Shree Virakta Matha

Shree Virakta Matha Claimed

ಶ್ರೀ ವಿರಕ್ತ ಮಠ - ಸೂರಹಳ್ಳಿ

Average Reviews

Description

ಶ್ರೀ ವಿರಕ್ತ ಮಠ

ಕರ್ತೃ – ಪೂಜ್ಯ ಶ್ರೀ ನಿ.ಪ್ರ.ಸ್ವ. ಗಂಗಾಧರೇಶ್ವರ ಮಹಾಸ್ವಾಮಿಗಳು

ಮೈಸೂರು ಜಿˉÉ್ಲ ನಂಜನಗೂಡು ತಾಲ್ಲೂಕು ಕೇಂದ್ರದಿಂದ 15 ಕಿ.ಮೀ.ದೂರದಲ್ಲಿರುವ ಸೂರಹಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀವಿರಕ್ತಮಠವು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀ ಯಡೆಯೂರುಸಿದ್ದಲಿಂಗೇಶ್ವರ ಮಹಾಸ್ವಾಮಿಗಳ ನಂತರದ ಕಾಲಘಟ್ಟದಲ್ಲಿ ಸ್ಥಾಪಿತಗೊಂಡಿತೆಂದುಹೇಳˉÁದ ಶ್ರೀ ವಿರಕ್ತಮಠದ ಕರ್ತೃ ಗುರುಗಳು ಪೂಜ್ಯ ಶ್ರೀ ನಿ.ಪ್ರ.ಸ್ವ. ಗಂಗಾಧರೇಶ್ವರಮಹಾಸ್ವಾಮಿಗಳು.ಕರ್ತೃ ಗುರುಗಳಾದ ಶ್ರೀ ನಿ.ಪ್ರ.ಸ್ವ. ಗಂಗಾಧರೇಶ್ವರ ಮಹಾಸ್ವಾಮಿಗಳು ಹಾಗೂಅವರ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳಿಲ್ಲ. ಇಲ್ಲಿರುವ ಗದ್ದುಗೆಗಳಆಧಾರದ ಮೇˉÉ ಪರಂಪರೆಯಲ್ಲಿ 5 ಜನ ಶ್ರೀಗಳು ಅಧಿಕಾರ ನಡಿಸಿರಬಹುದೆಂದುಹೇಳಬಹುದು. ಆದರೆ ಶ್ರೀ ವಿರಕ್ತಮಠವು ಸುಮಾರು 400 ವರ್ಷಗಳಿಗೂ ಅಧಿಕ ಕಾಲಇವರುಗಳ ಮುಖೇನ ಸಾಗಿ ಬಂದು ಅಸ್ತಿತ್ತ್ವ ಉಳಿಸಿಕೊಂಡಿತ್ತು.ಪರಂಪರೆಯ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಗಂಗಾಧರ ಮಹಾಸ್ವಾಮಿಗಳುಕೆಲ ಕಾಲ ಖಾಲಿ ಉಳಿದಿರಬಹುದಾದ ಮಠದಲ್ಲಿ ಧಾರ್ಮಿಕ ಆಚರಣೆಗಳನ್ನುಪುನರಾರಂಭಿಸಿದರು. ಇವರ ಕಾಲದಲ್ಲಿ ಸೂರಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿಧಾರ್ಮಿಕ ಪ್ರಜ್ಞೆ ಮೂಡತೊಡಗಿತು. ಶ್ರೀಗಳು ಮಠದ ಮುಂಭಾಗದಲ್ಲಿ ಕˉÁ್ಯಣಿಯನ್ನುನಿರ್ಮಿಸಿದರು. ನಂತರ ಮಠದ ಕಟ್ಟಡವನ್ನು ಕರ್ತೃ ಗುರುಗಳ ಗದ್ದುಗೆಗೆ ಹೊಂದಿಕೊಂಡಂತೆವಿಸ್ತರಿಸಿದರು. ಶ್ರೀಗಳು ಶ್ರೀಮಠವನ್ನು ಅಭಿವೃದ್ದಿ ಕಾರ್ಯಗಳೊಂದಿಗೆ ಸಮರ್ಥವಾಗಿಮುನ್ನಡೆಸಿ 1955ರ ಜೂನ್ 9ರಲ್ಲಿ ಲಿಂಗೈಕ್ಯರಾದರು.