Shree Topinakatti Samsthana Brahanmatha, Devarabhupura

Shree Topinakatti Samsthana Brahanmatha, Devarabhupura Claimed

ಶ್ರೀ ತೋಪಿನಕಟ್ಟಿ ಸಂಸ್ಥಾನ ಬೃಹನ್ಮಠ, ದೇವರಭೂಪುರ

Average Reviews

Description

ಶ್ರೀ ತೋಪಿನಕಟ್ಟಿ ಸಂಸ್ಥಾನ ಬೃಹನ್ಮಠ, ದೇವರಭೂಪುರ

ಕರ್ತೃ – ಶ್ರೀ ಷ.ಬ್ರ. ಮಳೇಸ್ವಾಮಿ ಶಿವಾಚಾರ್ಯ ಮಹಾಸ್ವಾಮಿಗಳು

ದೇವರ ಭೂಪುರ ಗ್ರಾಮದ ಹೊರವಲಯದಲ್ಲಿ ಶ್ರೀ ಷ.ಬ್ರ ಮಳೆಸ್ವಾಮಿಶಿವಾಚಾರ್ಯರಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ತೋಪಿನಕಟ್ಟಿ ಸಂಸ್ಥಾನಬೃಹನ್ಮಠವು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬೆಳೆದುಬಂದಿದೆ. ಶ್ರೀಮಠವುಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠಕ್ಕೂ ಹಾಗೂ ಇಲ್ಲಿಗೆ ಸಮೀಪದಲ್ಲಿರುವ ಸುಕ್ಷೇತ್ರ ಅಮರೇಶ್ವರದ ಶ್ರೀಅಮರೇಶ್ವರ ದೇವಸ್ಥಾನಕ್ಕೂ ಅನನ್ಯ ಸಂಬಂಧವಿದ್ದು ಒಂದಕ್ಕೊಂದು ಬೆಸೆದುಕೊಂಡುಬಂದಿವೆ. ಪರಂಪರೆಯ ಗುರುಗಳೊಬ್ಬರ ಆಶೀರ್ವಾದ ಬಲದಿಂದ ಜನ್ಮ ತಾಳಿದ ಶ್ರೀಅಮರೇಶ್ವರು ಪವಾಡ ಪುರುಷರಾಗಿ ಶ್ರೀಮಠದ ಗುರುಗಳ ಕೃಪಾಶೀರ್ವಾದದಿಂದ ಬೆಳೆದುಭಕ್ತರನ್ನು ಉದ್ಧರಿಸಿದ್ದರು ಎಂದು ತಿಳಿದುಬರುತ್ತದೆ. ಅಮರೇಶ್ವರರು ಭಕ್ತರಲ್ಲಿ ಧರ್ಮಜಾಗೃತಿಮೂಡಿಸಿ ಧರ್ಮದ ತಳಹದಿಯ ಮೇˉÉ ಸಮಾಜವನ್ನು ಕಟ್ಟಲು ಶ್ರಮವಹಿಸಿ ಶ್ರೀಮಠದಿಂದ2 ಕಿ.ಮೀ. ಅಂತರದಲ್ಲಿ ನೆˉÉನಿಂತು ಜೀವಂತ ಸಮಾಧಿಯಾದರೆಂದು ಹೇಳˉÁಗುತ್ತಿದ್ದುಅದುವೇ ಈಗಿನ ಸುಕ್ಷೇತ್ರ ಅಮರೇಶ್ವರದ ಶ್ರೀ ಅಮರೇಶ್ವರ ದೇವಸ್ಥಾನ.ಶ್ರೀಮಠದ ಆಶ್ರಯದಲ್ಲಿ ಬೆಳೆದ ಅನೇಕ ಗುರುಗಳು ಈ ನಾಡನ್ನು ಬೆಳಗಿದ್ದಾರೆ.ಅದರಲ್ಲಿ ಪ್ರಮುಖವಾದವರು ಶ್ರೀ ಸಿದ್ಧಾರೂಢರು. ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು 12ವರ್ಷಗಳ ಕಾಲ ಶ್ರೀಮಠದಲ್ಲಿ ನೆˉÉಸಿ ತಮ್ಮ ಗುರುಗಳಾದ ಶ್ರೀ ಷ.ಬ್ರ. ಅಮರೇಶ್ವರ ಗಜದಂಡಶಿವಾಚಾರ್ಯರ ಸೇವೆ ಮಾಡಿದ್ದರೆಂದು ತಿಳಿದುಬರುತ್ತದೆ. ಗುರುಗಳ ಕೃಪಾಶೀರ್ವಾದಹಾಗೂ ಮಾರ್ಗದರ್ಶನದಲ್ಲಿ ಸಾಧನೆಯ ಸಿದ್ಧಿಯನ್ನು ಕಂಡುಕೊಂಡ ಸಿದ್ಧಾರೂಢರುಇಲ್ಲಿಂದ ಮುಂದೆ ಹೊರಟು ಹುಬ್ಬಳ್ಳಿಯಲ್ಲಿ ನೆˉÉನಿಂತು ಇಡೀ ˉÉೂೀಕಕ್ಕೆ ತಮ್ಮದೇ ಆದನೂತನ ಆರೂಢ ಪರಂಪರೆಯನ್ನು ಕೊಡುಗೆಯಾಗಿ ನೀಡಿದರು. ಅದೇ ರೀತಿ ನಲವತ್ತಾಡದಶರಣರು ಸಹ ಶ್ರೀಮಠದˉÉ್ಲೀ ಕೆಲವು ಕಾಲ ನೆˉÉನಿಂತು ಗುರುಗಳ ಕೃಪಾಶೀರ್ವಾದದಿಂದಆಧ್ಯಾತ್ಮಿಕ ಸಿದ್ಧಿಯನ್ನು ಪಡೆದರೆಂದು ತಿಳಿದುಬರುತ್ತದೆ.