ನೀಲಗಲ್ಲು ಗ್ರಾಮದಲ್ಲಿ ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಬೃಹನ್ಮಠವು ಪುರಾತನವಾದ ಇತಿಹಾಸವನ್ನು ಹೊಂದಿದ್ದು ಶ್ರೀರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳು ಧರ್ಮ ಪ್ರಚಾರಾರ್ಥ ಸಂಚಾರ ಮಾಡುತ್ತಾ ನೀಲಗಲ್ಲು ಗ್ರಾಮಕ್ಕೆ ಆಗಮಿಸಿಭಕ್ತರ ಸಹಕಾರದಿಂದ ಶ್ರೀಮಠವನ್ನು ಸ್ಥಾಪಿಸಿದರು.ಕರ್ತೃಗುರುಗಳು ಪವಾಡಪುರುಷರಾಗಿದ್ದು ಭಕ್ತರಲ್ಲಿ ವೀರಶೈವ ಧರ್ಮದಆಚರಣೆಗಳು, ಅಷ್ಟಾವರಣ, ಪಂಚಾಚಾರ ಹಾಗೂ ಷಟ್ಸ್ಥಲಗಳ ಬಗ್ಗೆ ಅರಿವು ಮೂಡಿಸಿಧಾರ್ಮಿಕ ಸಂಸ್ಕಾರವನ್ನು ನೀಡಿದ್ದರು. ಹಾಗೂ ಶ್ರೀಮಠದ ಧಾರ್ಮಿಕ ಆಚರಣೆಗಳಲ್ಲಿಹೆಚ್ಚಿನ ಭಕ್ತರು ಭಾಗವಹಿಸುವಂತೆ ಮಾಡಿ ಸೂಕ್ತ ಮಾರ್ಗದರ್ಶನ ಮಾಡಿದ್ದರು.ಶ್ರೀಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 8 ಜನ ಶ್ರೀಗಳು ಅಧಿಕಾರ ನಡೆಸಿಶ್ರೀಮಠವನ್ನು ಅಭಿವೃದ್ಧಿಗೊಳಿಸಿದ್ದು ಈಗಿನ ಹಿರಿಯ ಶ್ರೀಗಳು 9ನೇ ಶ್ರೀಗಳೆಂದುಹೇಳˉÁಗಿದೆ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳುಮಹಾಸಿದ್ಧಿ ಪುರುಷರಾಗಿ, ಸ್ವತಃ ಆಯುರ್ವೇದ ಪಂಡಿತರಾಗಿ ಈ ಭಾಗದ ಜನಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಿದ್ದರು.ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಪಂಚಾಕ್ಷರಿ ಶಿವಾಚಾರ್ಯರು 1964ರಲ್ಲಿತಮ್ಮ 12ನೇ ವಯಸ್ಸಿನˉÉ್ಲೀ ಶ್ರೀಮಠದ ಪಟ್ಟಕ್ಕೆ ಬಂದಿದ್ದು ನಂತರ ವಿದ್ಯಾಭ್ಯಾಸವನ್ನುಮುಂದುವರೆಸಿ ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಪಾರ ಪಾಂಡಿತ್ಯವನ್ನುಸಂಪಾದಿಸಿದವರು. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕ ಆಚರಣೆ ಹಾಗೂ ಸಾಮಾಜಿಕಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ.ಹಾಗೂ ಆಗಾಗ ವಿವಿಧ ಮಠಾಧೀಶರು, ವಿದ್ವಾಂಸರನ್ನು ಕರೆಸಿ ಧರ್ಮೋಪದೇಶ,ಉಪನ್ಯಾಸಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳುಇತ್ತೀಚೆಗೆ 2014ರ ಜೂನ್ 5ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಅಘೋರ ತಪಸ್ವಿರೇಣುಕ ಶಾಂತಮಲ್ಲ ಶಿವಾಚಾರ್ಯರನ್ನು ಪಟ್ಟಕ್ಕೆ ತಂದಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1952
Place :
ನೀಲಗಲ್ಲು, ದೇವದುರ್ಗ ತಾ||
Pattadikara :
1964
Photo :
Swamiji Name :
ಶ್ರೀ ಅಘೋರ ತಪಸ್ವಿ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು
Date of Birth :
20-5-1995
Place :
ನೀಲಗಲ್ಲು, ದೇವದುರ್ಗ ತಾ||
Pattadikara :
5-6-2014
Photo :
Programs
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶಾª್ರÀಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು. ಪುಷ್ಯ ಮಾಸದಲ್ಲಿ ಶ್ರೀಗುರು ಶಾಂತಮˉÉ್ಲೀಶ್ವರ ಜಾತ್ರೆ.
Full Address Kannada
ಶ್ರೀ ಬೃಹನ್ಮಠ ನೀಲಗಲ್ಲು - 584 136 ದೇವದುರ್ಗ ತಾ||, ರಾಯಚೂರು ಜಿ||