Shree Gurur Malleshwara Mahasamsthana Trividha Dasoha Matha

Shree Gurur Malleshwara Mahasamsthana Trividha Dasoha Matha Claimed

ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ತ್ರಿವಿಧ ದಾಸೋಹ ಮಠ

Average Reviews

Description

ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ತ್ರಿವಿದ ದಾಸೋಹ ಮಠ – ದೇವನೂರು

ಕರ್ತೃ – ಪೂಜ್ಯ ಶ್ರೀ ಗುರುಮˉÉ್ಲೀಶ್ವರ ಮಹಾಸ್ವಾಮಿಗಳು

ದೇವನೂರು ಗ್ರಾಮ, ಮೈಸೂರು ಜಿˉÉ್ಲ ನಂಜನಗೂಡು ತಾಲ್ಲೂಕಿನ ಪೂರ್ವಕ್ಕೆ 15ಕಿ.ಮೀ. ದೂರದಲ್ಲಿರುವ ತಾಣ. ಶ್ರೀ ಮಹಾತ್ಮ ಗುರುಮˉÉ್ಲೀಶ್ವರರು ದೇವನೂರನ್ನು ತಮ್ಮಸುಕ್ಷೇತ್ರವಾಗಿಸಿಕೊಂಡು ಕುಗ್ರಾಮ ದೇವನೂರನ್ನು ಸುಕ್ಷೇತ್ರವಾಗಿಸಿದರು. ದಾವಣಗೆರೆ ಜಿˉÉ್ಲಹೊನ್ನಾಳಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಕ್ರಿ.ಶ. 1819ರಲ್ಲಿ ಜನಿಸಿದ ಶ್ರೀಗುರುಮˉÉ್ಲೀಶ್ವರರ ತಂದೆ ತಾಯಿಯವರು ಯಾವುದೋ ಸಕಾರಣವಾಗಿ ಮೈಸೂರಿಗೆ ಬಂದುವಾಸ್ತವ್ಯ ಹೂಡುತ್ತಾರೆ. ತಂದೆ-ತಾಯಿಯವರ ಪ್ರೀತಿಯ ಆರೈಕೆಯಲ್ಲಿ ಬೆಳೆದ ಮಗುಮುಂದೆ ಶ್ರೀ ಬೆತ್ತˉÉಗುಂಡೆ ಮಹಾಸ್ವಾಮಿಗಳ ಪ್ರೀತಿಯ ಶಿಷ್ಯರಾಗಿ ಮೈಸೂರಿನ ಚೌಕಿಮಠದಲ್ಲಿ ಕಂತೆ ಭಿಕ್ಷೆ ಕಾಯಕದ ಯೋಗದಲ್ಲಿ ನುರಿತು, ಕಾಯಕದ ಮಹತ್ವ ತಿಳಿಸುತ್ತಾಅಲ್ಲಲ್ಲಿ ಪವಾಡಗಳನ್ನೆಸಗಿ ಅರಮನೆ-ಗುರುಮನೆಗಳ ಗುರುವಾಗಿದ್ದರು.ಹೀಗೆ ಮೈಸೂರಿನಲ್ಲಿ ಪ್ರಸಿದ್ದಗೊಳ್ಳುತ್ತಿದ್ದ ಶ್ರೀ ಗುರುಮˉÉ್ಲೀಶ್ವರರರನ್ನುದೇವನೂರಿನ ಪಟೇˉï ಸುಬ್ಬೇಗೌಡರು ಸಕಾರಣಾರ್ಥವಾಗಿ ದೇವನೂರಿಗೆ ಕರೆತಂದರು.ಗುರುಗಳು ದೇವನೂರಿಗೆ ಬಂದು ದೇವನೂರನ್ನು ಅನ್ವರ್ಥನಾಮವಾಗಿಸಿದರು. ಮುಂದೆದೇವನೂರು ಗುರುಗಳ ಕರ್ಮಭೂಮಿಯಾಗಿ ಜನಪ್ರಿಯಗೊಂಡಿತು. 50ಕ್ಕೂ ಹೆಚ್ಚುವಸಂತಗಳನ್ನು ದೇವನೂರಲ್ಲಿ ಕಳೆದ ಶ್ರೀಗಳದು ಅಪೂರ್ವ ಸಾಧನೆ, ಸಿದ್ದಿಗಳ ಗಣಿ. ಈಭಾಗದ ಜನರ ಒಳಗಣ್ಣನ್ನು ತೆರೆಸಿ ಧರ್ಮಜಾಗೃತಿಯನ್ನುಂಟು ಮಾಡಿದ ಆಧುನಿಕಬಸವಣ್ಣನವರು ಶ್ರೀ ಗುರುಮˉÉ್ಲೀಶ್ವರರು.