ಶ್ರೀಮಠವು ಪುರಾತನ ಕಾಲದ್ದಾದರೂ ಪರಂಪರೆಯ ಬಗ್ಗೆ ನಿಖರತೆಯಿಲ್ಲ.18ನೇ ಶತಮಾನದಲ್ಲಿ ಗುರುಗುಂಟಾ ಸಂಸ್ಥಾನದ ದೊರೆಗಳಿಗೆ ತಮ್ಮ ಪವಾಡವನ್ನು ತೋರಿಸಿಸೊಕ್ಕಿದ ಗಜದ ಮದವನ್ನಡಗಿಸಿದ್ದರಿಂದಾಗಿ ದೊರೆಗಳು ಶ್ರೀಮಠದ ಶ್ರೀಗಳವರನ್ನುಗೌರವಿಸಿ ‘ಶ್ರೀ ಗಜದಂಡ ಶಿವಾಚಾರ್ಯ’ರೆಂಬ ಬಿರುದನ್ನು ನೀಡಿದರು. ಅಲ್ಲಿಂದ ಮುಂದೆಪಟ್ಟಕ್ಕೆ ಬಂದ ಎˉÁ್ಲ ಶ್ರೀಗಳು ಶ್ರೀ ಗಜದಂಡ ಶಿವಾಚಾರ್ಯರೆಂಬ ಹೆಸರನ್ನೇ ಅಭಿದಾನಪಡೆದು ಅಧಿಕಾರಕ್ಕೆ ಬರುತ್ತಿದ್ದಾರೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಗಜದಂಡ ಶಿವಾಚಾರ್ಯಸ್ವಾಮಿಗಳು 1985ರಲ್ಲಿ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದುಭಕ್ತರಿಗೆ ಸನ್ಮಾರ್ಗ ತೋರಿ 2005ರ ಜುˉÉೈ 16ರಂದು ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಗಜದಂಡ ಶಿವಾಚಾರ್ಯ ಸ್ವಾಮಿಗಳು ಹಿಂದಿನಗುರುಗಳಿಂದ 2005ರ ಜೂನ್ 26ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಸ್ವೀಕರಿಸಿದರು.ಶ್ರೀಗಳು ಹಿಂದಿನ ಶ್ರೀಗಳ ಮಾರ್ಗದರ್ಶನದಲ್ಲಿ ಹೆಚ್ಚು ಪರಿಪಕ್ವಗೊಂಡು ತಮ್ಮ ಧಾರ್ಮಿಕಆಚರಣೆಗಳ ಮೂಲಕ ಭಕ್ತರಲ್ಲಿ ಹೆಚ್ಚಿನ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ. ಶ್ರೀಗಳುಇನ್ನೂ ಯುವಕರಾಗಿದ್ದು ಹೆಚ್ಚಿನ ಕ್ರಿಯಾಶೀಲತೆಯಿಂದ ಶ್ರೀಮಠದ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಶ್ರೀಮಠದಲ್ಲಿ ಅಧಿಕಾರಕ್ಕೆಬರುವ ಎˉÁ್ಲ ಶ್ರೀಗಳು ಶ್ರೀಮಠದ ಜೊತೆಯಲ್ಲಿ ಶ್ರೀ ಅಮರೇಶ್ವರ ಸುಕ್ಷೇತ್ರದಕಾರ್ಯಕ್ರಮಗಳ ಸಾನಿಧ್ಯ ವಹಿಸುತ್ತಾ ಬರುವುದು ಪರಂಪರೆಯಾಗಿದೆ. ಈಗಿನ ಶ್ರೀಗಳುಸಹ ಆ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ವಿಶೇಷತೆ:

ಪರಮಪೂಜ್ಯ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳು

ಹುಬ್ಬಳ್ಳಿಗೆ ತೆರಳುವ ಪೂರ್ವದಲ್ಲಿ

12 ವರ್ಷಗಳ ಕಾಲ ನೆˉÉನಿಂತ ಮಠ.

