ಮೈಸೂರು ಜಿˉÁ್ಲ ಕೇಂದ್ರದಿಂದ 17 ಕಿ.ಮೀ. ದೂರದಲ್ಲಿರುವ ಬರಡನಪುರಗ್ರಾಮದಲ್ಲಿ ಪೂಜ್ಯ ಶ್ರೀ ಮಹಾಂತೇಶ್ವರ ಮಹಾಸ್ವಾಮಿಗಳಿಂದ 1973ರ ಫೆಬ್ರವರಿ 08ರಂದುಸ್ಥಾಪಿತಗೊಂಡಿರುವ ಶ್ರೀ ಮಹಾಂತೇಶ್ವರ ಮಠವು ತನ್ನ ಆಚರಣೆಗಳ ಮೂಲಕ ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದೆ ಹಾಗೂ ಶ್ರೀಮಠದ ವತಿಯಿಂದ ಈಭಾಗದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳು ನಡೆಯುವುದು ವಿಶೇಷ.ಕರ್ತೃ ಗುರುಗಳಾದ ಶ್ರೀ ಮಹಾಂತೇಶ್ವರ ಮಹಾಸ್ವಾಮಿಗಳು ಯಳಂದೂರುತಾಲ್ಲೂಕು ಮಲಹಾರ ಪಾಳ್ಯದಲ್ಲಿ ಜನಿಸಿ ಚಿಕ್ಕವಯಸ್ಸಿನಿಂದಲೂ ಆಧ್ಯಾತ್ಮದತ್ತ ಒಲವುಹೊಂದಿ ಸಂಚಾರ ಹೊರಟವರು. ಹೀಗೆ ಸುದೀರ್ಘ ಕಾಲಗಳ ಸಂಚಾರದಲ್ಲಿ 1962-63ರಸುಮಾರಿಗೆ ತಮ್ಮ 80ನೇ ವಯಸ್ಸಿನಲ್ಲಿ ಬರಡನಪುರಕ್ಕೆ ಆಗಮಿಸುತ್ತಾರೆ. ಇಲ್ಲಿನ ಭಕ್ತರ ಪ್ರೀತಿಪೂರ್ವಕ ಒತ್ತಾಯಕ್ಕೆ ಮಣಿದ ಶ್ರೀಗಳು ಇˉÉ್ಲೀ ನೆˉÉನಿಂತು 1973ರ ಫೆಬ್ರವರಿ 08ರಂದು ಭಕ್ತರಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿದರು.ವಾಕ್ಸಿದ್ದಿ ಪುರುಷರಾಗಿದ್ದ ಶ್ರೀಗಳು ತಮ್ಮ ಆಶೀರ್ವಚನಗಳ ಮೂಲಕ ಭಕ್ತರಬದುಕಿಗೆ ಬೆಳಕಾದವರು. ಶ್ರೀಗಳು ಗ್ರಾಮಕ್ಕೆ ಬಂದಾಗ ಊರಿನಲ್ಲಿ ಬಹುತೇಕ ಗುಡಿಸಿಲಿನಮನೆಗಳೇ ಇದ್ದವು ಶ್ರೀಗಳ ಪ್ರಭಾವದಿಂದಾಗಿ ಕ್ರಮೇಣ ಮಠ ಹಾಗೂ ಗ್ರಾಮವೆರಡೂಅಭಿವೃದ್ದಿ ಪಥದತ್ತ ಹೆಜ್ಜೆ ಹಾಕಿದವು. 1974ರ ಫೆಬ್ರವರಿ 08ರಲ್ಲಿ ಈಗಿನ ಶ್ರೀಗಳಾದ ಶ್ರೀಷ.ಬ್ರ. ಪರಶಿವಮೂರ್ತಿ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದಶ್ರೀಗಳು 106 ವರ್ಷಗಳ ತುಂಬು ಜೀವನ ನಡೆಸಿ 1989ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀ ಷ.ಬ್ರ. ಪರಶಿವಮೂರ್ತಿ ಮಹಾಸ್ವಾಮಿಗಳು ಹಿಂದಿನ ಗುರುಗಳಐಕ್ಯಾನಂತರ ಗುರುಗಳ ಸಮಾದಿಗೆ ಭವ್ಯ ಮಂಟಪವನ್ನು ಕಟ್ಟಿಸಿದರು. ನಂತರ ಸುತ್ತಲಲ್ಲಿಸಮುದಾಯ ಭವನ, ವಸತಿ ನಿಲಯ, ದಾಸೋಹ ಮಂದಿರಗಳನ್ನು ನಿರ್ಮಿಸಿರುವ ಶ್ರೀಗಳುಮಠವನ್ನು ಅಭಿವೃದ್ದಿಪಡಿಸಿದ್ದಾರೆ. 1990-91ರ ಸಾಲಿನಿಂದ “ಶ್ರೀ ಮಹಾದೇಶ್ವರ ವಿದ್ಯಾಸಂಸ್ಥೆ(ರಿ)” ಪ್ರಾರಂಭಿಸಿದ ಶ್ರೀಗಳು ಅದರಡಿಯಲ್ಲಿ ಶಾˉÉಗಳನ್ನು ತೆರೆದಿದ್ದು ಜೊತೆಗೆ ಮೈಸೂರಿನಲ್ಲಿಹಳ್ಳಿ ವಿದ್ಯಾರ್ಥಿನಿಯರಿಗೋಸ್ಕರ ಉಚಿತ ವಸತಿ ನಿಲಯವನ್ನು ಆರಂಭಿಸಿದ್ದಾರೆ ಹಾಗೂಶ್ರೀಗಳು ತಮ್ಮ ಸಾಹಿತ್ಯ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಪರಶಿವಮೂರ್ತಿ ಮಹಾಸ್ವಾಮಿಗಳು
Date of Birth :
08-02-1955
Place :
ಬರಡನಪುರ, ಮೈಸೂರು ತಾ||
Pattadikara :
08-02-1974
Photo :
Programs
ಭೀಮನ ಅಮವಾಸೆಗೆ ವಿಶೇಷ ಪೂಜೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಶಾª್ರÀಣ ಮತ್ತು ಕಾರ್ತೀಕ ಮಾಸದಲ್ಲಿ ನಿತ್ಯ ಧಾರ್ಮಿಕ
Institutions
ಶ್ರೀ ಮಹಾಂತೇಶ್ವರ ವಿದ್ಯಾಸಂಸ್ಥೆ (ರಿ.) ಕಿರಿಯ / ಹಿರಿಯ ಪ್ರಾಥಮಿಕ / ಪೌq್ರsÀಶಾˉÉ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮಹಾಂತೇಶ್ವರ ಮಠ ಬರಡನಪುರ, ಜಯಪುರ ಪೋಸ್ಟ್ - 570 008 ಮೈಸೂರು ತಾ|| ಮತ್ತು ಜಿˉÉ್ಲ