Jagadguru Shree Veera Simhsana Maha Samsthana Matha

Jagadguru Shree Veera Simhsana Maha Samsthana Matha Claimed

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ

Average Reviews

Description

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ – ಸುತ್ತೂರು

ಕರ್ತೃ – ಜಗದ್ಗುರು ಶ್ರೀ ಶ್ರೀ ಶಿವಯೋಗಿ ಶಿವರಾತ್ರೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ತನ್ನ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ,ಸಾಂಸ್ಕøತಿಕ ಕಾರ್ಯಚಟುವಟಿಕೆಗಳಿಂದ ತನ್ನದೇ ಆದ ಹಿರಿಮೆ-ಗರಿಮೆಗಳನ್ನೊಂದಿಕಂಗೊಳಿಸುತ್ತಿರುವ ಮಠವೇ ಮೈಸೂರು ಜಿˉÉ್ಲ ನಂಜನಗೂಡು ತಾಲ್ಲೂಕಿನ ಸುತ್ತೂರುಗ್ರಾಮದ ಜಗದ್ಗುರು ಶ್ರೀ ವೀರಸಿಂಹಾನದ ಮಹಾಸಂಸ್ಥಾನ ಮಠ. ಒಂದು ಸಾವಿರವರ್ಷಗಳ ಹಿಂದೆ ಪರಶಿವನ ಇಚ್ಚೆಯಂತೆ ಭೂˉÉೂೀಕದಲ್ಲಿ ಅವತರಿಸಿದ ಸಹಸ್ರಾರುಶಿವಗಣರಲ್ಲಿ ಒಬ್ಬ ಶಿವಯೋಗಿ ದೇಶವನ್ನೆˉÁ್ಲ ಸುತ್ತಿ ಕೊಲ್ಲಿಪಾಕಿಗೆ ಬಂದು ರೇಣುಕರನ್ನುಒಲಿಸಿಕೊಳ್ಳಲು ತಪಸ್ಸನ್ನಾಚರಿಸಿ ಕೊನೆಗೆ ರೇಣುಕಗಿರಿಯಲ್ಲಿ ತಪೋನಿರತರಾಗಿದ್ದಾಗಶಿವರಾತ್ರಿಯ ದಿನ ರೇಣುಕರ ದರ್ಶನವನ್ನು ಪಡೆಯುತ್ತಾರೆ. ಆಗ ಶಿವಯೋಗಿಗಳಿಗೆರೇಣುಕರು “ˉÉೂೀಕಕˉÁ್ಯಣಾರ್ಥ ನಿನ್ನನ್ನು ಇಲ್ಲಿಗೆ ಕಳುಹಿಸಿದ್ದು” ಎಂದು ಹೇಳಿಶಿವರಾತ್ರಿಯ ದಿನ ನಿನಗೆ ನಾನು ದರ್ಶನ ಕೊಟ್ಟ ಕಾರಣ ನೀನು ಇನ್ನು ಮುಂದೆ “ಶ್ರೀಶಿವರಾತ್ರೀಶ್ವರ ಶಿವಾಚಾರ್ಯ”ರೆಂಬ ಹೆಸರಿನಲ್ಲಿ ಅಜ್ಞಾನ ಅನಾಚಾರ ಹೆಚ್ಚಿರುವ ನಾಡಿನಲ್ಲಿಭಕ್ತಿಯನ್ನು ಪ್ರಸಾರ ಮಾಡಿ ˉÉೂೀಕವನ್ನು ಉದ್ಧರಿಸು ಎಂದು ಉಪದೇಶಿಸಿದರು ಎಂದುತಿಳಿದುಬರುತ್ತದೆ.