವರ ಕೆಲವು ಪುರಾಣಗಳುಅಲ್ಲೀಪುರ ಮಹಾದೇವ ತಾತನವರ ಪುರಾಣ, ದೇವಾಂಗ ಪುರಾಣ, ಕನಕದಾಸ ಪುರಾಣ,ಮುಸ್ಟೂರು ನಾಗಲಿಂಗಲೀˉÉ ಪುರಾಣ ಇನ್ನೂ ಮುಂತಾದವುಗಳು. ಶ್ರೀಗಳು ಶ್ರೀಮಠದಸ್ಥಿರ ಪಟ್ಟಾಧ್ಯಕ್ಷರಾಗಿ ಅಧಿಕಾರ ನಡೆಸಿ ಸುತ್ತಮುತ್ತಲಿನಲ್ಲಿ ತಮ್ಮ ಆಚರಣೆಗಳ ಮೂಲಕಪ್ರಸಿದ್ಧಿಗೊಂಡು ನಂತರ ತಮ್ಮ ಮಧ್ಯ ವಯಸ್ಸಿನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿ ಪಟ್ಟವನ್ನುತ್ಯಜಿಸುತ್ತಾರೆ. ಆನಂತರ ಶ್ರೀಗಳು ತಮ್ಮ ಹೆಸರನ್ನು ಶ್ರೀ ಪ್ರಭಾನಂದ ಪಂಡಿತರು ಎಂದುಕರೆದುಕೊಂಡು ಅತಿ ಆಸ್ಥೆಯಿಂದ ‘ಮುಕ್ತಿ ದರ್ಶನ’ ಎಂಬ ವೈಚಾರಿಕ ಗ್ರಂಥವನ್ನುರಚಿಸುತ್ತಾರೆ. ಈ ಗ್ರಂಥವು ಶ್ರೀಗಳಿಗೆ ಅವರ ರಚಿತ ಕೃತಿಗಳಲ್ಲಿ ಬಹು ಪ್ರಿಯವಾದ ಗ್ರಂಥ.ಆದರೆ ಈ ಗ್ರಂಥದ ಕಾರಣದಿಂದಾಗಿಯೇ ಶ್ರೀಗಳು ಬಹಳ ವಿವಾದಕ್ಕೆ ಒಳಪಡಬೇಕಾಗುತ್ತದೆ.ಈ ಗ್ರಂಥವು ಪ್ರಸ್ತುತ ನಮ್ಮ ಧಾರ್ಮಿಕ ತಿಳುವಳಿಕೆಯನ್ನು ಚಿಂತನೆಗೆ ಒಳಪಡಿಸುವಂತಹಗ್ರಂಥವಾಗಿದ್ದು ಇದೀಗ ಆಂಗ್ಲ ಭಾಷೆಯಲ್ಲಿ ತರ್ಜುಮೆಗೊಳ್ಳುತ್ತಿದೆ.ಹೀಗೆ ತಮ್ಮ ಆಧ್ಯಾತ್ಮಿಕ, ಸಾಹಿತ್ಯಿಕ ˉÉೂೀಕದ ಸಾಧನೆಯಿಂದಾಗಿ ಹೆಚ್ಚು ಹೆಸರಾದಶ್ರೀಗಳಿಗೆ ಕರ್ನಾಟಕದ ಆಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ವೀರೇಂದ್ರ ಪಾಟೀಲರುಸರ್ಕಾರದ ಪರವಾಗಿ ವೈಚಾರಿಕ ಚಿಂತನಾ ಸಾಹಿತಿ ಎಂಬ ಬಿರುದು ನೀಡಿ ಗೌರವಿಸಿರುವುದುಅವರ ವೈಚಾರಿಕ ಚಿಂತನೆಗಳಿಗೆ ಸಿಕ್ಕ ಪ್ರತಿಫಲ ಎಂದರೆ ತಪ್ಪಾಗˉÁರದು.ಚರ ಪಟ್ಟಾಧ್ಯಕ್ಷರಾದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತ್ರಿಕಾಲಪೂಜಾ ನಿಷ್ಠರೂ ಆಗಿದ್ದು, ತಮ್ಮ ಪುರಾಣ ಪ್ರವಚನ ಕˉÉಯಿಂದ ಸುತ್ತಮುತ್ತಲಿನಲ್ಲಿಪ್ರಸಿದ್ಧಿಗೊಂಡಿದ್ದರು. ಶ್ರೀಗಳು ಹೆಚ್ಚಾಗಿ ಶ್ರೀಮಠದˉÉ್ಲೀ ಪುರಾಣ ಪ್ರವಚನಗಳನ್ನು ನಡೆಸುತ್ತಾಭಕ್ತರ ಧಾರ್ಮಿಕ ಹಸಿವನ್ನು ನೀಗಿಸುತ್ತಿದ್ದರು. ಇಂತಹ ಮಹಾನ್ ಶ್ರೀಗಳು ಶ್ರೀಮದ್ಉಜ್ಜಯಿನಿ ಪೀಠದ ಜ್ಞಾನಗುರು ವಿದ್ಯಾಪೀಠ ಸಂಸ್ಥೆಯ ಸದಸ್ಯರಾಗಿದ್ದರು. ಇವರಕಾˉÁನಂತರ ಶ್ರೀಮಠದಲ್ಲಿ ಸ್ಥಿರ ಹಾಗೂ ಚರ ಪಟ್ಟಾಧ್ಯಕ್ಷರು