Shree Suvarnagiri Virakta Matha

Shree Suvarnagiri Virakta Matha Claimed

ಶ್ರೀ ಸುವರ್ಣಗಿರಿ ವಿರಕ್ತಮಠ

Average Reviews

Description

ಶ್ರೀ ಸುವರ್ಣಗಿರಿ ವಿರಕ್ತಮಠ

ಕರ್ತೃ – ಶ್ರೀ ಮ.ನಿ.ಪ್ರ. ಶಾಂತಮಲ್ಲ ಮಹಾಸ್ವಾಮಿಗಳು

ರಾಯಚೂರು ಜಿˉÉ್ಲ ಸಿಂಧನೂರು ತಾಲ್ಲೂಕಿನ ಒಳಬಳ್ಳಾರಿ ಗ್ರಾಮದಲ್ಲಿ ಸುಮಾರು15ನೇ ಶತಮಾನದಲ್ಲಿ ಶ್ರೀ ಮ.ನಿ.ಪ್ರ. ಶಾಂತಮಲ್ಲ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಸುವರ್ಣಗಿರಿ ವಿರಕ್ತ ಮಠವು ತನ್ನ ಧಾರ್ಮಿಕ, ಸಾಮಾಜಿಕ ಹಾಗೂಸಾಂಸ್ಕøತಿಕ ಕಾರ್ಯಕ್ರಮಗಳಿಂದಾಗಿ ಈ ಭಾಗದಲ್ಲಿ ಮನೆಮಾತಾಗಿದೆ.ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ಶಾಂತಮಲ್ಲ ಮಹಾಸ್ವಾಮಿಗಳು ಮಹಾಮಹಿಮಪುರುಷರಾಗಿದ್ದು ಸಂಚಾರದಲ್ಲಿದ್ದಾಗ ಒಳಬಳ್ಳಾರಿಗೆ ಬಂದು ಶ್ರೀಮಠವನ್ನುಸ್ಥಾಪಿಸಿರಬಹುದೆಂದು ಹೇಳˉÁಗಿದೆ. 15ನೇ ಶತಮಾನವೆಂದರೆ ಅದು ಯಡೆಯೂರುಸಿದ್ದಲಿಂಗೇಶ್ವರರ ಕಾಲ. ಶ್ರೀ ಸಿದ್ದಲಿಂಗೇಶ್ವರರು ತಮ್ಮ ನೂರೊಂದು ವಿರಕ್ತರೊಡನೆನಾಡಿನಾದ್ಯಂತ ಸಂಚರಿಸಿ ಧರ್ಮಜಾಗೃತಿ ಮಾಡಿದವರು. ಬಹುಶಃ ಕರ್ತೃಗುರುಗಳು ಈಆಂದೋಲನದ ಭಾಗವಾಗಿದ್ದು ಶ್ರೀಮಠವನ್ನು ಸ್ಥಾಪಿಸಿರಬಹುದೆಂದು ಅಂದಾಜಿಸಬಹುದು.ಕರ್ತೃಗುರುಗಳ ನಂತರ ಸುಮಾರು 10 ಜನ ಶ್ರೀಗಳು ಶ್ರೀಮಠದ ಪಟ್ಟಕ್ಕೆಬಂದಿದ್ದು ಪರಂಪರೆಯಲ್ಲಿ ಶ್ರೀ ಮ.ನಿ.ಪ್ರ. ತೋಂಟದಾರ್ಯ ಸ್ವಾಮಿಗಳು, ಶ್ರೀ ಮ.ನಿ.ಪ್ರ.ಬಸವಲಿಂಗ ಸ್ವಾಮಿಗಳು ಇನ್ನೂ ಮುಂತಾದ ಗುರುಗಳು ಶ್ರೀಮಠವನ್ನು ಅಭಿವೃದ್ಧಿ ಪಥದಲ್ಲಿಕೊಂಡೊಯ್ದು ಭಕ್ತರ ಏಳಿಗೆಗೆ ಕಾರಣರಾಗಿದ್ದಾರೆ. ಹಾಗೂ ಶ್ರೀಮಠವನ್ನು ಸಾಮಾಜಿಕವಾಗಿಗುರುತಿಸುವಲ್ಲಿ ಈ ಎˉÁ್ಲ ಶ್ರೀಗಳ ಪ್ರಯತ್ನ ಕಂಡುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳು ಈ ಭಾಗದಲ್ಲಿನಡೆದಾಡುವ ದೇವರೆಂದೇ ಪ್ರಖ್ಯಾತಗೊಂಡವರು. ಶ್ರೀಗಳ ಮೂಲ ನಾಮಧೇಯವಟಗಲ್ಲಯ್ಯನವರೆಂದು. ಮಾನ್ವಿ ತಾಲ್ಲೂಕಿನ ಪಾಮನಕಲ್ಲೂರಿನ ಶ್ರೀ ವಿರಕ್ತಮಠದಲ್ಲಿ ಬೆಳೆದವಟಗಲ್ಲಯ್ಯನವರು ನಂತರ ಗಂಗಾವತಿ ತಾಲ್ಲೂಕು ಕನಕಗಿರಿ ಮಠದ ಶ್ರೀ ಚನ್ನಮಲ್ಲಶಿವಯೋಗಿಗಳ ಕೃಪಾದೃಷ್ಠಿಗೆ ಬಿದ್ದು ಗುರುಗಳ ಸೇವೆ ಮಾಡುತ್ತಾ ಪರಿಪಕ್ವಗೊಂಡವರು.ಗುರುಗಳ ಕೃಪಾಶೀರ್ವಾದ ಬಲದಿಂದ ತ್ರಿಭಾಷಾ ಪಂಡಿತರಾಗಿ ವೀರಶೈವ ಧರ್ಮದ ಸಾಹಿತ್ಯವನ್ನು ಆಳವಾಗಿ ಅರಿತ ವಟಗಲ್ಲಯ್ಯನವರು ಶ್ರೀ ಚನ್ನಬಸವ ಸ್ವಾಮಿಗಳೆಂಬ ಅಭಿಧಾನದೊಂದಿಗೆ ಒಳಬಳ್ಳಾರಿಯ ಶ್ರೀ ಸುವರ್ಣಗಿರಿ ವಿರಕ್ತಮಠದ ಅಧಿಕಾರ ಸ್ವೀಕರಿಸಿದರು.ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡ ಶ್ರೀ ಚನ್ನಬಸವ ಸ್ವಾಮಿಗಳು ತಮ್ಮ ಕಾಯಕಪ್ರವೃತ್ತಿಯಿಂದ ನಾಡನ್ನೇ ಬೆಳಗಿದವರು. ಶ್ರೀಗಳ ಧಾರ್ಮಿಕ ಆಚರಣೆಗಳಿಂದ, ಸಾಮಾಜಿಕಕಾರ್ಯಕ್ರಮಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಶ್ರೀಮಠಕ್ಕೆ ಹರಿದು ಬರತೊಡಗಿದರು.