ಶ್ರೀ ಮಠದ ಕರ್ತೃಗುರುಗಳಾದ ಜಗದ್ಗುರು ಶ್ರೀ ಶಿವಯೋಗಿ ಶಿವರಾತ್ರೀಶ್ವರಶಿವಾಚಾರ್ಯ ಮಹಾಸ್ವಾಮಿಗಳು ಗುರುಗಳ ಆಶೀರ್ವಾದದಂತೆ ಚೋಳರಾಜರಸಹಕಾರದಲ್ಲಿ ಅವರಿಗೆ ರಾಜಾ ಗುರುಗಳಾಗಿ ಆಶೀರ್ವದಿಸುತ್ತಾ ಶ್ರೀಮಠವನ್ನು ಸ್ಥಾಪಿಸಿದ್ದು,ತಮ್ಮ ಉತ್ತರಾಧಿಕಾರಿಯನ್ನಾಗಿ ಜಗದ್ಗುರು ಶ್ರೀ ಈಶಾನೇಶ್ವರ ಶಿವಾಚಾರ್ಯಮಹಾಸ್ವಾಮಿಗಳಿಗೆ ಕ್ರಿ.ಶ. 1032ರಲ್ಲಿ ಪಟ್ಟಾಧಿಕಾರ ನೀಡಿ ಕಪಿˉÁತೀರದ ಆಶ್ರಮ ಸೇರಿನಿರ್ವಿಕಲ್ಪ ಸಮಾಧಿ ಪಡೆದರು. ಅಲ್ಲಿಂದ ಇಲ್ಲಿಯವರೆಗೂ ಇಪ್ಪತ್ನಾಲ್ಕು ಜನ ಗುರುಗಳುಸುತ್ತೂರು ಶ್ರೀ ಶಿವರಾತ್ರೀಶ್ವರ ಮಠದಲ್ಲಿ ನಿರಂತರವಾಗಿ ಅಧಿಕಾರ ನಡೆಸಿಕೊಂಡುಬಂದಿದ್ದಾರೆ.ಶ್ರೀಮಠದ ಪರಂಪರೆಯ 22ನೇ ಗುರುಗಳಾದ “ಮಂತ್ರ ಮಹರ್ಷಿ” ಜಗದ್ಗುರುಶ್ರೀ ಪಟ್ಟದ ಶಿವರಾತ್ರೀಶ್ವರ ಮಹಾಸ್ವಾಮಿಗಳು ಚೋಳರ ಕಾಲದಲ್ಲಿ ಕಟ್ಟಿಸಿದ ಸುತ್ತೂರಿನಮೂಲದೇವರಾದ ಶ್ರೀ ಮೂಲಸ್ಥಾನೇಶ್ವರ ದೇವಾಲಯ ಹಾಗೂ ಮಠದ ಕಟ್ಟಡಗಳನ್ನುಅಮೂˉÁಗ್ರವಾಗಿ ಬದˉÁಯಿಸಿ ಜೀರ್ಣೋದ್ಧಾರಗೊಳಿಸಿದರು. ಶ್ರೀಗಳು ಪೀಠಕ್ಕೆಸಂಬಂದಿಸಿದ ಅನೇಕ ಶಿˉÁಶಾಸನಗಳನ್ನು ಪತ್ತೆ ಮಾಡಿ ಮಠದ ಮುಂದೆ ಸಾಲುಸಾˉÁಗಿಜೋಡಿಸಿದರು. ಅಲ್ಲದೆ ಇವುಗಳನ್ನು ತಜ್ಞರಿಂದ ಸಂಶೋಧಿಸಿ ನಂತರ ಪೀಠದ ಹಳೆಯಕಾಗದಪತ್ರಗಳನ್ನೆˉÁ್ಲ ಪರಿಶೋಧಿಸಿದ್ದಲ್ಲದೇ ಶ್ರೀಮಠದ ಪರಂಪರೆಯ ಗುರುಗಳ ಜೀವನಚರಿತ್ರೆಯನ್ನು ಬರೆಸಿದರು.ಜಗದ್ಗುರು ಶ್ರೀ ಪಟ್ಟದ ಶಿವರಾತ್ರೀಶ್ವರ ಶಿವಾಚಾರ್ಯರು “ಮಂತ್ರಮಹರ್ಷಿ”ಗಳೆಂದೇ ಹೆಸರಾಗಿದ್ದರು. ಭಕ್ತರಿಗೆ ಪಂಚಾಕ್ಷರಿ ಮಂತ್ರವನ್ನು ಭೋದಿಸುತ್ತಾ 79ಜನಹಿತದ ಬಗ್ಗೆ ನೀಡುತ್ತಿದ್ದ ಉಪದೇಶ ಎˉÁ್ಲ ಕಾಲಮಾನಕ್ಕೂ ಅನ್ವಯಿಸುವಂತವು.“ಓಂ ನಮಃ ಶಿವಾಯ” ಈ ರೀತಿ ಏಳು ಕೋಟಿ ಪಂಚಾಕ್ಷರಿ ಮಹಾಮಂತ್ರವನ್ನು ತಮ್ಮದೇಸುಂದರವಾದ ಹಸ್ತಾಕ್ಷರಗಳಲ್ಲಿ ಬರೆದಿರುವುದು ಇವರ ಶ್ರದ್ಧೆಗೆ ಹಿಡಿದ ಕೈಗನ್ನಡಿ. ಶ್ರೀಗಳು1928ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಹಿಂದಿನ ಶ್ರೀಗಳಾದ ಜಗದ್ಗುರು ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದರು. ಹಿರಿಯ ಗುರುಗಳಿಗೆ ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳು ಸಂಸ್ಕøತ ಪಾರಂಗತರಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿಮೈಸೂರಿನಲ್ಲಿ ಸೂಕ್ತ ವ್ಯವಸ್ಥೆ ಮಾಡಿದರು. ಮುಂದೆ 1933ರಲ್ಲಿ ಮೈಸೂರಿನಲ್ಲಿ ಮಠದವತಿಯಿಂದ ಸಂಸ್ಕøತ, ವೇದ ಪಾಠಶಾˉÉಯನ್ನು ಪ್ರಾರಂಭಿಸˉÁಯಿತು. ಈ ರೀತಿಯಾಗಿಅಂದು ಪ್ರಾರಂಭಗೊಂಡ ಶಿಕ್ಷಣ ದಾಸೋಹ ಇಂದು ಲಕ್ಷಾಂತರ ವಿದ್ಯಾರ್ಥಿಗಳಿಗೆಜೀವನಮಾರ್ಗವನ್ನು ಕಲಿಸಿಕೊಟ್ಟಿದೆ.ಹಿಂದಿನ ಶ್ರೀಗಳಾದ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳುಗುರುಗಳ ಸೇವೆಯಲ್ಲಿ ಪರಿಪಕ್ವಗೊಂಡರು. ಗುರುಗಳ ಎˉÁ್ಲ ಅಭಿವೃದ್ಧಿ ಕಾರ್ಯಗಳಿಗೆಸಹಾಯಕರಾಗಿ ಒಂದೊಂದೆ ವಿದ್ಯಾರ್ಥಿನಿಲಯ, ಶಾˉÉಗಳನ್ನು ತೆರೆದರು. ಶ್ರೀಗಳು ಮುಂದೆಮಠದ ಅಧಿಕಾರ ವಹಿಸಿಕೊಳ್ಳುವ ಗುರುಗಳಿಗೆ ಜ್ಞಾನದ ಅರಿವು ಬೇಕಾಗುತ್ತದೆ ಎಂದರಿತು ಆಕೊರತೆ ನೀಗಿಸಲು 1958ರಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರರ ಹೆಸರಲ್ಲಿ ಗುರುಕುಲವನ್ನುಪ್ರಾರಂಭಿಸಿದರು. ಮಠದ ಅಧಿಪತಿಗಳಾಗಲಿರುವ ಮರಿದೇವರುಗಳು ವೇದ, ಆಗಮ,ಜ್ಯೋತಿಷ್ಯ, ವಚನಶಾಸ್ತ್ರ ಹಾಗೂ ವೀರಶೈವ ಸಿದ್ದಾಂತವನ್ನು ಅಧ್ಯಯನ ಮಾಡಲು ಅವಕಾಶಕಲ್ಪಿಸಿದರು.ವಿದ್ಯಾಪೀಠ : ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾ ವಿದ್ಯಾಪೀಠವು ಸಣ್ಣದಾಗಿಪ್ರಾರಂಭಗೊಂಡು ಇಂದು ತನ್ನ ವಿಸ್ತಾರವನ್ನು ಅಗಾಧ ಪ್ರಮಾಣದಲ್ಲಿ ವಿಸ್ತರಿಸಿಗೊಂಡಿದೆ.