ಹಿಂದಿನ ಗುರುಗಳಿರುವಾಗˉÉೀ ಶ್ರೀಮಠಕ್ಕೆ ನೇಮಕಗೊಂಡಿದ್ದ ಶ್ರೀ ನಿ.ಪ್ರ.ಸ್ವ.ನಾಗಭೂಷಣ ಸ್ವಾಮಿಗಳು ಗುರುಗಳ ಐಕ್ಯಾನಂತರ 1955ರ ಜೂನ್ 21ರಂದು ಶ್ರೀಮಠದಪಟ್ಟಾಧಿಕಾರ ಸ್ವೀಕರಿಸಿದರು. ತದನಂತರ ವಿದ್ಯಾಭ್ಯಾಸ ಮುಂದುವರೆಸಿದ ಶ್ರೀಗಳುಮೈಸೂರಿನಲ್ಲಿ ಅಭ್ಯಸಿಸಿದರು. ನಂತರ ಮಠಕ್ಕೆ ಮರಳಿ 1977ರಲ್ಲಿ ಹಳೆ ಮಠವನ್ನುಜೀರ್ಣೋದ್ದಾರ ಮಾಡಿಸಿದ್ದಾರೆ. ಶ್ರೀಮಠದಲ್ಲಿ ಐದು ಗದ್ದುಗೆಗಳಿದ್ದು ಅವುಗಳನ್ನು ನಿತ್ಯಪೂಜೆಗೆ ಒಳಪಡಿಸಿರುವ ಶ್ರೀಗಳು ಶ್ರೀ ಮಹಾದೇಶ್ವರ ದೇವಾಲಯದಲ್ಲಿ ಪ್ರತಿ ನಿತ್ಯ ಎರಡುವೇಳೆ ಪೂಜೆಯನ್ನು ನಡೆಸುತ್ತಿದ್ದಾರೆ. ಶ್ರೀಗಳು 2014ರಲ್ಲಿ ತಮ್ಮ ಉತ್ತರಾಧಿಕಾರಿಯನ್ನಾಗಿ ಶ್ರೀಕೆಂಡಗಣ್ಣ ದೇವರನ್ನು ನೇಮಿಸಿಕೊಂಡು ಸುತ್ತೂರಿನಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ.ಸ್ವ. ನಾಗಭೂಷಣ ಸ್ವಾಮಿಗಳು
Date of Birth :
16-02-1948
Place :
ಸೂರಹಳ್ಳಿ, ನಂಜನಗೂಡು ತಾ||
Pattadikara :
21-06-1955
Photo :

Programs

ಪ್ರತಿ ತಿಂಗಳ ಅಮವಾಸೆಗೆ ವಿಶೇಷ ಪೂಜೆ
ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ವಿರಕ್ತ ಮಠ
ಸೂರಹಳ್ಳಿ, ಕಸುವಿನಹಳ್ಳಿ ಪೋಸ್ಟ್ - 571 118
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ಸೂರಹಳ್ಳಿಗೇಟ್ - 2 ಕಿ.ಮೀ.
ಕಡಬನಕಟ್ಟೆಗೇಟ್ - 8 ಕಿ.ಮೀ.
ನಂಜನಗೂಡು - 15 ಕಿ.ಮೀ.
ಮೈಸೂರು - 44 ಕಿ.ಮೀ.

Statistic

11 Views
0 Rating
0 Favorite
0 Share
error: Content is protected !!