ಮೈಸೂರು ಜಿˉÉ್ಲ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮವು ತಾಲ್ಲೂಕುಕೇಂದ್ರದಿಂದ 20 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವಶ್ರೀ ಕಡಕಲಕಟ್ಟೆ ಮಹಾದೇಶ್ವರ ಮಠವು ಶ್ರೀ ಶ್ರೀಶೈಲ ಪೀಠದ ಶಾಖಾ ಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಪುರಾತನ ಇತಿಹಾಸ ಹೊಂದಿರುವಶ್ರೀಮಠದ ಕರ್ತೃ ಗುರುಗಳು ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳನ್ನು ಕರ್ತೃ ಗುರುಗಳೆಂದುಗುರುತಿಸˉÁಗಿದೆಯಾದರೂ ಇವರ ಕಾಲಮಾನದ ಬಗ್ಗೆಯಾಗಲೀ ನಂತರದಗುರುಪರಂಪರೆಯ ಬಗ್ಗೆಯಾಗಲೀ ತಿಳಿದು ಬರುವುದಿಲ್ಲ. ಶ್ರೀಮಠವು ಮೊದಲು ಸಮೀಪದಶ್ರೀ ಕಡಕಲಕಟ್ಟೆ ಮಹಾದೇಶ್ವರ ದೇವಸ್ಥಾನದ ಸಮೀಪ ಸ್ಥಾಪಿತಗೊಂಡಿದ್ದು ತದನಂತರಊರು ಸ್ಥಳಾಂತರಗೊಂಡಾಗ ಈಗಿರುವ ಸ್ಥಳಕ್ಕೆ ಸ್ಥಳಾಂತರವಾಗಿದೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡು ತನ್ನ ಧಾರ್ಮಿಕ ಆಚರಣೆಗಳ ಮೂಲಕ¨s Àಕ ್ತರನ್ನು ಸಂಪಾದಿಸಿಕೊಂಡಿದ್ದು ಅವರ ಸಹಕಾರದೊಂದಿಗೆ ಮಠವನ್ನುಅಭಿವೃದ್ದಿಪಡಿಸಿದ್ದರು. ಶ್ರೀಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಈಗಿನ ಶ್ರೀಗಳನ್ನು ಆಯ್ಕೆಮಾಡಿಕೊಂಡು 1992ರ ನವಂಬರ್ 30ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳು 1992ರಡಿಸಂಬರ್ 11ರಲ್ಲಿ ಶ್ರೀಮಠದ ಪಟ್ಟಕ್ಕೆ ಬಂದಿದ್ದು ತದನಂತರ ಮೈಸೂರಿನ ಸುತ್ತೂರುಮಠದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಸಂಸ್ಕøತದಲ್ಲಿ ಎಂ.ಎ. ಪದವಿ ಪೂರೈಸಿದರು. ನಂತರಮಠಕ್ಕೆ ಮರಳಿದ ಶ್ರೀಗಳು ಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು.ಶ್ರೀಮಠವನ್ನು ಹಂತಹಂತವಾಗಿ ಅಭಿವೃದ್ದಿಗೊಳಿಸಲು ಶ್ರಮಿಸುತ್ತಿರುವ ಶ್ರೀಗಳು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶ್ರೀಮಠದಜೊತೆಯಲ್ಲಿ ಇದೇ ತಾಲ್ಲೂಕಿನ ನವಿಲೂರಿನ ಶ್ರೀಪಟ್ಟದ ಮಠವನ್ನು ಮುನ್ನಡೆಸುತ್ತಿದ್ದಾರೆ.ಪರಂಪರೆಯ ಒಂದೊಂದು ಗದ್ದುಗೆಗಳು ಉಭಯ ಮಠಗಳಲ್ಲೂ ಕಾಣಸಿಗುತ್ತಿದ್ದು ನಿತ್ಯಪೂಜೆಗೆ ಒಳಪಟ್ಟಿವೆ.
Swamiji
Swamiji Name :
ಶ್ರೀ ಷ.ಬ್ರ. ಚನ್ನಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
20-07-1981
Place :
ಚುಂಚನಹಳ್ಳಿ, ನಂಜನಗೂಡು ತಾ||
Pattadikara :
11-12-1994
Photo :
Programs
ಕಾರ್ತಿಕ ಮಾಸದಲ್ಲಿ ಕಾರ್ತೀಕೋತ್ಸವ
ಶಿವರಾತ್ರಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಶಾª್ರÀಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ
Photos
Full Address Kannada
ಶ್ರೀ ಕಡಕಲಕಟ್ಟೆ ಮಹಾದೇಶ್ವರ ಮಠ
ಚುಂಚನಹಳ್ಳಿ - 571 119
ನಂಜನಗೂಡು ತಾ||, ಮೈಸೂರು ಜಿಲ್ಲೆ