ಒಬ್ಬರೇ ಆಗಿಮುಂದುವರೆದುಕೊಂಡು ಬರುವ ಸಂಪ್ರದಾಯ ಬೆಳೆದು ಬಂದಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠದ ಪಟ್ಟಕ್ಕೆ ಬಂದ ಕೆಲವರ್ಷಗಳಲ್ಲಿಯೇ ಮಹತ್ತಾದ ಸಾಧನೆ ಮಾಡಿದವರು.1986ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳೊಂದಿಗೆ ಸಾಮಾಜಿಕ ಚಟುವಟಿಕೆಗಳಿಂದಲೂ ಹೆಸರು ಮಾಡಿದ್ದು ಭಕ್ತರಿಗೆಸನ್ಮಾರ್ಗ ತೋರಿದ್ದಾರೆ. ತಮ್ಮ ಅನುಷ್ಠಾನಗಳಿಂದ ಭಕ್ತರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದ ಶ್ರೀಗಳ ಧಾರ್ಮಿಕ ಪ್ರಭೆಗೆ ಸಾಗರೋಪಾದಿಯಲ್ಲಿ ಭಕ್ತರು ಶ್ರೀಮಠಕ್ಕೆ ಹರಿದುಬಂದರು. ಶ್ರೀಗಳು ಮಹಾ ತಪಸ್ವಿಗಳು, ಇವರು ಕೇವಲ ತಮ್ಮ 18ನೇ ವಯಸ್ಸಿನಲ್ಲಿಯೇಶ್ರೀಮಠದ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡು ಯಾರ ಸಹಾಯವನ್ನೂಅಪೇಕ್ಷಿಸದೇ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಶ್ರಮಿಸಿಯಶಸ್ವಿಯಾಗಿದ್ದರು. ಶ್ರೀಗಳು ತಮ್ಮ ಅನುಷ್ಠಾನ ಸಿದ್ಧಿಯಿಂದ ಹಾಗೂ ತಮ್ಮ ತೇಜಸ್ಸಿನಿಂದಈ ಭಾಗದಲ್ಲಿ ಅತಿ ಹೆಚ್ಚು ಪ್ರಭಾವಯುತವಾಗಿ ಬೆಳೆದಿದ್ದು ಶ್ರೀಮಠದ ಕೀರ್ತಿಯನ್ನುನಾಡಿನುದ್ದಗಲಕ್ಕೂ ಪಸರಿಸಿದ್ದರು. ಶ್ರೀಗಳ ಸಾಧನೆಗಳನ್ನು ಗುರುತಿಸಿ ಶ್ರೀಗಳಿಗೆ ಶ್ರೀಮದ್ರಂಭಾಪುರಿ ಪೀಠ ನೀಡುವ ‘ಆಚಾರ್ಯರತ್ನ ಬೋಧಕ’ ಹಾಗೂ ‘ಶಿವಾಚಾರ್ಯ ರತ್ನ’ಬಿರುದುಗಳನ್ನು ನೀಡಿ ಗೌರವಿಸˉÁಗಿದೆ. ಇಂತಹ ಕ್ರಿಯಾಶೀಲ ಶ್ರೀಗಳು ತಮ್ಮ 36ರಪ್ರಾಯದಲ್ಲಿಯೇ 2003ರ ಜನವರಿ 16ರಲ್ಲಿ ಲಿಂಗೈಕ್ಯರಾದುದು ತುಂಬˉÁರದ ನಷ್ಟ.ಹಿಂದಿನ ಶ್ರೀಗಳು ಲಿಂಗೈಕ್ಯರಾದ ದಿನವೇ ಭಕ್ತರ ಸಭೆ ಕರೆದ ಶ್ರೀಮದ್ರಂಭಾಪುರಿ ಜಗದ್ಗುರುಗಳು ಭಕ್ತರೊಂದಿಗೆ ಚರ್ಚಿಸಿ ಅಂದೇ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಮರಿಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳಾಗಿ ನೇಮಿಸಿದರು.ಶ್ರೀಗಳು ಶ್ರೀಮಠಕ್ಕೆ ಬಂದು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಶ್ರೀಮಠವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ದರು. 