ರಾಯಚೂರು ಜಿˉÉ್ಲ ಲಿಂಗಸೂಗೂರು ತಾಲ್ಲೂಕಿನ ಸಂತೆಕಲ್ಲೂರು ಗ್ರಾಮವುತಾಲ್ಲೂಕು ಕೇಂದ್ರದಿಂದ 13 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಶ್ರೀಮಹಾಂತ ಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ ಶ್ರೀ ಮಹಾಂತಿನ ಮಠವು ಶ್ರೀರಂಭಾಪುರಿ ಪೀಠದ ಶಾಖಾಮಠವಾಗಿ ಬೆಳೆದುಬಂದಿದ್ದು ತನ್ನ ಧಾರ್ಮಿಕ ಆಚರಣೆಗಳಮೂಲಕ ಈ ಭಾಗದ ಜನರಿಗೆ ಧಾರ್ಮಿಕ ಸಂಸ್ಕಾರವನ್ನು ನೀಡುತ್ತಾ ಬಂದಿದೆ.ಶ್ರೀ ಮಹಾಂತಿನ ಮಠದ ಕರ್ತೃಗುರುಗಳು ಶ್ರೀ ಮಹಾಂತ ಶಿವಾಚಾರ್ಯರೆಂದುಹೇಳˉÁಗುತ್ತದಾದರೂ ಸೂಕ್ತವಾದ ಮಾಹಿತಿಗಳು ಲಭ್ಯವಿಲ್ಲ. ಶ್ರೀಮಠದ ಕರ್ತೃಗುರುಗಳುಹಾಗೂ ಮುಂದುವರೆದ ಪರಂಪರೆಯ ಬಗ್ಗೆ ಹೆಚ್ಚಿನ ಮಾಹಿತಿಗಳ ಅಲಭ್ಯತೆಯಿಂದಾಗಿಶ್ರೀಮಠದ ಇತಿಹಾಸವನ್ನು ಸ್ಪಷ್ಟವಾಗಿ ದಾಖಲಿಸಲು ಸಾಧ್ಯವಾಗುವುದಿಲ್ಲ. ಬಹುಶಃಶ್ರೀಮಠವು ಬಹುಕಾಲ ಖಾಲಿ ಉಳಿದಿರುವುದು ಇದಕ್ಕೆ ಕಾರಣವಾಗಿದೆ. ಹಾಗೂ ಶ್ರೀಮಠದಎˉÁ್ಲ ಶ್ರೀಗಳು ‘ಶ್ರೀ ಮಹಾಂತ ಸ್ವಾಮಿಗಳು’ ಎಂಬ ಅಭಿದಾನ ಪಡೆದು ಅಧಿಕಾರನಡೆಸಿರುವುದೂ ಕಾರಣವಾಗಿರಬಹುದು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳುಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಗ್ರಾಮದವರಾಗಿದ್ದು ತಮ್ಮ ವಿದ್ಯಾಭ್ಯಾಸವನ್ನುಪೂರ್ಣಗೊಳಿಸಿ ಶ್ರೀಮಠದ ಅಧಿಕಾರ ವಹಿಸಿಕೊಂಡರು. ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾದ ಶ್ರೀ ಮಹಾಂತಿನ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಲುಪಣತೊಟ್ಟಿರುವ ಶ್ರೀ ಮಹಾಂತ ಸ್ವಾಮಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಶ್ರೀಗಳು ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಜೇಷ್ಠಮಾಸದಮಣ್ಣೆತ್ತಿನ ಅಮಾವಾಸ್ಯೆ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನುಆಯೋಜಿಸುತ್ತಿದ್ದು ಅಪಾರ ಸಂಖ್ಯೆಯ ಭಕ್ತರು ಪಾˉÉ್ಗೂಳ್ಳುತ್ತಿದ್ದಾರೆ. ಆ ಸಮಯದಲ್ಲಿವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ.
Swamiji
Swamiji Name :
ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಸ್ವಾಮಿಗಳು
Date of Birth :
16-6-1977
Place :
ಹಟ್ಟಿ, ಲಿಂಗಸೂಗೂರು ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. ಶಾª್ರÀಣ ಮಾಸದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು. ಜೇಷ್ಠಮಾಸದ ಮಣ್ಣೆತ್ತಿನ ಅಮವಾಸ್ಯೆ ನಂತರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ವಿವಿಧ ಕಾರ್ಯಕ್ರಮಗಳು.