Shree Pattada Matha

Shree Pattada Matha Claimed

ಶ್ರೀ ಪಟ್ಟದ ಮಠ

Average Reviews

Description

ಶ್ರೀ ಪಟ್ಟದ ಮಠ – ಕಸುವಿನಹಳ್ಳಿ

ಕರ್ತೃ – ಪರಮ ಪೂಜ್ಯ ಶ್ರೀ ಗಂಗಾಧರ ಮಹಾಸ್ವಾಮಿಗಳು

ಮೈಸೂರು ಜಿˉÉ್ಲ ನಂಜನಗೂಡು ತಾಲ್ಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿರುವ ಶ್ರೀ ಕಸುವಿನಹಳ್ಳಿ ಗ್ರಾಮದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವು ಶ್ರೀಸುತ್ತೂರು ಮಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಉತ್ತರದ ಕಡೆಯಿಂದ ಬಂದವರೆಂದು ಹೇಳˉÁದ ಪೂಜ್ಯ ಶ್ರೀ ಗಂಗಾಧರೇಶ್ವರಮಹಾಸ್ವಾಮಿಗಳು ಶ್ರೀಮಠದ ಕರ್ತೃಗುರುಗಳೆಂದು ಹೇಳˉÁಗುತ್ತದಾದರೂ ಅವರಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀ ಪಟ್ಟದ ಮಠದ ಮೂಲ ಮಠವು ಕಸುವಿನಹಳ್ಳಿಯಿಂದ 4 ಕಿ.ಮೀ.ದೂರದಲ್ಲಿರುವ ಮಾರಂಬಾಳು ಎಂಬ ಗ್ರಾಮದಲ್ಲಿದ್ದು ಇಂದಿಗೂ ಮಠದ ಅವಶೇಷಗಳಿವೆ.ಪೂಜ್ಯ ಶ್ರೀ ಗಂಗಾಧರೇಶ್ವರ ಮಹಾಸ್ವಾಮಿಗಳು ಇಲ್ಲಿನ ಪ್ರಶಾಂತ ವಾತಾವರಣದಲ್ಲಿನೆˉÉನಿಂತು ಧೀರ್ಘ ತಪಸ್ಸು, ಅನುಷ್ಠಾನಗಳ ಮೂಲಕ ಸಿದ್ದಿಯನ್ನು ಪಡೆದು ಆ ಮೂಲಕಜನರನ್ನು ಜಾಗೃತರನ್ನಾಗಿ ಮಾಡಿದ್ದರು. ಇಂದಿಗೂ ಕರ್ತೃಗಳ ಗದ್ದುಗೆ ಈ ಮೂಲಮಠದಲ್ಲಿಇದೆ. ಆದರೆ ಕರ್ತೃ ಗುರುಗಳ ನಂತರದ ಪರಂಪರೆಯ ಬಗ್ಗೆ ಸ್ಪಷ್ಟತೆಯಿಲ್ಲ ಮತ್ತು ಶ್ರೀಮಠವುಯಾರ ಕಾಲದಲ್ಲಿ ಕಸುವಿನಹಳ್ಳಿಗೆ ಸ್ಥಳಾಂತರಗೊಂಡಿತು ಎಂಬುದು ತಿಳಿಯುವುದಿಲ್ಲ.ಸುಮಾರು ವರ್ಷಗಳಿಂದ ಖಾಲಿ ಉಳಿದಿದ್ದ ಮಠಕ್ಕೆ ಈಗಿನ ಶ್ರೀ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳನ್ನು ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು ಆಯ್ಕೆಮಾಡಿ 1953ರಲ್ಲಿ ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ. ಅಂದಿನಿಂದಶ್ರೀಮಠದ ಧಾರ್ಮಿಕ ಆಚರಣೆಗಳು ಚುರುಕುಗೊಂಡು ಧರ್ಮಪ್ರಭೆ ಪ್ರಕಾಶಗೊಂಡಿತು.ಶ್ರೀಗಳು ಮೈಸೂರಿನ ಸುತ್ತೂರು ಮಠದಲ್ಲಿ ವೀರಶೈವ – ಆಗಮ ಶಾಸ್ತ್ರಗಳ ಕುರಿತು ದೀರ್ಘಅಧ್ಯಯನ ಮಾಡಿದವರು.ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯರು ಶ್ರೀಮಠದ ಅಧಿಕಾರಕ್ಕೆ ಬಂದನಂತರ ಶ್ರೀಮಠವು ಪ್ರಗತಿ ಪಥದತ್ತ ಮುನ್ನಡೆಯಿತು. ಮಠದ ಆವರಣದಲ್ಲಿರುವಶ್ರೀ ಮಹಾದೇಶ್ವರ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನಗಳನ್ನು ನವೀಕರಿಸಿ ಇವುಗಳ ಸುತ್ತಮಠದ ಕಟ್ಟಡವನ್ನು ವಿಸ್ತರಿಸಿದ್ದಾರೆ ಹಾಗೂ ತಮ್ಮ ಆಚರಣೆಗಳ ಮೂಲಕ ಅಪಾರ ಭಕ್ತರನ್ನುಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
1942
Place :
ಕಸುವಿನಹಳ್ಳಿ, ನಂಜನಗೂಡು ತಾ||
Pattadikara :
1953
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ ಶಿವರಾತ್ರಿ,
ಯುಗಾದಿ ಹಾಗೂ ಬಸವ ಜಯಂತಿ ಆಚರಣೆ

Photos

Full Address Kannada

ಶ್ರೀ ಪಟ್ಟದ ಮಠ
ಕಸುವಿನಹಳ್ಳಿ - 571 118
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ನಂಜನಗೂಡು - 18 ಕಿ.ಮೀ.
ಕೂಗ್ಲೂರು - 6 ಕಿ.ಮೀ.
ಮೈಸೂರು - 32 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!