2005ರಲ್ಲಿ ಬೃಹತ್ ಮಹಾರುದ್ರಯಾಗ(ರಾಜ್ಯಮಟ್ಟದ) ಹಮ್ಮಿಕೊಂಡು ಆ ಕಾರ್ಯಕ್ರಮಕ್ಕೆ ಶ್ರೀಮದ್ ಕಾಶಿ ಜಗದ್ಗುರುಗಳನ್ನುಕರೆಯಿಸಿ ಅವರಿಂದ ಪ್ರವಚನ ಮಾಡಿಸಿದ ಕೀರ್ತಿ ಈಗಿನ ಶ್ರೀಗಳದ್ದು. ಆನಂತರ 2007ರಮೇ 11ರಂದು ಶ್ರೀಮದ್ ರಂಭಾಪುರಿ ಜಗದ್ಗುರುಗಳು ಹಾಗೂ ಶ್ರೀಮದ್ ಉಜ್ಜಯಿನಿಜಗದ್ಗುರುಗಳ ಸಾನಿಧ್ಯದಲ್ಲಿ, ಹಾಗೂ ಸಿಂಧಗಿ ತಾಲ್ಲೂಕಿನ ಕನ್ನೋಳಿ ಶ್ರೀಮಠದ ಶತಾಯುಷಿಪಟ್ಟಾಧ್ಯಕ್ಷರಿಂದ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ ಶ್ರೀಗಳು ಇನ್ನೂ ಹೆಚ್ಚಿನಕ್ರಿಯಾಶೀಲತೆಯಿಂದ ಮುಂದುವರೆದಿದ್ದಾರೆ.ಶ್ರೀಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಸಂಚಾರ ಹೋಗಿ ಧರ್ಮ ಪ್ರಚಾರಮಾಡುತ್ತಾ ವೀರಶೈವ ಧರ್ಮದ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.ಶ್ರೀಮಠದಲ್ಲಿ ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ವೀರಶೈವ ಧರ್ಮದಆಚರಣೆಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಇವರ ಅಭಿವೃದ್ಧಿ ಹಾಗೂ ಧಾರ್ಮಿಕಕಾರ್ಯಕ್ರಮಗಳನ್ನು ಕಂಡ ಶ್ರೀಮದ್ ಕಾಶಿ ಜಗದ್ಗುರುಗಳು ಇವರ ಅಭಿವೃದ್ಧಿಕಾರ್ಯಗಳನ್ನು ಕಂಡು ಅಭಿನಂದಿಸಿದ್ದಾರೆ. ಶ್ರೀಗಳು 2015ರಲ್ಲಿ ಮತ್ತೊಮ್ಮೆ ರಾಜ್ಯಮಟ್ಟದಮಹಾರುದ್ರಯಾಗವನ್ನು ಹಮ್ಮಿಕೊಂಡು ಆ ಕಾರ್ಯಕ್ರಮಕ್ಕೆ ಶ್ರೀಶೈಲ ಜಗದ್ಗುರುಗಳನ್ನುಕರೆಯಿಸಿ ಅವರಿಂದ ಪ್ರವಚನ ಮಾಡಿಸಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಇವರ ಈಸಾಧನೆಗಳಿಗೆ ‘ಶಿವಾಚಾರ್ಯ ರತ್ನ’ ಹಾಗೂ ‘ವೃತ್ತಿಶ್ಚ ಚೈತನ್ಯ ರತ್ನ’ ಗಳೆಂಬ ಗೌರವಗಳುಸಂದಿವೆ. ಶ್ರೀಗಳು ತಮ್ಮ ಅˉÁ್ಪವಧಿಯಲ್ಲಿಯೇ ಅಗಾಧವಾದುದನ್ನು ಸಾಧಿಸಿದ್ದುಪಂಚಪೀಠಗಳ ಜಗದ್ಗುರುಗಳೆಲ್ಲರೂ ಶ್ರೀಮಠಕ್ಕೆ ಆಗಮಿಸಿ ಶ್ರೀಗಳನ್ನು ಆಶೀರ್ವದಿಸಿರುವುದುಮಹತ್ವದ ಸಂಗತಿ.ಶ್ರೀಮಠದಲ್ಲಿ ಕರ್ತೃಗುರುಗಳಾದ ಶ್ರೀ ಷ.ಬ್ರ. ಕಪಿಲಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮಠದ ಪರಂಪರೆಯಲ್ಲಿ ಬಂದಿರುವ ಶ್ರೀ ಷ.