ಶ್ರೀ ಗುರು ಮˉÉ್ಲೀಶ್ವರರು ಅನೇಕ ಪವಾಡಗಳನ್ನೆಸಗಿ, ಮಹಾಜಂಗಮರಾಗಿನೂರಾರು ಕಥೆಗಳಲ್ಲಿ ಅನುಷ್ಠಾನಗೊಂಡು ದಾಸೋಹ ಮಠಗಳನ್ನು ಸಂಸ್ಥಾಪಿಸಿದವರು.ಮಹಿಮೆಯ ಶಿಷ್ಯರನ್ನು ಸಂಪಾದಿಸುತ್ತಾ ಕಾಯಕ ತತ್ತ್ವಕ್ಕೆ ಮಹತ್ವ ನೀಡಿದಗುರುಮˉÉ್ಲೀಶ್ವರರು ಕಂತೆ ಭಿಕ್ಷೆ ಕಾಯಕಕ್ಕೆ ಚಾಲನೆ ನೀಡಿದವರು. ಸಮಾಜದಲ್ಲಿದ್ದ ದೇವದಾಸಿಪದ್ದತಿಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು. ಈ ಪ್ರಾಂತ್ಯದˉÉ್ಲೀ ಅಸಂಖ್ಯಾತದಾಸೋಹ ಮಠಗಳ ಸ್ಥಾಪನೆಗೆ ಕಾರಣರಾದ ಶ್ರೀಗಳು ಭಜನಾ ಸಾಹಿತ್ಯಕ್ಕೆ ವಿಶಿಷ್ಟ ಆಯಾಮಒದಗಿಸಿದರು. ಇಂತಹ ಶ್ರೀಗಳು “ಶರಣರ ಸಾವನ್ನು ಮರಣದಲ್ಲಿ ಕಾಣು” ಎಂಬಂತೆ ಕ್ರಿ.ಶ.1899ರ ಜೂನ್ 25ರಂದು ಲಿಂಗದೊಳಗಾದರು. ಲಿಂಗಮಯ ಶರೀರ ಗದ್ದುಗೆಯಾಗಿಇಂದಿಗೂ ಸಹಸ್ರಾರು ಭಕ್ತರ ಪೆÇರೆಯುತ್ತಿದೆ.ಮಹಾತ್ಮ ಶ್ರೀ ಗುರುಮˉÉ್ಲೀಶ್ವರರಿಗೆ ಕಾರ್ಯಕ್ಷೇತ್ರವಾಗಿದ್ದ ದೇವನೂರು ಸಾವಿರಗಾವುದಗಳಿಗೆ ನೆಪ್ಪಾಯಿತು. ಶ್ರೀಗಳವರ ಗದ್ದುಗೆ ಸುತ್ತ ಮಠ ನಿರ್ಮಾಣವಾಗಿ ತ್ರಿವಿದದಾಸೋಹಕ್ಕೆ ಹೆಸರಾದ ಗುರುಮˉÉ್ಲೀಶ್ವರ ಮಹಾಸಂಸ್ಥಾನ ಮಠವೆಂದೇ ಪ್ರಸಿದ್ದಿಗೊಂಡಿತು.150 ವರ್ಷಗಳ ಚರಿತ್ರೆಯನ್ನು ಹೊಂದಿರುವ ಶ್ರೀಮಠವು ನಿತ್ಯ ನೂತನ ಬಸವ ಕˉÁ್ಯಣದಹಾದಿಯಲ್ಲಿ ನಡೆಯುತ್ತಿದೆ. ದಿನಂಪ್ರತಿ ನಡೆಯುವ ಅನ್ನ ದಾಸೋಹ ಶ್ರೀಮಠದಲ್ಲಿನಡೆಯುವ ಪವಾಡ ಸದೃಶವೇ ಸರಿ.ಈ ರೀತಿಯಾಗಿ ನಾಡಿನಾದ್ಯಂತ ಪ್ರಸಿದ್ದಗೊಂಡಿದ್ದ ಶ್ರೀಮಠದ ಪರಂಪರೆಯಲ್ಲಿಕರ್ತೃಗುರುಗಳ ನಂತರ ಶ್ರೀ ಭಿಕ್ಷದ ರಾಚಪ್ಪ ಮಹಾಸ್ವಾಮಿಗಳು ಹೆಗ್ಗುರುತಾದರು.ತದನಂತರ ಶ್ರೀ ತೋಂಟದಾರ್ಯರು, ಶ್ರೀ ಶಿವಬಸವ ಮಹಾಸ್ವಾಮಿಗಳು ಹಾಗೂ ಶ್ರೀಬಸವಣ್ಣ ಮಹಾಸ್ವಾಮಿಗಳವರು ದೇವನೂರು ದಾಸೋಹ ಮಠದ ಪೀಠಾಧಿಪತಿಗಳಾಗಿಭಕ್ತರಿಗೆ ಭಕ್ತಿರಸ ಉಣ್ಣಿಸುತ್ತಾ ಶ್ರೀಮಠದ ಸರ್ವಾಂಗೀಣ ಪ್ರಗತಿಗೆ ಸೇವೆ ಸಲ್ಲಿಸಿದರು.ಈ ಎಲ್ಲ ಶ್ರೀಗಳವರದು ಒಂದೊಂದು ದೀಶಕ್ತಿ. “ನುಡಿದಂತೆ ನಡೆದವರು,ನಡೆದಂತೆ ನುಡಿದವರು”. ಎಂದೂ ಕೀಳಾದರೇ ಹೊರತು ಮೇˉÁಗಲು ಬಯಸಲಿಲ್ಲ.