ಮೈಸೂರು ಜಿˉÉ್ಲ ಪಿರಿಯಾಪಟ್ಟಣ ತಾಲ್ಲೂಕು ಕೇಂದ್ರದಿಂದ 28 ಕಿ.ಮೀ.ದೂರದಲ್ಲಿರುವ ದಿಂಡಗಾಡು ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಬಸವ ಜ್ಯೋತಿ ಮಠವುತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. ಕಳೆದಐವತ್ತು ವರ್ಷಗಳಿಂದೀಚೆಗೆ ಪ್ರಾರಂಭಗೊಂಡಿರುವ ಶ್ರೀಮಠವನ್ನು ಮೊದಲು ಶ್ರೀಶಿವಾನಂದ ಸ್ವಾಮಿಗಳೆಂಬುವವರು ಸಣ್ಣ ಹೆಂಚಿನ ಮನೆಯಲ್ಲಿ ಸ್ಥಾಪಿಸಿ ನಂತರ ಸಂಚಾರಹೋಗಿದ್ದಾರೆಂದು ಹೇಳˉÁಗುತ್ತದೆ. ಆನಂತರ ಬೆಟ್ಟದಪುರದ ಶ್ರೀ ಸಲೀˉÁಖ್ಯ ಮಠದ ಶ್ರೀಚನ್ನಬಸವ ದೇಶಿಕೇಂದ್ರ ಸ್ವಾಮಿಗಳ ಪ್ರೇರಣೆಯಲ್ಲಿ 1986ರಲ್ಲಿ ಬೆಟ್ಟದಪುರದˉÉ್ಲೀ ಅಧಿಕಾರವಹಿಸಿಕೊಂಡ ಶ್ರೀ ಮ.ನಿ.ಪ್ರ. ಅಪ್ಪಾಜಿ ಸ್ವಾಮಿಗಳು 1988ರ ಮಾರ್ಚ್ 3ರಲ್ಲಿದಿಂಡಗಾಡುವಿಗೆ ಆಗಮಿಸಿ ಮಠವನ್ನು ಪುನರ್ ಸ್ಥಾಪಿಸಿದ್ದಾರೆ.ಶ್ರೀ ಅಪ್ಪಾಜಿ ಸ್ವಾಮಿಗಳು ದಿಂಡಗಾಡುವಿಗೆ ಆಗಮಿಸಿದಾಗ ಇದ್ದ ಸಣ್ಣ ಹೆಂಚಿನಮಠವು ಶಿಥಿಲಗೊಂಡಿತ್ತು. ಅದನ್ನು ದುರಸ್ಥಿತಗೊಳಿಸಿಕೊಂಡ ಶ್ರೀಗಳು ಹಂತ ಹಂತವಾಗಿಶ್ರೀಮಠದ ಪರಿಸ್ಥಿತಿಯನ್ನು ಸುದಾರಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಧಾರ್ಮಿಕಆಚರಣೆಗಳೊಂದಿಗೆ ಭಕ್ತರ ಮನೆ ಮನೆಗೆ ತೆರಳಿ ಅಲ್ಲಿನ ಆಚರಣೆಗಳಲ್ಲಿ ಪಾˉÉ್ಗೂಳ್ಳುತ್ತಾಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಆಗಾಗ ಶ್ರೀಮಠದಲ್ಲಿ ಕೆಲ ಸಾಮಾಜಿಕ ಚಟುವಟಿಕೆಗಳನ್ನುನಡೆಸುವ ಶ್ರೀಗಳು ಭಕ್ತರ ಸಹಕಾರದೊಂದಿಗೆ ಹೆಂಚಿನ ಮನೆಯ ಪಕ್ಕ ನೂತನ ಕಟ್ಟಡವನ್ನುನಿರ್ಮಿಸಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ.ಶ್ರೀ ಅಪ್ಪಾಜಿ ಸ್ವಾಮಿಗಳು ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿಅಮವಾಸ್ಯೆಗಳಲ್ಲಿ ವಿಶೇಷ ಪೂಜೆ ಹಾಗೂ ಬಸವ ಜಯಂತಿ ಆಚರಣೆ ನಡೆಸಿಕೊಂಡುಬರುತ್ತಿದ್ದಾರೆ. ವೀರಶೈವ ಸಾಹಿತ್ಯವನ್ನು ಅಭ್ಯಸಿಸಿರುವ ಶ್ರೀಗಳು ಭಕ್ತರಿಗೆ ಶರಣರುಹಾಕಿಕೊಟ್ಟ ತತ್ತ್ವಾಚರಣೆಗಳ ಅರಿವನ್ನು ಮೂಡಿಸುತ್ತಾ ಅವರಿಗೆ ಧರ್ಮಬೋದನೆಯಮೂಲಕ ಸಂಸ್ಕಾರ ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಪ್ಪಾಜಿ ಸ್ವಾಮಿಗಳು
Date of Birth :
01-06-1963
Place :
ಹಾಡ್ಯ, ಕೆ.ಆರ್.ನಗರ ತಾ||
Pattadikara :
1986
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಬಸವ ಜಯಂತಿ ಆಚರಣೆ
Photos
Full Address Kannada
ಶ್ರೀ ಬಸವ ಜ್ಯೋತಿ ಮಠ ದಿಂಡಗಾಡು,
ದೊಡ್ಡಕಮರಹಳ್ಳಿ ಪೋ. - 571 102
ಪಿರಿಯಾಪಟ್ಟಣ ತಾ||, ಮೈಸೂರು ಜಿಲ್ಲೆ