ತಾಂತ್ರಿಕ ಶಿಕ್ಷಣ ನೀಡುವ ದೃಷ್ಠಿಯಿಂದ 120 ಎಕರೆ ಪ್ರದೇಶದಲ್ಲಿ 1962ರಲ್ಲಿ ಪ್ರಾರಂಭಗೊಂಡಶ್ರೀ ಜಯಚಾಮರಾಜೇಂದ್ರ ಕಾˉÉೀಜ್ ಆಫ್ ಇಂಜಿನಿಯರಿಂಗ್, ಶ್ರೀ ಜಗದ್ಗುರು ಶ್ರೀಶಿವರಾತ್ರೀಶ್ವರ ವೈದ್ಯಕೀಯ ಕಾˉÉೀಜ್, ದಂತ ವೈದ್ಯಕೀಯ ಕಾˉÉೀಜುಗಳು ನಾಡಿನಲ್ಲಿಯೇಹೆಸರಾಂತ ಶಿಕ್ಷಣ ಸಂಸ್ಥೆಗಳಾಗಿ ಬೆಳೆದಿವೆ. ಇವಲ್ಲದೇ ಪ್ರಾಥಮಿಕದಿಂದ ಸ್ನಾತಕೋತ್ತರಪದವಿವರೆಗಿನ ಶಿಕ್ಷಣ ನೀಡುವ ನೂರಾರು ಸಂಸ್ಥೆಗಳನ್ನು, ಶಾˉÁ ಕಾˉÉೀಜುಗಳನ್ನುನಡೆಸˉÁಗುತ್ತಿದೆ. ಬಡರೋಗಿಗಳ ಚಿಕಿತೆ ್ಸಗಾಗಿ ಜೆ.ಎಸ್.ಎಸ್. ಆಸ ್ಪತ್ರೆಯನ್ನುಪ್ರಾರಂಭಿಸˉÁಗಿದೆ.ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕರಕಮಲ ಸಂಜಾತರಾಗಿಬೆಳೆದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳಿಗೆ 1986ರ ಫೆಬ್ರವರಿ10ರಂದು ಸುತ್ತೂರು – ಮೈಸೂರಿನ ಜಗದ್ಗುರು ಶ್ರೀ ವೀರಸಿಂಹಾನ ಮಹಾಸಂಸ್ಥಾನ ಮಠಕ್ಕೆಪಟ್ಟಾಧಿಕಾರ ಮಾಡˉÁಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಸ್ನಾತಕ ಪದವಿ ಪಡೆದಿದ್ದ ಶ್ರೀಗಳು ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿದ್ಯಾಪೀಠದಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಶ್ರೀಗಳು ಶ್ರೀಮಠದ ಅಧಿಕಾರ 80ವಹಿಸಿಕೊಂಡ ನಂತರ ಮಠದ ಕೀರ್ತಿಯು ಉತ್ತರೋತ್ತರವಾಗಿ ಬೆಳಗುವಂತೆ ಮಾಡಿದ್ದಾರೆ.ಮೌನದಲ್ಲಿಯೇ ಎಲ್ಲವನ್ನು ಸಾಧಿಸಬಲ್ಲಂತಹ ಮೇರು ವ್ಯಕ್ತಿತ್ವವನ್ನು ಹೊಂದಿರುವ ಶ್ರೀಗಳುಧಾರ್ಮಿಕ, ಆಡಳಿತ, ಸಾಹಿತ್ಯ, ಸಾಮಾಜಿಕ, ವೈಚಾರಿಕತೆ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಅಪಾರವಾದ ಅನುಭವಿಗಳು.ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮೈಸೂರಿನ ಸುತ್ತೂರುಶಾಖಾಮಠವನ್ನು ಚಾಮುಂಡಿ ತಪ್ಪಲಿನಲ್ಲಿರುವ ನಲವತ್ತೆರಡು ಎಕರೆ ಪ್ರದೇಶಕ್ಕೆಸ್ಥಳಾಂತರಿಸಿದ್ದಾರೆ. ಇಲ್ಲಿ ಸಂಶೋಧಕರಿಗೆ, ಸಾಹಿತ್ಯಾಭ್ಯಾಸಿಗಳಿಗೆ, ˉÉೀಖಕರಿಗೆಅನುಕೂಲವಾಗುವಂತೆ ವ್ಯವಸ್ಥಿತವಾದ ಗ್ರಂಥಾಲಯ ಹಾಗೂ ವಸತಿ ವ್ಯವಸ್ಥೆಯನ್ನಮಾಡಿಸಿದ್ದಾರೆ. ಈ ರೀತಿ ಹಲವು ಸಮುಚ್ಛಯಗಳನ್ನೊಳಗೊಂಡ ನೂತನ ಮಠವುಕೋಟ್ಯಾಂತರ ರೂಪಾಯಿ ವೆಚ ್ಚದಲ್ಲಿ ನಿರ್ಮಾಣವಾಗಿರುವುದಲ್ಲದೇ ಒಂದುಯಾತ್ರಾಸ್ಥಳವಾಗಿ ರೂಪುಗೊಂಡು ಜನಮನವನ್ನು ಸೂರೆಗೊಂಡಿದೆ. ದೇಶ ವಿದೇಶಗಳಲ್ಲಿಸಂಚರಿಸಿ ವೀರಶೈವ ಧರ್ಮದ ಪ್ರಚಾರ ಕಾರ್ಯ ಕೈಗೊಂಡಿರುವ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಬೆಂಗಳೂರಿನಲ್ಲಿ ಜಗದ್ಗುರು ಶ್ರೀ ಶಿವರಾತ್ರೀಶ್ವರಸಮುಚ್ಛಯದಲ್ಲಿ ಸಾಂಸ್ಕøತಿಕ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ.ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಒಂದಿನಿತು ವಿಶ್ರಮಿಸದೆಅವಿರತವಾಗಿ ಶ್ರಮಿಸುತ್ತಾ ಶ್ರೀಮಠದ ಖ್ಯಾತಿಯನ್ನು ಜಗದಗಲಕ್ಕೆ ಪಸರಿಸಿದ್ದಾರೆ. ಮಠವನ್ನುಸದಾ ಚಟುವಟಿಕೆಯ ಕೇಂದ್ರವನ್ನಾಗಿಸಿರುವ ಶ್ರೀಗಳು ಪ್ರತಿ ವರ್ಷ ನಡೆಯುವ ಶ್ರೀಶಿವರಾತ್ರೀಶ್ವರ ಜಾತ್ರಾ ಮಹೋತ್ಸವವನ್ನು ನಾಡಹಬ್ಬವನ್ನಾಗಿ ಆಚರಿಸುತ್ತಿದ್ದಾರೆ. ಈಉತ್ಸವದಲ್ಲಿ ನಾಡಿನ ಅನೇಕ ವಿದ್ವಾಂಸರು ಮಠಾಧೀಶರನ್ನು ಕರೆಸಿ ಗೌರವಿಸುವುದುವಾಡಿಕೆಯಾಗಿ ಬೆಳೆದು ಬಂದಿದೆ. ಈ ಉತ್ಸವದಲ್ಲಿ ಪಾˉÉ್ಗೂಳ್ಳುವ ಲಕ್ಷೋಪಲಕ್ಷ ಜನರಿಗೆಅನ್ನದಾಸೋಹದ ವ್ಯವಸ್ಥೆ ಅಭೂತಪೂರ್ವವಾಗಿ ನೆರವೇರುತ್ತಿದೆ. ಇದರ ಅಂಗವಾಗಿದನಗಳ ಜಾತ್ರೆಯು ಏರ್ಪಟ್ಟಿರುತ್ತದೆ. ಮೈಸೂರಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ 1998-99ರಲ್ಲಿ ವರ್ಷದ 365 ದಿನಗಳಲ್ಲಿಯೂ ನಿರಂತರವಾಗಿ ದಿನಕ್ಕೊಬ್ಬರು ಶರಣರಚಿಂತನಗೋಷ್ಠಿಗಳನ್ನು ನಡೆಸಿದ್ದು ಒಂದು ದಾಖˉÉಯ ವಿಷಯವಾಗಿದೆ.”ಮಠ ಎಂದರೆ ಕೇವಲ ಧರ್ಮ ಆಚರಣೆಗೆ ಸೀಮಿತವಾದುದಲ್ಲ, ಧಾರ್ಮಿಕಚೌಕಟ್ಟಿನಲ್ಲಿ ಸಮಷ್ಟಿ ಸಮಾಜದ ಹಿತದ ಬಗ್ಗೆ ಏನೆˉÁ್ಲ ಮಾಡಬಹುದು ಎಂಬುದನ್ನುತೋರಿಸಿಕೊಟ್ಟಿರುವುದು ಶ್ರೀಮಠದ ಹೆಮ್ಮೆಯ ಸಂಗತಿ.”

