ಕರ್ತೃ – ವೈರಾಗ್ಯ ಚಕ್ರವರ್ತಿ ಶ್ರೀ ನಾಗಭೂಷಣ ಘನಮಠ ಶಿವಯೋಗಿಗಳು
ರಾಯಚೂರು ಜಿˉÉ್ಲ ಲಿಂಗಸೂಗೂರು ತಾಲ್ಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿಕಳೆದ ಶತಮಾನಗಳಲ್ಲಿ ಸ್ಥಾಪಿತಗೊಂಡಿರುವ ಶ್ರೀ ಘನಮಠೇಶ್ವರ ಮಠವು ತನ್ನ ವಿಶಿಷ್ಟಧಾರ್ಮಿಕ, ಸಾಮಾಜಿಕ ಹಾಗೂ ಕೃಷಿ ಸಂಬಂಧಿತ ಕಾರ್ಯಕ್ರಮಗಳಿಂದಾಗಿ ಹೆಸರುವಾಸಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಕರ್ತೃಗುರುಗಳಾದ ಶ್ರೀ ಘನಮಠ ಶಿವಯೋಗಿಗಳು.ಶ್ರೀಮಠದಲ್ಲಿ ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಪ್ರಾಮುಖ್ಯತೆ ನೀಡದ ಶ್ರೀಗಳು ತಾವೇಸ್ವತಃ ಕೃಷಿಕಾಯಕ ಮಾಡಿದವರು.ಮೂಲತಃ ಆಂಧ್ರಪ್ರದೇಶದವರಾಗಿರಬಹುದಾದ ಕರ್ತೃಗುರುಗಳು ಸಂಸಾರದಲ್ಲಿವೈರಾಗ್ಯ ತಾಳಿ ಅಲ್ಲಿಂದ ಕರ್ನಾಟಕದೆಡೆಗೆ ಸಂಚಾರ ಬಂದರು. ಹೀಗೆ ಸಂಚಾರ ಬಂದಶ್ರೀಗಳು ಗುಲ್ಬರ್ಗ, ಬಸವಕˉÁ್ಯಣ, ಹುನಗುಂದ, ಕೂಡಲಸಂಗಮ, ಇಲಕಲ್ಲ, ಬಸವನಬಾಗೇವಾಡಿ ಮುಂತಾದೆಡೆಗಳಲ್ಲಿ ಸಂಚರಿಸುತ್ತಾ ರಾಯಚೂರು ಜಿˉÉ್ಲ ಲಿಂಗಸೂಗೂರಿನಸಂತೆಕಲ್ಲೂರು ಗ್ರಾಮಕ್ಕೆ ಬಂದು ನೆˉÉನಿಂತರು. ಶ್ರೀ ಘನಮಠ ಶಿವಯೋಗಿಗಳು ಮೂಲತಃಕೃಷಿಕರಾಗಿದ್ದು ಆನಂತರ ತಮ್ಮ ಸಂಚಾರದಿಂದ, ಅನುಷ್ಠಾನಗಳಿಂದ ಆಧ್ಯಾತ್ಮಸಿದ್ಧಿಯನ್ನುಪಡೆದವರು. ಸಂತೆಕಲ್ಲೂರಿಗೆ ಆಗಮಿಸಿದ ಶ್ರೀಗಳು ಬಸವ ಪುರಾಣ, ಶರಣರ ವಚನಗಳನ್ನುಆಳವಾಗಿ ಅಭ್ಯಸಿಸಿ ಹೆಚ್ಚಿನ ಆಧ್ಯಾತ್ಮ ಸಾಧನೆಯನ್ನು ಮಾಡಿದವರು.ಪೂಜ್ಯ ಶ್ರೀಗಳು ಸ್ವತಃ ಕೃಷಿಕಾಯಕಯೋಗಿಗಳಾಗಿ ಸಂತೆಕಲ್ಲೂರಿನಲ್ಲಿ ಜನರಿಗೆಆಧ್ಯಾತ್ಮಿಕ ಪ್ರವಚನಗಳ ಜೊತೆಯಲ್ಲಿ ಕೃಷಿ ಸಂಬಂಧಿತ ತಮ್ಮ ಆಳವಾದ ಜ್ಞಾನವನ್ನುತಿಳಿಯಪಡಿಸುತ್ತಾ ಸುತ್ತಮುತ್ತಲಿನ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಿದರು. ಹಾಗೂಅಪಾರ ಸಂಖ್ಯೆಯ ಭಕ್ತ, ಶಿಷ್ಯವರ್ಗವನ್ನು ಸಂಪಾದಿಸಿಕೊಂಡಿದ್ದ ಶ್ರೀಗಳು ಅವರಸಹಕಾರದೊಂದಿಗೆ ಮಠವನ್ನು ಅಭಿವೃದ್ಧಿಗೊಳಿಸಿದರು. ಪೂಜ್ಯ ಶ್ರೀಗಳು ತಮ್ಮ ಕೃಷಿಜ್ಞಾನವನ್ನು ತಮ್ಮ ಶಿಷ್ಯಂದಿರಿಗೆ ಧಾರೆ ಎರೆದು ಅವರಿಂದ ‘ಕೃಷಿ ಜ್ಞಾನ ಪ್ರದೀಪಿಕೆ’ ಎಂಬಗ್ರಂಥ ರಚನೆಗೆ ಕಾರಣೀಭೂತರಾದರು. ಕನ್ನಡ ಸಾಹಿತ್ಯದಲ್ಲಿ ಪ್ರಥಮವಾಗಿ ಮೂಡಿಬಂದಕೃಷಿ ಆಧಾರಿತ ಗ್ರಂಥವೆಂಬ ದಾಖˉÉಗೆ ಈ ಗ್ರಂಥವು ಪಾತ್ರವಾಯಿತು.