ಕರ್ತೃ – ಪರಮಪೂಜ್ಯ ಶ್ರೀ ಸದ್ಗುರು ನಿರುಪಾದೀಶ್ವರ ಮಹಾಸ್ವಾಮಿಗಳು
ರಾಯಚೂರು ಜಿˉÉ್ಲ ಲಿಂಗಸೂಗೂರು ತಾಲ್ಲೂಕಿನ ತˉÉಕಟ್ಟು ಗ್ರಾಮದಸಮೀಪದಲ್ಲಿ ಸುಮಾರು 150-200 ವರ್ಷಗಳ ಹಿಂದೆ ಸ್ಥಾಪಿತಗೊಂಡಿರುವ ಸುಕ್ಷೇತ್ರ ಶ್ರೀಅಂಕಲಿಮಠವು ಇಂದು ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿ ಬೆಳೆದಿದೆ.ಶ್ರೀಮಠದ ಕರ್ತೃಗುರುಗಳು ಪರಮಪೂಜ್ಯ ಶ್ರೀ ಸದ್ಗುರು ನಿರುಪಾದೀಶ್ವರ ಮಹಾಸ್ವಾಮಿಗಳು.ಮಾನ್ವಿ ತಾಲ್ಲೂಕಿನ ತೊಪ್ಪಲದಡ್ಡಿ ಎಂಬ ಗ್ರಾಮದ ಹಿರೇಮಠದಲ್ಲಿ ಜನ್ಮ ತಾಳಿದಶ್ರೀ ನಿರುಪಾದೀಶ್ವರ ಮಹಾಸ್ವಾಮಿಗಳ ಮೂಲ ಹೆಸರು ಶ್ರೀ ವಿರೂಪಾಕ್ಷ ಸ್ವಾಮಿಗಳೆಂಬುದು.ತಂದೆ ತಾಯಿಯವರಿಂದ ಧಾರ್ಮಿಕ ಸಂಸ್ಕಾರವನ್ನು ಕಲಿತು ಬೆಳೆದ ಶ್ರೀಗಳು ಬಾಲ್ಯದˉÉ್ಲೀಆಧ್ಯಾತ್ಮದತ್ತ ಹೊರಳುತ್ತಾರೆ. ಯೌವನಾವಸ್ಥೆಗೆ ಕಾಲಿರಿಸಿದ ಶ್ರೀಗಳು ಅಲ್ಲಲ್ಲಿ ಸಂಚಾರಮಾಡುತ್ತಾ ಜನರೊಂದಿಗೆ ವಿಚಾರ ಮಂಥನಗಳನ್ನು ಮಾಡಹತ್ತಿದರು.ಹೀಗೆ ಸಂಚಾರ ಮಾಡುತ್ತಿದ್ದ ಶ್ರೀಗಳು ಒಮ್ಮೆ ಮಾಟದ (ಜಾದೂ) ವಿದ್ಯೆಪ್ರದರ್ಶಿಸುತ್ತಿದ್ದ ಒಬ್ಬರನ್ನು ಕಂಡು ಆಕರ್ಷಿತರಾದರು. ಅದನ್ನು ಕಲಿಯಲು ಮಲಯಾಳದೇಶಕ್ಕೆ ಹೋಗಿ ಆ ವಿದ್ಯೆಯನ್ನು ಕಲಿತು ಊರಿಗೆ ಮರಳುತ್ತಾರೆ. ತಾಯಿಯವರ ಆಸೆಯಂತೆಚೆನ್ನಮ್ಮರೊಡನೆ ವಿವಾಹ ಬಂಧನಕ್ಕೆ ಒಳಗಾದ ಶ್ರೀಗಳು ಕೆಲಕಾಲ ಸಂಸಾರ ನಡೆಸಿ ಒಂದುಗಂಡು ಮಗುವಿಗೆ ತಂದೆಯಾಗುತ್ತಾರೆ. ಆದರೆ ಕೆಲಕಾಲದ ನಂತರ ಸಂಸಾರ ತ್ಯಜಿಸಿಸಂಚಾರ ಹೊರಟ ಶ್ರೀಗಳು ಅಲ್ಲಲ್ಲಿ ಅನುಷ್ಠಾನಗೈಯುತ್ತಾ ದೇವಿಯನ್ನು ಸಾಕ್ಷೀಕರಿಸಿಕೊಂಡುಅಂಕಲಗಿಗೆ ಬರುತ್ತಾರೆ.ಅಂಕಲಗಿಯಲ್ಲಿ ಗುರು ಅಡವಿ ಸಿದ್ದೇಶ್ವರರ ಸೇವೆಗೈಯುತ್ತಾ ಅವರ ನೆಚ್ಚಿನಶಿಷ್ಯರಾದ ಶ್ರೀಗಳು ಪರಿಪೂರ್ಣ ಆಧ್ಯಾತ್ಮ ಸಿದ್ಧಿಯನ್ನು ಪಡೆಯುತ್ತಾರೆ. ಇವರ ನಿಷ್ಕಲ್ಮಷಭಕ್ತಿಗೆ, ಸೇವೆಗೆ ಒಲಿದ ಗುರುಗಳು ವಿರೂಪಾಕ್ಷರನ್ನು ಕುರಿತು ಇನ್ನು ನೀನು ವಿರೂಪಾಕ್ಷನಲ್ಲ,ಇಂದಿನಿಂದ ನೀನು ನಿರೂಪಾದಿಕ ಸ್ವರೂಪನಾಗಿರುವೆ ಎಂದು ಆಶೀರ್ವದಿಸಿ ಬೀಳ್ಕೊಡುತ್ತಾರೆ. ಅಲ್ಲಿಂದ ಸಂಚಾರ ಹೊರಟ ಶ್ರೀಗಳು ತˉÉಕಟ್ಟು ಗ್ರಾಮಕ್ಕೆ ಆಗಮಿಸಿ ನೆˉÉನಿಲ್ಲುತ್ತಾರೆ.