Swamiji

Swamiji Name :
ಶ್ರೀ ಶ್ರೀ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
Place :
ಸುತ್ತೂರು, ನಂಜನಗೂಡು ತಾ||
Pattadikara :
10-02-1986
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಪುಷ್ಯ ಮಾಸದಲ್ಲಿ ಸುತ್ತೂರು ರಥೋತ್ಸವ (ಜಾತ್ರಾ ಮಹೋತ್ಸವ)
ಪುಷ್ಯ ಮಾಸದಲ್ಲಿ ಸುತ್ತೂರು ಜಗದ್ಗುರು ಶ್ರೀ ಮಂತ್ರ ಮಹರ್ಷಿಗಳ ಪುಣ್ಯಾರಾಧನೆ
ವೈಶಾಖ ಮಾಸದಲ್ಲಿ ಸುತ್ತೂರು ಜಗದ್ಗುರು ಶ್ರೀ ಮಂತ್ರ ಮಹರ್ಷಿಗಳ ಜಯಂತ್ಯುತ್ಸವ
ಶಾª್ರÀಣ ಮಾಸದ ಹುಣ್ಣಿಮೆಗೆ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತ್ಯುತ್ಸವ
ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸ್ಮರಣೋತ್ಸವ
ಯುಗಾದಿ ಸೇರಿದಂತೆ ಎಲ್ಲಾ ಹಬ್ಬಗಳ ಆಚರಣೆ
ಬಸವಾದಿ ಶಿವಶರಣರ ಜಯಂತಿಗಳ ಆಚರಣೆ

Institutions

ಶಾಲೆಗಳು
60 ಪ್ರೌಢಶಾಲೆಗಳು, 16 ಪ್ರಾಥಮಿಕ ಶಾಲೆಗಳು, 2 ಬುದ್ಧಿಮಾಂದ್ಯರ ಪಾಠಶಾಲೆಗಳು,
10 ಸಂಸ್ಕøತ ಪಾಠಶಾಲೆಗಳು, 1 ಆಗಮ ಪಾಠಶಾಲೆ, 2 ವೇದ ಮತ್ತು ಜ್ಯೋತಿಷ್ಯ ಪಾಠಶಾಲೆಗಳು,
2 ಹಿಂದಿ ತರಗತಿಗಳು

ಕಾಲೇಜುಗಳು
ಜೆ.ಎಸ್.ಎಸ್. ಕಲಾ ವಿಜ್ಞಾನ ವಾಣಿಜ್ಯ ಕಾಲೇಜುಗಳು, ಚಾಮರಾಜನಗರ, ನಂಜನಗೂಡು
ಜೆ.ಎಸ್.ಎಸ್. ಮಹಿಳೆಯರ ಕಾಲೇಜು, ಜೆ.ಎಸ್.ಎಸ್. ಕಾನೂನು ಕಾಲೇಜು, ಮೈಸೂರು
ಜೆ.ಎಸ್.ಎಸ್. ಕಲಾವಿಜ್ಞಾನ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಕಾಲೇಜು, ಮೈಸೂರು
ಜೆ.ಎಸ್.ಎಸ್. ದೈಹಿಕ ಶಿಕ್ಷಣ ಕಾಲೇಜು, ಮೈಸೂರು