Swamiji

Swamiji Name :
ಶ್ರೀ ಷ.ಬ್ರ. ಗಜಗಂಡ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
29-3-1992
Place :
ದೇವರಭೂಪುರ, ಲಿಂಗಸೂಗೂರು ತಾ||
Pattadikara :
26-6-2005
Photo :

Programs

¥ತಿÀ್ರ ಅಮವಾಸ್ಯೆಗೆ ಸುಕ್ಷೇತ್ರ ಅಮರೇಶ್ವರದಲ್ಲಿ ಶ್ರೀಮಠದ ಶ್ರೀಗಳ ಸಮ್ಮುಖದಲ್ಲಿ ದೇವಸ್ಥಾನದ ಕಾರ್ಯಕ್ರಮಗಳು ನಡೆಯುತ್ತವೆ. ಶಾª್ರÀಣ ಮಾಸದಲ್ಲಿ ಪ್ರತಿ ಸೋಮವಾರ ಸುಕ್ಷೇತ್ರ ಅಮರೇಶ್ವರದಲ್ಲಿ ಶ್ರೀಗಳ ಸಮ್ಮುಖದಲ್ಲಿ ಸೇವಾ ಹಾಗೂ ಮೂರು ಅಥವಾ ನಾಲ್ಕನೇ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮ. ಐದನೇ ಸೋಮವಾರ ಗುಂತಗೋಳ ಸಂಸ್ಥಾನದ ಕಾರ್ಯಕ್ರಮ. ಆರನೇ ಸೋಮವಾರ ಗುರುಗುಂಟಾ ಸಂಸ್ಥಾನದ ಕಾರ್ಯಕ್ರಮ. ಏಳನೇ ಸೋಮವಾರ ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮ. ಕಾರ್ತೀಕ ಮಾಸದ ದೀಪಾವಳಿ ಪಾಡ್ಯಕ್ಕೆ ಶ್ರೀಗಳ ಸಮ್ಮುಖದಲ್ಲಿ ಅಮರೇಶ್ವರ ಸ್ವಾಮಿಗೆ ಕಂಕಣ ಕಟ್ಟುವುದು. bಟಿÀ ್ಟ ಅಮವಾಸ್ಯೆಯ ನಂತರ ಪಂಚಮಿ ತಿಥಿಯಂದು ದೀಪೋತ್ಸವ, ಷಷ್ಠಿ ತಿಥಿಯಂದು ರಥೋತ್ಸವ. ಶಿವರಾತ್ರಿ ಶಿವಯೋಗದಂದು ಗುಂತಗೋಳದಲ್ಲಿ ವಿಶೇಷ ಪೂಜೆ ಹಾಗೂ ಅಮವಾಸ್ಯೆ ನಂತರದ ಐದನೇ ದಿವಸ ಅಮರೇಶ್ವರ ಸ್ವಾಮಿಗೆ ಕಂಕಣ ಕಟ್ಟುವುದು. ಫಾಲ್ಗುಣ ಶುದ್ಧ ತ್ರಯೋದಶಿಗೆ ಪ್ರಥಮ ರಥೋತ್ಸವ, ಗುರುಗುಂಟಾ ಸಂಸ್ಥಾನದಲ್ಲಿ ಶ್ರೀಗಳಿಗೆ ಪಲ್ಲಕ್ಕಿ ಸೇವೆ, ಮಾರನೇ ದಿನ ದ್ವಿತೀಯ ರಥೋತ್ಸವ ಹಾಗೂ ಗುಂತಗೋಳ ಸಂಸ್ಥಾನದಲ್ಲಿ ಪಲ್ಲಕ್ಕಿ ಸೇವೆ, ಹುಣ್ಣಿಮೆಯ ದಿನ ಬೆಳಗ್ಗೆ ತೃತೀಯ ರಥೋತ್ಸವ, ಸಂಜೆ ಕಳಸಾರೋಹಣ ನಂತರ ಶ್ರೀ ಅಮರೇಶ್ವರ ಮಹಾರಥೋತ್ಸವ. ಫಾಲ್ಗುಣ ಬಹುಳ ದ್ವಿತೀಯದಂದು ರಥೋತ್ಸವ; ಆದಯ್ಯ, ಮಾಳಗುಂಡಮ್ಮ ಮದುವೆ ಕಾರ್ಯಕ್ರಮ ಹಾಗೂ ಗುರುಗಳು, ಸಂಸ್ಥಾನಿಕರ ಹೂವಿನ ಚೆÀಂಡಾಟ, ಐದನೇ ದಿನದಂದು ಕಡುಬಿನ ಕಾಳಗ. ಆಷಾಢ ಶುದ್ಧ ದಶಮಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

Photos

Full Address Kannada

ಶ್ರೀ ತೋಪಿನಕಟ್ಟಿ ಸಂಸ್ಥಾನ ಬೃಹನ್ಮಠ ದೇವರಭೂಪುರ - 584 139 ಲಿಂಗಸೂಗೂರು ತಾ||, ರಾಯಚೂರು ಜಿ||

Map

Near by Places

ಅಮರೇಶ್ವರ ಕ್ರಾಸ್ - 2 ಕಿ.ಮೀ. ಲಿಂಗಸೂಗೂರು - 18 ಕಿ.ಮೀ. ತಿಥಿಣಿ ಬ್ರಿಡ್ಜ್ - 20 ಕಿ.ಮೀ. ರಾಯಚೂರು - 100 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!