ಕಳೆದ ಶತಮಾನದಲ್ಲಿ ಈ ‘ಕೃಷಿ ಜ್ಞಾನ ಪ್ರದೀಪಿಕೆ’ ಗ್ರಂಥವನ್ನು ಫ.ಗು. ಹಳಕಟ್ಟಿಯವರು ಸಂಗ್ರಹಿಸಿದರು. ಇದರಲ್ಲಿ ಆಹಾರಧಾನ್ಯ, ಬೇಸಾಯ ಪದ್ಧತಿ, ಹಣ್ಣು ಹಂಪಲು,ಕಾಯಿಪಲ್ಯ, ಗೆಡ್ಡೆ ಗೆಣಸು, ಹೂವು ಮುಂತಾದ ಬೆಳೆಗಳನ್ನು ಬೆಳೆಯುವ ಬಗ್ಗೆ ವಿವರಣೆನೀಡˉÁಗಿದೆ. ಅಲ್ಲದೆ ರೈತರಿಗೆ ಮಹತ್ವದ ಸಲಹೆಗಳನ್ನು ಕೊಡˉÁಗಿದೆ. ಇದರಲ್ಲಿಎತ್ತುಗಳ ಆರೈಕೆ, ಒಕ್ಕಲುತನಕ್ಕೆ ಬೇಕಾಗುವ ಸಾಮಾನುಗಳ ವ್ಯವಸ್ಥೆ, ಭೂಮಿಯ ಆರೈಕೆ,ಗೊಬ್ಬರದ ಉಪಯೋಗ, ಭೂಮಿ ಹದ ಮಾಡುವುದು, ಬೀಜಗಳ ಬಿತ್ತನೆ, ಬಾವಿ ತೋಡುವವಿಧಾನ, ತೋಟದಲ್ಲಿ ಬೆಳೆಯಬಹುದಾದ ಬೆಳೆಗಳು ಈ ರೀತಿ ಸರ್ವವಿಧದ ಮಾಹಿತಿಗಳುರೈತರಿಗೆ ದೊರೆಯುತ್ತವೆ.ಕರ್ತೃಗುರುಗಳ ತರುವಾಯ ದೀರ್ಘ ಕಾಲ ಖಾಲಿ ಉಳಿದಿರಬಹುದಾದಶ್ರೀಮಠದ ಅಧಿಕಾರವನ್ನು ವಹಿಸಿಕೊಂಡವರು ಎರಡನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಸಿದ್ಧಲಿಂಗ ಮಹಾಸ್ವಾಮಿಗಳು. ಶ್ರೀಗಳು ಶ್ರೀಮಠವನ್ನು ಗುರುಗಳಂತೆಯೇ ಧಾರ್ಮಿಕಹಾಗೂ ಕೃಷಿ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಮುನ್ನಡೆಸಿದರಾದರೂ ತಮ್ಮ ತೀವ್ರಅನಾರೋಗ್ಯದ ಕಾರಣ ಈಗಿನ ಶ್ರೀಗಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ನೇಮಿಸಿಕೊಂಡು1999ರ ಸೆಪ್ಟೆಂಬರ್ 01ರಲ್ಲಿ ಚಿಕ್ಕವಯಸ್ಸಿನಲ್ಲಿಯೇ ಲಿಂಗೈಕ್ಯರಾದರು.ಹಿಂದಿನ ಶ್ರೀಗಳ ಐಕ್ಯಾನಂತರ 2002ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದವರು ಈಗಿನಶ್ರೀಗಳಾದ ಶ್ರೀ ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು. ಜೇವರ್ಗಿ ತಾಲ್ಲೂಕಿನ ಸೊನ್ನಗ್ರಾಮದಲ್ಲಿ ಜನಿಸಿದ ಶ್ರೀಗಳು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೊನ್ನದˉÉ್ಲೀ ಮುಗಿಸಿ ನಂತರದಶಿಕ್ಷಣವನ್ನು ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿ ಹಾಗೂ ಆಧ್ಯಾತ್ಮ ಶಿಕ್ಷಣವನ್ನು ಶಿವಯೋಗಮಂದಿರದಲ್ಲಿ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿ ಆಧಿಕಾರ ವಹಿಸಿಕೊಂಡರು.2002ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು ಕಡಿಮೆ ಅವಧಿüಯಲ್ಲಿಯೇ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃಧ್ಧಿಗೊಳಿಸುತ್ತಾ ಮುನ್ನಡೆಸುತ್ತಿದ್ದಾರೆ.