ಕರ್ತೃ – ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಮೈಸೂರು ಜಿˉÉ್ಲ ಟಿ.ನರಸೀಪುರ ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ.ದೂರದಲ್ಲಿರುವ ಬೆನಕನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ 1950ರ ಸುಮಾರಿಗೆ ಶ್ರೀ ಷ.ಬ್ರ.ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವುತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನುನೆˉÉಗೊಳಿಸಿದೆ. ಶ್ರೀ ಪಟ್ಟದ ಮಠವು ಪಂಚಪೀಠಗಳ ಸಂಪ್ರದಾಯವನ್ನು ಪಾಲಿಸಿಕೊಂಡುಬಂದಿದ್ದು ಭಕ್ತರಿಗೆ ಸನ್ಮಾರ್ಗ ತೋರುತ್ತಿದೆ.ಶ್ರೀ ಷ.ಬ್ರ. ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಂಚಾರದಲ್ಲಿ ಈಗ್ರಾಮಕ್ಕೆ ಆಗಮಿಸಿ ನೆˉÉನಿಂತು ಶ್ರೀ ಬಸವೇಶ್ವರ ದೇವಸ್ಥಾನ ಸಮೀಪ ಮಠವನ್ನುಸ್ಥಾಪಿಸಿಕೊಂಡಿದ್ದರು. ತಮ್ಮ ಆಚರಣೆಗಳ ಮೂಲಕ ಅಪಾರ ಭಕ್ತಬಳಗವನ್ನುಸಂಪಾದಿಸಿಕೊಂಡಿದ್ದ ಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀ ಷ.ಬ್ರ. ನಂಜುಂಡ ಶಿವಾಚಾರ್ಯಮಹಾಸ್ವಾಮಿಗಳು ಮಠದ ಪಟ್ಟಾಧಿಕಾರ ಸ್ವೀಕರಿಸಿದರು. ಇವರೂ ಕೂಡ ಹಿಂದಿನಗುರುಗಳಂತೆ ರಚನಾತ್ಮಕವಾಗಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾ ಭಕ್ತರಸಹಕಾರದೊಂದಿಗೆ ಶ್ರೀ ಬಸವೇಶ್ವರ ದೇವಾಲಯದ ಸುತ್ತಲಿನ ಜಾಗವನ್ನು ಬಳಸಿಕೊಂಡುಮಠದ ಕಟ್ಟಡವನ್ನು ನಿರ್ಮಿಸಿದರು. ಅಲ್ಲದೇ ಶ್ರೀ ಬಸವಲಿಂಗ ಶಿವಾಚಾರ್ಯರಗದ್ದುಗೆಯನ್ನು ನಿರ್ಮಿಸಿ ಪೂಜೆಗೆ ಒಳಪಡಿಸಿ 1993ರ ಜನವರಿ ಎರಡರಂದುಲಿಂಗೈಕ್ಯರಾಗಿದ್ದಾರೆ.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಮಹಾದೇವ ಶಿವಾಚಾರ್ಯ ಸ್ವಾಮಿಗಳು 1993ರಜನವರಿ 27ರಂದು ಪರಂಪರೆಯ ಮೂರನೆಯ ಗುರುಗಳಾಗಿ ಶ್ರೀಮಠದ ಅಧಿಕಾರಕ್ಕೆಬಂದಿದ್ದು ತುಂಬಾ ಕ್ರಿಯಾಶೀಲರಾಗಿ ಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುತಮ್ಮ ಕಾಯಕಯೋಗದಿಂದ ಹೆಸರು ಪಡೆದಿದ್ದು ಭಕ್ತರ ಧಾರ್ಮಿಕ ಕಾರ್ಯಗಳಲ್ಲಿಪಾˉÉ್ಗೂಂಡು ಮಠವನ್ನು ಸಮಾಜ ಮುಖಿಯನ್ನಾಗಿ ಮಾಡಿದ್ದಾರೆ. ಶ್ರೀಮಠದ ಗದ್ದುಗೆಗಳಿಗೆಹಾಗೂ ಬಸವೇಶ್ವರ ಸ್ವಾಮಿಯ ಮೂರ್ತಿಗೆ ನಿತ್ಯ ಪೂಜೆ ನಡೆಯುತ್ತಿದ್ದು ವಿಶೇಷಸಂದರ್ಭಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ.
Swamiji
Swamiji Name :
ಶ್ರೀ ಷ.ಬ್ರ. ಮಹಾದೇವ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1971
Pattadikara :
27-01-1993
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಹಾಗೂ ಶಿವರಾತ್ರಿಗಳಲ್ಲಿ ವಿಶೇಷ
ಧಾರ್ಮಿಕ ಆಚರಣೆಗಳು
ಪ್ರತಿ ದಿನ ಎರಡೂ ವೇಳೆ ಪೂಜೆ
ವಾರ್ಷಿಕ ಪುಣ್ಯಾರಾಧನೆ
Photos
Full Address Kannada
ಶ್ರೀ ಪಟ್ಟದ ಮಠ
ಬೆನಕನಹಳ್ಳಿ - 571 110
ಟಿ.ನರಸೀಪುರ ತಾ||, ಮೈಸೂರು ಜಿಲ್ಲೆ