ಮೈಸೂರು ಜಿˉÉ್ಲ ಕೆ.ಆರ್.ನಗರ ತಾಲ್ಲೂಕಿನ ಕರ್ತಾಳು ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು, ಈ ಗ್ರಾಮದ ಹೊರವಲಯದ ಕಾವೇರಿ ನದಿತೀರದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಹಿರೇಮಠವುಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದೆ. ಶ್ರೀಮಠದ ಸ್ಥಾಪಕರು ಪ್ರಸ್ತುತರಂಭಾಪುರಿ ಜಗದ್ಗುರುಗಳಾದ ಶ್ರೀಮದ್ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕವೀರಸೋಮೇಶ್ವರ ಭಗವತ್ಪಾದರು.ಆಚಾರ್ಯರಿಲ್ಲದ ಶ್ರೀ ರಂಭಾಪುರಿ ಶಾಖಾ ಹಿರೇಮಠಕ್ಕೆ ಶ್ರೀ ರಂಭಾಪುರಿಜಗದ್ಗುರುಗಳು ಶ್ರೀಮಠದ ಶಿಷ್ಯ ಬಳಗದ ಮನವಿಯ ಮೇರೆಗೆ ತುಮಕೂರು ಜಿˉÉ್ಲಬಂಗಿಹಳ್ಳಿಯ ಶ್ರೀ ರಾಜಶೇಖರ ಮೂರ್ತಿ ಎಂಬ ವಟುವನ್ನು ಆಯ್ಕೆ ಮಾಡಿ ದಿನಾಂಕ20-11-2011ನೇ ಭಾನುವಾರ ವೀರಶೈವ ಧರ್ಮ ಪರಂಪರೆಯಂತೆ ಶಾಸ್ತ್ರೋಕ್ತವಾಗಿ ಶ್ರೀಗುರು ಪಟ್ಟಾಭಿಷೇಕ ನೆರವೇರಿಸಿ, ಶ್ರೀ ಷ.ಬ್ರ. ರೇಣುಕ ರಾಜಶೇಖರ ಶಿವಾಚಾರ್ಯಸ್ವಾಮಿಗಳು ಎಂಬ ನೂತನ ಅಭಿದಾನವನ್ನಿತ್ತು ಅನುಗ್ರಹಿಸಿದರು.ನೂತನ ಶ್ರೀಗಳು ಹಿಂದಿ ಬಿ.ಇಡಿ. ಪದವೀಧರರು, ಸಂಸ್ಕøತ ಜ್ಞಾನ ಉಳ್ಳವರೂಆಗಿದ್ದು ತಮ್ಮ ಸರಳತೆಯಿಂದ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರೀಗಳು ಯಸಳೂರಿನತೆಂಕಲಗೂಡು ಬೃಹನ್ಮಠದ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಠದ ಪಟ್ಟಾಧಿಕಾರ ಶಿವದೀಕ್ಷೆಯನ್ನು ಹೊಂದಿ ಪಟ್ಟಾಧಿಕಾರಸ್ವೀಕರಿಸಿ ನಂತರ ತಮ್ಮ ಆಚರಣೆಗಳ ಮೂಲಕ ಸುತ್ತಮುತ್ತಲಿನ ಅನೇಕ ಶಿವಾಚಾರ್ಯರಪ್ರೀತಿಗೆ ಪಾತ್ರರಾಗಿದ್ದಾರೆ.ಶ್ರೀ ಷ.ಬ್ರ. ರೇಣುಕ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿದ್ದು ಶ್ರೀಮಠವನ್ನು ಹಂತ ಹಂತವಾಗಿಅಭಿವೃದ್ದಿಗೊಳಿಸುತ್ತಿದ್ದಾರೆ. ಶ್ರೀಗಳು 2012ರ ಜುˉÉೈನಲ್ಲಿ ಸರ್ವ ಭಕ್ತರ ಆಶಯದಂತೆಶ್ರೀಮದ್ ಜಗದ್ಗುರು ರೇಣುಕಾಚಾರ್ಯ ಮಂದಿರದ ಕಟ್ಟಡದ ನಿರ್ಮಾಣ ಕಾರ್ಯವನ್ನುಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ರೇಣುಕ ರಾಜಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
19-12-1973
Place :
ಬರಗೆಹಳ್ಳಿ, ಚಿಕ್ಕನಾಯಕನಹಳ್ಳಿ ತಾ||
Pattadikara :
20-11-2011
Photo :
Programs
ಪ್ರತಿ ಅಮವಾಸ್ಯೆಗೆ ಕಟ್ಲೆ ಕಾರ್ಯಕ್ರಮ ಶ್ರೀ ರೇಣುಕಾ ಜಯಂತಿಯ ಆಚರಣೆ ಮತ್ತು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Photos
Full Address Kannada
ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಹಿರೇಮಠ
ಕರ್ತಾಳು, ಅನುಸೋಗೆ ಪೋಸ್ಟ್
ಕೆ.ಆರ್.ನಗರ ತಾ||, ಮೈಸೂರು ಜಿˉÉ್ಲ