ಹಾಗಾಗಿಯೇ ನಾಡಿನಾದ್ಯಂತ ಅಸಂಖ್ಯಾ ಮಠಗಳು ಸ್ಥಾಪಿತಗೊಂಡಿದ್ದು ಲಕ್ಷಾಂತರಭಕ್ತರನ್ನು ಸಂಪಾದಿಸಲು ಸಾಧ್ಯವಾದದ್ದು. ಈ ಮೂಲಕ ವೀರಶೈವ ಧರ್ಮದ ಬೆಳವಣಿಗೆಪೂರಕ ವಾತಾವರಣ ಸೃಷ್ಟಿಯಾಯಿತು. ಈ ಎˉÁ್ಲ ಗುರುಗಳು ಹಾಗೂ ಶಿಷ್ಯಪರಂಪರೆಗಳಿಬ್ಬರಿಗೂ ಎಲ್ಲಿಲ್ಲದ ಗೌರವಾದರಣೆ. ಮೇಲು-ಕೀಳು, ಬಡವ-ಬಲ್ಲಿದರೆನ್ನದೆಎಲ್ಲರಿಗೂ ಒಂದೇ ತತ್ತ್ವದಡಿ ಭಕ್ತಿ ಕಾಣಿಸಿದ ಮಹಾತ್ಮರು ಗುರುಮˉÉ್ಲೀಶ್ವರರಪರಂಪರೆಯವರು.ಶ್ರೀ ಬಸವಣ್ಣ ಮಹಾಸ್ವಾಮಿಗಳ ನಂತರ 1970ನೇ ಏಪ್ರಿˉïನಲ್ಲಿ ಶ್ರೀಗುರುಮˉÉ್ಲೀಶ್ವರ ಮಹಾಸಂಸ್ಥಾನ ತ್ರಿವಿದ ದಾಸೋಹ ಮಠದ ಮಠಾಧ್ಯಕ್ಷರಾಗಿ ಅಭಿನವಗುರುಮˉÉ್ಲೀಶ್ವರರಾದ ಪೂಜ್ಯ ಶ್ರೀ ಮಹಾಂತ ಮಹಾಸ್ವಾಮಿಗಳು ಅಧಿಕಾರ ಪಡೆದರು.ಇವರು ಅಧಿಕಾರಕ್ಕೆ ಬಂದ ನಂತರ ಮೂಲ ತತ್ತ್ವಕ್ಕೆ ಒತ್ತುಕೊಟ್ಟು ಧರ್ಮಪ್ರಸಾರಕ್ಕೆ ಕಂಕಣತೊಟ್ಟು ನಿಂತರು. ಶ್ರೀ ಗುರುಮˉÉ್ಲೀಶ್ವರರು ಹಾಗೂ ನಂತರದ ಗುರುಗಳು ಸ್ಥಾಪಿಸಿದ ಶಾಖಾಮಠಗಳ ಬೆಳವಣಿಗೆಗೆ ಸಹಾಯಕರಾಗಿರುವುದಲ್ಲದೆ ಇನ್ನೂ ಅನೇಕ ಶಾಖಾ ಮಠಗಳನ್ನುಸ್ಥಾಪಿಸಿದರು ಪ್ರಸ್ತುತ ಶ್ರೀ ಮಹಾಂತ ಮಹಾಸ್ವಾಮಿಗಳು.ಗ್ರಾಮೀಣ ಅಸಹಾಯಕರಿಗೆ ಅನ್ನದಾಸೋಹ ನೀಡಿದರೆ ಸಾಲದು. ಇವರಬದುಕು ಉಜ್ವಲವಾಗಬೇಕಾದರೆ ಅಕ್ಷರಜ್ಞಾನದ ಅರಿವು ಅವಶ್ಯಕವೆಂದರಿತ ಶ್ರೀ ಮಹಾಂತಮಹಾಸ್ವಾಮಿಗಳು 1971ರಲ್ಲಿ ಶ್ರೀ ಗುರುಮˉÉ್ಲೀಶ್ವರ ವಿದ್ಯಾಸಂಸ್ಥೆ (ರಿ)ಯನ್ನು ಸ್ಥಾಪಿಸಿದರು.ಇದರ ಅಡಿಯಲ್ಲಿ ಐದು ಕಡೆಗಳಲ್ಲಿ ಸಂಪೂರ್ಣ ಉಚಿತ (ದಾಸೋಹ)ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ್ದು ಇಲ್ಲಿ ಇರುವ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನೂಮಠವೇ ನಿರ್ವಹಿಸುತ್ತದೆ. ಇದರ ಜೊತೆಗೆ 9ಕ್ಕೂ ಹೆಚ್ಚು ಪ್ರೌಢಶಾˉÉಗಳು, ಪಾಲಿಟೆಕ್ನಿಕ್,ಡಿಪ್ಲೋಮಾ ಕಾˉÉೀಜುಗಳು, ಪದವಿಪೂರ್ವ ಕಾˉÉೀಜು ಹಾಗೂ ಒಂದು ಸಂಸ್ಕøತಪಾಠಶಾˉÉಯನ್ನೂ ಪ್ರಾರಂಭಿಸಿ ಈ ಪ್ರಾಂತ್ಯದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿಸಿವೆ.