ಹಾಗೂ ಗುರುಗಳ ದರ್ಶನದಿಂದ ತಮ್ಮ ಕಾರ್ಯಗಳು ನೆರವೇರುವುದೆಂದು ನಂಬಿಕೆಇಟ್ಟವರು. ಶ್ರೀಗಳು ಭಕ್ತರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸಿ ಈ ಭಾಗದಲ್ಲಿನಡೆದಾಡುವ ದೇವರೆಂದೇ ಹೆಸರಾದರು. ಹಾಗೂ ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಹಾಗೂ ಶ್ರೀಮಠದ ಶಾಖಾಮಠಗಳನ್ನೂ ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಈ ಎˉÁ್ಲಮಠಗಳು ಆರ್ಥಿಕವಾಗಿ ಸ್ವಾವಲಂಬಿಯಾಗುವಂತೆ ಮಾಡಿದರು. ಶ್ರೀಗಳು ಶ್ರೀಮಠದಕಾರ್ಯಗಳನ್ನಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಹಾಗೂ ಇನ್ನಿತರ ಮಠಗಳ ಅಭಿವೃದ್ಧಿಗೂಶ್ರಮಿಸಿದ್ದು ಕಂಡುಬರುತ್ತದೆ. ಭಕ್ತರಲ್ಲಿ ಜಾತಿಬೇಧವನ್ನರಿಯದೆ ಎಲ್ಲರೂ ಸಮಾನರು,ಎಲ್ಲರಿಗೂ ಒಂದೇ ನಿಯಮ ಎಂಬ ಬಸವಣ್ಣನವರ ಆದರ್ಶದಂತೆ ಬಾಳಿದ ಮಹಾಚೇತನವು 1982ರ ಅಕ್ಟೋಬರ್ 2 ರಲ್ಲಿ ಅಸ್ತಂಗತವಾಯಿತು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಹಿಂದಿನ ಶ್ರೀಗಳುಇರುವಾಗˉÉೀ 1979ರ ಮೇ 9ರಲ್ಲಿ ಶ್ರೀ ಸುವರ್ಣಗಿರಿ ವಿರಕ್ತಮಠದ ಪಟ್ಟಾಧಿಕಾರವನ್ನುಸ್ವೀಕರಿಸಿ ಬಂದವರು. ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಹಾಗೂ ಅವರಆಶೀರ್ವಾದ ಬಲದೊಂದಿಗೆ ಪರಿಪಕ್ವಗೊಂಡವರು. ಶ್ರೀಗಳು ಅಧಿಕಾರಕ್ಕೆ ಬರುವ ಮುನ್ನಶಿವಯೋಗ ಮಂದಿರದಲ್ಲಿ ಆಧ್ಯಾತ್ಮ ಸಾಧನೆ ಮಾಡಿದವರು. ಶ್ರೀಗಳು ಶ್ರೀಮಠಕ್ಕೆಬಂದಂದಿನಿಂದ ಹಿಂದಿನ ಗುರುಗಳಂತೆಯೇ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆಹಾಗೂ ಭಕ್ತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಮ್ಮ ಕಾಯಕ ತತ್ವ ಹಾಗೂ ಧರ್ಮನಿಷ್ಠೆಯಿಂದ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿರುವ ಶ್ರೀಗಳು ಸದಾ ಚಟುವಟಿಕೆಯಕೇಂದ್ರಬಿಂದುವಾಗಿದ್ದಾರೆ. ತಮ್ಮ ಪಾಂಡಿತ್ಯಪೂರ್ಣ ಉಪದೇಶ, ಪ್ರವಚನಗಳಿಂದಹೆಸರಾಗಿರುವ ಶ್ರೀಗಳು ಸುತ್ತಮುತ್ತಲಿನ ಭಾಗಗಳಲ್ಲಿ ತಮ್ಮ ಪ್ರಭೆಯನ್ನು ಬೀರಿದ್ದಾರೆ.ಶ್ರೀಮಠದ ಶಾಖಾಮಠಗಳು ಕರ್ನಾಟಕಾಂಧ್ರ ಪ್ರದೇಶಗಳಲ್ಲಿ ಹರಡಿಗೊಂಡಿವೆ.ನದಿಬಾಗಿಯ ಶ್ರೀ ತೋಂಟದಾರ್ಯ ಸ್ವಾಮಿ ಮಠ, ಕೋಸಗಿಯ ಶ್ರೀ ತೋಂಟದಾರ್ಯಸ್ವಾಮಿ ಮಠಗಳು ಆಂಧ್ರಪ್ರದೇಶದಲ್ಲಿವೆ. ಹಾಗೂ ಸಿಂಧನೂರು ತಾಲ್ಲೂಕಿನ ಯದ್ದಲದೊಡ್ಡಿ,ಆಯನೂರುನಲ್ಲಿರುವ ಮಠಗಳು, ಮಾನ್ವಿ ತಾಲ್ಲೂಕಿನ ಪಾಮನಕಲ್ಲೂರು, ಅಡವಿಅಮರೇಶ್ವರದಲ್ಲಿರುವ ಮಠಗಳು ಕರ್ನಾಟಕದಲ್ಲಿದ್ದು ಇನ್ನುಳಿದ ಶಾಖಾಮಠಗಳ ಬಗ್ಗೆಸಂಶೋಧನೆ ನಡೆಸಬೇಕಿದೆ. 