ತˉÉಕಟ್ಟುವಿನಲ್ಲಿ ನೆˉÉನಿಂತ ಶ್ರೀಗಳು ತಮ್ಮ ಜ್ಞಾನದಿಂದ, ಧಾರ್ಮಿಕ ಆಚರಣೆಗಳಿಂದ ಬಹುಬೇಗನೆ ಪ್ರಸಿದ್ಧಿಗೆ ಬಂದು ಅಪಾರ ಭಕ್ತ ಸಮೂಹವನ್ನು ಸಂಪಾದಿಸುತ್ತಾರೆ.ಶ್ರೀಗಳ ಸಂಸಾರ ಕೂಡ ತˉÉಕಟ್ಟುವಿಗೆ ಆಗಮಿಸಿ ಗುರುಗಳ ಹಾಗೂ ಗುರುಲಿಂಗಜಂಗಮರಸೇವೆಯಲ್ಲಿ ತೊಡಗಿಕೊಳ್ಳುತ್ತದೆ. ಮುಂದೆ ಶ್ರೀಗಳ ಪುತ್ರರಾದ ಶ್ರೀ ಸುವರ್ಣ ಸ್ವಾಮಿಗಳವಿವಾಹ ಜರುಗಿ ಶ್ರೀ ಸುವರ್ಣ ಸ್ವಾಮಿಗಳು ತಂದೆಯವರ ಆದೇಶದಂತೆ ಚಿಕ್ಕೋಪ್ಪದಲ್ಲಿಅಲ್ಲಿನ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಮುಂದುವರೆಯುತ್ತಾರೆ.ತಂದೆಯವರಂತೆ ಶ್ರೀ ಸುವರ್ಣ ಸ್ವಾಮಿಗಳೂ ಆಧ್ಯಾತ್ಮ ಜೀವಿಗಳು. ಅಪಾರಜ್ಞಾನವನ್ನು ಸಂಪಾದಿಸಿಕೊಂಡಿದ್ದವರು. ತಮ್ಮ ಪುರಾಣ ಪ್ರವಚನಗಳಿಂದ, ಉಪದೇಶಾಮೃತಗಳಿಂದ ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದರು. ಶ್ರೀಗಳು ಅಡವಿ ಸ್ವಾಮಿಗಳ ಹಾಗೂ ಶ್ರೀದೇವಿಪುರಾಣ ಪಾರಾಯಣಗಳನ್ನು ಮಾಡುತ್ತಿದ್ದ ರೀತಿಗೆ ಭಕ್ತ ಸಮೂಹ ಸುವರ್ಣ ಸ್ವಾಮಿಗಳಕಡೆಗೆ ಹರಿದುಬರತೊಡಗಿತು.ಹೀಗೆ ತಂದೆ ಮಗ ಇಬ್ಬರೂ ಆಧ್ಯಾತ್ಮ ಜೀವಿಗಳಾಗಿ, ಪವಾಡಪುರುಷರಾಗಿ ಭಕ್ತರಪಾಲಿನ ದೇವರಂತಿದ್ದರು. ಸ್ವತಃ ಸಂಸಾರಿಗಳಾಗಿದ್ದರೂ ತಮ್ಮ ಆಧ್ಯಾತ್ಮಿಕ ಜೀವನಕ್ಕೆಯಾವುದೇ ಚ್ಯುತಿ ಬಾರದಂತಿದ್ದರು. ಸಂಸಾರದಲ್ಲಿ ಸದ್ಗತಿ ಉಂಟು ಮಕ್ಕಳಿರಾ ಎಂದುಸದಾ ಹೇಳುತ್ತಾ ಸಂಸಾರದಲ್ಲಿದ್ದರೂ ಮಹತ್ತಾದ ಸಾಧನೆ ಮಡುವುದರ ಮಾರ್ಗತೋರುತ್ತಿದ್ದರು. ಹೀಗೆ ಉಭಯ ಸ್ವಾಮಿಗಳಿಂದ ಪ್ರಸಿದ್ಧಿಗೊಂಡಿದ್ದ ಶ್ರೀ ಅಂಕಲಿ ಮಠದಪರಂಪರೆಯು ಮುಂದೆ ಶ್ರೀ ಫಕೀರ ಸ್ವಾಮಿಗಳು, ಶ್ರೀ ವೀರಭದ್ರ ಸ್ವಾಮಿಗಳು, ಶ್ರೀಬಸವರಾಜ ಸ್ವಾಮಿಗಳು, ಮಾತೋಶ್ರೀ ಪಾರ್ವತಮ್ಮನವರ ತನಕ ಮುಂದುವರೆದು ಅಪಾರಸಂಖ್ಯೆಯ ಭಕ್ತ ಸಮೂಹಕ್ಕೆ ದಾರಿ ದೀಪವಾಗಿದೆ.