Swamiji

Swamiji Name :
ತ್ರಿವಿದ ದಾಸೋಹಿ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು
Place :
ಕುಪ್ಪೂರವಳ್ಳಿ, ನಂಜನಗೂಡು ತಾ||
Pattadikara :
1970
Photo :

Programs

ಜೇಷ್ಠ ಮಾಸದಲ್ಲಿ ಶ್ರೀ ಗುರು ಮಲ್ಲೇಶ್ವರ ಪುಣ್ಯ ಸ್ಮರಣೋತ್ಸವ
ಕಾರ್ತಿಕ ಮಾಸದಲ್ಲಿ ದೀಪೋತ್ಸವ ಮತ್ತು ವಿವಿಧ ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮಗಳು

Institutions

ಸಂಸ್ಕøತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀಶಾಲೆ
ಪದವಿಪೂರ್ವ / ಐ.ಟಿ.ಐ. / ಡಿಪ್ಲೋಮ ಕಾಲೇಜ್
ವಿದ್ಯಾರ್ಥಿ ನಿಲಯ
ಗೋಶಾಲೆ

Photos

Full Address Kannada

ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ತ್ರಿವಿಧ ದಾಸೋಹ ಮಠ
ದೇವನೂರು - 571 119
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ನಂಜನಗೂಡು - 15 ಕಿ.ಮೀ.
ಚಾಮರಾಜನಗರ - 25 ಕಿ.ಮೀ.
ಮೈಸೂರು - 48 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!