Shree Honnalagere Matha

Shree Honnalagere Matha Claimed

ಶ್ರೀ ಹೊನ್ನಲಗೆರೆ ಮಠ

Average Reviews

Description

ಶ್ರೀ ಹೊನ್ನಲಗೆರೆ ಮಠ – ನಂಜನಗೂಡು

ಕರ್ತೃ – ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಮೈಸೂರು ಜಿˉÉ್ಲ ನಂಜನಗೂಡು ಪಟ್ಟಣದ ಗೌರಿಘಟ್ಟದ ಬೀದಿಯಲ್ಲಿ ಅಸ್ತಿತ್ತ್ವಕ್ಕೆಬಂದಿರುವ ಶ್ರೀ ಹೊನ್ನಲಗೆರೆ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಪ್ರಚಲಿತಕ್ಕೆಬಂದಿದೆ. ಶ್ರೀಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿ ಪುತ್ರವರ್ಗದಪರಂಪರೆಯಲ್ಲಿ ಬೆಳೆದ ಬಂದಿದೆ. ಶ್ರೀ ಮಠದ ಮೂಲ ಮಠವು ಮಂಡ್ಯ ಜಿˉÉ್ಲ ಮದ್ದೂರುತಾಲ್ಲೂಕಿನ ಹೊನ್ನಲಗೆರೆಯಲ್ಲಿದ್ದು ಶ್ರೀಮಠದ ಕರ್ತೃಗುರುಗಳು ಪೂಜ್ಯ ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಗಳು.ಮೂಲ ಹೊನ್ನಲಗೆರೆಯ ಮಠಕ್ಕೆ ಸುಮಾರು 175 ವರ್ಷಗಳ ಇತಿಹಾಸವಿದ್ದುಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪಿಸಿ ಹೊನ್ನಲಗೆರೆ ಮಠಕ್ಕೆಶ್ರೀ ಮಹಾಲಿಂಗ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿದರು. ನಂತರಸಂಚಾರ ಹೊರಟ ಶ್ರೀಗಳು ನಂಜನಗೂಡಿಗೆ ಆಗಮಿಸಿ ಆಶ್ರಮವನ್ನು ಸ್ಥಾಪಿಸಿದರು. ಮುಂದೆಇದುವೇ ಶ್ರೀ ಹೊನ್ನಲಗೆರೆ ಮಠವೆಂದು ಹೆಸರಾಯಿತು. ಮುಂದೆ ನಂಜನಗೂಡಿನ ಮಠಕ್ಕೆಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಪೀಠಾಧಿಪತಿಗಳಾಗಿ ಭಕ್ತರನ್ನು ಪರಿಪಾಲಿಸಿದರು.ಪೂಜ್ಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ನಂತರ ಶ್ರೀಗಳು ತಮ್ಮ ಕರಕಮಲಸಂಜಾತರಾದ ಶ್ರೀ ಶಿವರುದ್ರಸ್ವಾಮಿಗಳನ್ನು 1929ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆತಂದು ಮರುವರ್ಷ ಲಿಂಗೈಕ್ಯರಾದರು. ನಂತರದಲ್ಲಿ ಶ್ರೀ ಮಹಾಲಿಂಗ ಸ್ವಾಮಿಗಳುಶ್ರೀಮಠದ ಪಟ್ಟಕ್ಕೆ ಬಂದು ಮಠವನ್ನು ಜೀರ್ಣಾಭಿವೃದ್ದಿಗೊಳಿಸಿದರು. ಇವರ ನಂತರಶ್ರೀಮಠಕ್ಕೆ ಪಟ್ಟಾಧಿಕಾರಗೊಂಡು ಬಂದವರು ಹಿಂದಿನ ಶ್ರೀಗಳಾದ ಲಿಂ. ಶ್ರೀ ಷ.ಬ್ರ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು.ಪೂಜ್ಯ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯರು ತಮ್ಮ ಆಚರಣೆಗಳಮೂಲಕ ಶ್ರೀಮಠಕ್ಕೆ ಭಕ್ತಬಳಗವನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದು 2001ರ ಜನವರಿ 5ರಲ್ಲಿ ಲಿಂಗೈಕ್ಯರಾಗಿದ್ದಾರೆ. ಪ್ರಸ್ತುತಶ್ರೀ ಇಮ್ಮಡಿ ಶಿವಮೂರ್ತಿ ದೇವರನ್ನು ಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಿದ್ದುಶ್ರೀಗಳು ವ್ಯಾಸಂಗದಲ್ಲಿದ್ದಾರೆ. ಶ್ರೀಮಠದಲ್ಲಿ ಪ್ರತಿ ವರ್ಷ ಪುಷ್ಯ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮಹೋತ್ಸವ ಆಚರಿಸಲ್ಪಡುತ್ತದೆ.

Swamiji

Swamiji Name :
ಶ್ರೀ ಇಮ್ಮಡಿ ಶಿವಮೂರ್ತಿ ದೇವರು
Date of Birth :
10-04-2000
Place :
ನಂಜನಗೂಡು, ಮೈಸೂರು ತಾ||
Photo :

Programs

ಪುಷ್ಯ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಹೊನ್ನಲಗೆರೆ ಮಠ
ಗೌರಿಘಟ್ಟದ ಬೀದಿ, ನಂಜನಗೂಡು - 571 301
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ಮೈಸೂರು - 23 ಕಿ.ಮೀ.
ರೈಲ್ವೆಸ್ಟೇಷನ್ - 500 ಮೀ.
ನಂಜನಗೂಡು - 300 ಮೀ.

Statistic

18 Views
0 Rating
0 Favorite
0 Share
error: Content is protected !!