ರಾಯಚೂರು ಜಿˉÉ್ಲಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಸುಕ್ಷೇತ್ರಶ್ರೀ ಅಡವಿ ಅಮರೇಶ್ವರ ಮಠವು 1954ರ ಆಗಸ್ಟ್ 13ರಂದು ಒಳಬಳ್ಳಾರಿಯ ಶ್ರೀ ಚನ್ನಬಸವಶಿವಯೋಗಿಗಳು ಹಾಗೂ ಭೋಗಾಪುರದ ಶ್ರೀ ವಿರೂಪಾಕ್ಷ ದೇಶಿಕೇಂದ್ರ ಸ್ವಾಮಿಗಳಪ್ರಯತ್ನದ ಫಲವಾಗಿ ಭಕ್ತರ ಸಹಕಾರದೊಂದಿಗೆ ಸ್ಥಾಪಿತಗೊಂಡಿತು. ಅಂದುಸ್ಥಾಪಿತಗೊಂಡ ಶ್ರೀಮಠವು ಒಳಬಳ್ಳಾರಿಯ ಶ್ರೀ ಚನ್ನಬಸವ ಶಿವಯೋಗಿಗಳ ಕಾರಣದಿಂದಾಗಿ ಇಂದು ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೆಸರಾಗಿದೆ.ಶ್ರೀ ಚನ್ನಬಸವ ಶಿವಯೋಗಿಗಳು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳಿಂದಾಗಿ ಹಾಗೂ ತಮ್ಮ ತಪೋಗುಣದಿಂದಾಗಿ ಶ್ರೀಮಠವನ್ನು ಸುಕ್ಷೇತ್ರವನ್ನಾಗಿ ಪರಿವರ್ತಿಸಿದರು. ಈ ಸುಕ್ಷೇತ್ರಕ್ಕೆ ಶ್ರೀಗಳು 1964ರಲ್ಲಿ ಶ್ರೀ ಮೃತ್ಯುಂಜಯ ದೇವರನ್ನುಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ನಂತರ 1979ರಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳಿಗೆ 75 ವರ್ಷ ತುಂಬಿದ ಸವಿನೆನಪಿಗಾಗಿ ನಾಡಿನ ಭಕ್ತರು ವಜ್ರಮಹೋತ್ಸವವನ್ನುಏರ್ಪಡಿಸಿದಾಗ ಶ್ರೀ ಮೃತ್ಯುಂಜಯ ದೇವರಿಗೆ ಶ್ರೀ ಮ.ನಿ.ಪ್ರ. ಶಾಂತಮಲ್ಲ ಸ್ವಾಮಿಗಳೆಂದುಅಭಿದಾನ ನೀಡಿ ಶ್ರೀಮಠಕ್ಕೆ ಪಟ್ಟಾಧಿಕಾರ ಮಾಡಿದರು.ಉಭಯ ಶ್ರೀಗಳು ಶ್ರೀಮಠದಲ್ಲಿ ನಡೆಸುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಂದಾಗಿ ಅಪಾರ ಸಂಖ್ಯೆಯ ಭಕ್ತರು ಶ್ರೀಮಠಕ್ಕೆ ಹರಿದುಬಂದಿದ್ದಾರೆ. ಶ್ರೀ ಚನ್ನಬಸವಶಿವಯೋಗಿಗಳ ನಂತರ ಶ್ರೀಮಠದ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಇಂದಿನವರೆಗೂ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀ ಶಾಂತಮಲ್ಲ ಮಹಾಸ್ವಾಮಿಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶ್ರೀಮಠದಲ್ಲಿ ಸಾಹಿತ್ಯಸಮ್ಮೇಳನಗಳು, ಚಿಂತನಗೋಷ್ಠಿಗಳನ್ನು ಏರ್ಪಡಿಸಿ ಸಮಾಜದ ಅಂಧಕಾರವನ್ನು ನಿವಾರಣೆಮಾಡುವಲ್ಲಿ ಗುರುಶಿಷ್ಯರು ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ.ಶ್ರೀಮಠದ ರಥೋತ್ಸವವು ಚೈತ್ರ ಮಾಸದಲ್ಲಿ ಜರುಗುತ್ತಿದ್ದು ಆ ಸಮಯದಲ್ಲಿದನಗಳ ಜಾತ್ರೆಯನ್ನು ಏರ್ಪಡಿಸಿ ರೈತರಿಗೆ ಅನುಕೂಲವನ್ನು ಮಾಡಿಕೊಡˉÁಗಿದೆ.ಹಾಗೆಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಸಾವಿರಕ್ಕೂ ಅಧಿಕ ಸಂಖ್ಯೆಯವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡˉÁಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಾಂತಮಲ್ಲ ಮಹಾಸ್ವಾಮಿಗಳು
Date of Birth :
1941
Place :
ಮಾಗಳ, ಹೂವಿನಹಡಗಲಿ ತಾ||
Pattadikara :
1979
Photo :
Programs
ಚೈತ್ರ ಮಾಸದಲ್ಲಿ ರಥೋತ್ಸವ ಮತ್ತು ಗೋ ಜಾತ್ರೆ. ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ. ಶಾª್ರÀಣ ಶುದ್ಧ ಚತುರ್ದಶಿಗೆ ಶ್ರೀ ಅಮರೇಶ್ವರ ಜಯಂತಿ ಆಚರಣೆ.
Institutions
ಹಿರಿಯ ಪ್ರಾಥಮಿಕ / ಪ್ರೌಢ ಶಾˉÉ ವಿದ್ಯಾರ್ಥಿನಿಲಯ. ಗೋಶಾˉÉ