ತಾಂತ್ರಿಕ ಶಿಕ್ಷಣ ಸಂಸ್ಥೆಗಳು
ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಕಾಲೇಜು, ಮೈಸೂರು
ಜೆ.ಎಸ್.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
ಜೆ.ಎಸ್.ಎಸ್. ತಾಂತ್ರಿಕ ಶಿಕ್ಷಣ ಅಕಾಡೆಮಿ, ನೊಯಿಡಾ, ಉತ್ತರಪ್ರದೇಶ
ಜೆ.ಎಸ್.ಎಸ್. ಕೈಗಾರಿಕಾ ತರಬೇತಿ ಸಂಸ್ಥೆಗಳು, ಮೈಸೂರು, ಚಾಮರಾಜನಗರ, ನಂಜನಗೂಡು
ಕಂಪ್ಯೂಟರ್ ಪ್ರೋಗ್ರಾಮ್‍ನಲ್ಲಿ ಸ್ನಾತಕೋತ್ತರ ಶಿಕ್ಷಣ ಕಾಲೇಜು, ಮೈಸೂರು
ಆರೋಗ್ಯ ಶಿಕ್ಷಣ ಸಂಸ್ಥೆಗಳು
ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು, ದಂತವೈದ್ಯಕೀಯ ಕಾಲೇಜು, ಶ್ರೀ ಶಿವರಾತ್ರೀಶ್ವರನಗರ, ಮೈಸೂರು
ಜೆ.ಎಸ್.ಎಸ್. ಆಯುರ್ವೇದ ಕಾಲೇಜು, ನರ್ಸಿಂಗ್ ಕಾಲೇಜು, ಫಾರ್ಮಸಿ ಕಾಲೇಜು, ಮೈಸೂರು
ಜೆ.ಎಸ್.ಎಸ್. ಫಾರ್ಮಸಿ ಕಾಲೇಜು, ರಾಕ್‍ಲ್ಯಾಂಡ್ಸ್, ಉದಕಮಂಡಲ (ಊಟಿ)
ಜೆ.ಎಸ್.ಎಸ್. ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನದ ಕಾಲೇಜು, ಉದಕಮಂಡಲ
ಶಿಕ್ಷಕರ ಪ್ರಶಿಕ್ಷಣ ಸಂಸ್ಥೆಗಳು
ಜೆ.ಎಸ್.ಎಸ್. ಪ್ರಶಿಕ್ಷಣ ಸಂಸ್ಥೆಗಳು, ಪುರುಷರ ವಿಭಾಗ, ಮಹಿಳಾ ವಿಭಾಗ, ಮೈಸೂರು
ಜೆ.ಎಸ್.ಎಸ್. ನರ್ಸರಿ ಶಿಕ್ಷಕರ ತರಬೇತಿ ಕೇಂದ್ರ, ದೊಡ್ಡಕಾಡನೂರು, ಹಾಸನ ಜಿಲ್ಲೆ

ಇತರ ಸಂಸ್ಥೆಗಳು
ಜೆ.ಎಸ್.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ, ಬೆಂಗಳೂರು
ಜೆ.ಎಸ್.ಆರ್. ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಕೇಂದ್ರ, ಮೈಸೂರು
ಜೆ.ಎಸ್.ಎಸ್. ಪ್ರತಿಷ್ಠಾನ, ನವದೆಹಲಿ
ಜೆ.ಎಸ್.ಎಸ್. ಶ್ರಮಿಕ ವಿದ್ಯಾಪೀಠ, ಮೈಸೂರು
ಜೆ.ಎಸ್.ಎಸ್. ಕೃಷಿ ವಿಜ್ಞಾನ ತರಬೇತಿ ಕೇಂದ್ರ, ಸುತ್ತೂರು
ಕರ್ನಾಟಕ ಮುಕ್ತ ಶಾಲೆ, ಮೈಸೂರು
ಮೂರು ನಿರಾಶ್ರಿತರ ವಸತಿ ಗೃಹಗಳು, ಮೈಸೂರು
ಇಪ್ಪತ್ತ್ಮೂರು ವಿದ್ಯಾರ್ಥಿ ನಿಲಯಗಳು (ರಾಜ್ಯದ ವಿವಿಧೆಡೆ)
ಹದಿನಾಲ್ಕು ಅನಾಥಾಲುಗಳು (ರಾಜ್ಯದ ವಿವಿಧೆಡೆ)
ಆರು ಜನರಲ್ ಹಾಸ್ಟಲ್‍ಗಳು (ರಾಜ್ಯದ ವಿವಿಧೆಡೆ)
ಜೆ.ಎಸ್.ಎಸ್. ಸಲಹಾ ಕೇಂದ್ರ
ಒಟ್ಟು 239ಕ್ಕಿಂತ ಹೆಚ್ಚು ಸಂಸ್ಥೆಗಳು ವಿಶ್ವದೆಲ್ಲೆಡೆ ಇವೆ.

Photos

Full Address Kannada

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ
ಸುತ್ತೂರು - 571 129
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ನಂಜನಗೂಡು - 20 ಕಿ.ಮೀ.
ಚಾಮರಾಜನಗರ - 20 ಕಿ.ಮೀ.
ಮೈಸೂರು - 40 ಕಿ.ಮೀ.

Statistic

13 Views
0 Rating
0 Favorite
0 Share
error: Content is protected !!