ಬ್ರ.ಮರುಳಸಿದ್ಧ ಶಿವಾಚಾರ್ಯಮಹಾಸ್ವಾಮಿಗಳು, ಶ್ರೀ ಷ.ಬ್ರ. ಪಂಚಾಕ್ಷರಿ ಶಿವಾಚಾರ್ಯ ಮುಹಾಸ್ವಾಮಿಗಳು, ಶ್ರೀ ಷ.ಬ್ರ.ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯಮಹಾಸ್ವಾಮಿಗಳು ಹಾಗೂ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗುರುಸಿದ್ಧರಾಮ ಶಿವಾಚಾರ್ಯಮಹಾಸ್ವಾಮಿಗಳ ಗದ್ದುಗೆಗಳು ಕಾಣಸಿಗುತ್ತಿದ್ದು ನಿತ್ಯಪೂಜೆಗೆ ಒಳಪಟ್ಟಿವೆ.ಶ್ರೀಗಳು ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿನಿತ್ಯ ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ.ಶಿವರಾತ್ರಿಯಲ್ಲಿ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮವನ್ನು ನಡೆಸಿ ಜನರಲ್ಲಿ ಇಷ್ಟಲಿಂಗದಬಗೆಗೆ ಅರಿವನ್ನು ಮೂಡಿಸುತ್ತಾರೆ. ಹಾಗೂ ಪುಷ್ಯಮಾಸದ ಶುದ್ಧ ತ್ರಯೋದಶಿಯಂದುಲಿಂ. ಶ್ರೀ ಷ.ಬ್ರ. ಗುರುಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೋತ್ಸವಕಾರ್ಯಕ್ರಮವನ್ನು ಹಮ್ಮಿಕೊಂಡು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನುನಡೆಸಿಕೊಡುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ಮರಿಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
11-10-1978
Place :
ರೌಡಕುಂದಾ, ಸಿಂಧನೂರು ತಾ||
Pattadikara :
11-5-2007
Photo :
Programs
¥ತಿÀ್ರ ಹುಣ್ಣಿಮೆ, ಅಮವಾಸ್ಯೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿವಿಧ ಕಾರ್ಯಕ್ರಮಗಳು. ಪುಷ್ಯ ಮಾಸದ ಶುದ್ಧ ತ್ರಯೋದಶಿಯಂದು (ಜನವರಿ) ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಶಿವರಾತ್ರಿಗೆ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ.
Institutions
ವೇದ ಪಾಠಶಾˉÉ. ವಿದ್ಯಾರ್ಥಿ ನಿಲಯ.
Photos
Full Address Kannada
ಶ್ರೀ ಸಂಸ್ಥಾನ ಹಿರೇಮಠ ರೌಡಕುಂದಾ- 584 128 ಸಿಂಧನೂರು ತಾ||, ರಾಯಚೂರು ಜಿ||