ಮೈಸೂರು ನಗರದ ಸಿದ್ದಾರ್ಥನಗರ ಬಡಾವಣೆಯಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಅನ್ನದಾನೇಶ್ವರ ಮಹಾಸಂಸ್ಥಾನ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಪ್ರಚಲಿತದಲ್ಲಿದೆ. ಶ್ರೀಮಠದ ಮೂಲ ಮಠವು ಮಂಡ್ಯ ಜಿˉÉ್ಲಅವ್ವೇರಹಳ್ಳಿ ಗ್ರಾಮದಲ್ಲಿದ್ದು ಪ್ರಸ್ತುತ ಶ್ರೀಗಳು 1970ರಲ್ಲಿ ಮೈಸೂರಿನಲ್ಲಿ ಮಠ ಸ್ಥಾಪಿಸಿ ಮಠದಆಡಳಿತವನ್ನು ಸ್ಥಳಾಂತರಿಸಿದ್ದಾರೆ.ಯಡೆಯೂರು ಸಿದ್ದಲಿಂಗೇಶ್ವರರ ನಂತರದ ಕಾಲಘಟ್ಟದಲ್ಲಿ ಕˉÁ್ಯಣಪ್ರದೇಶದಿಂದ ಸಂಚಾರದಲ್ಲಿ ಆಗಮಿಸಿದ ಪೂಜ್ಯ ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳುಅವ್ವೇರಹಳ್ಳಿಯಲ್ಲಿ ನೆˉÉನಿಂತು ಮಠವನ್ನು ಸ್ಥಾಪಿಸಿದ್ದು, ನಂತರ ಶ್ರೀ ಶಿವಾನಂದ ಸ್ವಾಮಿಗಳು,ಶ್ರೀ ಅನ್ನದಾನ ಸ್ವಾಮಿಗಳು, ಶ್ರೀ ಶಿವನಂಜ ಸ್ವಾಮಿಗಳು, ಶ್ರೀ ಶಿವಲಿಂಗ ಸ್ವಾಮಿಗಳು ಹಾಗೂಇನ್ನೂ ಹಲವಾರು ಪರಂಪರೆಯ ಗುರುಗಳ ಮೂಲಕ ಆಡಳಿತಕ್ಕೊಳಪಟ್ಟಿದೆ.ಪರಂಪರೆಯ ಹಿಂದಿನ ಗುರುಗಳಾದ ಶ್ರೀ ಮ.ನಿ.ಪ್ರ. ಶಿವಲಿಂಗ ಶಿವಯೋಗಿಗಳುಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿ ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಜ. ಶ್ರೀಶಿವಾನಂದ ಮಹಾಸ್ವಾಮಿಗಳನ್ನು 1966ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದು1988ರ ನವೆಂಬರ್ 05ರಲ್ಲಿ ಲಿಂಗೈಕ್ಯರಾದರು. ಪ್ರಸ್ತುತ ಶ್ರೀಗಳು ಕಾಶಿಯಲ್ಲಿ ವಿದ್ಯಾಭ್ಯಾಸಮಾಡುವ ಸಮಯದಲ್ಲಿ ಮೈಸೂರು ರಾಜರು ಕಾಶಿಗೆ ಹೋದಾಗ ಶ್ರೀಗಳ ವಿದ್ವತ್ತನ್ನು ಕಂಡುಸಂಪರ್ಕ ಬೆಳೆದಿತ್ತು. ಆ ಕಾರಣಕ್ಕಾಗಿಯೇ ರಾಜರು ಶ್ರೀಗಳಿಗೆ ಮೈಸೂರಿನ ಮಠವನ್ನುಶ್ರೀಗಳಿಗೆ ವಹಿಸಿಕೊಟ್ಟರು.ಇದಕ್ಕೂ ಪೂರ್ವದಲ್ಲಿ ಬಹುಹಿಂದೆ ಮೈಸೂರಿನ ಅರಮನೆ ಸುಟ್ಟು ಹೋಗಿದ್ದಸಮಯದಲ್ಲಿ ಅಂದಿನ ಮಹಾರಾಜರು ಇದೇ ಸ್ಥಳದಲ್ಲಿ ವಾಸ್ತವ್ಯ ಮಾಡಿದ್ದರು. ನಂತರಅರಮನೆ ಕಟ್ಟಿಕೊಂಡು ಹೋದ ನಂತರ ಅರಮನೆಯ ಸಂಸ್ಥಾನ ಗುರುಗಳು ಇಲ್ಲಿಗೆಸಂಚಾರ ಬಂದಾಗ ವಾಸ್ತವ್ಯ ಹೂಡುತ್ತಿದ್ದರು. ಹೀಗಾಗಿ ಮೊದಲು ಅರಮನೆಯಾಗಿ ನಂತರಗುರುಮನೆಯಾಗಿ ಗುರುತಿಸಿಕೊಂಡಿದ್ದ ಶ್ರೀಮಠವು ಪ್ರಸ್ತುತ ಶ್ರೀಗಳಿಂದಾಗಿ ಶ್ರೀಅನ್ನದಾನೇಶ್ವರ ಮಹಾಸಂಸ್ಥಾನ ಮಠವಾಗಿ ಮಾರ್ಪಟ್ಟಿತು. ಪ್ರಸ್ತುತ ಶ್ರೀಗಳು ಸುಮಾರು 50ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯವನ್ನು ಕಟ್ಟಿಸಿ ಸುಮಾರು 25 ವರ್ಷಗಳಕಾಲ ಶ್ರೀಮಠದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕøತವನ್ನು ಭೋದಿಸಿದ್ದಾರೆ. ಶ್ರೀಮಠದಲ್ಲಿ ಹಿಂದಿನಗುರುಗಳ ಗದ್ದುಗೆಯಿದ್ದು ಉಳಿದ ಗದ್ದುಗೆಗಳು ಅವ್ವೇರಹಳ್ಳಿಯಲ್ಲಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಜಗದ್ಗುರು ಶಿವಾನಂದ ಮಹಾಸ್ವಾಮಿಗಳು
Date of Birth :
05-03-1935
Place :
ಅವ್ವೇರಹಳ್ಳಿ, ಮಂಡ್ಯ ತಾ||
Pattadikara :
1966
Photo :
Programs
ಶ್ರಾವಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಕಾರ್ತಿಕ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಮತ್ತು ದೀಪೆÇೀತ್ಸವ ಶಿವರಾತ್ರಿ, ಬಸವ ಜಯಂತಿ ಆಚರಣೆ
Institutions
¸ಂÀ ಸ್ಕøತ ಶಾˉÉ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಅನ್ನದಾನೇಶ್ವರ ಮಹಾಸಂಸ್ಥಾನ ಮಠ ಶ್ರೀ ಮˉÉಮಹದೇಶ್ವರ ಸುಕ್ಷೇತ್ರ ಸಿದ್ದಾರ್ಥನಗರ, ಟಿ.ನರಸೀಪುರ ರೋಡ್ ಮೈಸೂರು - 570 011.