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು
Date of Birth :
1946
Place :
ಕಾಡಶೆಟ್ಟಿಹಳ್ಳಿ, ಹಾನಗಲ್ಲು ತಾ||
Pattadikara :
9-5-1979
Photo :

Programs

¥ತಿÀ್ರನಿತ್ಯ ರುದ್ರಾಭಿಷೇಕ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ. ಬಸವ ಜಯಂತಿಗೆ ಶ್ರೀಮಠದ ರಥೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳು. ಮಾಘ ಶುದ್ಧ ಸಪ್ತಮಿಗೆ ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳ ಜಾತ್ರೆ. (21 ದಿನಗಳ ಕಾಲ ಜಾತ್ರೆ, ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು).

Institutions

ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀ ಶಾˉÉ. ವಿದ್ಯಾರ್ಥಿ ನಿಲಯ. ಗೋಶಾˉÉ.

Photos

Full Address Kannada

ಶ್ರೀ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿ - 584 128 ಸಿಂಧನೂರು ತಾ||, ರಾಯಚೂರು ಜಿ||

Map

Near by Places

ಅಲಬನೂರು ಕ್ರಾಸ್ - 15 ಕಿ.ಮೀ. ಸಿರಗುಪ್ಪ - 25 ಕಿ.ಮೀ. ಸಿಂಧನೂರು - 21 ಕಿ.ಮೀ. ರಾಯಚೂರು - 100 ಕಿ.ಮೀ.

Statistic

372 Views
0 Rating
0 Favorite
0 Share
error: Content is protected !!