ಕರ್ತೃಗುರುಗಳಂತೆಯೇ ಕೃಷಿ ಸಂಬಂಧಿತ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿರುವಶ್ರೀಗಳು ಕೃಷಿಗೆ ಹಾಗೂ ಕೃಷಿಕರಿಗೆ ನೆರವಾಗುವ ರೀತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನುಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಹಾಗೂ ಶ್ರೀಮಠದ ವತಿಯಿಂದ ಕೃಷಿಯಲ್ಲಿವಿಶೇಷವಾಗಿ ಬೆಳೆ ತಂದವರಿಗೆ (ರೈತರಿಗೆ) ಪ್ರತಿ ವರ್ಷ ‘ಕೃಷಿ ಋಷಿ’ ಪ್ರಶಸ್ತಿಯನ್ನು ಪ್ರದಾನಮಾಡುತ್ತಾ ಬಂದಿದ್ದಾರೆ. ಶ್ರೀಮಠದ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾˉÉಗಳನ್ನುನಡೆಸˉÁಗುತ್ತಿದ್ದು ಈ ಮಕ್ಕಳ ವಸತಿಗೋಸ್ಕರ ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿ ಬಡಮಕ್ಕಳವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡˉÁಗುತ್ತಿದೆ.
ವಿಶೇಷತೆ:
ಶ್ರೀಮಠದ ವತಿಯಿಂದ ಕೃಷಿಯಲ್ಲಿ ವಿಶೇಷವಾಗಿ
ಬೆಳೆ ತಂದವರಿಗೆ (ರೈತರಿಗೆ) ಪ್ರತಿ ವರ್ಷ
‘ಕೃಷಿ ಋಷಿ’ ಪ್ರಶಸ್ತಿ ಪ್ರದಾನ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು
Place :
ಸೊನ್ನ, ಜೇವರ್ಗಿ ತಾ||
Pattadikara :
2002
Photo :
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜಾ ಕಾರ್ಯಕ್ರಮ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪಥಸಂಚಲನ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು. ಶಾª್ರÀಣ ಮಾಸದ ಬೆನಕನ ಅಮವಾಸ್ಯೆ ದಿನ ಲಿಂ. ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಸ್ವಾಮಿಗಳ ಪುಣ್ಯಾರಾಧನೆ. ಪುಷ್ಯ ಶುದ್ಧ ಚೌತಿಗೆ ಪೂಜ್ಯ ಶ್ರೀ ಘನಮಠ ಶಿವಯೋಗಿಗಳ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ, ಸಾಮೂಹಿಕ ವಿವಾಹಗಳು ಹಾಗೂ ವಿವಿಧ ಕಾರ್ಯಕ್ರಮಗಳು.
Institutions
ಸಂಸ್ಕøತ ಪಾಠಶಾˉÉ. ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀ ಶಾˉÉ. ವಿದ್ಯಾರ್ಥಿನಿಲಯ.