ಪ್ರಸ್ತುತ ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳು ಹಾಗೂ ಪೂಜ್ಯ ಶ್ರೀ ಫಕೀರಸ್ವಾಮಿಗಳು ಶ್ರೀಮಠದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನುಮುಂದುವರೆಸುತ್ತಾ ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡುತ್ತಿದ್ದಾರೆ. ಶ್ರೀ ವೀರಭದ್ರಮಹಾಸ್ವಾಮಿಗಳು ಆಧ್ಯಾತ್ಮ ಪುರುಷರಾಗಿ ನೊಂದವರನ್ನು, ಬೆಂದವರನ್ನು, ನಂಬಿದವರನ್ನುಪರಿಪಾಲಿಸುತ್ತಾ ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ಹಾಗೂ ತಮ್ಮ ನಿತ್ಯ ದಾಸೋಹದಕ್ರಮಗಳಿಂದಾಗಿ ‘ದಾಸೋಹ ರv್ನÀ’ರೆನಿಸಿರುವ ಶ್ರೀಗಳು ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕøತರು.ಕಿರಿಯ ಶ್ರೀಗಳಾದ ಶ್ರೀ ಫಕೀರ ಸ್ವಾಮಿಗಳೂ ಸಹ ಹಿರಿಯ ಶ್ರೀಗಳಮಾರ್ಗದರ್ಶನದಲ್ಲಿ ಶ್ರೀಮಠದ ಕಾರ್ಯಕ್ರಮಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದುಉಭಯತರರೂ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಹಾಗೂಶ್ರೀಮಠವನ್ನು ಸದಾ ಚಟುವಟಿಕೆಯ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ವೀರಭದ್ರ ಮಹಾಸ್ವಾಮಿಗಳು
Date of Birth :
1964
Place :
ಅಂಕಲಿಮಠ, ಲಿಂಗಸೂಗೂರು ತಾ||
Photo :
Programs
ಪ್ರತಿ ದಿನ ರುದ್ರಾಭಿಷೇಕ. ¥ತಿÀ್ರ ಅಮವಾಸ್ಯೆಗೆ ಮಾಸಿಕ ಶಿವಾನುಭವ ಗೋಷ್ಠಿ. ¥ತಿÀ್ರ ಹುಣ್ಣಿಮೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು. ಚೈತ್ರ ಶುದ್ಧ ದವನದ ಹುಣ್ಣಿಮೆಗೆ ಶ್ರೀ ಸುವರ್ಣ ಸ್ವಾಮಿಗಳ ಆರಾಧನೆ. ಚೈತ್ರಮಾಸದಲ್ಲಿ ಪೂಜ್ಯ ಶ್ರೀ ಬಸವರಾಜ ಸ್ವಾಮಿಗಳ ಆರಾದನೆ. ಚೈತ್ರ ಬಹುಳ ಸಪ್ತಮಿಗೆ ಮಾತೋಶ್ರೀ ಪಾರ್ವತಮ್ಮನವರ ಆರಾಧನೆ. ವೈಶಾಖ ಬಹುಳ ಸಪ್ತಮಿಗೆ ಶ್ರೀಮಠದ ಜಾತ್ರಾ ಮಹೋತ್ಸವ. ಆಶ್ವೀಜ ಮಾಸದ ಸೀಗೆ ಹುಣ್ಣಿಮೆಗೆ ಶ್ರೀ ವೀರಭದ್ರ ಸ್ವಾಮಿಗಳ ಆರಾಧನೆ. ಭಾದ್ರಪದ ಬಹುಳ ತೃತೀಯದಂದು ಶ್ರೀ ಸರ್ವಸಿದ್ಧಿ ಪೂಜೆ. ಓ ಊ